Search
  • Follow NativePlanet
Share
» »ಬೆಂಗಳೂರಿನಿಂದ 150 ಕಿ.ಮೀ ಒಳಗಿರುವ ಸ್ಥಳಗಳು

ಬೆಂಗಳೂರಿನಿಂದ 150 ಕಿ.ಮೀ ಒಳಗಿರುವ ಸ್ಥಳಗಳು

By Vijay

ಬೆಂಗಳೂರು ಭೌಗೋಳಿಕವಾಗಿ ಅದೃಷ್ಟಶಾಲಿ ಎಂತಲೆ ಹೇಳಬಹುದು. ಏಕೆಂದರೆ ಬೆಂಗಳೂರಿನ ಸುತ್ತಮುತ್ತಲು ಸಾಕಷ್ಟು ಸಂಖ್ಯೆಯಲ್ಲಿ ಚಿಕ್ಕ ಪುಟ್ಟ ಪ್ರವಾಸಿ ಆಕರ್ಷಣೆಗಳಿರುವುದಲ್ಲದೆ, ಅತಿ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೂ ಕೂಡ ಬೆಂಗಳೂರು ನಗರ ಹತ್ತಿರದಲ್ಲಿದೆ. ಬೆಂಗಳೂರಿಗರು ಅಥವಾ ಇಂದಿನ ಬೆಂಗಳೂರಿನಲ್ಲಿರುವವರಲ್ಲಿ ಬಹುತೇಕರು ಪ್ರವಾಸ ಹೊರಡಲು ಇಷ್ಟಪಡುತ್ತಾರೆ.

ಅದರಲ್ಲೂ ವಿಶೇಷವಾಗಿ ಸ್ವಂತ ವಾಹನವಿದ್ದಾಗ ಇಲ್ಲವೆ ಬಾಡಿಗೆ ಕಾರಿನಲ್ಲಿ ತೆರಳಿದಾಗ ಬೆಂಗಳೂರಿನಿಂದ ಕೆಲವು ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೆ ಸುಲಭವಾಗಿ ಭೇಟಿ ನೀಡಬಹುದು. ಈ ಲೇಖನವು ಕಾರು ಅಥವಾ ಬಾಡಿಗೆ ಟ್ಯಾಕ್ಸಿಗಳನ್ನು ಮಾಡಿದಾಗ ಯಾವೆಲ್ಲ ಸ್ಥಳಗಳಿಗೆ ಭೇಟಿ ನೀಡಬಹುದೆಂಬುದರ ಕುರಿತು ತಿಳಿಸುತ್ತದೆ. ಇಲ್ಲಿ ಬೆಂಗಳೂರಿನಿಂದ 40-150 ಕಿ.ಮೀ ಅಂತರದೊಳಗಡೆಯಿರುವ ಪ್ರಮುಖ ಪ್ರವಾಸಿ ಸ್ಥಳಗಳ ಕುರಿತು ತಿಳಿಸಲಾಗಿದೆ.

ಬೆಂಗಳೂರಿನ ಸುತ್ತಮುತ್ತಲು:

ಬೆಂಗಳೂರಿನ ಸುತ್ತಮುತ್ತಲು:

ಮುತ್ಯಾಲಮಡುವು (44 ಕಿ.ಮೀ): ಮುತ್ತಿನಂತಹ ಕೊಳ ಎಂಬರ್ಥ ನೀಡುವ ಈ ಸ್ಥಳವು ಬೆಂಗಳೂರಿಗೆ ಹತ್ತಿರವಿದ್ದು ಎಲೆಕ್ಟ್ರಾನಿಕ್ ಸಿಟಿ ದಾಟಿ ಆನೇಕಲ್ ಮೂಲಕ ತಲುಪಬಹುದಾಗಿದೆ. ಇಲ್ಲಿ ಸುಂದರವಾದ ಹಾಗೂ ಎಳೆಯಾಗಿ ಬೀಳುವ ಜಲಪಾತವಿದ್ದು ಅದರಿಂದ ಸುಂದರವಾದ ಕೊಳ ನಿರ್ಮಾಣವಾಗಿದೆ. ಅರ್ಧ ದಿನದ ಶೀಘ್ರ ಪ್ರವಾಸಕ್ಕೆ ಉತ್ತಮವಾಗಿದೆ ಈ ಸ್ಥಳ.

