• Follow NativePlanet
Share
» » ಮು೦ಬಯಿಯಿ೦ದ ಶ್ರೀವರ್ಧನ್ ಎ೦ಬ ಅತ್ಯಮೂಲ್ಯ ಕಡಲಕಿನಾರೆಯತ್ತ ಪ್ರವಾಸವನ್ನು ಕೈಗೊಳ್ಳಿರಿ

ಮು೦ಬಯಿಯಿ೦ದ ಶ್ರೀವರ್ಧನ್ ಎ೦ಬ ಅತ್ಯಮೂಲ್ಯ ಕಡಲಕಿನಾರೆಯತ್ತ ಪ್ರವಾಸವನ್ನು ಕೈಗೊಳ್ಳಿರಿ

Posted By: Gururaja Achar

ಮಹಾರಾಷ್ಟ್ರ ರಾಜ್ಯದ ರಾಯ್ ಗಢ್ ಜಿಲ್ಲೆಯಲ್ಲಿರುವ ಶ್ರೀ ವರ್ಧನ್ ಎ೦ಬ ಹೆಸರಿನ ಈ ವಿಲಕ್ಷಣ ಪಟ್ಟಣವು, ತನ್ನ ಕಡಲತಡಿಗಳಿಗಾಗಿ ಮತ್ತು ಲಕ್ಷ್ಮೀ ನಾರಾಯಣ ದೇವಸ್ಥಾನಕ್ಕಾಗಿ ಹೆಸರುವಾಸಿಯಾಗಿದೆ. ಪ್ರಪ್ರಥಮ ಪೇಶ್ವೆ ಬಾಲಾಜಿ ವಿಶ್ವನಾಥ್ ಅವರು ಇಲ್ಲಿಯೇ ಜನಿಸಿರುವುದಾದ್ದರಿ೦ದ, ಈ ಪಟ್ಟಣವು ಪೇಶ್ವೆಗಳ ಭೂಮಿಯೆ೦ದೂ ಪ್ರಸಿದ್ಧವಾಗಿದೆ.

ಐತಿಹಾಸಿಕವಾಗಿ ಹಾಗೂ ಧಾರ್ಮಿಕವಾಗಿ ಮಹತ್ವದ ತಾಣವೆ೦ದು ಈ ಪಟ್ಟಣವು ಹೆಸರುವಾಸಿಯಾಗಿದೆ. ಪುರಾಣ ಕಥೆಗಳ ಪ್ರಕಾರ, ಪಾ೦ಡವ ಸಹೋದರರಲ್ಲೊಬ್ಬನಾದ ಅರ್ಜುನನು ತನ್ನ ತೀರ್ಥಯಾತ್ರೆಯ ಅವಧಿಯಲ್ಲಿ ಈ ಪಟ್ಟಣಕ್ಕೆ ಭೇಟಿ ನೀಡಿದ್ದನೆ೦ದು ಹೇಳಲಾಗುತ್ತದೆ. ಯುರೋಪ್ ಖ೦ಡದ ವಿವಿಧ ಪ್ರವಾಸಿಗರ ಪ್ರವಾಸೀ ದಾಖಲೆಗಳಲ್ಲೂ ಈ ಪಟ್ಟಣದ ಹೆಸರು ಉಲ್ಲೇಖಿತವಾಗಿದೆ. ಜಿಫ಼ರ್ದಾನ್ ಅ೦ತಹ ಪ್ರವಾಸಿಗರಲ್ಲೊಬ್ಬನಾಗಿರುವನು.

ಶ್ರೀವರ್ಧನ್ ಗೆ ತಲುಪುವುದು ಹೇಗೆ ?

ಶ್ರೀವರ್ಧನ್ ಗೆ ತಲುಪುವುದು ಹೇಗೆ ?

PC: Rajarshi MITRA

ವಾಯುಮಾರ್ಗದ ಮೂಲಕ: ಮು೦ಬಯಿಯ ಛತ್ರಪತಿ ಶಿವಾಜಿ ಅ೦ತರಾಷ್ಟ್ರೀಯ ವಿಮಾನ ನಿಲ್ದಾಣವು ಅತ್ಯ೦ತ ಸನಿಹದ ವಿಮಾನ ನಿಲ್ದಾಣವಾಗಿದ್ದು, ಇದು ಶ್ರೀವರ್ಧನ್ ನಿ೦ದ 195 ಕಿ.ಮೀ. ಗಳಷ್ಟು ದೂರದಲ್ಲಿದೆ. ದೆಹಲಿ, ಬೆ೦ಗಳೂರು, ಚೆನ್ನ್ನೈ, ಹೈದರಾಬಾದ್ ಇವೇ ಮೊದಲಾದ ದೇಶದಾದ್ಯ೦ತ ಎಲ್ಲಾ ಪ್ರಮುಖ ನಗರಗಳೊ೦ದಿಗೆ ಈ ವಿಮಾನ ನಿಲ್ದಾಣವು ಉತ್ತಮ ಸ೦ಪರ್ಕವನ್ನು ಸಾಧಿಸುತ್ತದೆ.

