Search
  • Follow NativePlanet
Share
» »ತುಮಕೂರಿನಲ್ಲಿನ ಸಿದ್ಧರ ಬೆಟ್ಟ, ಗೊರವನಹಳ್ಳಿ ಲಕ್ಷ್ಮೀ ಮಂದಿರ ನೋಡಿದ್ದೀರಾ?

ತುಮಕೂರಿನಲ್ಲಿನ ಸಿದ್ಧರ ಬೆಟ್ಟ, ಗೊರವನಹಳ್ಳಿ ಲಕ್ಷ್ಮೀ ಮಂದಿರ ನೋಡಿದ್ದೀರಾ?

ತುಮಕೂರು ತನ್ನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವಕ್ಕಾಗಿ ಫೇಮಸ್ ಆಗಿದೆ. ಬೆಂಗಳೂರಿನಿಂದ ವೀಕೇಂಡ್‌ ಕಳೆಯಬೇಕಾದರೆ ನೀವು ತುಮಕೂರಿಗೆ ಹೋಗಬಹುದು. ತುಮಕೂರಿಗೆ ತನ್ನದೇ ಆದ ಇತಿಹಾಸವೂ ಇದೆ. ತುಮಕೂರಿನ ಇತಿಹಾಸ ಗಂಗರಿಂದ ಶುರುವಾಗುತ್ತದೆ. ಆ ನಂತರ ರಾಷ್ಟ್ರಕೂಟ ಚಾಲುಕ್ಯರು, ವಿಜಯನಗರ, ಮೈಸೂರು ಒಡೆಯರು, ಚಾಲುಕ್ಯರಿಂದ ಆಳ್ವಲ್ಪಟ್ಟಿತು. ತುಕೂರಿನಲ್ಲಿನ ಪ್ರವಾಸಿ ತಾಣಗಳು ಯಾವ್ಯವು ಅನ್ನೋದನ್ನು ತಿಳಿಯೋಣ.

ಕಾಲೇಶ್ವರ ಮಂದಿರ

ಕಾಲೇಶ್ವರ ಮಂದಿರ

ತುಮಕೂರು ಸಾಂಸ್ಕೃತಿಕ ರೂಪದಲ್ಲೂ ಒಂದು ಮಹತ್ವಪೂರ್ಣ ನಗರವಾಗಿದೆ. ತುಮಕೂರಿನ ಪ್ರವಾಸವನ್ನು ನೀವು ಇಲ್ಲಿನ ಪ್ರಮುಖ ಕಾಲೇಶ್ವರ ಮಂದಿರದಿಂದ ಪ್ರಾರಂಭಿಸಬಹುದು. ಇದನ್ನು ೯ನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು. ಮಂದಿರದ ಪರಿಸರದಲ್ಲಿ ಅನೇಕ ಸುಂದರ ಕಂಬಗಳಿವೆ. ಇದು ಭಕ್ತರು ಹಾಗೂ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮಂದಿರ ಒಳಭಾಗ ಬಹಳ ಸುಂದರವಾಗಿ ಅಲಂಕರಿಸಲಾಗಿದೆ. ಒಳಗೆ ದೇವಿ ದೇವತೆಗಳ ಮೂರ್ತಿಯೂ ಇದೆ. ಇಲ್ಲಿ ಮಹಡಿ ಮೇಲೆ ನೃತ್ಯ ಭಂಗಿಯಲ್ಲಿರುವ ಶಿವನನ್ನೂ ನೋಡಬಹುದು.

ಹನುಮನ ಕಾಲ ಬಳಿ ಶನಿದೇವ : ಶನಿದೆಸೆ ಮುಕ್ತಿಗೆ ಇಲ್ಲಿಗೆ ಬರ್ತಾರೆ ಭಕ್ತರು ಹನುಮನ ಕಾಲ ಬಳಿ ಶನಿದೇವ : ಶನಿದೆಸೆ ಮುಕ್ತಿಗೆ ಇಲ್ಲಿಗೆ ಬರ್ತಾರೆ ಭಕ್ತರು

ಸಿದ್ಧರ ಬೆಟ್ಟ

ಸಿದ್ಧರ ಬೆಟ್ಟ

PC:Saurabh Sharan

ಮಧುಗಿರಿ ಬೆಟ್ಟದ ಸಮೀಪದಲ್ಲಿರುವ ಸಿದ್ಧರ ಬೆಟ್ಟ ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ.
ತುಮಕೂರಿನ ಮುಖ್ಯ ನಗರದಿಂದ ಸುಮಾರು ೫೦ ಕಿ.ಮೀ ದೂರದಲ್ಲಿರುವ ಈ ಸ್ಥಳವು ಬೆಟ್ಟ, ಗುಹೆ ಹಾಗೂ ಧಾರ್ಮಿಕ ಕ್ಷೇತ್ರಗಳಿಂದ ಕೂಡಿದೆ. ಟ್ರಕ್ಕಿಂಗ್‌ಗೆ ಬಹಳ ಹೆಸರುವಾಸಿಯಾಗಿದೆ. ಪ್ರವಾಸಿಗರನ್ನು ಹೊರತುಪಡಿಸಿ ಇಲ್ಲಿ ಬೃಹತ್ ಸಂಖ್ಯೆಯಲ್ಲಿ ತೀರ್ಥಯಾತ್ರಿಗಳೂ ಆಗಮಿಸುತ್ತಾರೆ. ಇಲ್ಲಿ ಶಿವನ ಮಂದಿರವೂ ಇದೆ.