ಚಿತ್ರಕೃಪೆ: Narasimhachar T S

ಬೆಂಗಳೂರಿನ ಸುತ್ತಮುತ್ತಲು:

ಬೆಂಗಳೂರಿನ ಸುತ್ತಮುತ್ತಲು:

ಮಾಗಡಿ (೪೪ ಕಿ.ಮೀ) : ಬೆಂಗಳೂರಿನಿಂದ 44 ಕಿ.ಮೀ ಗಳಷ್ಟು ದೂರದಲ್ಲಿದೆ ಈ ತಾಣ. ರಾಮನಗರ ಜಿಲ್ಲೆಯಲ್ಲಿರುವ ಮಾಗಡಿಯು ವೆಂಕಟೇಶ್ವರನ ದೇವಸ್ಥಾನದಿಂದಾಗಿ ಅಪಾರವಾದ ಖ್ಯಾತಿಗಳಿಸಿದ್ದು ಸಾಕಷ್ಟು ಕೌಟುಂಬಿಕ ಜನರು ರಜಾ ದಿನಗಳಲ್ಲಿ ಇಲ್ಲಿಗೆ ವೆಂಕಟೇಶ್ವರನ ದರುಶನ ಕೋರಿ ಬರುತ್ತಾರೆ. ಸಾಮಾನ್ಯವಾಗಿ ವೆಂಕಟೇಶ್ವರನ ದೇವಸ್ಥಾನಗಳಲ್ಲಿ ವೆಂಕಪ್ಪನು ಶಯನಾವಸ್ಥೆಯ ಭಂಗಿಯಲ್ಲಿರುವುದು ಕಂಡುಬಂದರೆ ಇಲ್ಲಿನ ವೆಂಕಟೇಶ್ವರನು ತಿರುಮಲದ ವೆಂಕಪ್ಪನ ಹಾಗೆ ನಿಂತ ಭಂಗಿಯಲ್ಲಿ ಭಕ್ತರನ್ನು ಆಶೀರ್ವದಿಸುತ್ತಿರುವುದು ಕಂಡುಬರುತ್ತದೆ.

ಚಿತ್ರಕೃಪೆ: Dineshkannambadi

ಬೆಂಗಳೂರಿನ ಸುತ್ತಮುತ್ತಲು:

ಬೆಂಗಳೂರಿನ ಸುತ್ತಮುತ್ತಲು:

ಸಾವನದುರ್ಗ (55 ಕಿ.ಮೀ) : ಒಂದು ದಿನ ಸಮಯವಿದ್ದರೆ ಸಾಕು ಬೆಂಗಳೂರಿನಿಂದ ಈ ಒಂದು ಅದ್ಭುತ ಶೀಘ್ರ ಪ್ರವಾಸ ಮಾಡಬಹುದು. ಸಾವನದುರ್ಗ ಬೆಟ್ಟ ತಾಣವಾಗಿದ್ದು ಚಾರಣಕ್ಕೆ ಯೋಗ್ಯವಾಗಿದೆ. ಆದರೆ ಈ ಚಾರಣ ಸುಲಭದ್ದಾಗಿಲ್ಲ. ಸಾಕಷ್ಟು ಕಷ್ಟಕ್ರವಾಗಿದ್ದು ಬಲು ಜಾಗರೂಕೆತೆಯಿಂದ ಹತ್ತಬೇಕು. ಅಲ್ಲದೆ ಬೆಟ್ಟದ ಬುಡದಲ್ಲಿ ದೇವಾಲಯವಿದ್ದು ಧಾರ್ಮಿಕಾಸಕ್ತರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Chris Conway, Hilleary Osheroff

ಬೆಂಗಳೂರಿನ ಸುತ್ತಮುತ್ತಲು:

ಬೆಂಗಳೂರಿನ ಸುತ್ತಮುತ್ತಲು:

ಶಿವಗಂಗೆ (60 ಕಿ.ಮೀ) : ಬೆಂಗಳೂರಿನಿಂದ ಕೇವಲ 60 ಕಿ.ಮೀ ದೂರದಲ್ಲಿರುವ ಶಿವಗಂಗೆ/ಶಿವಗಂಗಾ ಸ್ಥಳವು ಮಧ್ಯ ವಯಸ್ಕರಿಗೆ ಹಿರಿಯರಿಗೆ ಧಾರ್ಮಿಕ ಆಕರ್ಷಣೆಯಾಗಿದ್ದರೆ, ಯುವಜನಾಂಗದವರಿಗೆ ಚಾರಣ ಮಾಡಬಹುದಾದ ರೊಮಾಂಚಕ ತಾಣವಾಗಿದೆ. ಹೌದು, ಈ ಬೆಟ್ಟವನ್ನು ಏರಬಹುದಾಗಿದ್ದು ಪರ್ವತಾರೋಹಣ ಬಯಸುವವರಿಗೆ ಆದರ್ಶಮಯ ಸ್ಥಳವಾಗಿದೆ. ಇದು ಬೆಂಗಳೂರು - ಪುಣೆ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಬರುವ ದಾಬಸ್ಪೇಟೆ/ಡಾಬಸ್ ಪೇಟೆಯಿಂದ ಸುಮಾರು ಆರು ಕಿ.ಮೀ ದೂರವಿದ್ದರೆ, ತುಮಕೂರು ಪಟ್ಟಣದಿಂದ ಸುಮಾರು 20 ಕಿ.ಮೀ ಗಳಷ್ಟು ದೂರದಲ್ಲಿದೆ. ಇದೊಂದು ಬೆಟ್ಟ ತಾಣವಾಗಿದ್ದು ಗಂಗಾಧರೇಶ್ವರ ದೇವಾಲಯದಿಂದಾಗಿ ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Manjeshpv

ಬೆಂಗಳೂರಿನ ಸುತ್ತಮುತ್ತಲು:

ಬೆಂಗಳೂರಿನ ಸುತ್ತಮುತ್ತಲು:

ಜಾನಪದ ಲೋಕ (53 ಕಿ.ಮೀ) : ಜಾನಪದ ಕಲೆಗಳನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಿರ್ಮಾಣವಾದ ಸಂಗ್ರಹಾಲಯವೆ ಜಾನಪದ ಲೋಕ. ರಾಮನಗರ ಜಿಲ್ಲೆಯಲ್ಲಿರುವ ಇದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೆಂಗಳೂರಿನಿಂದ ಸುಮಾರು 53 ಕಿ.ಮೀ ಗಳಷ್ಟು ದೂರದಲ್ಲಿದೆ. ಜಾನಪದ ಕಲಾ ಗ್ಯಾಲರಿ, ಲೋಕ ಮಹಲ್, ಚಿತ್ರ ಕುಟೀರ, ದೊಡ್ಡಮನೆ, ಶಿಲಾಮಲ, ಅರ್ಘ್ಯಮಾಲಾ ಹೀಗೆ ಮುಂತಾದ ವಿಭಾಗಗಳಲ್ಲಿ ವಿಂಗಡಿಸಲಾಗಿದ್ದು ಕಲಾಪ್ರಿಯರ ಮನಸೂರೆಗೊಳ್ಳುತ್ತದೆ.

ಚಿತ್ರಕೃಪೆ: Cherishsantosh

ಬೆಂಗಳೂರಿನ ಸುತ್ತಮುತ್ತಲು:

ಬೆಂಗಳೂರಿನ ಸುತ್ತಮುತ್ತಲು:

ನಂದಿಬೆಟ್ಟ ಹಾಗೂ ಭೋಗನಂದೀಶ್ವರ ದೇವಾಲಯ (60 ಕಿ.ಮೀ) : ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ಪಟ್ಟಣದಿಂದ ಕೇವಲ 10 ಕಿ.ಮೀ ದೂರವಿದ್ದು, ರಾಜಧಾನಿ ಬೆಂಗಳೂರು ನಗರದಿಂದ 60 ಕಿ.ಮೀ ಅಂತರದಲ್ಲಿ ನೆಲೆಸಿರುವ ನಂದಿ ಬೆಟ್ಟ ಬೆಂಗಳೂರಿಗರ ಪಾಲಿಗೆ ಅತಿ ಪ್ರಸಿದ್ಧವಾದ ವಾರಾಂತ್ಯ ರಜಾದಿನಗಳ ತಾಣ. ಇಲ್ಲಿನ ಸೂರ್ಯೊದಯವನ್ನು ನೋಡುವುದೆ ಒಂದು ಚೆಂದದ ಅನುಭವ. ಅಲ್ಲದೆ 9 ನೇಯ ಶತಮಾನದ ಭೋಗ ನಂದೀಶ್ವರ ದೇವಸ್ಥಾನವಂತೂ ಪ್ರವಾಸಿಗರನ್ನು ತನ್ನ ವೈಭವದಿಂದ ಆನಂದಭರಿತರನ್ನಾಗಿ ಮಾಡುತ್ತದೆ.