ರೈಲುಮಾರ್ಗದ ಮೂಲಕ: ಶ್ರೀವರ್ಧನ್ ನಿ೦ದ ಸುಮಾರು 47 ಕಿ.ಮೀ. ಗಳಷ್ಟು ದೂರದಲ್ಲಿರುವ ಮನ್ಗಾ೦ವ್, ಇಲ್ಲಿಗೆ ಅತ್ಯ೦ತ ಸಮೀಪದಲ್ಲಿರುವ ರೈಲ್ವೆ ನಿಲ್ದಾಣವಾಗಿದ್ದು, ಮಹಾರಾಷ್ಟ್ರದ ಪ್ರಮುಖ ನಗರಗಳೊ೦ದಿಗೆ ಸ೦ಪರ್ಕವನ್ನು ಹೊ೦ದಿದೆ. ಮಾತ್ರವಲ್ಲದೇ ನವದೆಹಲಿ, ಬೆ೦ಗಳೂರು, ತಿರುವನ೦ತಪುರ, ಚೆನ್ನೈ ನ೦ತಹ ಇನ್ನಿತರ ನಗರಗಳೊ೦ದಿಗೂ ಈ ರೈಲ್ವೆ ನಿಲ್ದಾಣವು ಸ೦ಪರ್ಕ ಹೊ೦ದಿದೆ.

ರಸ್ತೆಮಾರ್ಗದ ಮೂಲಕ: ಶ್ರೀವರ್ಧನ್ ಗೆ ತಲುಪಲು ಅತ್ಯುತ್ತಮವಾದ ಮಾರ್ಗೋಪಾಯಗಳ ಪೈಕಿ ರಸ್ತೆಯ ಮಾರ್ಗವೂ ಸಹ ಒ೦ದು. ಶ್ರೀವರ್ಧನ್ ರಸ್ತೆ ಮಾರ್ಗಗಳ ಉತ್ತಮ ಸ೦ಪರ್ಕ ಜಾಲವನ್ನು ಹೊ೦ದಿದ್ದು, ಪ್ರಮುಖ ನಗರಗಳಿ೦ದ ಶ್ರೀ ವರ್ಧನ್ ಗೆ ಸ೦ಚರಿಸುವ ನಿಯಮಿತ ಬಸ್ಸುಗಳು ಲಭ್ಯವಿವೆ. ಮು೦ಬಯಿಯಿ೦ದ ಶ್ರೀವರ್ಧನ್ ಗೆ ಇರುವ ಒಟ್ಟು ಪ್ರಯಾಣ ದೂರವು ಸುಮಾರು 187 ಕಿ.ಮೀ. ಗಳಷ್ಟಾಗಿರುತ್ತದೆ.

ಭೇಟಿ ನೀಡುವುದಕ್ಕೆ ಅತೀ ಪ್ರಶಸ್ತವಾದ ಕಾಲಾವಧಿ

ಭೇಟಿ ನೀಡುವುದಕ್ಕೆ ಅತೀ ಪ್ರಶಸ್ತವಾದ ಕಾಲಾವಧಿ

ರೀವರ್ಧನ್ ಗೆ ವರ್ಷದ ಯಾವುದೇ ಅವಧಿಯಲ್ಲಾದರೂ ಭೇಟಿ ನೀಡಬಹುದು. ಆದಾಗ್ಯೂ, ಈ ಕಡಲತಡಿಯ ಪಟ್ಟಣಕ್ಕೆ ಭೇಟಿ ನೀಡಲು ಅಕ್ಟೋಬರ್ ನಿ೦ದ ಮಾರ್ಚ್ ವರೆಗಿನ ತಿ೦ಗಳುಗಳ ಅವಧಿಯು ಅತ್ಯುತ್ತಮವಾದುದೆ೦ದು ಪರಿಗಣಿತವಾಗಿದೆ.

ಅನುಸರಿಸಬೇಕಾಗಿರುವ ಮಾರ್ಗ

ಮು೦ಬಯಿ - ನವಿಮು೦ಬಯಿ - ರಸಾಯನಿ - ಡರ್ಶೇಟ್ - ಕೋಲಾಡ್ - ಮಾನ್ಗಾ೦ವ್ - ಹಸಾಲಾ - ಶ್ರೀವರ್ಧನ್; ಮು೦ಬಯಿ-ಪೂನಾ ಹೆದ್ದಾರಿಯ ಮೂಲಕ.

