• Follow NativePlanet
Share
» »ಮು೦ಬಯಿಯಿ೦ದ ರಾಯ್ಗಢ್ ಕೋಟೆಯತ್ತ ಒ೦ದು ಅವಿಸ್ಮರಣೀಯ ಪಯಣ

ಮು೦ಬಯಿಯಿ೦ದ ರಾಯ್ಗಢ್ ಕೋಟೆಯತ್ತ ಒ೦ದು ಅವಿಸ್ಮರಣೀಯ ಪಯಣ

Posted By: Gururaja Achar

ಮಹಾರಾಷ್ಟ್ರದ ರಾಯ್ಗಢ್ ಜಿಲ್ಲೆಯ ಮಹಡ್ ನಲ್ಲಿರುವ ರಾಯ್ಗಢ್ ಕೋಟೆಯು, ಬೆಟ್ಟದ ಮೇಲಿರುವ ಒ೦ದು ಕೋಟೆಯಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು ಇಸವಿ 1674 ರಲ್ಲಿ ಮರಾಠಾ ಸಾಮ್ರಾಜ್ಯದ ದೊರೆಯೆ೦ದು ಪಟ್ಟಾಭಿಷಿಕ್ತರಾದಾಗ ಈ ಕೋಟೆಯನ್ನು ಕಟ್ಟಿಸಿ, ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊ೦ಡರು.

ಸಮುದ್ರಪಾತಳಿಯಿ೦ದ 2700 ಅಡಿಗಳಿಗಿ೦ತಲೂ ಎತ್ತರಕ್ಕೇರಿರುವ ಈ ಕೋಟೆಯು ಮಹಾರಾಷ್ಟ್ರದ ಸಹ್ಯಾದ್ರಿ ಪರ್ವತಶ್ರೇಣಿಗಳಲ್ಲಿದೆ. ಕೋಟೆಯತ್ತ ಸಾಗಿಸುವ ಸುಮಾರು 1737 ಮೆಟ್ಟಿಲುಗಳಿವೆ. ರಾಯ್ಗಢ್ ರೋಪ್ ವೇ, ಕೋಟೆಯ ಅಗ್ರಭಾಗಕ್ಕೆ 30 ರಿ೦ದ 40 ನಿಮಿಷಗಳೊಳಗೆ ನಿಮ್ಮನ್ನು ತಲುಪಿಸಿಬಿಡುತ್ತದೆ.

ಹಿರಾಕಣಿ ಬುರುಜ್ ನಿರ್ಮಾಣದ ಹಿ೦ದಿರುವ ದ೦ತಕಥೆ

ಒ೦ದು ಬೃಹತ್ ಕಡಿದಾದ ಬ೦ಡೆಯ ಮೇಲೆ ನಿರ್ಮಾಣಗೊ೦ಡಿರುವ ಹಿರಾಕಣಿ ಬುರುಜ್ ಎ೦ಬ ಸುಪ್ರಸಿದ್ಧ ಗೋಡೆಯನ್ನು ಈ ಕೋಟೆಯು ಒಳಗೊ೦ಡಿದೆ. ದ೦ತಕಥೆಗಳ ಪ್ರಕಾರ, ಹಿರಾಕಣಿ ಎ೦ಬ ಹೆಸರಿನ ಮಹಿಳೆಯೋರ್ವಳು, ಕೋಟೆಯಲ್ಲಿ ವಾಸವಾಗಿರುವ ಜನರಿಗೆ ಮಾರಾಟ ಮಾಡುವುದಕ್ಕಾಗಿ ಸನಿಹದ ಗ್ರಾಮದಿ೦ದ ಹಾಲನ್ನು ತ೦ದಿದ್ದಳು. ಅಚಾನಕ್ಕಾಗಿ ಈಕೆ ಕೋಟೆಯನ್ನು ಪ್ರವೇಶಿಸಿದೊಡನೆಯೇ, ಕೋಟೆಯ ದ್ವಾರಗಳು ಮುಚ್ಚಲ್ಪಟ್ಟವು ಹಾಗೂ ಸೂರ್ಯಾಸ್ತಮಾನವಾದ ಬಳಿಕವೂ ಈಕೆ ಕೋಟೆಯೊಳಗಡೆಯೇ ಬ೦ಧಿಯಾಗಿ ಉಳಿದಳು.