ಚಿತ್ರಕೃಪೆ: Harsha K R

ಬೆಂಗಳೂರಿನ ಸುತ್ತಮುತ್ತಲು:

ಬೆಂಗಳೂರಿನ ಸುತ್ತಮುತ್ತಲು:

ರಾಮನಗರ (55 ಕಿ.ಮೀ) : ಬೆಂಗಳೂರಿನಿಂದ ಮೈಸೂರಿಗೆ ಹೋಗುವ ಮಾರ್ಗದಲ್ಲಿ ಕಲ್ಲುಬಂಡೆಗಳ ಬೆಟ್ಟಗಳಿಗೆ ಪ್ರಸಿದ್ದವಾಗಿರುವ ರಾಮನಗರ ಸುಮಾರು 55 ಕಿ.ಮೀ ದೂರದಲ್ಲಿ ಸಿಗುತ್ತದೆ. ಇಲ್ಲಿರುವ ಬಂಡೆ ಬೆಟ್ಟಗಳಿ ರ್ಯಾಪೆಲ್ಲಿಂಗ್ ಅಂದರೆ ಹಗ್ಗದ ಸಹಾಯದಿಂದ ಬೆಟ್ಟ ಏರಿ ಕೆಳಗಿಳಿಯುವ ಚಟುವಟಿಕೆಗಾಗಿ ಪ್ರಸಿದ್ಧವಾಗಿದೆ. ಅಲ್ಲದೆ ಇದೆ ತಾಣದಲ್ಲಿ ಹಿಂದಿಯ ಶೋಲೆ ಚಿತ್ರವನ್ನು ಚಿತ್ರೀಕರಿಸಲಾಗಿತ್ತು.

ಚಿತ್ರಕೃಪೆ: Deep Hazarika

ಬೆಂಗಳೂರಿನ ಸುತ್ತಮುತ್ತಲು:

ಬೆಂಗಳೂರಿನ ಸುತ್ತಮುತ್ತಲು:

ಘಾಟಿ ಸುಬ್ರಹ್ಮಣ್ಯ (58 ಕಿ.ಮೀ) : ಘಾಟಿ ಸುಬ್ರಹ್ಮಣ್ಯವು ಬೆಂಗಳೂರಿಗೆ ಬಲು ಹತ್ತಿರದಲ್ಲಿರುವ ಸರ್ಪ ಕ್ಷೇತ್ರವಾಗಿದೆ. ಘಾಟಿ ಸುಬ್ರಹ್ಮಣ್ಯವು ದೊಡ್ಡಬಳ್ಳಾಪುರದಿಂದ 10 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದ್ದು, ಬೆಂಗಳೂರಿನಿಂದ ಕೇವಲ 60 ಕಿ.ಮೀ ದೂರದಲ್ಲಿದೆ. ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರಗಳ ಪೈಕಿ ಒಂದಾಗಿರುವ ಘಾಟಿ ಸುಬ್ರಹ್ಮಣ್ಯಕ್ಕೆ ಸರ್ಪ ದೋಷ ನಿವಾರಣೆಗೆಂದು, ಸುಬ್ರಹ್ಮಣ್ಯನ ದರುಶನ ಪಡೆಯಲೆಂದು ಸಾಕಷ್ಟು ಜನ ಭಕ್ತಾದಿಗಳು ನಿತ್ಯ ಭೇಟಿ ನೀಡುತ್ತಾರೆ. ಸುಬ್ರಹ್ಮಣ್ಯನನ್ನು ನಾಗನ ರೂಪದಲ್ಲಿ ಇಲ್ಲಿ ಆರಾಧಿಸಲಾಗುತ್ತದೆ.