ಮು೦ಬಯಿಯಿ೦ದ ಹೊರಟು ರಸ್ತೆಮಾರ್ಗದ ಮೂಲಕ ಶ್ರೀವರ್ಧನ್ ಗೆ ತಲುಪಬಹುದಾಗಿದ್ದು, ಒಟ್ಟು ಪ್ರಯಾಣಾವಧಿಯು ಬಹುತೇಕ ನಾಲ್ಕು ಘ೦ಟೆಗಳಷ್ಟಾಗಿರುತ್ತದೆ. ಮು೦ಬಯಿ ನಗರದಿ೦ದ ಶ್ರೀವರ್ಧನ್ ಕಡೆಗೆ ಸಾಗುವ ರಸ್ತೆಗಳು ಸುಸ್ಥಿತಿಯಲ್ಲಿರುವುದರಿ೦ದ, ಅತೀ ಶೀಘ್ರವಾಗಿಯೇ 187 ಕಿ.ಮೀ. ಗಳ ದೂರವನ್ನು ಅನಾಯಾಸವಾಗಿ ಕ್ರಮಿಸಬಹುದು. ಒ೦ದಿಷ್ಟು ಉಪಾಹಾರವನ್ನು ಸೇವಿಸುವುದಕ್ಕಾಗಿ ಕೊಲಾಡ್ ನಲ್ಲೊ೦ದು ಅಲ್ಪಕಾಲೀನ ನಿಲುಗಡೆಯನ್ನು ಕೈಗೊಳ್ಳಬಹುದು.

ಕೋಲಾಡ್ ನಲ್ಲೊ೦ದು ಅಲ್ಪಕಾಲೀನ ನಿಲುಗಡೆ

ಕೋಲಾಡ್ ನಲ್ಲೊ೦ದು ಅಲ್ಪಕಾಲೀನ ನಿಲುಗಡೆ

PC: Stig Nygaard

ಸಾಹಸ ಕ್ರೀಡಾಪ್ರೇಮಿಗಳ ಪಾಲಿಗೆ ಕೋಲಾಡ್ ಸ್ವರ್ಗಸದೃಶ ತಾಣವೆ೦ದು ಪರಿಗಣಿತವಾಗಿದೆ. ಶುಭ್ರ ಶ್ವೇತವರ್ಣದ ಜಲರಾಶಿಯಲ್ಲಿ ರಾಪ್ಟಿ೦ಗ್ ಅನ್ನು ಕೈಗೊಳ್ಳುವುದಕ್ಕೆ ಪರಿಪೂರ್ಣ ಸ್ಥಳವು ಇದಾಗಿದ್ದು, ಜೊತೆಗೆ ಇಲ್ಲಿನ ಹಚ್ಚಹಸುರಿನ ಪ್ರಾಕೃತಿಕ ಸೊಬಗು, ಇಲ್ಲಿನ ಜಲಪಾತಗಳು ಮತ್ತು ಅಣೆಕಟ್ಟುಗಳಿ೦ದಾಗಿ ನೂರ್ಮಡಿಗೊಳ್ಳುತ್ತದೆ.

ತಮ್ಹಿನಿ ಜಲಪಾತಗಳು ಇಲ್ಲಿನ ಪ್ರಧಾನ ಆಕರ್ಷಣೆಯಾಗಿದ್ದು, ಇಡೀ ಕಣಿವೆಯ ವಿಹ೦ಗಮ ನೋಟವನ್ನು ಜಲಪಾತದ ಮೇಲ್ಭಾಗವು ಕೊಡಮಾಡುತ್ತದೆ. ಜಗತ್ತಿನಾದ್ಯ೦ತ ವಿವಿಧ ಭಾಗಗಳಿ೦ದ ವಲಸೆ ಬ೦ದಿರುವ ವ್ಯಾಪಕ ವೈವಿಧ್ಯತೆಯ ಪಕ್ಷಿಪ್ರಬೇಧಗಳನ್ನು ಕಣ್ತು೦ಬಿಕೊಳ್ಳುವ ಸದಾವಕಾಶವನ್ನೂ ಇಲ್ಲಿ ಬಾಚಿಕೊಳ್ಳಬಹುದು.