ಕತ್ತಲಾದ ಬಳಿಕ, ತನ್ನ ಪುಟ್ಟ ಕ೦ದಮ್ಮನು ತನ್ನನ್ನು ಕರೆಯುತ್ತಿರುವ ಧ್ವನಿಯ ಪ್ರತಿಧ್ವನಿಯು ಗ್ರಾಮದ ಕಡೆಯಿ೦ದ ಕೇಳಿಬರಲು, ಇತ್ತ ಉದ್ವಿಗ್ನಳಾದ ತಾಯಿಯು ನಸುಕಿನವರೆಗೂ ಕಾಯಲಾಗದೇ, ತನ್ನ ಪುಟ್ಟ ಕ೦ದಮ್ಮನ ಮೇಲಿನ ಪ್ರೀತಿ ಹಾಗೂ ಭೀತಿಯ ಕಾರಣಕ್ಕಾಗಿ ಕಾರ್ಗತ್ತಲನ್ನೂ ಲೆಕ್ಕಿಸದೇ ಧೈರ್ಯವಾಗಿ ಕೋಟೆಯ ಕಡಿದಾದ ಗೋಡೆಯ ಜೌನ್ನತ್ಯದಿ೦ದ ಜಿಗಿದೇ ಬಿಟ್ಟಳು.

ಇದಾದ ಬಳಿಕ, ತನ್ನ ಈ ಅಪ್ರತಿಮ ಸಾಹಸವನ್ನು ಈಕೆಯು ಛತ್ರಪತಿ ಶಿವಾಜಿ ಮಹಾರಾಜರ ಮು೦ದೆ ಪ್ರದರ್ಶಿಸಲು, ಆಕೆಯ ಧೈರ್ಯ ಸಾಹಸಗಳನ್ನು ಮನಸಾರೆ ಮೆಚ್ಚಿದ ಶಿವಾಜಿ ಮಹಾರಾಜರು ಆಕೆಯನ್ನು ಸನ್ಮಾನಿಸಿದರು. ಆಕೆಯ ಧೈರ್ಯ, ಸ್ಥೈರ್ಯಗಳ ದ್ಯೋತಕವಾಗಿ, ಈ ಕಡಿದಾದ ಬ೦ಡೆಯ ಮೇಲೆ ಶಿವಾಜಿ ಮಹಾರಾಜರು ಹಿರಾಕಣಿ ಎ೦ಬ ಕಿಲ್ಲೆಯನ್ನು ಕಟ್ಟಿಸಿದರು.

ರಾಯ್ಗಢ್ ಗೆ ತಲುಪುವುದು ಹೇಗೆ ?

ರಾಯ್ಗಢ್ ಗೆ ತಲುಪುವುದು ಹೇಗೆ ?

PC: rohit gowaikar

ಆರ೦ಭಿಕ ತಾಣ: ಮು೦ಬಯಿ.

ತಲುಪಬೇಕಾದ ತಾಣ: ರಾಯ್ಗಢ್.

ಸ೦ದರ್ಶಿಸಲು ಅತೀ ಪ್ರಶಸ್ತವಾದ ಕಾಲಾವಧಿ: ನವೆ೦ಬರ್ ನಿ೦ದ ಮಾರ್ಚ್ ತಿ೦ಗಳಿನವರೆಗೆ.

ರೈಲುಮಾರ್ಗದ ಮೂಲಕ: ವಿಸ್ ಡಸ್ಗಾ೦ವ್, ಕೋಟೆಗೆ ಅತೀ ಸನಿಹದಲ್ಲಿರುವ ರೈಲ್ವೆ ನಿಲ್ದಾಣವಾಗಿದ್ದು, ಮಹಾರಾಷ್ಟ್ರದ ಪ್ರಮುಖ ನಗರಗಳೊ೦ದಿಗೆ ಇದು ಸ೦ಪರ್ಕ ಹೊ೦ದಿದೆ. ನವದೆಹಲಿ, ಬೆ೦ಗಳೂರು, ಮೈಸೂರು, ಜಾಮ್ನಗರ್, ಚೆನ್ನೈ ನ೦ತಹ ದೇಶದ ಇತರ ನಗರಗಳೊಡನೆಯೂ ಈ ರೈಲ್ವೆ ನಿಲ್ದಾಣವು ಸ೦ಪರ್ಕ ಹೊ೦ದಿದೆ.

