» »ಮಹಾರಾಷ್ಟ್ರದ ವಜ್ರೇಶ್ವರಿ ದೇವಾಲಯ

ಮಹಾರಾಷ್ಟ್ರದ ವಜ್ರೇಶ್ವರಿ ದೇವಾಲಯ

Written By:

ಪಾರ್ವತಿ ಸ್ವರೂಪಿಯಾದ ವಜ್ರೇಶ್ವರಿ ದೇವಾಲಯವು ಮಹಾರಾಷ್ಟ್ರದ ಪ್ರಸಿದ್ದವಾದ ದೇವಾಲಯಗಳಲ್ಲಿ ಒಂದಾಗಿದೆ. ಮುಂಬೈನ ಪಶ್ಚಿಮ ರೈಲ್ವೆ ನಿಲ್ದಾಣದಿಂದ ಸುಮಾರು 29 ಕಿ,ಮೀ ಅಂತರದಲ್ಲಿರುವ ವಾಸಯಿಯಲ್ಲಿ ಈ ತಾಯಿಯು ನೆಲೆಸಿದ್ದಾಳೆ. ಈ ದೇವಾಲಯವು ಬೆಟ್ಟದ ಮೇಲೆ ಈ ತಾಯಿ ನೆಲೆಸಿದ್ದಾಳೆ. ಈ ವಜ್ರೇಶ್ವರಿ ದೇವತೆಯನ್ನು ದೇವವಲ್ಲಿ ಎಂದೂ ಸಹಾ ಕರೆಯುತ್ತಾರೆ. ಮರಾಠಿಗರ ಪವಿತ್ರ ದೇವತೆ ಈ ವಜ್ರೇಶ್ವರಿಯಾಗಿದ್ದು ಸಾವಿರಾರು ಭಕ್ತರು ಈ ತಾಯಿಯ ಆರ್ಶಿವಾದ ಪಡೆಯಲು ಬರುತ್ತಾರೆ. ಇಲ್ಲಿನ ಸುತ್ತಮುತ್ತಲಿನ ಸ್ಥಳವು ಹಸಿರಿನಿಂದ ಕಂಗೊಳಿಸುತ್ತಿದ್ದು ಮನೋಹರ ದೃಶ್ಯವನ್ನು ಸೆರೆ ಹಿಡಿಯಬಹುದು. ಪ್ರಸುತ್ತ ಲೇಖನದಲ್ಲಿ ಈ ವಜ್ರೇಶ್ವರಿ ದೇವಾಲಯದ ಮಹಿಮೆ ಹಾಗೂ ಕೆಲವು ಸ್ಥಳಗಳ ಬಗ್ಗೆ ತಿಳಿಯೋಣ.

ದೇವಾಲಯದ ಇತಿಹಾಸ

ದೇವಾಲಯದ ಇತಿಹಾಸ

ಈ ವಜ್ರೇಶ್ವರಿ ದೇವಾಲಯವು ಹಲವು ವರ್ಷಗಳ ಹಿಂದೆ ಪ್ರಸ್ತುತ ದೇವಾಲಯದಿಂದ ಸುಮಾರು 8 ಕಿ,ಮೀಯಷ್ಟು ಅಂತರದ ಗುಜ್ ಎಂಬ ಸಣ್ಣ ಹಳ್ಳಿಯಲ್ಲಿ ಈ ತಾಯಿಯು ನೆಲೆಸಿದ್ದಳು. ಆ ಸಮಯದಲ್ಲಿದ್ದ ಪೋರ್ಚುಗೀಸರು ಈ ದೇವಾಲಯವನ್ನು ಸಂಪೂರ್ಣವಾಗಿ ಧ್ವಂಸ ಮಾಡಿದರು. ನಂತರ ವಜ್ರೇಶ್ವರಿಯ ದೇವತೆಯನ್ನು ಥಾಣೆಯ ಜಿಲ್ಲೆಯ 1739 ರಲ್ಲಿ ವಜ್ರೇಶ್ವರಿಯಲ್ಲಿ ಪುನರ್ ಸ್ಥಾಪಿಸಿದರು.
PC:Redtigerxyz

