Search
  • Follow NativePlanet
Share
» »ಪ್ರಪಂಚದಲ್ಲಿಯೇ ಅತ್ಯಂತ ಎತ್ತರದ ಶಿವಾಲಯವಿದು!!

ಪ್ರಪಂಚದಲ್ಲಿಯೇ ಅತ್ಯಂತ ಎತ್ತರದ ಶಿವಾಲಯವಿದು!!

By Staff

ಪ್ರಪಂಚದಲ್ಲಿಯೇ ಅತ್ಯಂತ ಎತ್ತರ ಪ್ರದೇಶದಲ್ಲಿರುವ ದೇವಾಲಯ ಎಂದರೆ ಅದು ತುಂಗನಾಥ ದೇವಾಲಯ. ಇದು ಬೇರೆಲ್ಲೂ ಇಲ್ಲ. ಬದಲಾಗಿ ನಮ್ಮ ಭಾರತ ದೇಶದಲ್ಲಿಯೇ ಇದೆ. ಈ ಅದ್ಭುತವಾದ ದೇವಾಲಯ ಉತ್ತರಾಖಂಡ ರಾಜ್ಯದ ರುದ್ರಪ್ರಯಾಗದಿಂದ ಸುಮಾರು 50 ಕಿ.ಮೀ ದೂರ, ದೆಹಲಿಯಿಂದ 304 ಕಿ.ಮೀ ದೂರದಲ್ಲಿ ಈ ತುಂಗನಾಥ ದೇವಾಲಯವಿದೆ.

ಈ ಅದ್ಭುತವಾದ ದೇವಾಲಯವು ಸಮುದ್ರಮಟ್ಟದಿಂದ ಸುಮಾರು 12073 ಅಡಿ ಎತ್ತರದಲ್ಲಿ ಪವಿತ್ರವಾದ ಶಿವಾಲಯವಿದೆ. ತುಂಗನಾಥ ಎಂದರೆ ಶಿಖರ ಎಂಬ ಅರ್ಥವನ್ನು ನೀಡುತ್ತದೆ. ಮಂದಾಕಿನಿ, ಅಲಕಾನಂದ ನದಿಗಳು ಈ ಪರ್ವತದ ಕೆಳಗೆ ಹರಿಯುತ್ತದೆ. ಈ ದೇವಾಲಯವನ್ನು ಸುಮಾರು 1000 ವರ್ಷಗಳಿಗಿಂತಲೂ
ಹಳೆಯದಾದುದು ಎಂದು ಭಾವಿಸಲಾಗಿದೆ.

ಹಿಂದುಗಳ ನಂಬಿಕೆಗಳ ಪ್ರಕಾರ ಆ ಪರಮಶಿವ ಮತ್ತು ಪಾರ್ವತಿ ದೇವಿಯು ಕೈಲಾಸಶಿಖರದ ಮೇಲೆ ನೆಲೆಸಿದ್ದಾರೆ ಎಂದು ಹಾಗು ಪಾರ್ವತಿ ದೇವಿಯನ್ನು ಪರ್ವತಪುತ್ರಿ ಎಂದು ಕರೆಯುತ್ತಾರೆ. ಅಂದರೆ ಪರ್ವತಗಳ ಮಗಳು ಎಂಬ ಅರ್ಥವಾಗಿದೆ. ತುಂಗನಾಥದಲ್ಲಿ ಪಾಂಡವರು 5 ಕೇದಾರನಾಥ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ.

ಪ್ರಸ್ತುತ ಲೇಖನದಲ್ಲಿ ತುಂಗನಾಥ ದೇವಾಲಯದ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಪಡೆಯೋಣ.

ಕುರುಕ್ಷೇತ್ರ ಯುದ್ಧ

ಕುರುಕ್ಷೇತ್ರ ಯುದ್ಧ

ಕುರುಕ್ಷೇತ್ರ ಯುದ್ಧದಲ್ಲಿ ಪಂಚ ಪಾಂಡವರಿಗೆ ಬ್ರಹ್ಮಹತ್ಯಾ ದೋಷ ಉಂಟಾಗುತ್ತದೆ. ಆ ಸಮಯದಲ್ಲಿ ವೇಧ ವ್ಯಾಸನ ಸೂಚನೆಯ ಮೇರೆಗೆ ಶಿವನನ್ನು ಪೂಜಿಸಿದರೆ ಪಾಪ ಪರಿಹಾರವಾಗುತ್ತದೆ ಎಂದು ಹೇಳುತ್ತಾನೆ. ಆ ಸಮಯದಲ್ಲಿ ಪರಮಶಿವನನ್ನು ದರ್ಶನ ಮಾಡುಲು ಪಾಂಡವರು ತೆರಳುತ್ತಾರೆ.

ಪಾಂಡವರು

ಪಾಂಡವರು

ಆದರೆ ಪರಮಶಿವನು ಪಾಂಡವರಿಗೆ ಕಾಣಿಸಿಕೊಳ್ಳದೇ ಗುಪ್ತಾಕ್ಷಿ ಎಂಬ ಗುಹೆಯಲ್ಲಿ ತೆರಳುತ್ತಾನೆ. ಪಾಂಡವರು ಅದನ್ನು ಗಮನಿಸಿ ಆ ಸ್ವಾಮಿಯ ದರ್ಶನ ಮಾಡಿ ಪಾಪ ಪರಿಹಾರ ಮಾಡಿಕೊಳ್ಳಬೇಕು ಎಂದು ಅಲ್ಲಿಗೆ ತೆರಳುತ್ತಾರೆ. ಆ ಸಮಯದಲ್ಲಿ ಸ್ವಾಮಿ ಮತ್ತು ನಂದೀಶ್ವರ ಕಾಣಿಸಿಕೊಳ್ಳದೇ ಅವರ ಶರೀರಗಳು ಪ್ರಸ್ತುತ ಪಂಚಕೇದಾರದಲ್ಲಿ ಇರುವುದನ್ನು ಕಾಣಬಹುದಾಗಿದೆ.

ಜಗದ್ ಗುರು ಆದಿ ಶಂಕರಾಚಾರ್ಯ

ಜಗದ್ ಗುರು ಆದಿ ಶಂಕರಾಚಾರ್ಯ

ಆದರೆ ಶಿವನ ಅನುಗ್ರಹ ಪಡೆಯುವ ಸಲುವಾಗಿ ಪಾಂಡವರು ಆ 5 ಪ್ರದೇಶದಲ್ಲಿ ನಿರ್ಮಾಣ ಮಾಡಿ ಶಿವನನ್ನು ಪ್ರತಿಷ್ಟಾಪಿಸುತ್ತಾರೆ. ರಾವಣಾಸುರನು ಕೂಡ ತುಂಗನಾಥ ಶಿಖರದ ಮೇಲೆ ಆ ಶಿವನಿಗಾಗಿ ಪಾರ್ಥಿಸಿದನಂತೆ. ಹಾಗೆಯೇ 8 ನೇ ಶತಮಾನದಲ್ಲಿ ಜಗದ್ ಗುರು ಆದಿ ಶಂಕರಾಚಾರ್ಯ ಇಲ್ಲಿ ಪೂಜೆಗಳನ್ನು ನೇರವೇರಿಸಿದ್ದಾನಂತೆ.

ಮಾಹಿಮಾನ್ವಿತವಾದ ದೇವಾಲಯ

ಮಾಹಿಮಾನ್ವಿತವಾದ ದೇವಾಲಯ

ಹಿಮಾಲಯ ಪ್ರದೇಶ ಒಂದು ಮಾಹಿಮಾನ್ವಿತವಾದ ದೇವಾಲಯಗಳ ನಿಲಯ. ಎತ್ತರವಾದ ಶಿಖರಗಳ ಮಧ್ಯೆ, ಪ್ರಕೃತಿಯ ಒಡಿಲಲ್ಲಿ ಭಗವಂತನನ್ನು ದರ್ಶನ ಮಾಡುವ ಭಾಗ್ಯ ಇಲ್ಲಿ ಪಡೆಯಬಹುದು. ಹಾಗಾಗಿಯೇ ಸಂಸಾರದ ಬಂಧನದಿಂದ ವಿಮುಕ್ತಿ ಹೊಂದಿ ಮೋಕ್ಷಕ್ಕಾಗಿ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಚಂದ್ರಶೀಲ

