Search
  • Follow NativePlanet
Share
» »ಮಾನಸಿಕ ಅಸ್ವಸ್ಥತೆ ಶಮನ ಮಾಡುವ ದತ್ತ ಮಂದಿರ!

ಮಾನಸಿಕ ಅಸ್ವಸ್ಥತೆ ಶಮನ ಮಾಡುವ ದತ್ತ ಮಂದಿರ!

By Vijay

ನೀವು ಕೇಳುತ್ತಿರುವುದು ನಿಜ, ಈ ಪ್ರದೇಶದ ಹಾಗೂ ಇಲ್ಲಿರುವ ದತ್ತಾತ್ರೇಯನಿಗೆ ನಡೆದುಕೊಳ್ಳುವ ಭಕ್ತರ ನಂಬಿಕೆಯಯಂತೆ ತ್ರಿಮೂರ್ತಿಗಳ ಅವತಾರವೆಂದೆ ಹೇಳಲಾಗುವ ಇಲ್ಲಿನ ದತ್ತಾತ್ರೇಯನು ವಿಶೇಷವಾಗಿ ಮಾನಸಿಕವಾಗಿ ಖಿನ್ನತೆಯಿಂದ ಬಳಲುವವರು, ಅಸ್ವಸ್ಥರಾಗಿರುವವರನ್ನು ಮತ್ತೆ ಚೇತರಿಸಿಕೊಳ್ಳುವಂತೆ ಮಾಡುತ್ತಾನಂತೆ!

ಜಾಹಿರಾತುಗಳು ಚಿತ್ರೀಕರಣಗೊಳ್ಳುವ ಅಲಿಬಾಗ್!

ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಅಲಿಬಾಗ್ ಅದರಲ್ಲೂ ವಿಶೇಷವಾಗಿ ಚೌಲ್ ಭಾಗದ ಅಲಿಬಾಗ್ ಬಳಿಯಿರುವ ರೇವದಂಡಾ ಎಂಬ ಕರಾವಳಿ ಗ್ರಾಮದ ಬೆಟ್ಟವೊಂದರ ಮೇಲೆ ಸ್ಥಿತವಿರುವ ಈ ದತ್ತನ ದೇವಾಲಯವು ಪ್ರದೇಶದ ಹಾಗೂ ನೆರೆಯ ಗೋವಾ ರಾಜ್ಯದ ಸಾಕಷ್ಟು ಜನ ಭಕ್ತಾದಿಗಳಿಂದ ಭೇಟಿ ನೀಡಲ್ಪಡುತ್ತದೆ.

ಮಾನಸಿಕ ಅಸ್ವಸ್ಥತೆ ಶಮನ ಮಾಡುವ ದತ್ತ ಮಂದಿರ!

ಸಾಂದರ್ಭಿಕ ಚಿತ್ರ, ಚಿತ್ರಕೃಪೆ: Dharmadhyaksha

ದತ್ತಾತ್ರೇಯ ದೇವರು ಹಿಂದುಗಳ ಒಬ್ಬ ಪ್ರಮುಖ ದೇವರಾಗಿದ್ದಾರೆ. ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರನ ಸ್ವರೂಪವೆಂದೆ ದತ್ತಾತ್ರೇಯರನ್ನು ಪೂಜಿಸಲಾಗುತ್ತದೆ. ದತ್ತ ಹಾಗೂ ಅತ್ರೇಯ ಪದಗಳು ಕೂಡಿ ದತ್ತಾತ್ರೇಯ ಎಂದಾಗಿದೆ. ಅಂದರೆ ಇಲ್ಲಿ ಅತ್ರೇಯ ಮಹರ್ಷಿಗಳು ದತ್ತರ ಭೌತಿಕ ರೂಪದ ತಂದೆಯಾಗಿದ್ದಾರೆ.

ಮಾನಸಿಕ ಅಸ್ವಸ್ಥತೆ ಶಮನ ಮಾಡುವ ದತ್ತ ಮಂದಿರ!

ಚಿತ್ರಕೃಪೆ: Rjshinde

ನಾಥ ಸಮ್ಪ್ರದಾಯದವರಲ್ಲಿ ಪ್ರಮುಖವಾಗಿ ಗುರುತಿಸಲ್ಪಡುವ ದತ್ತಾತ್ರೇಯರು ವಿಷ್ಣುವಿನ ರೂಪ ಎಂದು ಕೆಲವರು ಪಾಲಿಸಿದರೆ, ನಾಥ ಸಂಪ್ರದಾಯದಲ್ಲಿ ದತ್ತಾತ್ರೇಯರನ್ನು ಶಿವನ ಅವತಾರವಾಗಿ ಆರಾಧಿಸಲಾಗುತ್ತದೆ. ದತ್ತಾತ್ರೇಯರಿಗೆ ಮುಡಿಪಾದ ದೇವಾಲಯಗಳು ಭಾರತದಲ್ಲಿವೆಯಾದರೂ ಇತರೆ ಗಣೇಶ, ಶಿವನಿಗೆ ಹೋಲಿಸಿದಂತೆ ಬಹು ಸಂಖ್ಯೆಯಲ್ಲಿ ಕಂಡುಬರುವುದಿಲ್ಲ.

