Search
  • Follow NativePlanet
Share
» »ರಾಶಿಚಕ್ರಕ್ಕನುಗುಣವಾಗಿ ಮೇಷ ರಾಶಿಯವರು ಈ ತಾಣಗಳಿಗೆ ಪ್ರವಾಸಹೋಗುವುದು ಸೂಕ್ತ

ರಾಶಿಚಕ್ರಕ್ಕನುಗುಣವಾಗಿ ಮೇಷ ರಾಶಿಯವರು ಈ ತಾಣಗಳಿಗೆ ಪ್ರವಾಸಹೋಗುವುದು ಸೂಕ್ತ

ಪ್ರತಿಯೊಬ್ಬರಿಗೂ ರಜಾದಿನಗಳಲ್ಲಿ ಪ್ರವಾಸ ಹೋಗುವ ಆಸೆ ಇರುತ್ತದೆ. ಆದರೆ ಯಾವ ಸ್ಥಳಕ್ಕೆ ಹೋಗೋದು ಅನ್ನೋದನ್ನು ನಿರ್ಧರಿಸುವಲ್ಲಿಯೇ ಸಮಯ ವ್ಯರ್ಥ ಮಾಡುತ್ತಾ ಇರುತ್ತಾರೆ. ಹೀಗಿರುವಾಗ ಪ್ರತಿರಾಶಿಯವರು ಅವರವರ ರಾಶಿಗನುಗುಣವಾಗಿ ಪ್ರವಾಸ ಹೋದ್ರೆ ಚೆನ್ನಾಗಿರುತ್ತೆ ಅಲ್ವಾ? ಹಾಗಾದ್ರೆ ನೀವು ಮೇಷ ರಾಶಿಯವರಾಗಿದ್ದಲ್ಲಿ ಯಾವ ಸ್ಥಳಗಳಿಗೆ ಪ್ರವಾಸ ಹೋಗಬೇಕು ಎನ್ನುವುದನ್ನು ನಾವು ತಿಳಿಸಿಕೊಡಲಿದ್ದೇವೆ.

ಕಡಿಮೆ ದರದಲ್ಲಿ ಫ್ಲೈಟ್ ಟಿಕೆಟ್ ಸಿಗಬೇಕಾದ್ರೆ ಹೀಗೆ ಮಾಡಿ

ಮೇಘಾಲಯ

ಮೇಘಾಲಯ

PC:Fabian Lambeck

ಮೇಘಾಲಯ ರಾಜ್ಯವು ಖಾಸಿ, ಜಯನ್ತಿಯಾ ಮತ್ತು ಗಾರೊ ಬುಡಕಟ್ಟು ಜನಾಂಗದವರ ಪ್ರಮುಖ ನೆಲೆಯಾಗಿದೆ. ಇಳಿಜಾರಿನ ಸ್ತರಗಳಲ್ಲಿ ನೆಲೆಗೊಂಡಿರುವ ಇಲ್ಲಿನ ಬೆಟ್ಟ ಗುಡ್ಡಗಳು ಹಣ್ಣು ಹಂಪಲಗಳು ಹಾಗು ಅಡಿಕೆಗಳನ್ನು ಬೆಳೆಯಲು ಪ್ರಶಸ್ತವಾಗಿದೆ. ಮೆಘಾಲಯದ ರಾಜಧಾನಿ ಐಜ಼ಾಲ್ ಆಗಿದ್ದು, ಇದು ಭಾರತದ ಜನಸಂಖ್ಯೆಯ ದೃಷ್ಟಿಯಿಂದ 23 ನೇಯ ದೊಡ್ಡ ರಾಜ್ಯವಾಗಿದೆ. ಉತ್ತರದಲ್ಲಿ ಅಸ್ಸಾಂ ಹಾಗು ದಕ್ಷಿಣದಲ್ಲಿ ಬಾಂಗ್ಲಾ ದೇಶದಿಂದ ಮೇಘಾಲಯವು ಸುತ್ತುವರೆದಿದೆ. ರಾಜ್ಯದ ಒಂದರ ಮೂರನೆಯ ಭಾಗದಷ್ಟು ಪ್ರದೇಶವು ಕಾಡುಗಳಿಂದ ಆವರಿಸಿದೆ. ಮೇಘಾಲಯದ ಕಾಡುಗಳು ತನ್ನಲ್ಲಿರುವ ವೈವಿಧ್ಯಮಯ ಪ್ರಾಣಿ ಪಕ್ಷಿಗಳಿಂದಾಗಿ ಹೆಸರುವಾಸಿಯಾಗಿದೆ.