ಭಕ್ತರು

ಭಕ್ತರು

ಈ ದೇವಾಲಯಕ್ಕೆ ಮರಾಠಿ ಭಾಷಿಗರೇ ಅಲ್ಲದೇ ದೇಶದ ಮೂಲೆ ಮೂಲೆಗಳಿಂದ ವಿದೇಶಗಳಿಂದಲೂ ಸಾವಿರಾರು ಭಕ್ತರು ಈ ವಜ್ರೇಶ್ವರಿಕ್ಕೆ ಭೇಟಿ ನೀಡುತ್ತಾರೆ. ಶಾಲೆಯ ಮಕ್ಕಳನ್ನು ಪ್ರವಾಸ ದೃಷ್ಟಿಯಿಂದ ವಜ್ರೇಶ್ವರಿ ತಾಯಿಯ ದೇವಾಲಯಕ್ಕೆ ಕರೆತರುತ್ತಾರೆ.
PC:.Nlkulkarni

ನಿರ್ಮಾಣ

ನಿರ್ಮಾಣ

ಈ ದೇವಾಲಯದ ನಿರ್ಮಾಣವು ಒಂದು ರೋಚಕ ಕಥೆಯನ್ನು ಆಧರಿಸಿದೆ. ಪೋರ್ಚುಗೀಸರು ವಜ್ರೇಶ್ವರಿ ನೆಲೆಸಿದ್ದ ಸುತ್ತಮುತ್ತ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದರು. ಆಗ ಪೇಶ್ವೆ ಬಾಜಿ ರಾವ್‍ನ ಸಹೋದರ ಚಿಮಾಜಿ ಅಪ್ಪ ಪೋರ್ಚುಗೀಸರು ಆಕ್ರಮಿಸಿಕೊಂಡಿರುವ ಕೋಟೆಗಳನ್ನು ಹಿಂಪಡೆಯಲು ವಜ್ರೇಶ್ವರಿಯ ಮೊರೆ ಹೋದನು. ತನ್ನ ಕೋಟೆಗಳನ್ನು ವಶಪಡಿಸಿಕೊಳ್ಳಲು ಮಾರ್ಗ ಮಾಡಿಕೊಟ್ಟರೆ ಒಂದು ದೇವಾಲಯವನ್ನು ನಿರ್ಮಿಸುತ್ತೇನೆ ಎಂದು ಪ್ರಾರ್ಥನೆ ಮಾಡಿದ. ಆಗ ಕನಸಿನಲ್ಲಿ ವಜ್ರೇಶ್ವರಿ ಕೋಟೆಯನ್ನು ವಶಪಡಿಸಿಕೊಳ್ಳುಲು ಮಾರ್ಗ ಸೂಚಿಸಿದಳು. ಆಗ ಚಿಮಾಜಿ ಅಪ್ಪ ಯುದ್ದದಿಂದ ಕೋಟೆಗಳನ್ನು ವಶಪಡಿಸಿಕೊಂಡನು. ನುಡಿದ ಮಾತಿನಂತೆ ಹೊಸ ಗೌರ್ನರ್ ಶಂಕರ್ ಕೇಶವ್ ಪಾಂಡ್ಕೆಗೆ ವಜ್ರೇಶ್ವರಿ ದೇವಾಲಯವನ್ನು ನಿರ್ಮಿಸುವಂತೆ ಆಜ್ಞೆ ಮಾಡಿದ.