ಮಾನಸಿಕ ಅಸ್ವಸ್ಥತೆ ಶಮನ ಮಾಡುವ ದತ್ತ ಮಂದಿರ!

ಚಿತ್ರಕೃಪೆ: Rjshinde

ಆದಾಗ್ಯೂ ಕೆಲವು ದತ್ತಾತ್ರೇಯನ ದೇವಾಲಯಗಳು ಸಾಕಷ್ಟು ಹೆಸರುವಾಸಿಯಾಗಿವೆ. ಅವುಗಳಲ್ಲೊಂದಾಗಿದೆ ರೇವದಂಡಾದ ಈ ದತ್ತ ಮಂದಿರ. ಕೇವಲ ದತ್ತಾತ್ರೇಯ ಮಾತ್ರವಲ್ಲದೆ ರೇವದಂಡವು ರೇವದಂಡಾ ಕೋಟೆ ಹಾಗೂ ರೇವದಂಡಾ ಕಡಲ ತೀರದಿಂದಾಗಿಯೂ ಸಹ ಸಾಕಷ್ಟು ಗಮನ ಸೆಳೆಯುತ್ತದೆ.

ಮಾನಸಿಕ ಅಸ್ವಸ್ಥತೆ ಶಮನ ಮಾಡುವ ದತ್ತ ಮಂದಿರ!

ಚಿತ್ರಕೃಪೆ: Felix Dance

ವಿಶೇಷವೆಂದರೆ ರೇವದಂಡಾದ ಕಡಲ ತೀರವು ಪ್ರಶಾಂತಮಯವಾಗಿದ್ದು ಸಾಮಾನ್ಯವಾಗಿ ಎಲ್ಲೆಡೆ ಕಡಲ ತೀರಗಳಲ್ಲಿ ಕಂಡುಬರುವಂತೆ ಇಲ್ಲಿನ ಮರಳು ಬಿಳಿಯಾಗಿರದೆ ಕಪ್ಪು ಬಣ್ಣದ್ದಾಗಿದೆ. ಹೆಚ್ಚು ಅನ್ವೇಷಣೆಗೊಳಪಡದ ಈ ತೀರವು ಸಾಮಾನ್ಯವಾಗಿ ಹೆಚ್ಚು ಪ್ರವಾಸಿಗರಿಲ್ಲದೆ ನಿರ್ಜನವಾಗಿರುತ್ತದೆ. ಹೀಗಾಗಿ ಸ್ಥಳೀಯರಿಗೆ ದಿನದ ಕೆಲಸದ ನಂತರ ಸ್ವಲ್ಪ ಹೊತ್ತು ಹಾಯಾಗಿ ವಿಶ್ರಮಿಸಲು ಸಹಾಯಕವಾಗಿದೆ.

ಮಾನಸಿಕ ಅಸ್ವಸ್ಥತೆ ಶಮನ ಮಾಡುವ ದತ್ತ ಮಂದಿರ!

ಚಿತ್ರಕೃಪೆ: Indu Harikumar

ದತ್ತ ಮಂದಿರವು ಬೆಟ್ಟದ ಮೇಲೆ ನಿರ್ಮಾಣಗೊಂಡಿದ್ದು ಇದನ್ನು ತಲುಪಲು 1500 ಮೆಟ್ಟಿಲುಗಳನ್ನು ಏರಬೇಕಾಗಿದೆ. ಬ್ರಹ್ಮೇಂದ್ರ ಸ್ವಾಮಿಯವರಿಂದ ನಿರ್ಮಾಣ ಮಾಡಲಾದ ಈ ದೇವಾಲಯ ತಾಣದಿಂದ ರೇವದಂಡಾದ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಸಮುದ್ರ ತೀರವು ಚೆಂದವಾಗಿ ಕಾಣುತ್ತವೆ.

ಅಚ್ಚರಿ ಮೂಡಿಸುವ ಮಹಾರಾಷ್ಟ್ರದ ಕಡಲ ಕೋಟೆಗಳು

ಇನ್ನೂ ರೇವದಂಡಾ ಅಲಿಬಾಗ್ ನಿಂದ 17 ಕಿ.ಮೀ ದೂರದಲ್ಲಿದ್ದರೆ, ಮುಂಬೈನಿಂದ ಸುಮಾರು 109 ಕಿ.ಮೀ ದೂರವಿದೆ. ಇದಕ್ಕೆ ಹತ್ತಿರವಿರುವ ರೈಲು ನಿಲ್ದಾಣವೆಂದರೆ ರೋಹಾ. ಒಂದೊಮ್ಮೆ ರೇವದಂಡಾ ತ್ಲೌಪಿದರೆ ಅಲ್ಲಿ ತಂಗಲು ರಿಸಾರ್ಟುಗಳು ಅಥವಾ ಹೋಟೆಲುಗಳು ದೊರೆಯುತ್ತವೆ. ಕರಾವಳಿ ಗ್ರಾಮವಾದ್ದರಿಂದ ಸ್ಥಳೀಯವಾಗಿ ದೊರೆಯುವ ಮೀನಿನ ಸಾರು ಅಥವಾ ಪಲ್ಯ ಮತ್ತು ಅನ್ನ ಸಾಕಷ್ಟು ರುಚಿಕರವಾಗಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X