ಮೇಘಾಲಯ ಪ್ರವಾಸೋದ್ಯಮ

ಮೇಘಾಲಯ ಪ್ರವಾಸೋದ್ಯಮ

PC:Dhiman Ghosh

ಮೇಘಾಲಯ ಪ್ರವಾಸೋದ್ಯಮವು ರಾಜ್ಯದ ಸಂಸ್ಕೃತಿ ಮತ್ತು ಸಂಪ್ರದಾಯಗಳ ಜೊತೆಗೆ ಪ್ರಾಕೃತಿಕ ಸೌಂದರ್ಯದ ಅದ್ಭುತವಾದ ಪ್ರವಾಸವನ್ನು ಮಾಡಿಸುತ್ತದೆ. ಈ ರಾಜಯದ ನೆರೆಯಲ್ಲಿರುವ ಮಿಜೋರಮ್ ಕೂಡ ತನ್ನ ಸೌಂದರ್ಯದತ್ತ ಭೂದೃಶ್ಯಾವಳಿಗಳಿಂದ ಹಾಗು ಹಿತಕರವಾದ ವಾತವರಣದಿಂದ ಪ್ರಖ್ಯಾತವಾಗಿದೆ. ಮಿಜೋರಮ್ ನಲ್ಲಿ ಕಂಡು ಬರುವ ಕೆಲವು ಪ್ರಮುಖ ಆಕರ್ಷಣೆಗಳೆಂದರೆ ಮುರ್ಲೇನ್ ರಾಷ್ಟ್ರೀಯ ಉದ್ಯಾನ ಮತ್ತು ಡಂಪಾ ಹುಲಿ ಮೀಸಲು ಅರಣ್ಯ. ಹೆಸರಿಸಬಹುದಾದ ಕೆಲವು ಪ್ರಮುಖ ಪ್ರವಾಸಿ ಆಕರ್ಷಣೆಗಳೆಂದರೆ ಪಲಕ್ ದಿಲ್, ತಮ್ ದಿಲ್ ಮತ್ತು ವಾಂಟ್ವಾಂಗ್ ಜಲಪಾತ.

ಅರುಣಾಚಲ ಪ್ರದೇಶ

ಅರುಣಾಚಲ ಪ್ರದೇಶ

PC:Deepak

ಅರುಣಾಚಲ ಪ್ರದೇಶದ ಭೂವಿವರಣೆ ಅರುಣಾಚಲ ಪ್ರದೇಶದ ಭೂಪ್ರದೇಶದ ಲಕ್ಷಣಗಳೇ ಇಲ್ಲಿನ ಪ್ರವಾಸೋದ್ಯಮದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಇಲ್ಲಿನ ಪ್ರವಾಸಿಗರಿಗೆ ವಿವಿಧ ತರವಾದ ಪ್ರಾಕೃತಿಕ ಸೊಬಗನ್ನು ಪರಿಚಯಿಸುತ್ತದೆ. ಭಾರತದ ಪೂರ್ವ ಭಾಗದಲ್ಲಿರುವ ಅರುಣಾಚಲ ಪ್ರದೇಶವು ಸೂರ್ಯ ಉದಯಿಸುವ ನಾಡು ಎಂದೂ ಕರೆಯಲ್ಪಡುತ್ತದೆ. ಈ ಸ್ಥಳ ಹಿಮಾಲಯ ಪರ್ವತ ಶ್ರೇಣಿಗಳಿಂದ ಆವೃತವಾಗಿದ್ದು, ಸಿಯಾಂಗ್, ಸುಬಂಸಿರಿ, ಕಮೆಂಗ್, ತಿರಪ್ ಮತ್ತು ಲೋಹಿತ್ ಎಂಬ ಐದು ನದೀ ಕಣಿವೆಗಳಾಗಿ ವಿಂಗಡಿಸಲಾಗಿದೆ. ಈ ಸುಂದರ ಕಣಿವೆಗಳು ಹಚ್ಚ ಹಸುರಿನ ಸುಂದರವಾದ ಕಾಡುಗಳಿಂದ ಆವರಿಸಲ್ಪಟ್ಟಿದೆ.