ಚಿತ್ರಕೃಪೆ: Vedamurthy J

ಬೆಂಗಳೂರಿನ ಸುತ್ತಮುತ್ತಲು:

ಬೆಂಗಳೂರಿನ ಸುತ್ತಮುತ್ತಲು:

ಚೆನ್ನಪಟ್ಟಣ (58 ಕಿ.ಮೀ) : ಬೆಂಗಳೂರಿನಿಂದ ಮೈಸೂರಿಗೆ ಹೋಗುವ ರಸ್ತೆಯಲ್ಲಿ ಸುಮಾರು 60 ಕಿ.ಮೀ ದೂರದಲ್ಲಿ ಚೆನ್ನಪಟ್ಟಣವಿದೆ. ಚೆನ್ನಪಟ್ಟಣ ಪ್ರಮುಖವಾಗಿ ತನ್ನಲ್ಲಿ ದೊರೆಯುವ ವಿಶಿಷ್ಟ ರೀತಿಯ ಕಟ್ಟಿಗೆ ಬೊಂಬೆಗಳಿಗಾಗಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಇವು ಚೆನ್ನಪಟ್ಟಣ ಬೊಂಬೆಗಳೆಂದೆ ಹೆಸರುವಾಸಿಯಾಗಿವೆ. ಕಟ್ಟಿಗೆಯಲ್ಲಿ ಅದ್ಭುತವಾಗಿ ನಿರ್ಮಿಸಲಾಗುವ ಈ ಬೊಂಬೆಗಳು ಖಂಡಿತವಾಗಿಯೂ ನಿಮ್ಮನೆಯ ಅಂದವನ್ನು ಹೆಚ್ಚಿಸುತ್ತದೆ.

ಚಿತ್ರಕೃಪೆ: Hari Prasad Nadig

ಬೆಂಗಳೂರಿನ ಸುತ್ತಮುತ್ತಲು:

ಬೆಂಗಳೂರಿನ ಸುತ್ತಮುತ್ತಲು:

ಸ್ಕಂದಗಿರಿ (62 ಕಿ.ಮೀ) : ನಂದಿಬೆಟ್ಟಕ್ಕೆ ಅಭಿಮುಖವಾಗಿರುವ ಸ್ಕಂದಗಿರಿ ಅಥವಾ ಕಲವರ ದುರ್ಗವು ಬೆಂಗಳೂರಿನಿಂದ 62 ಕಿ.ಮೀ ದೂರದಲ್ಲಿದ್ದು ಚಿಕ್ಕಬಳ್ಳಾಪುರದಿಂದ ಮೂರು ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Vijets

ಬೆಂಗಳೂರಿನ ಸುತ್ತಮುತ್ತಲು:

ಬೆಂಗಳೂರಿನ ಸುತ್ತಮುತ್ತಲು:

ದೇವರಾಯನದುರ್ಗ (65 ಕಿ.ಮೀ) : ನವದುರ್ಗಗಳ ಪೈಕಿ ಒಂದಾದ ಮತ್ತೊಂದು ದುರ್ಗ ದೇವರಾಯನದುರ್ಗ. ದೇವರಾಯನದುರ್ಗವು ಬೆಂಗಳೂರಿನಿಂದ 65 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಸಮೀಪದ ರೈಲು ನಿಲ್ದಾಣವು ತುಮಕೂರಿನಲ್ಲಿದೆ. ಈ ಸ್ಥಳಕ್ಕೆ ಬಸ್ಸುಗಳ ಸೌಕರ್ಯವು ಉತ್ತಮವಾಗಿದೆ.

ಚಿತ್ರಕೃಪೆ: Hari Prasad Nadig

ಬೆಂಗಳೂರಿನ ಸುತ್ತಮುತ್ತಲು:

ಬೆಂಗಳೂರಿನ ಸುತ್ತಮುತ್ತಲು:

ಭೈರವದುರ್ಗ (60 ಕಿ. ಮೀ.) : ಬೆಂಗಳೂರಿನಿಂದ 60 ಕಿ. ಮೀ. ದೂರದಲ್ಲಿ, ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕುಡೂರು ಎಂಬಲ್ಲಿದೆ ಭೈರವೇಶ್ವರ ನೆಲೆಸಿರುವ ಈ ಭೈರವದುರ್ಗ. ಇದೂ ಸಹ ನವದುರ್ಗಗಳ ಪೈಕಿ ಒಂದಾಗಿದ್ದು ಕೆಂಪೇಗೌಡರಿಂದ ನಿರ್ಮಿಸಲ್ಪಟ್ಟಿದೆ. ಇಲ್ಲಿ ಈಶ್ವರನ ಅವತಾರವಾದ ಭೈರವೇಶ್ವರನಿಗೆ ಮುಡಿಪಾದ ಪುರಾತನ ದೇಗುಲವಿರುವುದನ್ನು ಕಾಣಬಹುದು. ಈ ದುರ್ಗವು ಇನ್ನೂ ಅಷ್ಟೊಂದಾಗಿ ಅನ್ವೇಷಿಸಲ್ಪಟ್ಟಿಲ್ಲ. ಇತಿಹಾಸ, ಭುಗೋಳ ಪ್ರಿಯ ಪ್ರವಾಸಿಗರಿಗೆ ಕುತೂಹಲ ಕೆರಳಿಸುವ ದುರ್ಗ ಇದಾಗಿದೆ ಎಂದರೆ ತಪ್ಪಾಗಲಾರದು.

