Search
  • Follow NativePlanet
Share
» »ತಮಿಳುನಾಡಿನ ಅಷ್ಟೇನೂ ಜನಪ್ರಿಯತೆ ಪಡೆಯದ ಪಟ್ಟಣ ನಾಗರಕೋಯಿಲ್ ಕಡೆಗೆ ಒಂದು ನೋಟ

ತಮಿಳುನಾಡಿನ ಅಷ್ಟೇನೂ ಜನಪ್ರಿಯತೆ ಪಡೆಯದ ಪಟ್ಟಣ ನಾಗರಕೋಯಿಲ್ ಕಡೆಗೆ ಒಂದು ನೋಟ

ಇಲ್ಲಿರುವ ಅತ್ಯಂತ ಪ್ರಸಿದ್ಧವಾದ ನಾಗರಾಜ ದೇವಸ್ಥಾನದಿಂದ ನಾಗರಕೋಯಿಲ್ ಗೆ ಈ ಹೆಸರು ಬಂದಿದೆ.ಪಟ್ಟಣವು ದೇವಸ್ಥಾನಗಳಿಂದ ತುಂಬಿದೆ ಮತ್ತು ಹಲವಾರು ಪ್ರಾಚೀನ ಬೀಚ್ ಗಳಿಗೆ ನೆಲೆಯಾಗಿದೆ.ಸೇಂಟ್ ಕ್ಸೇವಿಯರ್ ಕ್ಯಾಥೆಡ್ರಲ್, ನಾಗರಾಜ ದೇವಸ್ಥಾನ,

By Manjula

ತಮಿಳುನಾಡಿನ ಕೊಯ್ಲ್ ಗೆ ನೀವು ಪ್ರವೇಶಿಸಿದ ಕೂಡಲೇ ನಿಮ್ಮ ಇಂದ್ರಿಯಗಳಿಗೆ ಪರಿಚಿತವಾಗಿರುವ ಕೆಲವು ಪರಿಚಿತ ಶಬ್ದಗಳು ಕೇಳಿಬರುತ್ತದೆ. ಒಂದು ಉಷ್ಣವಲಯದ ತಂಗಾಳಿಯು ತೆಂಗಿನ ಎಲೆಗಳಿಂದ ಹಾದುಹೋಗುವಂತೆ ಮಾಡುತ್ತದೆ ಮತ್ತು ಗಾಳಿಯು ಗಂಟೆಯ ಗಂಟೆಗಳ ನಾದದಿಂದ ತುಂಬಿದಂತಿರುತ್ತದೆ.

ಸ್ಥಳೀಯ ಮಾರುಕಟ್ಟೆಯಲ್ಲಿ ನಡೆದುಕೊಂಡು ಹೋಗುವಾಗ, ದೇವಾಲಯದ ಘಂಟೆಗಳ ನಾದದಿಂದ ಹಿಡಿದು , ಮಕ್ಕಳ ವಿನೋದ, ಮಾರುಕಟ್ಟೆಯಲ್ಲಿ ಹತಾಶೆಯಿಂದ ನಡೆಯುವ ಚೌಕಾಸಿಯ ಸದ್ದು, ಅಲ್ಲದೆ ಮಹಿಳೆಯರ ಗೆಜ್ಜೆಯ ನಾದ ಇವೆಲ್ಲದರಿಂದ ಕೂಡಿರುತ್ತದೆ.

ಈ ಸ್ಥಳವು ಫಿಲ್ಟರ್ ಕಾಫಿ ಮತ್ತು ಮಲ್ಲಿಗೆಯ ಸುವಾಸನೆಗಳ ಮಿಶ್ರಣವಾಗಿದೆ ಮತ್ತು ಬೀದಿಯಲ್ಲಿರುವ ಸಣ್ಣ ಪುಣ್ಯಕ್ಷೇತ್ರಗಳು ಸೇರಿ ಹೊಳೆಯುತ್ತಿರುವ ಸೂರ್ಯನ ಬಣ್ಣಕ್ಕೆ ಮೆರುಗು ತರುವಂತಿದೆ. ನಾಗರ್ ಕೊಯಿಲ್ ಭಾರತದ ಪರ್ಯಾಯ ದ್ವೀಪದ ತುದಿಯಲ್ಲಿದೆ ಮತ್ತು ಪಶ್ಚಿಮ ಘಟ್ಟಗಳ ಗಡಿಯನ್ನು ಹೊಂದಿರುವುದು, ಈ ಪ್ರದೇಶದ ಮೊದಲ ಆಕರ್ಷಣೆಯಾಗಿದೆ.