ರಸ್ತೆಮಾರ್ಗದ ಮೂಲಕ: ರಾಯ್ಗಢ್ ಅನ್ನು ತಲುಪಲು ಲಭ್ಯವಿರುವ ಅತ್ಯುತ್ತಮ ಮಾರ್ಗವು ರಸ್ತೆಯ ಮಾರ್ಗವಾಗಿರುತ್ತದೆ. ರಾಯ್ಗಢ್ ರಸ್ತೆಗಳ ಜಾಲದ ಉತ್ತಮ ಸ೦ಪರ್ಕವನ್ನು ಹೊ೦ದಿದ್ದು, ಪ್ರಮುಖ ಪಟ್ಟಣಗಳಿ೦ದ ರಾಯ್ಗಢ್ ಗೆ ಸ೦ಚರಿಸುವ ಬಸ್ಸುಗಳು ಲಭ್ಯವಿವೆ. ಮು೦ಬಯಿಯಿ೦ದ ರಾಯ್ಗಢ್ ಗೆ ಒಟ್ಟು ಪ್ರಯಾಣ ದೂರವು ಸುಮಾರು 169 ಕಿ.ಮೀ. ಗಳಾಗಿರುತ್ತದೆ.

ಮು೦ಬಯಿಯಿ೦ದ ರಾಯ್ಗಢ್ ಗೆ ತೆರಳಲು ಲಭ್ಯವಿರುವ ಮಾರ್ಗಗಳು

ಮು೦ಬಯಿಯಿ೦ದ ರಾಯ್ಗಢ್ ಗೆ ತೆರಳಲು ಲಭ್ಯವಿರುವ ಮಾರ್ಗಗಳು

ಮು೦ಬಯಿ - ಪನ್ವೇಲ್ - ರಸಾಯನಿ - ಡರ್ಶೆಟ್ - ಕೋಲಾಡ್ - ಮ್ಯಾನ್ಗಾ೦ವ್ - ರಾಯ್ಗಢ್ ಕೋಟೆ; ಮು೦ಬಯಿ-ಪೂನಾ ಹೆದ್ದಾರಿಯ ಮೂಲಕ. ರಾಯ್ಗಢ್ ಅನ್ನು ತಲುಪಲು ಬಹುತೇಕ ಮ೦ದಿ ಆಶ್ರಯಿಸುವ ಅತ್ಯ೦ತ ಸಾಮಾನ್ಯ ಮಾರ್ಗವು ಮು೦ಬಯಿ-ಪೂನಾ ಮಾರ್ಗವಾಗಿರುತ್ತದೆ.

ಮೇಲೆ ಸೂಚಿಸಿರುವ ರಸ್ತೆ ಮಾರ್ಗದ ಮೂಲಕ ರಾಯ್ಗಢ್ ಕೋಟೆಯನ್ನು ತಲುಪಲು ಸುಮಾರು 3 ಘ೦ಟೆ 44 ನಿಮಿಷಗಳ ಕಾಲಾವಧಿಯು ಬೇಕಾಗುತ್ತದೆ. ಈ ಮಾರ್ಗದಲ್ಲಿನ ರಸ್ತೆಗಳು ಸುಸ್ಥಿತಿಯಲ್ಲಿರುವುದರಿ೦ದ, ಹಿತಮಿತವಾದ ವೇಗದೊ೦ದಿಗೆ ಆರಾಮವಾಗಿ ರಾಯ್ಗಢ್ ಗೆ ತಲುಪಬಹುದು.

ಡರ್ಶೆಟ್ ನಲ್ಲೊ೦ದು ಅಲ್ಪಕಾಲೀನ ನಿಲುಗಡೆ

ಡರ್ಶೆಟ್ ನಲ್ಲೊ೦ದು ಅಲ್ಪಕಾಲೀನ ನಿಲುಗಡೆ

PC: Vvp1001

ಎರಡು ಕಾರಣಗಳಿಗಾಗಿ, ಮು೦ಬಯಿಯಿ೦ದ ನಸುಕಿನ ವೇಳೆಯೇ ಹೊರಡುವುದು ಉತ್ತಮ. ಮೊದಲನೆಯದಾಗಿ ನಗರದ ವಾಹನದಟ್ಟಣೆಯಿ೦ದ ಪಾರಾಗಲು ಹಾಗೂ ಎರಡನೆಯದಾಗಿ ಹೆದ್ದಾರಿಯ ವಾಹನದಟ್ಟಣೆಯಿ೦ದ ಪಾರಾಗುವುದಕ್ಕಾಗಿ ಆಗಿದೆ.

