
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಅಮೇರಿಕಾದ ಗಾಯಕ ನಿಕ್ ವಿವಾಹ ಡಿಸೆಂಬರ್ 1 ರಂದು ಕ್ರೈಸ್ತ ಸಂಪ್ರದಾಯದಂತೆ ನಡೆದರೆ, ಡಿಸೆಂಬರ್ 2 ರಂದು ಹಿಂದೂ ಸಂಪ್ರದಾಯದಂತೆ ನಡೆದಿದೆ. ಪಿಗ್ಗಿ ಹಾಗೂ ನಿಕ್ ವಿವಾಹ ಎಷ್ಟು ಚರ್ಚೆಯಲ್ಲಿದೆಯೋ ಅಷ್ಟೇ ಚರ್ಚೆಯಲ್ಲಿದೆ ಅವರ ವೆಡ್ಡಿಂಗ್ ಡೆಸ್ಟಿನೇಶನ್ .

ಉಮ್ಮೆದ್ ಭವನ್ ಪ್ಯಾಲೇಸ್
ನಿಮಗೆಲ್ಲರಿಗೂ ಗೊತ್ತಿರುವಂತೆ ಪ್ರಿಯಾಂಕಾ ಹಾಗೂ ನಿಕ್ ವಿವಾಹ ಜೋಧ್‌ಪುರ್ ಮಹಲ್ ಉಮ್ಮೆದ್ ಭವನ್ ಪ್ಯಾಲೇಸ್‌ನಲ್ಲಿ ನಡೆದಿದೆ. ಈ ಪ್ಯಾಲೇಸ್‌ನ ಬಗ್ಗೆ ಹೇಳುವುದಾದರೆ ಇದೊಂದು ಐಷಾರಾಮಿ ಪ್ಯಾಲೇಸ್ ಆಗಿದ್ದು. ಇದರ ನೋಟ, ಇಲ್ಲಿರುವ ವಸ್ತುಗಳು ಮಾತ್ರ ಐಷರಾಮಿ ಅಲ್ಲ ಇಲ್ಲಿ ಅತಿಥಿಗಳಿಗೂ ಐಷಾರಾಮಿ ಆತಿಥ್ಯವನ್ನು ನೀಡಲಾಗುತ್ತದೆ.
ಕಲ್ಲತ್ತಿ ಜಲಪಾತದಲ್ಲಿ ಸ್ನಾನ ಮಾಡಿದ್ದೀರಾ?

ಅರಮನೆಯಲ್ಲಿ 347 ಕೊಠಡಿಗಳಿವೆ
ಭಾರತದ ರಾಜಸ್ತಾನದ ಜೋಧ್ಪುರದಲ್ಲಿ ನೆಲೆಗೊಂಡಿರುವ ಉಮೆದ್ ಭವನ್ ಅರಮನೆಯು ಪ್ರಪಂಚದ ಅತಿ ದೊಡ್ಡ ಖಾಸಗಿ ನಿವಾಸಗಳಲ್ಲಿ ಒಂದಾಗಿದೆ. ಅರಮನೆಯ ಒಂದು ಭಾಗವನ್ನು ತಾಜ್ ಹೊಟೇಲ್ ನಿರ್ವಹಿಸುತ್ತಿದೆ. ಈ ಪ್ಯಾಲೇಸ್‌ಗೆ ಈಗಿನ ಮಾಲಿಕ ಗಜ್ ಸಿಂಗ್‌ರ ಅಜ್ಜ ಮಹಾರಾಜ ಉಮೆದ್ ಸಿಂಗ್ ಹೆಸರನ್ನು ಇಡಲಾಗಿದೆ. ಅರಮನೆಯು 347 ಕೊಠಡಿಗಳನ್ನು ಹೊಂದಿದೆ ಮತ್ತು ಹಿಂದಿನ ಜೋಧ್ಪುರ್ ರಾಜ ಕುಟುಂಬದ ಪ್ರಮುಖ ನಿವಾಸವಾಗಿದೆ.