ಪಾವಗಡ ಕೋಟೆ

ಪಾವಗಡ ಕೋಟೆ

ಇವುಗಳನ್ನು ಹೊರತುಪಡಿಸಿ ನೀವು ಪಾವಗಡ ಕೋಟೆಯನ್ನು ಭೇಟಿ ನೀಡಬಹುದು. ಇದು ತುಮಕೂರಿನ ಉತ್ತರ ಪೂರ್ವದಲ್ಲಿದೆ. ಈ ಕೋಟೆಯು ವಿಜಯನಗರದ ಶಾಶನದ ಕಾಲದಲ್ಲಿನ ಪ್ರಸಿದ್ಧ ಕೋಟೆಗಳಲ್ಲಿ ಒಂದಾಗಿದೆ. ಹಿಂದೊಮ್ಮೆ ಇದು ಮೈಸೂರು ಸಾಮ್ರಾಜ್ಯದ ಭಾಗವಾಗಿತ್ತು. ಟಿಪ್ಪು ಸುಲ್ತಾನ್ ಹಾಗೂ ಬ್ರಿಟಿಷರ ನಡುವೆ ಯುದ್ಧ ನಡೆದ ಸ್ಥಳ ಇದಾಗಿದೆ. ಇತಿಹಾಸವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ನೀವು ತುಮಕೂರಿಗೆ ಭೇಟಿ ನೀಡಲೇ ಬೇಕು.

ಗೊರವನಹಳ್ಳಿ ಲಕ್ಷ್ಮೀ ಮಂದಿರ

ಗೊರವನಹಳ್ಳಿ ಲಕ್ಷ್ಮೀ ಮಂದಿರ

ತುಮಕೂರಿನ ಧಾರ್ಮಿಕ ಸ್ಥಳಗಳಲ್ಲಿ ನೀವು ಗೊರವನಹಳ್ಳಿ ಮಹಾಲಕ್ಷ್ಮೀ ಮಂದಿರದ ದರ್ಶನ ಮಾಡಬಹುದು. ಇದು ತುಮಕೂರಿನ ಕೊರಟೇಗೆರೆ ತಾಲೂಕಿನಲ್ಲಿದೆ. ತುಮಕೂರು ಸಿಟಿಯಿಂದ ಸುಮಾರು ೩೦ ಕಿ.ಮೀ ದೂರದಲ್ಲಿದೆ. ಇಲ್ಲಿನ ಮಹಾಲಕ್ಷ್ಮೀ ಮೂರ್ತಿ ಸ್ವಯಂ ಭೂ ಆಗಿರುವುದು. ಪ್ರತಿ ಶುಕ್ರವಾರ ಇಲ್ಲಿ ದೇವಿಯ ವಿಶೇಷ ಪೂಜೆ ನಡೆಯುತ್ತದೆ.

ಶಿವಮೊಗ್ಗದ ಅಂಬುತೀರ್ಥದ ಬಗ್ಗೆ ನಿಮಗೆಷ್ಟು ಗೊತ್ತು? ಶಿವಮೊಗ್ಗದ ಅಂಬುತೀರ್ಥದ ಬಗ್ಗೆ ನಿಮಗೆಷ್ಟು ಗೊತ್ತು?

ದೇವರಾಯನ ದುರ್ಗಾ

ದೇವರಾಯನ ದುರ್ಗಾ

PC Srinivasa83

ಈ ಮೇಲಿನ ತಾಣಗಳನ್ನು ಹೊರತುಪಡಿಸಿ ನೀವು ದೇವರಾಯನ ದುರ್ಗಾವನ್ನೂ ಭೇಟಿ ನೀಡಬಹುದು. ಸುಮಾರು 3950 ಫೀಟ್ ಎತ್ತರವಿರುವ ಈ ಕೋಟೆಯು ಪ್ರವಾಸಿಗರ ನಡುವೆ ಸಾಕಷ್ಟು ಪ್ರಸಿದ್ಧಿ ಹೊಂದಿದೆ. ಇಲ್ಲಿನ ಬೆಟ್ಟದಲ್ಲಿ ಯೋಗನರಸಿಂಹ ಹಾಗೂ ಭೋಗ ನರಸಿಂಹ ಮಂದಿರ ಅಸ್ಥಿತ್ವದಲ್ಲಿದೆ. ಬುದ್ಧ ಪೂರ್ಣೀಮಾದಂದು ಇಲ್ಲಿ ಪ್ರಸಿದ್ಧ ಕಾರ್‌ ಫೇಸ್ಟಿವಲ್‌ನ್ನು ಆಯೋಜಿಸಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X