ನಾಗರಕೋಯಿಲ್ ವರ್ಣಮಯ ಇತಿಹಾಸವನ್ನು ಹೊಂದಿದೆ ಈ ಪ್ರದೇಶವು ಚೇರರು, ಚೋಳರು ಮತ್ತು ಪಾಂಡ್ಯ ರಿಂದ ಆಳಲ್ಪಟ್ಟಿದೆ. ನಾಗರಕೋಯಿಲ್ ಎಂದರೆ ನಾಗದೇವರ ದೇವಸ್ಥಾನ ಎಂದು ಅರ್ಥ, ಈ ಹೆಸರನ್ನು ಪ್ರಾಚೀನ ನಾಗರಾಜ ಮಂದಿರದಿಂದ ತೆಗೆದುಕೊಳ್ಳಲಾಗಿದೆ ಎನ್ನುವ ಪ್ರತೀತಿ ಇದೆ. ಈ ಸ್ಥಳವು ಅಡಿಕೆ ಮತ್ತು ರಬ್ಬರ್ ತೋಟಗಳಿಂದ ಕೂಡಿದ್ದು ಹಸಿರುಮಯವಾಗಿದೆ. ಮತ್ತು ಕನ್ಯಾಕುಮಾರಿ ಜಿಲ್ಲೆಯ ಆಡಳಿತ ಕೇಂದ್ರವೂ ಆಗಿದೆ.

 ನಾಗರಾಜ ದೇವಸ್ಥಾನ

ನಾಗರಾಜ ದೇವಸ್ಥಾನ

ಇದು ಪುರಾತನ ದೇವಾಲಯವಾಗಿದ್ದು ವಾಸುಕಿ ಮತ್ತು ಕೃಷ್ಣನ ವಾಸಸ್ಥಾನವಾಗಿದೆ, ಇದು ಮಹೇಂದ್ರಗಿರಿ ಪರ್ವತದ ಕೆಳಭಾಗದಲ್ಲಿದೆ, ಇದು ರಾಮಾಯಣದ ಪ್ರಕಾರ ಇದು ನಾಗ (ಹಾವು) ಗಳಿಗೆ ಮನೆಯಾಗಿತ್ತು ಎಂದು ನಂಬಲಾಗಿದೆ. ಸಂಪ್ರದಾಯಗಳ ಪ್ರಕಾರ ಪುರೋಹಿತರು ಕೇರಳದ ಪ್ರಖ್ಯಾತ ಪಂಬುಮೆಕ್ಕಟ್ಟು ಮನನಿಂದ ಸೂಚಿಸಲ್ಪಟ್ಟಿರುವ ನಂಬೂದರಿ ಬ್ರಾಹ್ಮಣರು. ಭಕ್ತರು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಬಂದು ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ನಾಗರಾಜರಿಗೆ ಹಾಲು ಮತ್ತು ಅರಿಶಿನವನ್ನು ಸಲ್ಲಿಸಿ ಹರಸಿಕೊಳ್ಳುತ್ತಾರೆ.

PC: Natesh Ramasamy


ಸೇಂಟ್ ಕ್ಸೇವಿಯರ್ ಕ್ಯಾಥೆಡ್ರಲ್

ಸೇಂಟ್ ಕ್ಸೇವಿಯರ್ ಕ್ಯಾಥೆಡ್ರಲ್

1600 ರ ಹಿಂದಿನ ರೋಮನ್ ಕ್ಯಾಥೋಲಿಕ್ ಲ್ಯಾಟಿನ್ ರೈಟ್ ಮಂದಿರವು ಕೊಟ್ಟರ್ ಬಜಾರ್ ನಲ್ಲಿದೆ. ದಂತಕಥೆಗಳ ಪ್ರಕಾರ, ಸೇಂಟ್ ಕ್ಸೇವಿಯರ್ ಕೊಟ್ಟಾರ್ ಗೆ ಆಗಮಿಸಿದ್ದ ಮತ್ತು ಅವನು ತನ್ನ ಶಿಲುಬೆಯನ್ನು ಮಾತ್ರ ಬಳಸಿ ಪಡಗಾಸ್ ನ ಆಕ್ರಮಣವನ್ನು ತಡೆಗಟ್ಟುತ್ತಾನೆ ಮತ್ತು ಸಂಪೂರ್ಣ ವೇನಾಡ್ ಸಾಮ್ರಾಜ್ಯದ ನಿವಾಸಿಗಳನ್ನು ರಕ್ಷಿಸುತ್ತಾನೆ.