ಚಂದ್ರಶೀಲ

ಹಿಮಾಲಯದಲ್ಲಿನ ತುಂಗನಾಥ ಪರ್ವತ ಶ್ರೇಣಿಗಳ ಭಾಗವಾಗಿ ಚಂದ್ರಶೀಲ ಎಂಬ ಎತ್ತರವಾದ ಪರ್ವತವಿದೆ. ಈ ಪರ್ವತದ ಮೇಲಿನಿಂದ ನೋಡಿದರೆ ಕಪ್ಪುಬಣ್ಣದ ಒಂದು ಹಿಮಾಲಯ ದರ್ಶನ ನೀಡುತ್ತದೆ. ಇಂತಹ ಸುಂದರವಾದ ಹಾಗು ಪ್ರಶಾಂತವಾದ ವಾತಾವರಣವನ್ನು ಕಂಡು ಚಂದ್ರನು ಕೂಡ ಮಂತ್ರಮುಗ್ಧನಾದನಂತೆ.

ರಾಮ

ರಾಮ

ಆ ಆನಂದದಿಂದ ಸುದೀರ್ಘವಾದ ತಪಸ್ಸಿನಲ್ಲಿ ಮುಳುಗಿ ಹೋದನಂತೆ. ಹಾಗಾಗಿಯೇ ಈ ಪರ್ವತವನ್ನು ಚಂದ್ರಶೀಲ ಎಂದು ಕರೆಯುತ್ತಾರೆ. ಅಷ್ಟೇ ಅಲ್ಲ ರಾವಣ ಸಂಹಾರದ ನಂತರ ರಾಮನು ಕೂಡ ಇಲ್ಲಿ ತಪ್ಪಸ್ಸು ಮಾಡಿದ್ದಾನೆ ಎಂಬುದು ಎಂದು ಸ್ಥಳ ಪುರಾಣ.

ಶಿವನ ಕ್ಷೇತ್ರ

ಶಿವನ ಕ್ಷೇತ್ರ

ಈ ತುಂಗನಾಥ ಕ್ಷೇತ್ರ "ಪಂಚ ಕೇದಾರ" ದೇವಾಲಯಗಳಲ್ಲಿ ಒಂದಾಗಿದೆ. ಈ ಪಂಚ ಕೇದಾರಗಳ ಹಿಂದೆ ಕೂಡ ಒಂದು ರೋಚಕವಾದ ಕಥೆ ಇದೆ. ಕುರುಕ್ಷೇತ್ರ ಸಂಗ್ರಾಮದ ನಂತರ ಪಾಂಡವರು ಶಿವನಿಂದ ಪ್ರಸನ್ನರಾಗಬೇಕೆಂದು ಕೊಂಡರಂತೆ. ಕುರುಕ್ಷೇತ್ರದಲ್ಲಿ ಹಲವಾರು ಮಂದಿಯನ್ನು ಕೊಂದ ಪಾಪ ಅವರಿಗೆ ಅಂಟಿತು.

ಪರಮೇಶ್ವರ

ಪರಮೇಶ್ವರ

ಆ ಪಾಪವನ್ನೆಲ್ಲಾ ಆ ಪರಮೇಶ್ವರನ ಎದುರು ಪರಿಹರಿಸು ಎಂದು ಭೇಡಿಕೊಳ್ಳಬೇಕು ಎಂದು ಕೊಂಡರಂತೆ. ಆದರೆ ಆ ಶಿವನು ಮಾತ್ರ ಪಾಂಡವರು ಕುರುಕ್ಷೇತ್ರದಲ್ಲಿ ಕೆಲವು ತಪ್ಪು ಮಾಡಿದ್ದಾರೆ ಎಂಬ ಅಭಿಪ್ರಾಯ ಪಟ್ಟು ಅವರಿಗೆ ಕಾಣಿಸದೆಯೇ ವೃಷಭ ರೂಪದಲ್ಲಿ ಮರೆಯಾಗುತ್ತಾನೆ.