PC:Nswn03

ವಿಶೇಷ ಪೂಜೆಗಳು

ವಿಶೇಷ ಪೂಜೆಗಳು

ವಜ್ರೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ. ಸಾಮಾನ್ಯವಾಗಿ ಮಂಗಳವಾರ ಹಾಗೂ ಶುಕ್ರವಾರ ದೇವಾಲಯದಲ್ಲಿ ವಿಶೇಷ ಪೂಜೆಗಳಿರುತ್ತದೆ. ನವರಾತ್ರಿ, ರಾಮನವಮಿ, ವಿಜಯದಶಮಿಯಂದು ಅತ್ಯಂತ ವೈಭವಾತ್ಮಕವಾಗಿ ಉತ್ಸವಗಳು ಇಲ್ಲಿ ನಡೆಯುತ್ತವೆ.
PC:Guptaele

ದೇವಾಲಯದ ಸೌಂದರ್ಯ

ದೇವಾಲಯದ ಸೌಂದರ್ಯ

ದೇವಾಲಯವು ಅತ್ಯಂತ ಸುಂದರವಾದ ಗೋಪುರವನ್ನು ಹೊಂದಿದೆ. ಪ್ರವೇಶ ದ್ವಾರದ ಒಳಭಾಗದಲ್ಲಿ ಚಿನ್ನದ ಕಲ್ಲಿನನಂತಹ ಆಮೆಯ ಮೂರ್ತಿಯನ್ನು ಕಾಣಬಹುದಾಗಿದೆ. ವಿಷ್ಣುವಿನ ದಶಾವತಾರಗಳಲ್ಲಿ ಕುರ್ಮಾವತಾರವು ಒಂದಾಗಿದ್ದು ದೇಗುಲದ ಒಳಭಾಗದಲ್ಲಿರುವ ಆಮೆಯನ್ನು ಮಹಾ ವಿಷ್ಣು ಎಂದು ನಂಬಲಾಗಿದೆ. ದೇವಾಲಯವನ್ನು 3 ಭಾಗಗಳಾಗಿ ವಿಂಗಡಿಸಬಹುದಾಗಿದೆ. ಒಂದು ಗರ್ಭಗುಡಿ, ಸ್ತಂಭವನ್ನು ಒಳಗೊಂಡ ಮಂಟಪ, ಮೂರ್ತಿಗಳನ್ನು ಇಲ್ಲಿ ಕಾಣಬಹುದು.
PC:Guptaele

ವಿಶೇಷ ಪೂಜೆಗಳು

ವಿಶೇಷ ಪೂಜೆಗಳು

ವಜ್ರೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ. ಸಾಮಾನ್ಯವಾಗಿ ಮಂಗಳವಾರ ಹಾಗೂ ಶುಕ್ರವಾರ ದೇವಾಲಯದಲ್ಲಿ ವಿಶೇಷ ಪೂಜೆಗಳಿರುತ್ತದೆ. ನವರಾತ್ರಿ, ರಾಮನವಮಿ, ವಿಜಯದಶಮಿಯಂದು ಅತ್ಯಂತ ವೈಭವಾತ್ಮಕವಾಗಿ ಉತ್ಸವಗಳು ಇಲ್ಲಿ ನಡೆಯುತ್ತವೆ.
PC:Guptaele

ದೇವಾಲಯದ ಮೂರ್ತಿಗಳು

ದೇವಾಲಯದ ಮೂರ್ತಿಗಳು

ಈ ವಜ್ರೇಶ್ವರಿ ದೇವಾಲಯದ ಒಳಭಾಗದಲ್ಲಿ ರೆಣುಕ ದೇವಿ, ಸಪ್ತಶೃಂಗಿ ಮಾಹಾಲಕ್ಷ್ಮೀ, ಕಾಳಿ, ಗಣೇಶ, ಭೈರವ, ಹನುಮಂತನ ವಿಗ್ರಹಗಳಿವೆ. ಹಾಗೇಯೆ ಯಜ್ಞ ಯಾಗಾದಿ ಮಾಡಲು ಯಜ್ಞಕುಂಡವಿದೆ.
PC:Nlkulkarni