ದಂತಕಥೆ
ಉಮೇದ್ ಭವನ್ ಅರಮನೆ ನಿರ್ಮಾಣ ಒಬ್ಬ ಸಂತ ಕೊಟ್ಟ ಶಾಪದ ಪ್ರಕಾರ ಅತೀವ ಬರಗಾಲದ ನಂತರ ರಾಜ್ಯವು ಉತ್ತಮ ಆಳ್ವಿಕೆಯನ್ನು ರಥೊರೆ ರಾಜವಂಶಸ್ಥರಿಂದ ಪಡೆಯುತ್ತದೆ ಎಂದು ನುಡಿದಿದ್ದನು. ಹೀಗಾಗಿ, ಪ್ರತಾಪ್ ಸಿಂಗ್ 50 ವರ್ಷ ಆಡಳಿತದ ನಂತರ, ಜೋದಪುರ ಸತತ ಮೂರು ವರ್ಷಗಳ ಕಾಲ 1920 ರಲ್ಲಿ ತೀವ್ರ ಬರ ಮತ್ತು ಕ್ಷಾಮ ಪರಿಸ್ಥಿತಿಗಳು ಎದುರಿಸಿದರು.
2.0 ಸಿನಿಮಾದಲ್ಲಿನ ಅಕ್ಷಯ್ಕುಮಾರ್ ಪಾತ್ರಕ್ಕೂ ಸಲೀಂ ಅಲಿ ಪಕ್ಷಿಧಾಮಕ್ಕೂ ಸಂಬಂಧ ಏನು?

ರಾಜ ಉಮೇದ್ ಸಿಂಗ್
PC: ShubhamPaul&9
ಕ್ಷಾಮ ಸ್ಥಿತಿಗಳ ಎದುರಿಸುತ್ತಿರುವ ಪ್ರದೇಶದ ರೈತರು ರಾಜ ಉಮೇದ್ ಸಿಂಗ್ ನೆರವು ಕೋರಿದೆ, ಅಂದಿನ ಜೋಧ್‌ಪುರದಲ್ಲಿ ಮಾರ್ವಾರದ 37ನೇ ರಾಥೋಡ್ ದೊರೆಯದ ಉಮೆದ್ ಸಿಂಗ್ , ಕೆಲವು ಉದ್ಯೋಗ ಅವಕಾಶಗಳನ್ನು ಒದಗಿಸಲು , ರಾಜ, ರೈತರಿಗೆ ಸಹಾಯ ಮಾಡುವ ಸಲುವಾಗಿ, ಅದ್ದೂರಿ ಅರಮನೆಯನ್ನು ನಿರ್ಮಿಸಲು ನಿರ್ಧರಿಸಿದರು.

ಭಾರತೀಯ ವಾಸ್ತುಶೈಲಿ
PC:Arjuncm3
ಉಮೇದ್ ಅರಮನೆಯನ್ನುಪಶ್ಚಿಮ ತಂತ್ರಜ್ಞಾನ, ಮತ್ತು ಅನೇಕ ಭಾರತೀಯ ವಾಸ್ತುಶೈಲಿಯ ಒಂದು ಅಸಾಮಾನ್ಯ ಮಿಶ್ರಣ ಮಾಹಿತಿಯೊಂದಿಗೆ ವಿನ್ಯಾಸಗೊಳಿಸಲಾಗಿದೆ.
ಕೆಜಿಎಫ್ನಲ್ಲಿ ಏನೆಲ್ಲಾ ಆಕರ್ಷಣೆಗಳು ಇವೆ ನೋಡಿದ್ದೀರಾ?

1ರಾತ್ರಿಗೆ 43 ಲಕ್ಷ ರೂ.
PC: flickr
ಇಲ್ಲಿ ಮದುವೆಯ ಒಂದು ರಾತ್ರಿಗೆ 43 ಲಕ್ಷ ರೂ. ಹಾಗಿರುವಾಗ ಮದುವೆ ಕಾರ್ಯಕ್ರಮಳು 6 ದಿನಗಳ ವರೆಗೆ ನಡೆದಿವೆ. ಆರು ದಿನಗಳು ಇಲ್ಲಿ ಕಳೆಯಬೇಕಾದರೆ ಒಟ್ಟಾರೆ ಈ ಮದುವೆ ಸಮಾರಂಭಕ್ಕೆ ಖರ್ಚು 3ಕೋಟಿ. ರೂ.

