Search
  • Follow NativePlanet
Share
» »ಶ್ರೀನಗರದಲ್ಲಿ ಸ್ವಾಮಿ ರಾಮಾನುಜಾಚಾರ್ಯರ ಶಾಂತಿಯ ಪ್ರತಿಮೆಯ ಅನಾವರಣ.

ಶ್ರೀನಗರದಲ್ಲಿ ಸ್ವಾಮಿ ರಾಮಾನುಜಾಚಾರ್ಯರ ಶಾಂತಿಯ ಪ್ರತಿಮೆಯ ಅನಾವರಣ.

ಕೇಂದ್ರ ಗೃಹಸಚಿವರಾದ ಅಮಿತ್ ಶಾ ಅವರು ಇಂದು ಸ್ವಾಮಿ ರಾಮಾನುಜಾಚಾರ್ಯರ "ಶಾಂತಿಯ ಪ್ರತಿಮೆ" ಯನ್ನು ಉದ್ಘಾಟಿಸಿದರು. ಇದು ಶ್ರೀನಗರದ ಸೊನ್ವಾರ್ ಪ್ರಾಂತ್ಯದಲ್ಲಿ ನೆಲೆಸಿರುವ ಈ ಪ್ರತಿಮೆಯು 4 ಅಡಿ ಎತ್ತರವಿದೆ. ಈ ಅದ್ದೂರಿ ಉದ್ಘಾಟನೆಯನ್ನು ಅಮಿತ್ ಶಾ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದರು.

ಗೃಹ ಸಚಿವರು ಈ ಸಂದರ್ಭದಲ್ಲಿ ಮಾತನಾಡುತ್ತಾ "ಶ್ರೀ ರಾಮಾನುಜರು ವಿಶಿಷ್ಟಾದ್ವೈತದ ಪ್ರತಿಪಾದಕರು ಹಾಗೂ ಸಮಾನ ಸಮಾಜದ ನಿರ್ಮಾಣಕ್ಕಾಗಿ ಸದಾ ಹಂಬಲಿಸಿದ ಮಹಾನ್ ವ್ಯಕ್ತಿಯಾಗಿದ್ದು, ಸ್ವಾಮಿ ರಾಮಾನುಜಾಚಾರ್ಯರ 'ಶಾಂತಿಯ ಪ್ರತಿಮೆ' ಕಾಶ್ಮೀರದಲ್ಲಿ ಶಾಂತಿ ಮತ್ತು ಆಶೀರ್ವಾದವನ್ನು ತರುವಂತಾಗಲಿ ಮತ್ತು ಕಾಶ್ಮೀರದ ಜನರನ್ನು ಅಭಿವೃದ್ಧಿ ಮತ್ತು ಶಾಂತಿಯತ್ತ ಕೊಂಡೊಯ್ಯಲಿ ಎಂದು ಶುಭ ಹಾರೈಸುತ್ತಾ ಮುಂದಿನ ವರ್ಷ ಗುಜರಾತ್‌ನಲ್ಲಿ ಸ್ವಾಮಿ ರಾಮಾನುಜಾಚಾರ್ಯರ ಮತ್ತೊಂದು ಪ್ರತಿಮೆಯನ್ನು ಉದ್ಘಾಟಿಸಲಾಗುವುದು ಎಂದು ಅವರು ಹೇಳಿದರು.

ramanujacharya1-1

ಹೈದರಾಬಾದ್‌ನಿಂದ 36 ಕಿಮೀ, ರಂಗಾ ರೆಡ್ಡಿ ಜಿಲ್ಲೆಯಲ್ಲಿ ಸ್ವಾಮಿ ರಾಮಾನುಜಾಚಾರ್ಯರ ಸಮಾನತೆಯ ಮತ್ತೊಂದು ಪ್ರತಿಮೆಯೂ ಇದ್ದು,. ಇದನ್ನು 216 ಅಡಿ ಎತ್ತರವಿರುವ ವಿಶ್ವದ ಎರಡನೇ ಅತಿ ಎತ್ತರದ ಕುಳಿತಿರುವ ಪ್ರತಿಮೆ ಎಂದು ಪರಿಗಣಿಸಲಾಗಿದೆ ಹಾಗೂ ಇದನ್ನು ಈ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಉದ್ಘಾಟನೆ ಮಾಡಿದರು.

ಸ್ವಾಮಿ ರಾಮಾನುಜಾಚಾರ್ಯರು ಯಾರು ?

ಸ್ವಾಮಿ ರಾಮಾನುಜಾಚಾರ್ಯರನ್ನು ರಾಮಾನುಜ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಇವರು ತಮಿಳು ನಾಡಿನ ಶ್ರಿಪೆರಂಬದೂರಿನಲ್ಲಿ ಜನಿಸಿದ ಇವರು, ಹಿಂದೂ ಧರ್ಮದಲ್ಲಿನ ಅತ್ಯಂತ ಪ್ರಭಾವಶಾಲಿ ತಮಿಳು-ಹಿಂದೂ ದೇವತಾಶಾಸ್ತ್ರಜ್ಞರು, ತತ್ವಜ್ಞಾನಿಗಳು ಮತ್ತು ಸಂತರಲ್ಲಿ ಒಬ್ಬರು.

ಭಾರತದ ಇತಿಹಾಸದಲ್ಲಿ ಇವರನ್ನು ಒಬ್ಬ ಅತ್ಯಂತ ಪ್ರಭಾವಶಾಲಿ ಚಿಂತಕರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಮುಸಲ್ಮಾನರ ಶತಮಾನಗಳ ಅವಧಿಯ ಆಳ್ವಿಕೆಯ ನಂತರ ಹಿಂದೂ ಧರ್ಮದ ಪುನರುಜ್ಜೀವನಕ್ಕೆ ಶ್ರಮಿಸಿದರು. ವಿಷ್ಣುವಿನ ಅವತಾರ ಎಂದು ಪರಿಗಣಿಸುವ ವಿಶಿಷ್ಟಾದ್ವೈತ ಚಿಂತನೆಯ (ವೈಷ್ಣವ) ಆರು ಸಾಂಪ್ರದಾಯಿಕ ಗುರುಗಳಲ್ಲಿ ಅವರನ್ನು ವ್ಯಾಪಕವಾಗಿ ಶ್ರೇಷ್ಠರು ಎಂದು ಪರಿಗಣಿಸಲಾಗಿದೆ.

swami-ramanujacharya-2

ಬ್ರಾಹ್ಮಣ ಸಂತರಾಗಿದ್ದ ಸ್ವಾಮಿ ವಿವೇಕಾನಂದರು ಭಕ್ತಿ ಚಳುವಳಿಯ ಮುಖ್ಯ ಪ್ರತಿಪಾದಕರಾಗಿದ್ದರು ಅವರು ಭಾರತಾದ್ಯಂತ ಸಂಚರಿಸಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುತ್ತಾ ,ಯಾವುದೇ ಜಾತಿ ಅಥವಾ ಸಂಸ್ಕೃತಿಯ ಭೇದ ಭಾವವಿಲ್ಲದೆ ಎಲ್ಲಾ ಪಂಗಡದ ಜನರಿಗೂ ಎಲ್ಲಾ ದೇವಾಲಯಗಳ ಬಾಗಿಲುಗಳನ್ನು ತೆರೆಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X