ಬೆಂಗಳೂರಿನ ಸುತ್ತಮುತ್ತಲು:

ಬೆಂಗಳೂರಿನ ಸುತ್ತಮುತ್ತಲು:

ಚೆನ್ನರಾಯನದುರ್ಗ (100 ಕಿ. ಮೀ.) : ಬೆಂಗಳೂರಿನಿಂದ ಸುಮಾರು 100 ಕಿ. ಮೀ. ದೂರವಿರುವ ತುಮಕೂರು ಜಿಲ್ಲೆಯ ಮಧುಗಿರಿಯ ಬಳಿಯಿರುವ ಚೆನ್ನರಾಯನ ದುರ್ಗವು ನವದುರ್ಗಗಗಳ ಪೈಕಿ ಒಂದಾದ ತಾಣವಾಗಿದೆ. ಇದರ ಇತಿಹಾಸವನ್ನು ಗಮನಿಸಿದಾಗ ಇದನ್ನು ಮರಾಠರು, ಮೈಸೂರು ರಾಜರು ಹಾಗೂ ಕೊನೆಯದಾಗಿ ಬ್ರಿಟೀಷರು ಆಳಿದ್ದರು ಎಂಬುದು ತಿಳಿದುಬರುತ್ತದೆ. ಚೀನ್ನರಾಯನ ದುರ್ಗವು ಚಾರಣಿಗರ ನೆಚ್ಚಿನ ತಾಣವಾದರೂ ಇಲ್ಲಿರುವ ಕಡಿದಾದ ಬಂಡೆಗಳು ಹತ್ತಲು ಬಹಳ ಕಷ್ಟಕರವಾಹಿದೆ.

ಬೆಂಗಳೂರಿನ ಸುತ್ತಮುತ್ತಲು:

ಬೆಂಗಳೂರಿನ ಸುತ್ತಮುತ್ತಲು:

ಅಂತರಗಂಗೆ (80 ಕಿ.ಮೀ) :ಎಂತಹ ಸಾಹಸ ಪ್ರಿಯರ ಮನವನ್ನೇ ಆಗಲಿ ಸೆಳೆಯುವ ಶಕ್ತಿಯುಳ್ಳ ಸ್ಥಳ ಅಂತರಗಂಗೆ. ಕರ್ನಾಟಕದ ಕೋಲಾರ ಜಿಲ್ಲೆಯ ಪೂರ್ವದಲ್ಲಿರುವ ಶಿಖರಗಳ ಮೇಲಿರುವ ಸದಾ ಹರಿವ ಸಣ್ಣ ಹೊಳೆಯಿಂದ ಅಂತರಗಂಗೆ ಎಂಬ ಹೆಸರು ಬಂದಿದೆ. ಬೃಹತ್ತಾದ ಬಂಡೆಗಳ ರಚನೆಗಳಿಂದ ಸೃಷ್ಟಿಯಾಗಿರುವ ಸಣ್ಣ ಮತ್ತು ದೊಡ್ಡ ಗುಹೆಗಳ ನಡುವೆ ಈ ಝರಿಯೂ ಹರಿಯುತ್ತಾ ಸಾಗುತ್ತದೆ.

ಚಿತ್ರಕೃಪೆ: Vedamurthy J

ಬೆಂಗಳೂರಿನ ಸುತ್ತಮುತ್ತಲು:

ಬೆಂಗಳೂರಿನ ಸುತ್ತಮುತ್ತಲು:

ಕೋಟಿಲಿಂಗೇಶ್ವರ (70 ಕಿ.ಮೀ): ಕೋಲಾರ ಜಿಲ್ಲೆಯ ಕಮ್ಮಸಂದ್ರ ಹಳ್ಳಿಯಲ್ಲಿರುವ ಕೋಟಿಲಿಂಗೇಶ್ವರ ದೇವಾಲಯ ಬೆಂಗಳೂರಿನಿಂದ 70 ಕಿ.ಮೀ ದೂರದಲ್ಲಿದೆ. ಕಮ್ಮಸಂದ್ರದಿಂದ ಸುಮಾರು ಐದು ಕಿ.ಮೀ ದೂರದಲ್ಲಿ ಈ ದೇವಾಲಯವಿದ್ದು ಸಾಕಷ್ಟು ವಾಹನಗಳು ಕೋಲಾರ ನಗರಕೇಂದ್ರ ಹಾಗೂ ಕೋಲಾರ್ ಗೋಲ್ಡ್ ಫೀಲ್ಡ್ ನಿಂದ ದೊರೆಯುತ್ತವೆ.