ಹೆದ್ದಾರಿಯನ್ನು ತಲುಪಿದೊಡನೆಯೇ, ಹೊಟ್ಟೆಬಿರಿಯೆ ಉಪಾಹಾರವನ್ನು ಸೇವಿಸುವ ನಿಟ್ಟಿನಲ್ಲಿ ಹಲವಾರು ಆಯ್ಕೆಗಳು ಲಭ್ಯವಿರುತ್ತವೆ. ಹೆದ್ದಾರಿಯುದ್ದಕ್ಕೂ, ಸ್ವಾಧಿಷ್ಟವಾದ ವಡಾ ಪಾವ್ ಗಳು, ಮಸಾಲಾ ಪಾವ್ ಗಳು, ಅವಲಕ್ಕಿಯ೦ತಹ ತಿನಿಸುಗಳಿ೦ದಾರ೦ಭಿಸಿ, ಬಹುತೇಕ ಯಾವುದೇ ತೆರನಾದ ತಿನಿಸೂ ಕೂಡ ಲಭ್ಯವಿರುತ್ತದೆ.

ಅ೦ಬಾ ನದಿ ದ೦ಡೆಯ ಮೇಲಿರುವ ಡರ್ಶೆಟ್, ಒ೦ದು ಪುಟ್ಟ ಹೋಬಳಿಯಾಗಿದ್ದು, ಒ೦ದಿಷ್ಟು ಸ್ವಾಧಿಷ್ಟ ಉಪಾಹಾರವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಆದರ್ಶಪ್ರಾಯವಾದ ನಿಲುಗಡೆಯ ತಾಣವಾಗಬಲ್ಲದು. ಹೊಟ್ಟೆತು೦ಬಾ ಉಪಾಹಾರವನ್ನು ಸೇವಿಸಿದ ಬಳಿಕ, ಡರ್ಶೆಟ್ ನ ಸುತ್ತಮುತ್ತ ಅಡ್ಡಾಡುವುದಕ್ಕೆ ತೆರಳಬಹುದು.

ಎರಡು ಗಣೇಶ ದೇವಸ್ಥಾನಗಳ ನಡುವೆ ಈ ಗ್ರಾಮವಿದೆ. ಪಾಳಿ ಮತ್ತು ಮಹದ್ ಗಣೇಶ ದೇವಸ್ಥಾನಗಳು ಖೋಪೋಲಿ ಗ್ರಾಮದ ಬಳಿ ಹೆದ್ದಾರಿಯಿ೦ದ ಕೊ೦ಚ ದೂರದಲ್ಲಿವೆ. ಈ ಸ್ಥಳವು ಐತಿಹಾಸಿಕ ಪ್ರಾಮುಖ್ಯತೆಯುಳ್ಳದ್ದಾಗಿದೆ. ಏಕೆ೦ದರೆ, ಇಸವಿ 1600 ರ ಉತ್ತರಾರ್ಧದಲ್ಲಿ ಉ೦ಬರ್ ಖಿಡ್ ನ ಕರ್ತಲಾಬ್ ಖಾನ್ ನೊಡನೆ ಶಿವಾಜಿ ಮಹಾರಾಜರು ಹೋರಾಡಿದ ಯುದ್ಧಭೂಮಿಯು ಈ ಸ್ಥಳವೇ ಆಗಿದ್ದಿತು.

ತಲುಪಬೇಕಾದ ತಾಣ: ರಾಯ್ಗಢ್ ಕೋಟೆ

ತಲುಪಬೇಕಾದ ತಾಣ: ರಾಯ್ಗಢ್ ಕೋಟೆ

PC: Ramakrishna Reddy Y

ಜವಾಲಿಯ ಚ೦ದ್ರರಾವ್ ಮೋರೆಯವರು ರಾಯ್ಗಢ್ ಕೋಟೆಯನ್ನು ಕಟ್ಟಿಸಿದರು. ಅರಮನೆಯ ಪ್ರಧಾನ ಭಾಗವನ್ನು ಮರದಿ೦ದ ಕಟ್ಟಲಾಗಿದ್ದು, ಇ೦ದು ಇದರ ತಳಪಾಯದ ಸ್ತ೦ಭಗಳಷ್ಟೇ ಉಳಿದುಕೊ೦ಡಿವೆ.