ಸಮೀಪದಲ್ಲಿರುವ ದೇವಾಲಯ

ಸಮೀಪದಲ್ಲಿರುವ ದೇವಾಲಯ

ವಜ್ರೇಶ್ವರಿ ದೇವಾಲಯದಿಂದ ಸ್ವಲ್ಪ ದೂರದಲ್ಲಿಯೇ 17 ನೇ ಶತಮಾನದ ಗುಧದೆಬುವ ಎಂಬ ಸನ್ಯಾಸಿಯ ಸಮಾಧಿಯನ್ನು ಇಲ್ಲಿ ಕಾಣಬುಹುದಾಗಿದೆ.
PC:Nlkulkarni

ಕಾಣಿಕೆ

ಕಾಣಿಕೆ

ವಜ್ರೇಶ್ವರಿ ದೇವಾಲಯದಲ್ಲಿ ಈ ತಾಯಿಯು ಭಕ್ತರ ಬೇಡಿಕೆಯನ್ನು ಈಡೇರಿಸಿದರೆ ಹರಿಷಿಣ, ಕುಂಕುಮ, ಸೀರೆ, ಹೂ, ಅಕ್ಕಿ, ಬೆಲ್ಲವನ್ನು ಸರ್ಮಿಪಿಸುತ್ತಾರೆ.
PC:Guptaele

ನಾಣ್ಯ ಆರಾಧನೆ

ನಾಣ್ಯ ಆರಾಧನೆ

ವಜ್ರೇಶ್ವರಿ ದೇವಿಯು ನೆಲೆಸಿರುವ ಹಿಂಭಾಗದ ಗೋಡೆಯಲ್ಲಿ ಒಂದು ನಾಣ್ಯವನ್ನು ಇಟ್ಟು ದೇವಿಯನ್ನು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳುವ ಪದ್ದತಿಯು ಇಲ್ಲಿ ಕಾಣಬಹುದು.
PC:Guptaele

ಬಿಸಿ ಸುರಳಿಗಳು(ಕೊಳ)

ಬಿಸಿ ಸುರಳಿಗಳು(ಕೊಳ)

ವಜ್ರೇಶ್ವರಿ ದೇವಾಲಯದ ಸಮೀಪದಲ್ಲಿ 7 ಬಿಸಿ ಕೊಳವಿದೆ. ಇಲ್ಲಿ ಪವಿತ್ರವಾದ ಕೊಳದಲ್ಲಿ ಸ್ನಾನ ಮಾಡಿದರೆ ಸಕಲ ಪಾಪ, ರೋಗ ಶಮನವಾಗುತ್ತದೆ ಎಂದು ಜನರು ನಂಬಿದ್ದಾರೆ. ಆಶ್ಚರ್ಯವೆನೆಂದರೆ ಈ ಕೊಳದ ನೀರು ಎಂದಿಗೂ ಬಿಸಿ ನೀರಾಗಿಯೇ ಇರುತ್ತದೆ.
PC:Guptaele

ದೇವಾಲಯದ ಪ್ರವೇಶ

ದೇವಾಲಯದ ಪ್ರವೇಶ

ಈ ವಜ್ರೇಶ್ವರಿ ದೇವಾಲಯವು ಬೆಳಗ್ಗೆ 5:30 ರಿಂದ ರಾತ್ರಿ 9 ಗಂಟೆಯವರೆವಿಗೂ ತೆರೆದಿರಲಾಗುತ್ತದೆ.
PC:.Guptaele

ತಲುಪುವ ಬಗೆ ಹೇಗೆ?

ತಲುಪುವ ಬಗೆ ಹೇಗೆ?

ವಜ್ರೇಶ್ವರಿ ದೇವಾಲಯವು ಮಹಾರಾಷ್ಟ್ರದ ಮುಂಬೈನಿಂದ ಸುಮಾರು 70 ಕಿ,ಮೀ ದೂರದಲ್ಲಿದೆ.
PC:Guptaele

Please Wait while comments are loading...