ಚಿತ್ರಕೃಪೆ: Pponnada

ಬೆಂಗಳೂರಿನ ಸುತ್ತಮುತ್ತಲು:

ಬೆಂಗಳೂರಿನ ಸುತ್ತಮುತ್ತಲು:

ಚುಂಚನಕಟ್ಟೆ (211 ಕಿ.ಮೀ) :ಈ ಜಲಪಾತ ಕೆಂದ್ರವು ಮೈಸೂರಿನಿಂದ 57 ಕಿ.ಮೀ ಹಾಗೂ ಬೆಂಗಳೂರಿನಿಂದ 150 ಕ್ಕೂ ಹೆಚ್ಚು ಕಿ.ಮೀ ದೂರವಿದೆಯಾದರೂ ಬೆಂಗಳೂರಿನಿಂದ ಒಂದೊಮ್ಮೆ ಇಲ್ಲಿಗೆ ತೆರಳಿ ಜಲಪಾತ ನೋಡಿ ಬರಬಹುದಾಗಿದೆ. ಚುಂಚನಕಟ್ಟೆ ಜಲಪಾತ ಅಥವಾ ಫಾಲ್ಸ್, ಕಾವೇರಿ ನದಿಯಿಂದ ರೂಪಗೊಳ್ಳುವ ಒಂದು ಸುಂದರ ಜಲಪಾತವಾಗಿದ್ದು ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಹ ಯೋಗ್ಯವಾದ ತಾಣವಾಗಿದೆ. ಅಲ್ಲದೆ ಸಾಕಷ್ಟು ಕನ್ನಡ ಚಿತ್ರಗಳು ಇಲ್ಲಿ ಚಿತ್ರೀಕರಣ ಸಹ ಗೊಂಡಿವೆ. ಅಷ್ಟೊಂದು ಹೆಸರುವಾಸಿಯಾಗಿಲ್ಲದಿದ್ದರೂ ತನ್ನದೆ ಆದ ಸುಂದರ ಪ್ರಕೃತಿಯಿಂದ ಭೇಟಿ ನೀಡುವವರ ಹೃದಯ ಕದಿಯುತ್ತದೆ ಈ ಜಲಪಾತ ತಾಣ. ಮಳೆಗಾಲದ ಸಮಯದಲ್ಲಂತೂ ಮೈದುಂಬಿ ಹರೆಯುವ ಜಲಪಾತದ ನೋಟ ಅಂದವೋ ಅಂದ...ವರ್ಣಿಸಲಾಗದಷ್ಟು ಚೆಂದವೋ ಚೆಂದ. ಬೆಂಗಳೂರಿನಿಂದ 85 ಕಿ.ಮೀ ದೂರವಿದೆ ಹಾಗೂ ಮೈಸೂರಿನ ಕೃಷ್ಣರಾಜನಗರ ತಾಲೂಕಿನಲ್ಲಿ ಬರುತ್ತದೆ.

ಚಿತ್ರಕೃಪೆ: Rks 80

ಬೆಂಗಳೂರಿನ ಸುತ್ತಮುತ್ತಲು:

ಬೆಂಗಳೂರಿನ ಸುತ್ತಮುತ್ತಲು:

ಮೇಕೆದಾಟು (95 ಕಿ.ಮೀ) : ಬೆಂಗಳೂರಿನಿಂದ 95 ಕಿ.ಮೀ ದೂರವಿರುವ ಹಾಗೂ ವಾರಾಂತ್ಯ ಸಮಯದಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲು ವಾಸಿಸುವ ನೆಚ್ಚಿನ ಪಿಕ್ನಿಕ್ ಸ್ಥಳವಾದ ಕನಕಪುರದ ಮೇಕೆದಾಟು ಒಂದು ಚೇತೋಹಾರಿ ತಾಣವಾಗಿದೆ. ಮೇಕೆದಾಟುವಿನ ಪರಿಸರ ಅದ್ಭುತವಾಗಿದ್ದು, ಕಾವೇರಿಯು ಗಂಭೀರವಾಗಿ ಹರಿಯುವುದನ್ನು ನೋಡಿದಾಗ ಸಂತಸ ಉಂಟಾಗದೆ ಇರಲಾರದು.