ವೃಷಭ

ವೃಷಭ

ಹಾಗೆ ವೃಷಭ ರೂಪದಲ್ಲಿ ಸಂಚಾರ ಮಾಡುತ್ತಿದ್ದ ಶಿವನು ಒಮ್ಮೆ ಭೀಮನಿಗೆ ಎದುರಾದನು. ಅಸಾಧಾರಣವಾದ ತೇಜಸ್ಸಿನಿಂದ ಕಂಗೊಳಿಸುತ್ತಿದ್ದ ವೃಷಭವನ್ನು ಕಂಡ ಭೀಮನು ಅದು ಖಂಡಿತವಾಗಿಯೂ ಪರಮೇಶ್ವರನ ರೂಪವೇ ಎಂದು ನಿಶ್ಚಯಿಸಿದನಂತೆ. ಅಷ್ಟೇ ಅಲ್ಲ ವೃಷಭನನ್ನು ಗಟ್ಟಿಯಾಗಿ ಹಿಡಿದುಕೊಳ್ಳುವ ಸಾಹಸ ಮಾಡಿದನಂತೆ.

ಅದೃಶ್ಯ

ಅದೃಶ್ಯ

ಪರಮೇಶ್ವರ ಶಕ್ತಿಯಲ್ಲಿ ಕಡಿಮೆಯೇ ಅವನು ತಕ್ಷಣ ಅದೃಶ್ಯನಾದನಂತೆ. ಹಾಗೆ ಪರಮಶಿವನು ವೃಷಭ ರೂಪದಲ್ಲಿ 5 ಸ್ಥಳಗಳಲ್ಲಿ ನೆಲೆಸಿ ಆ ಪ್ರದೇಶಕ್ಕೆ ಪಂಚಕೇದಾರ ಕ್ಷೇತ್ರ ಎಂದು ಹೆಸರು ಬಂದಿತು.

ತುಂಗನಾಥ ಕ್ಷೇತ್ರ

ತುಂಗನಾಥ ಕ್ಷೇತ್ರ

ಪಂಚಕೇದಾರ ಕ್ಷೇತ್ರದಲ್ಲಿ ವೃಷಭ ರೂಪದಲ್ಲಿ ಶಿವನ ಬಾಹುಗಳು ಬಿದ್ದ ಸ್ಥಳದಲ್ಲಿ ತುಂಗನಾಥ ಕ್ಷೇತ್ರ ಎಂದು ಪ್ರಸಿದ್ಧಿ ಪಡೆಯಿತು. ತುಂಗ ಎಂದರೆ ಪರ್ವತ ಎಂಬ ಅರ್ಥವಿದೆ. ಹಿಮಾಲಯದ ಪರ್ವತ ಶ್ರೇಣಿಯ ಅಧಿಪತಿ ಆ ಶಿವನಾದ್ದರಿಂದ ಇಲ್ಲಿನ ಶಿವನು ತುಂಗನಾಥ ಎಂದು ಕರೆಯಲಾಯಿತು.

ಎತ್ತರವಾದ ಶಿವಾಲಯ

ಎತ್ತರವಾದ ಶಿವಾಲಯ

ಹೆಸರಿಗೆ ತಕ್ಕಂತೆಯೇ ಈ ದೇವಾಲಯವು 12 ಸಾವಿರ ಅಡಿ ಎತ್ತರದಲ್ಲಿದ್ದಾನೆ. ಇದು ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ ಶಿವಾಲಯವಾಗಿದೆ. ಪಂಚಕೇದಾರನಾಥ ದೇವಾಲಯಕ್ಕೆ ಹೋಲಿಸಿದರೆ ಈ ದೇವಾಲಯವೇ ಅತ್ಯಂತ ಎತ್ತರವಾಗಿದೆ. 58 ನೇ ನಂಬರ್ ದಾರಿಯ ಪಕ್ಕದಲ್ಲಿಯೇ ಇರುವ ಚೋಪ್ಟಾ ಎಂಬ ಗ್ರಾಮದ ಸಮೀಪದಲ್ಲಿ ಸುಮಾರು 4 ಕಿ.ಮೀ ದೂರದಲ್ಲಿ ಈ ದೇವಾಲಯವಿದೆ.