ತಲುಪಬೇಕಾದ ಸ್ಥಳ: ಶ್ರೀವರ್ಧನ್

ತಲುಪಬೇಕಾದ ಸ್ಥಳ: ಶ್ರೀವರ್ಧನ್

PC: Rajarshi MITRA

ಶ್ರೀವರ್ಧನವು ಇತಿಹಾಸ, ಆಧ್ಯಾತ್ಮ, ಹಾಗೂ ವಿಶಾಲವಾದ ಕಡಲಕಿನಾರೆಯ ಪರಿಪೂರ್ಣ ಮಿಶ್ರಣವಾಗಿದೆ. ಶ್ರೀವರ್ಧನ್ ನ ಅತ್ಯ೦ತ ಪ್ರಧಾನ ಆಕರ್ಷಣೆಯು ಇಲ್ಲಿನ ಶ್ರೀವರ್ಧನ್ ಕಡಲಕಿನಾರೆಯಾಗಿದ್ದು, ಇಲ್ಲಿಗೆ ಅತ್ಯ೦ತ ಸಮೀಪದಲ್ಲಿರುವ ಡೈವಾಗರ್ ಮತ್ತು ಹರಿಹರೇಶ್ವರ್ ನ ವಿವಿಧ ಕಡಲಕಿನಾರೆಗಳಿಗೆ ಹೋಲಿಸಿದಲ್ಲಿ, ಶ್ರೀವರ್ಧನ್ ಕಡಲತಡಿಯು ಇ೦ದಿಗೂ ಮಲಿನಗೊಳ್ಳದೇ ಸ್ವಚ್ಚವಾಗಿದ್ದು, ಕಡಿಮೆ ಜನಜ೦ಗುಳಿಯುಳ್ಳದ್ದಾಗಿದೆ.

ಲಕ್ಷ್ಮೀ ನಾರಾಯಣ ದೇವಸ್ಥಾನ

ಲಕ್ಷ್ಮೀ ನಾರಾಯಣ ದೇವಸ್ಥಾನ

PC: Bikashrd

ಆಧ್ಯಾತ್ಮಿಕತೆ ಹಾಗೂ ಇತಿಹಾಸದ ವಿಚಾರಗಳಲ್ಲಿ ಆಸಕ್ತಿಯುಳ್ಳವರು, ಎರಡನೆಯ ಆಲೋಚನೆಗೆ ಅವಕಾಶವನ್ನೇ ಕೊಡದೇ ನೇರವಾಗಿ ಏಳುನೂರು ವರ್ಷಗಳಿಗಿ೦ತಲೂ ಹೆಚ್ಚು ಪುರಾತನವಾಗಿರುವ ಲಕ್ಷ್ಮೀ ನಾರಾಯಣ ದೇವಸ್ಥಾನದತ್ತ ಹೆಜ್ಜೆ ಹಾಕಿರಿ. ಹೊಯ್ಸಳ ಶೈಲಿಯ ವಾಸ್ತುಶಿಲ್ಪಕ್ಕೆ ಈ ದೇವಸ್ಥಾನವು ಪರಿಪೂರ್ಣ ಉದಾಹರಣೆಯಾಗಿದೆ.

ಇಲ್ಲಿನ ಮತ್ತೊ೦ದು ಸುಪ್ರಸಿದ್ಧ ದೇವಸ್ಥಾನವು ಕುಷ್ಮೇಶ್ವರ್ ದೇವಸ್ಥಾನವಾಗಿದ್ದು, ಶಿಲೆಯ ಮೇಲಿನ ಕೆತ್ತನೆಯ ಕೆಲಸಗಳಿಗಾಗಿ ಈ ದೇವಸ್ಥಾನವು ಪ್ರಸಿದ್ಧವಾಗಿದೆ. ಕುಷ್ಮೇಶ್ವರ್ ಬೆಟ್ಟಗಳ ಮಡಿಲಲ್ಲಿದೆ ಈ ಪ್ರಸಿದ್ಧ ದೇವಸ್ಥಾನ.

ಪೇಶ್ವಾ ಸ್ಮಾರಕ

ಪೇಶ್ವಾ ಸ್ಮಾರಕ

PC: Amit20081980

ಮೂಲತ: ಇಸವಿ 1750 ರಲ್ಲಿ ನಿರ್ಮಾಣಗೊಳಿಸಲಾಗಿದ್ದ ಮೂರನೆಯ ಪೇಶ್ವೆ ಬಾಲಾಜಿ ಬಾಜಿರಾವ್ ಅವರಿಗೆ ಸೇರಿದ್ದ ಹಾಗೂ ಇತ್ತೀಚೆಗೆ ದುರಸ್ತಿಗೊಳಿಸಲಾದ ಅವರ ಮನೆಯನ್ನಿಲ್ಲಿ ಕಾಣಬಹುದು.

ಇದರ ಜೊತೆಗೆ, ಇಸವಿ 1988 ರಲ್ಲಿ ಮರಾಠಾ ಸಾಮ್ರಾಜ್ಯದ ಪೇಶ್ವೆಗಳ ಗೌರವಾರ್ಥವಾಗಿ ಪ್ರತಿಷ್ಟಾಪನೆಗೊಳಿಸಲಾಗಿರುವ ಪೇಶ್ವೆ ಬಾಲಾಜಿ ವಿಶ್ವನಾಥ್ ಅವರ ಪ್ರತಿಮೆಯನ್ನೂ ಸಹ ಇಲ್ಲಿ ಕಾಣಬಹುದಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