ತಾಜ್‌ಮಹಲ್ ಕಲ್ಲು
ಈ ಪ್ಯಾಲೇಸ್‌ನ ವಿಶೇಷತೆ ಏನೆಂದರೆ. ಆಗ್ರಾದಲ್ಲಿನ ತಾಜ್‌ಮಹಲ್‌ನ್ನು ನಿರ್ಮಿಸಲು ಬಳಸಿದ ಕಲ್ಲುಗಳಿಂದಲೇ ಇದನ್ನು ನಿರ್ಮಿಸಲಾಗಿದೆ. ಇನ್ನು ಈ ಹೊಟೇಲ್‌ನಲ್ಲಿ 22 ಕೋಣೆಗಳಿವೆ. ಇಲ್ಲಿ ಫ್ಯಾಮಿಲಿ ಮ್ಯೂಸಿಯಂ, ಬ್ಯಾಂಕೆಟ್ ಹಾಲ್, ಇಂಡೋರ್ ಸ್ವಿಮಿಂಗ್ ಪೂಲ್, ಟೆನ್ನಿಸ್ ಕೊರ್ಟ್ ಹಾಗೂ ಇನ್ನಿತರ ಆಟದ ಕೋರ್ಟ್‌ಗಳಿವೆ.
7.5 ಅಡಿ ಎತ್ತರದ ಶಿವಲಿಂಗವಿದ್ದರೂ ಇದೊಂದು ಅಪೂರ್ಣ ಮಂದಿರ

ರಾಜಪರಿವಾರವೂ ಇದೆ
ಈ ಅರಮನೆಯಲ್ಲಿ ಒಂದು ರೂಮಿಗೆ 34 ಸಾವಿರದಿಂದ 5 ಲಕ್ಷದ ವರೆಗೆ ಖರ್ಚು ಮಾಡಬೇಕಾಗುತ್ತದೆ. ಈ ಅರಮನೆಯ ಒಂದು ಭಾಗದಲ್ಲಿ ಜೋಧ್‌ಪುರದ ರಾಜಪರಿವಾರ ನೆಲೆಸಿದೆ. ಇನ್ನೊಂದು ಭಾಗವನ್ನು ಸಾರ್ವಜನಿಕರಿಗಾಗಿ ತೆರೆಯಲಾಗಿದೆ. ಅರಮನೆಯ ಒಂದು ಭಾಗವು ವಸ್ತುಸಂಗ್ರಹಾಲಯವಾಗಿದೆ.

ಹೊಟೇಲ್ ತಾಜ್ ಗ್ರೂಪ್
ಅರಮನೆಯ ಹೋಟೆಲ್ ಭಾಗದಲ್ಲಿ ಹೊಟೇಲ್ ತಾಜ್ ಗ್ರೂಪ್ ಕಾರ್ಯ ನಿರ್ವಹಿಸುತ್ತಿದೆ. ಐಷಾರಾಮಿ ರೀಗಲ್ ಮತ್ತು ವೈಸ್ ರೀಗಲ್ ಸೂಟ್ಸ್ ಮತ್ತು ಅಸಾಧಾರಣ ಮಹಾರಾಜ ಮತ್ತು ಆರ್ಟ್ ಡೆಕೊ ಶೈಲಿಯ ಅಲಂಕಾರಗಳು ಮಹಾರಾಣಿ ಕೋಣೆಗಳು ಸೇರಿದಂತೆ 70 ಅತಿಥಿ ಕೊಠಡಿಗಳು ಇದೆ.
ಡಿಸೆಂಬರ್ನ ಈ ಚುಮುಚುಮು ಚಳಿಯಲ್ಲಿ ಹನಿಮೂನ್ಗೆ ಹೋಗೋದಾದ್ರೆ ಇಲ್ಲಿಗೆಲ್ಲಾ ಹೋಗಿ

ಗುಲಾಬಿ ಅಮೃತಶಿಲೆ
ಪ್ರತಿ ಕೋಣೆಗಳಲ್ಲಿ ಗುಲಾಬಿ ಅಮೃತಶಿಲೆಯ ಒಂದೇ ತುಂಡಿನಿಂದ ಕೆತ್ತಲಾಗಿರುವ ಸ್ನಾನದ ಟಬ್ ಅಳವಡಿಸಲಾಗಿದೆ.. ಮಹಾರಾಣಿ ಸೂಟ್ ಸಹ ಜೋಡಿಸಿ ರಚಿಸಿದ ನೆಲಗಟ್ಟು ಮಹಡಿಗಳು ಮತ್ತು ಉದ್ಯಾನದ ದೃಶ್ಯಗಳನ್ನು ನೀಡುತ್ತದೆ ಅಲ್ಲದೆ ಟೆರೇಸ್ ಹೊಂದಿದೆ.