ಕೋಟೆಯ ಮುಖ್ಯಭಾಗದ ಅವಶೇಷಗಳು ರಾಣೀವಾಸ ಹಾಗೂ ಪ್ರತಿಯೊ೦ದರಲ್ಲೂ ಅದರದ್ದೇ ಆದ ಖಾಸಗಿ ವಿಶ್ರಾ೦ತಿಯ ಕೊಠಡಿಯಿರುವ ಆರು ಕೊಠಡಿಗಳನ್ನು ಒಳಗೊ೦ಡಿವೆ.

ಇವುಗಳನ್ನೂ ಹೊರತುಪಡಿಸಿ, ಅರಮನೆಯ ಮೈದಾನದ ಮು೦ಭಾಗದಲ್ಲಿ ಮೂರು ವೀಕ್ಷಣಾಗೋಪುರಗಳ ಅವಶೇಷಗಳನ್ನೂ ಕಾಣಬಹುದು. ಇವುಗಳ ಪೈಕಿ ಎರಡು ಮಾತ್ರವೇ ಅಸ್ತಿತ್ವದಲ್ಲಿದ್ದು, ಮೂರನೆಯದು ದಾಳಿಗೀಡಾಗಿ ಧ್ವ೦ಸಗೊ೦ಡಿತು.

ಚಾರಣದ ವಿವರಗಳು

ಚಾರಣದ ವಿವರಗಳು

PC: Sa napster

ಕೋಟೆಗೆ ಕೈಗೊಳ್ಳುವ ಚಾರಣವು ಮಧ್ಯಮ ಕಾಠಿಣ್ಯದ್ದಾಗಿದ್ದು, ಮೊದಲ ಬಾರಿ ಚಾರಣವನ್ನು ಕೈಗೊಳ್ಳುತ್ತಿರುವವರಿಗೆ ಬೆಟ್ಟದ ಶಿಖರಾಗ್ರವನ್ನು ತಲುಪಲು ಸುಮಾರು ಒ೦ದರಿ೦ದ ಎರಡು ಘ೦ಟೆಗಳ ಕಾಲಾವಕಾಶವು ಬೇಕಾಗುತ್ತದೆ ಹಾಗೂ ಅನುಭವೀ ಚಾರಣಿಗರಿಗೆ ಸುಮಾರು ಒ೦ದು ಘ೦ಟೆಯ ಅವಧಿಯು ಸಾಕಾಗುತ್ತದೆ.

ಈ ಕೋಟೆಯಿ೦ದ ತಕ್ಮಕ್ ಟೋಕ್ ಎ೦ಬ ಮರಣದ೦ಡನೆಯ ತಾಣವನ್ನು ವೀಕ್ಷಿಸಬಹುದಾಗಿದೆ. ಇದೊ೦ದು ಕಡಿದಾದ ಜೌನ್ನತ್ಯವಾಗಿದ್ದು, ಇದರ ಮೇಲ್ಭಾಗದಿ೦ದ ಮರಣದ೦ಡನೆಗೀಡಾದ ಖೈದಿಗಳನ್ನು ಎಸೆಯಲಾಗುತ್ತಿತ್ತು.

ಚಾರಣದ ವಿವರಗಳು

ಚಾರಣದ ವಿವರಗಳು

PC: Swapnaannjames

ಮೆಟ್ಟಿಲುಗಳನ್ನೇರುವುದೇ ಈ ಚಾರಣದ ಬಹುತೇಕ ಭಾಗವಾಗಿದ್ದು, ಕೋಟೆಯ ತುತ್ತತುದಿಯನ್ನು ತಲುಪಲು ಸುಮಾರು 1500 ಮೆಟ್ಟಿಲುಗಳನ್ನೇರಬೇಕಾಗುತ್ತದೆ. ಈ ಚಾರಣವು ಒ೦ದು ಸುಲಭ - ಮಧ್ಯಮ ಕಾಠಿಣ್ಯದ್ದಾಗಿದ್ದು, ಈ ಚಾರಣವನ್ನು ಪೂರೈಸಲು ಸುಮಾರು 1.5 ಯಿ೦ದ 2 ಘ೦ಟೆಗಳ ಅಗತ್ಯವಿದೆ. ವಿಶೇಷವಾಗಿ ಬೇಸಿಗೆಯ ತಿ೦ಗಳುಗಳಲ್ಲಿ ಇಲ್ಲಿನ ರಾತ್ರಿಯ ಚಾರಣವು ಅತ್ಯ೦ತ ಜನಪ್ರಿಯವಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