ಸಾಹಸ ಪ್ರವಾಸೋದ್ಯಮ

ಸಾಹಸ ಪ್ರವಾಸೋದ್ಯಮ

PC:Arif Siddiqui

ಅರುಣಾಚಲ ಪ್ರದೇಶದ ಸಾಹಸ ಪ್ರವಾಸೋದ್ಯಮ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವ ಸಾಹಸ ಪ್ರಿಯ ಯಾತ್ರಿಗಳಿಗೆ ಇಲ್ಲಿ ಸಂಭ್ರಮಭರಿತ ಸಮಯವನ್ನು ನಿರೀಕ್ಷಿಸಬಹುದು. ಟ್ರೆಕಿಂಗ್ , ರಿವರ್ ರಾಫ್ಟಿಂಗ್ ಹಾಗೂ ಅನ್ಗ್ಲಿಂಗ್ ಇಲ್ಲಿನ ಮುಖ್ಯ ಆಕರ್ಷಣೆಗಳಾಗಿವೆ. ಅರುಣಾಚಲ ಪ್ರದೇಶದ ಹಲವು ಸ್ಥಳಗಳು ಟ್ರೆಕಿಂಗ್ ಗೆ ಸೂಕ್ತವಾಗಿವೆ. ಕಮೆಂಗ್, ಸುಬಂಸಿರಿ, ದಿಬಂಗ್ ಹಾಗೂ ಸಿಅಂಗ್ ನದಿಗಳಲ್ಲಿ ವೈಟ್ ವಾಟರ್ ರಿವರ್ ರಾಫ್ಟಿಂಗ್ ಟ್ರಿಪ್ ಗಳನ್ನು ಸಾಹಸಿಗ ಪ್ರವಾಸಿಗಳಿಗೆ ಸಂಘಟಿಸಲಾಗುತ್ತದೆ. ಅನ್ಗ್ಲಿಂಗ್ ಪ್ರೇಮಿಗಳಿಗೆ ಇಲ್ಲಿ ಅನ್ಗ್ಲಿಂಗ್ ಹಬ್ಬವನ್ನು ಆಚರಿಸಲಾಗುತ್ತದೆ.

ಸಿಕ್ಕಿಂ

ಸಿಕ್ಕಿಂ

PC:Carsten.nebel

ಹಿಮಾಲಯದ ಗಿರಿ ಶೃಂಗಗಳಲ್ಲಿ ನೆಲೆಸಿದೆ ಪುಟ್ಟ ರಾಜ್ಯ ಸಿಕ್ಕಿಂ. ಇಲ್ಲಿ ಕಂಡುಬರುವ ಅನೇಕ ಸ್ಥಳಗಳು ಗುಡ್ಡಗಾಡು ಪ್ರದೇಶಗಳಲ್ಲಿ ನೆಲೆಸಿದ್ದು, ಸಮುದ್ರ ಮಟ್ಟದಿಂದ ಸುಮಾರು 280 ಮೀ. ನಿಂದ ಹಿಡಿದು 8,585 ಮೀ ವರೆಗೆ ಎತ್ತರವಾಗಿವೆ. ಇಲ್ಲಿರುವ ಅತಿ ಎತ್ತರದ ಪ್ರದೇಶ ಕಂಚನ್ ಜುಂಗಾ ಪರ್ವತ. ಇದು ಜಗತ್ತಿನಲ್ಲಿಯೆ ಮೂರನೇಯ ಅತಿ ಎತ್ತರದ ಗಿರಿ ಶೃಂಗ. ಸಿಕ್ಕಿಂ ರಾಜ್ಯವು ತನ್ನ ಪೂರ್ವ, ಪಶ್ಚಿಮ ಹಾಗು ಉತ್ತರಕ್ಕೆ ಕ್ರಮವಾಗಿ ಭೂತಾನ್, ನೇಪಾಳ ಮತ್ತು ಟಿಬೇಟಿಯನ್ ಪ್ರಸ್ತಭೂಮಿಯಿಂದ ಸುತ್ತುವರೆದಿದೆ.