ಇದಕ್ಕೆ ಗೌರವಾರ್ಥದ ಒಂದು ಸೂಚಕವಾಗಿ, ಆಗಿನ ರಾಜನಾದ ಉನ್ನಿ ಕೇರಳ ವರ್ಮಾ ಅವರು ಚರ್ಚ್ ನಿರ್ಮಾಣಕ್ಕೆ ಭೂಮಿಯನ್ನು ನೀಡಿದರು; ಕ್ರಿ.ಶ. 1544 ರಿಂದ ಈ ಚರ್ಚ್ ನಲ್ಲಿ ತಾಯಿ ಮೇರಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತದೆ.

PC: Infocaster

ಸಿಎಸ್ಐ ಹೋಮ್ ಚರ್ಚ್

ಸಿಎಸ್ಐ ಹೋಮ್ ಚರ್ಚ್

ಏಷ್ಯಾದಲ್ಲಿ ನಿರ್ಮಿಸಲಾಗಿರುವ ಅತ್ಯಂತ ಹಳೆಯ ಮತ್ತು ದೊಡ್ಡ ಚರ್ಚ್ ಗಳಲ್ಲಿ ಹೋಮ್ ಚರ್ಚ್ ಕೂಡ ಒಂದು. ವಸಾಹತು ಕಾಲದಲ್ಲಿ ಗ್ರೀಕ್ ಶೈಲಿಯ ವಾಸ್ತುಶೈಲಿಯನ್ನು ಅನುಸರಿಸಿ, 1819 ರಲ್ಲಿ ಪ್ರೊಟೆಸ್ಟಂಟ್ ಚರ್ಚಿನ ನಿರ್ಮಾಣವು ಪ್ರಾರಂಭವಾಯಿತು. ಈ ಚರ್ಚನ್ನು ನಾಗರಾಜ ದೇವಾಲಯದ ಆನೆಗಳು ಮತ್ತು ಕೈದಿಗಳ ಸಹಾಯದಿಂದ ನಿರ್ಮಿಸಲಾಗಿದೆ. ಇದನ್ನು ದೊಡ್ಡ ದೊಡ್ಡ ಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿದೆ ಆದುದರಿಂದ ಇದಾಕ್ಕೆ ಕಲ್ಕೊಯಿಲ್ ಅಥವಾ ಕಲ್ಲಿನ ಚರ್ಚ್ ಎಂದೂ ಕೂಡ ಕರೆಯುತ್ತಾರೆ.

ತನುಮಲಯನ್ ದೇವಾಲಯ

ತನುಮಲಯನ್ ದೇವಾಲಯ

ಸ್ತನುಮಲಯನ್ ದೇವಾಲಯ ಎಂದೂ ಕರೆಯಲ್ಪಡುವ ತನುಮಲಯನ್ ದೇವಾಲಯವು ಸುಚೀಂದ್ರಂನಲ್ಲಿದೆ, ಇದು ನಾಗರ್ ಕೊಯಿಲಿನಿಂದ ಸುಮಾರು 6 ಕಿ.ಮೀ ದೂರದಲ್ಲಿದೆ. ಈ ದೇವಾಲಯವು ತ್ರಿಮೂರ್ತಿಗಳಾದ-ಶಿವ, ವಿಷ್ಣು ಮತ್ತು ಬ್ರಹ್ಮನ ಪೂಜೆಗೆ ಹೆಸರುವಾಸಿಯಾಗಿರುವ ದೇವಾಲಯವಾಗಿದೆ.