ಚಂದ್ರಶೀಲ ಪರ್ವತ

ಚಂದ್ರಶೀಲ ಪರ್ವತ

ಇದರ ಸಮೀಪದಲ್ಲಿಯೇ ಮಂದಾಕಿನಿ ನದಿ ಮತ್ತು ಅಲಕಾನಂದ ನದಿ ಇರುವುದನ್ನು ಕಾಣಬಹುದಾಗಿದೆ. ಮಧ್ಯಭಾಗದಲ್ಲಿ ಚಂದ್ರಶೀಲ ಪರ್ವತವಿದೆ. ಅಲ್ಲಿ ತುಂಗನಾಥ ದೇವಾಲಯಕ್ಕೆ ಸೇರಿಕೊಳ್ಳುವುದು ಒಂದು ಅದ್ಭುತವೇ ಸರಿ. ಶೀತಕಾಲದಲ್ಲಿ ಈ ಸ್ಥಳದಲ್ಲಿ ತೆರಳಲು ಭಯಾನಕವಾಗಿರುತ್ತದೆ.

ನಿತ್ಯ ಪೂಜೆ

ನಿತ್ಯ ಪೂಜೆ

ಹಾಗಾಗಿಯೇ ಆ ಸಮಯದಲ್ಲಿ ಈ ದೇವಾಲಯವನ್ನು ಮುಚ್ಚಲಾಗುತ್ತದೆ. ಇಲ್ಲಿನ ತುಂಗನಾಥನ ಉತ್ಸವದ ವಿಗ್ರಹವನ್ನು ಸಮೀಪದ ಒಂದು ಗ್ರಾಮಕ್ಕೆ ತೆಗೆದುಕೊಂಡು ಹೋಗಿ ನಿತ್ಯ ಪೂಜೆ ಹಾಗು ಪುನಸ್ಕಾರ ಮಾಡುತ್ತಾರೆ.

ಭೇಟಿಗೆ ಉತ್ತಮವಾದ ಸಮಯ

ಭೇಟಿಗೆ ಉತ್ತಮವಾದ ಸಮಯ

ಈ ಪವಿತ್ರವಾದ ದೇವಾಲಯಕ್ಕೆ ಭೇಟಿ ನೀಡಲು ಉತ್ತಮವಾದ ಸಮಯವೆಂದರೆ ಅದು ಮಾರ್ಚ್ ತಿಂಗಳಿನಿಂದ ಅಕ್ಟೋಬರ್ ತಿಂಗಳವರೆಗೆ ಉತ್ತಮವಾದ ವಾತಾವರಣ ಇರುವ ಕಾರಣ ಈ ಸಮಯದಲ್ಲಿ ಭೇಟಿ ನೀಡಬಹುದಾಗಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ವಿಮಾನ ಮಾರ್ಗವಾಗಿ: ಈ ಪವಿತ್ರವಾದ ದೇವಾಯಕ್ಕೆ ತೆರಳಲು ಸಮೀಪವಾದ ವಿಮಾನ ನಿಲ್ದಾಣವೆಂದರೆ ಅದು ಉತ್ತರಖಂಡ ರಾಜ್ಯದ ಡೆಹ್ರಾಡೂನ್ ಜಿಲ್ಲೆಯ ಜಾಲಿ ಗ್ರಾಂಟ್ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಸುಲಭವಾಗಿ ತುಂಗನಾಥ ದೇವಾಲಯಕ್ಕೆ ತಲುಪಬಹುದಾಗಿದೆ.

ರೈಲ್ವೆ ಮಾರ್ಗವಾಗಿ: ಈ ತುಂಗನಾಥ ದೇವಾಲಯಕ್ಕೆ ಸಮೀಪವಾದ ರೈಲ್ವೆ ನಿಲ್ದಾಣವೆಂದರೆ ಅದು ಹರಿದ್ವಾರ ರೈಲ್ವೆ ನಿಲ್ದಾಣವಾಗಿದೆ. ಇಲ್ಲಿಂದ ದೇವಾಲಯಕ್ಕೆ ಸುಮಾರು 225 ಕಿ,ಮೀ ದೂರದಲ್ಲಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more