ಪ್ರವಾಸಿ ತಾಣಗಳು

ಪ್ರವಾಸಿ ತಾಣಗಳು

PC:Nichalp

ಸುಂದರ ಹಾಗು ಪುಟ್ಟ ರಾಜ್ಯವಾದ ಸಿಕ್ಕಿಂ ತನ್ನ ಒಡಲಿನಲ್ಲಿ ಅನೇಕ ನಯನ ಮನೋಹರ ಪ್ರವಾಸಿ ತಾಣಗಳನ್ನು ಹುದುಗಿಸಿಟ್ಟುಕೊಂಡಿದೆ. ಸಿಕ್ಕಿಂ ರಾಜ್ಯದ ಪೋಷಕನೆಂದೆ ಬಿಂಬಿತವಾದ ಸಂತ ಗುರು ಪದ್ಮಸಂಭವರ ಅತಿ ಎತ್ತರವಾದ ಪ್ರತಿಮೆಯನ್ನು ನಾಮ್ಚಿಯಲ್ಲಿ ಕಾಣಬಹುದು. ರಾಜ್ಯದ ಅಧಿಕೃತ ಹೂವೆನ್ನಲಾದ ರೊಡೋಡೆಂಡ್ರಾನ್ (ದೊಡ್ಡ ಹೂ ಬಿಡುವ ಗುಲ್ಮಾ) ಧಾಮವು ಅತ್ಯಂತ ಸುಂದರ ಪ್ರದೇಶವಾಗಿ ಪ್ರವಾಸಿಗರ ಮನದಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಜಗತ್ತಿನ ಮೂರನೇಯ ಅತಿ ಎತ್ತರದ ಗಿರಿ ಶೃಂಗ ಕಂಚನ್ ಜುಂಗಾ ತನ್ನ ವಿಶೀಷ್ಟತೆಯಿಂದ ಮನ ಸೆಳೆಯುತ್ತದೆ. ಇವುಗಳಲ್ಲದೆ, ಧಾರ್ಮಿಕವಾಗಿ ಅನೇಕ ಬೌದ್ಧ ಮಠಗಳು, ದೇವಾಲಯಗಳು ಧಾರ್ಮಿಕ ಶೃದ್ಧೆಯುಳ್ಳ ಪ್ರವಾಸಿಗರನ್ನು ಆಕರ್ಷಿಸಿದರೆ, ನಿತ್ಯಹರಿದ್ವರ್ಣದಿಂದ ಕೂಡಿದ ಸುಂದರ ಕಣಿವೆಗಳು, ಝುಳು ಝುಳು ಹರಿಯುವ ನೀರಿನ ತೊರೆಗಳು, ಔಷಧಿಯುಕ್ತ ಗುಣಗಳುಳ್ಳ ಬಿಸಿ ನೀರಿನ ಬುಗ್ಗೆಗಳು, ಸಹಜ ಪ್ರಕೃತಿ ಸೌಂದರ್ಯ, ಗಿರಿ ಪರ್ವತಗಳು, ಪ್ರಕೃತಿ ಪ್ರಿಯರನ್ನು ಎರಡೂ ಕೈಗಳಿಂದ ಸ್ವಾಗತಿಸುತ್ತ ಅಪ್ಪಿಕೊಳ್ಳುತ್ತದೆ.

ಅಸ್ಸಾಂ

ಅಸ್ಸಾಂ

PC:Rajuonline

ಅಸ್ಸಾಮ್ ಪುರಾತನ ದೇವಾಲಯಗಳ ನಾಡು. ಎಲ್ಲಿ ನೋಡಿದರೂ ಶಿವನ ದೇವಾಲಯಗಳೇ ಇವೆ. ಇವು ತಮ್ಮ ಗಾತ್ರ ಮತ್ತು ಸೌಂದರ್ಯದಿಂದ ಹೆಸರಾಗದಿದ್ದರೂ ತಮ್ಮ ಐತಿಹ್ಯಗಳಿಗೆ ಪ್ರಸಿದ್ದವಾಗಿವೆ. ಉದಾಹರಣೆಗೆ ಕಾಮಾಕ್ಯಾ ದೇವಾಲಯದ ಶಕ್ತಿ ದೇವತೆ 'ಬಹಿಷ್ಟೆಯಾಗುವ ಭಗವತಿ'ಎಂದು ಹೆಸರಾಗಿದ್ದಾಳೆ. ಇದರೊಂದಿಗೆ ರಾಷ್ಟ್ರಿಯ ಪಾರ್ಕ್,ಅಭಯಾರಣ್ಯಗಳು ಸಾಕಷ್ಟಿವೆ. ಅಸ್ಸಾಮ್ ಇವೇ ಕಾರಣಕ್ಕಾಗಿ ಪ್ರಸಿದ್ಧ. ಈಶಾನ್ಯ ರಾಜ್ಯಗಳನ್ನು ರಹಸ್ಯಗಳ ನಾಡು ಎಂದು ಇತಿಹಾಸಕಾರರು ಕರೆದಿದ್ದಾರೆ. ಅಸ್ಸಾಮ್ ನಲ್ಲಿ ಉಳಿದ ಎಲ್ಲಾ ರಾಜ್ಯಗಳಿಗಿಂತಾ ಹೆಚ್ಚು ಬುಡಕಟ್ಟು ಜನಾಂಗದ ಜನತೆ ಇದ್ದಾರೆ. ಈ ಸಮೂಹವನ್ನು ಆರ್ಯನರು,ಅನಾರ್ಯರು ಅಥವಾ ಮಂಗೋಲಾಯ್ಡ್ ಮತ್ತು ಇಂಡೋ-ಇರಾನಿಯನ್ ಎಂದು ವಿಭಜಿಸಲಾಗುತ್ತದೆ. ಇದರೊಂದಿಗೆ ಬೋಡೋ, ಕಾರ್ಬಿ, ರಾಜಬನ್ಸಿ,ಮಿರಿ,ಮಿಶಿಮ ಮತ್ತು ರಭ ಮುಂತಾದ ಬುಡಕಟ್ಟುಗಳೂ ಇವೆ.

Read more about: india travel summer
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X