ದೇವಸ್ಥಾನಕ್ಕೆ ಈ ಹೆಸರು ಬರಲು ಕಾರಣ ಇಲ್ಲಿದೆ : ಸ್ತನು ಅಂದರೆ ಶಿವ, ಮಾಳ ಎಂದರೆ ವಿಷ್ಣು ಮತ್ತು ಯಾನ್ ಅಂದರೆ ಬ್ರಹ್ಮ ಎಂದರ್ಥ ಒಟ್ಟಿಗೆ ತನುಮಲಯನ್ ಎಂದಾಗಿದೆ. ಪ್ರಸ್ತುತ ರಚನೆಯು 17 ನೇ ಶತಮಾನದಲ್ಲಿ ನಿರ್ಮಾಣಗೊಂಡಿತು. ಈ ದೇವಾಲಯವು ಅದರ ಶಿಲ್ಪ ಕಲೆಗಳಿಗೆ ಹೆಸರುವಾಸಿಯಾಗಿದೆ.ಒಂದೇ ಕಲ್ಲಿನಲ್ಲಿ ಕೆತ್ತಲಾದ ನಾಲ್ಕು ಸಂಗೀತ ಕಂಬಗಳನ್ನು ಕಾಣಬಹುದು. 18 ಅಡಿ ಎತ್ತರವಿರುವ ಈ ವಾಸ್ತುಶಿಲ್ಪವು ಕಲಾಕಾರರ ನೈಪುಣ್ಯವನ್ನು ತೋರಿಸುತ್ತದೆ.

PC: Ssriram mt


 ಕಡಲತೀರಗಳು

ಕಡಲತೀರಗಳು

ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಕಡಲ ತೀರಗಳು ನಾಗರಕೋಯಿಲ್ ನಲ್ಲಿವೆ. ಮುಟ್ಟಮ್, ಸಾಂಗುತುರೈ, ಸೋಥವಿಲೈ, ತೆಕ್ಕುರುಚಿ ಮತ್ತು ಥೆಂಗಪಟ್ಟಣಂ ಮೊದಲಾದವುಗಳು ಅತ್ಯಂತ ಜನಪ್ರಿಯವಾದವುಗಳಾಗಿದ್ದರೂ, ಭೇಟಿ ನೀಡುವವರು ಕಡಿಮೆ. ಮುಟ್ಟಮ್ ಬೀಚ್ ತನ್ನ ಬಂಡೆಗಳಿಗೆ ಹೆಸರುವಾಸಿಯಾಗಿದೆ. ಇವು ಸಮುದ್ರದಲ್ಲಿ ತೇಲಿಹೋಗುವಂತೆ ಕಾಣುತ್ತದೆ.

PC: Rafimmedia

ತಲುಪುವ ಬಗೆ:

ತಲುಪುವ ಬಗೆ:

ವಿಮಾನದಿಂದ: 73 ಕಿ.ಮೀ ದೂರದಲ್ಲಿರುವ ತಿರುವನಂತಪುರಂ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ. ವಿಮಾನ ನಿಲ್ದಾಣದಿಂದ ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ, ಮುಂತಾದ ಪ್ರಮುಖ ನಗರಗಳಿಗೆ ವಿಮಾನಗಳ ಹಾರಾಟವಿದೆ. ಕೆಲವು ಅಂತರಾಷ್ಟ್ರೀಯ ವಿಮಾನಗಳ ಸಂಪರ್ಕವನ್ನೂ ಕೂಡ ಈ ನಿಲ್ದಾಣವು ಹೊಂದಿದೆ.

ರೈಲು ಮೂಲಕ: ನಾಗರಕೋಯಿಲ್ ಜಂಕ್ಷನ್ ಪ್ರಮುಖ ರೈಲ್ವೆ ನಿಲ್ದಾಣವಾಗಿದೆ. ಇಲ್ಲಿ ದೇಶದ ಎಲ್ಲ ಪ್ರಮುಖ ಪಟ್ಟಣಗಳು ​​ಮತ್ತು ನಗರಗಳಿಗೆ ಸಂಪರ್ಕವಿದೆ.

ರಸ್ತೆಯ ಮೂಲಕ: ನಾಗರಕೋಯಿಲ್ ರಸ್ತೆಗಳಿಂದ ಉತ್ತಮ ಸಂಪರ್ಕವನ್ನು ಹೊಂದಿದೆ ಮತ್ತು ತಿರುವನಂತಪುರಂ, ಕನ್ಯಾಕುಮಾರಿ ಮತ್ತು ಇತರ ಪ್ರಮುಖ ಪಟ್ಟಣಗಳಿಗೆ ನಗರಗಳಿಂದ ಕಾರ್ಯನಿರ್ವಹಿಸುವ ಬಸ್ಸು ಸಂಚಾರ ವ್ಯವಸ್ಥೆಯನ್ನು ಹೊಂದಿದೆ.

PC: w:user:PlaneMad

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X