ಚಿತ್ರಕೃಪೆ: Karthik Prabhu

ಬೆಂಗಳೂರಿನ ಸುತ್ತಮುತ್ತಲು:

ಬೆಂಗಳೂರಿನ ಸುತ್ತಮುತ್ತಲು:

ಭೀಮೇಶ್ವರಿ (100 ಕಿ.ಮೀ) : ಭೀಮೇಶ್ವರಿ ನಿಜವಾಗಿಯೂ ಆನಂದ ಕರುಣಿಸುವ ಒಂದು ಅದ್ಭುತ ಪ್ರದೇಶ. ಕಾವೇರಿ ನದಿಯು ಸುಶ್ರಾವ್ಯವಾಗಿ ಹಾಡುತ್ತ ಹರಿದಿರುವ, ಸುತ್ತ ಮುತ್ತಲಿನಲ್ಲಿ ದಟ್ಟವಾದ ಹಸಿರು ಹೊತ್ತ, ಬೆರುಗುಗೊಳಿಸುವ ಬೆಟ್ಟ ಗುಡ್ಡಗಳ ಮಧ್ಯೆ ನೆಲೆಸಿರುವ ಭೀಮೇಶ್ವರಿ ಅವಿಶ್ರಾಂತ ಬೆಂಗಳೂರಿನಿಂದ 100 ಕಿ.ಮೀ ದೂರದಲ್ಲಿರುವ ವಿಶ್ರಾಂತಮಯ ತಾಣವಾಗಿದೆ.

ಚಿತ್ರಕೃಪೆ: Ashwin Kumar

ಬೆಂಗಳೂರಿನ ಸುತ್ತಮುತ್ತಲು:

ಬೆಂಗಳೂರಿನ ಸುತ್ತಮುತ್ತಲು:

ಲೇಪಾಕ್ಷಿ (125 ಕಿ.ಮೀ) : "ಲೇಪಾಕ್ಷಿ" ಆಂಧ್ರಪ್ರದೇಶ ರಾಜ್ಯದ ಅನಂತಪುರಜಿಲ್ಲೆಯಲ್ಲಿರುವ ಒಂದು ಐತಿಹಾಸಿಕ ಹಾಗೂ ಚಾರಿತ್ರಿಕ ಪಟ್ಟಣವಾಗಿದೆ. ಬೆಂಗಳೂರಿನಿಂದ ಸುಮಾರು125 ಕಿ.ಮೀ ಗಳಷ್ಟು ದೂರದಲ್ಲಿದೆ. ಲೇಪಾಕ್ಷಿ ಮೂಲತಃ ತನ್ನಲ್ಲಿರುವ ದೇವಾಲಯ ಸಂಕೀರ್ಣ ಹಾಗೂ ದೊಡ್ಡ ನಂದಿ ವಿಗ್ರಹಕ್ಕೆ ಪ್ರಸಿದ್ಧಿ ಪಡೆದಿದೆ. ಇತಿಹಾಸವನ್ನು ಕೆದಕಿದಾಗ ತಿಳಿದು ಬರುವ ವಿಷಯವೆಮ್ದರೆ ವಿಜಯನಗರ ಅರಸರ ಆಳ್ವಿಕೆಯ ಸಮಯದಲ್ಲಿ ಇಲ್ಲಿನ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಕೃಷ್ಣದೇವರಾಯನ ತಮ್ಮನಾಗಿದ್ದ ಅಚ್ಚುತರಾಯನ ಕಾಲದಲ್ಲಿ ಪೆನುಗೊಂಡ ಪ್ರದೇಶಕ್ಕೆ ಕೋಶಾಧಿಕಾರಿಯಾಗಿದ್ದ ವಿರೂಪಣ್ಣ ಎಂಬುವವರು ಈ ದೇವಸ್ಥಾನವನ್ನು ಕಟ್ಟಿಸಿದರು ಎನ್ನುವ ಮಾಹಿತಿಯಿದೆ.

ಚಿತ್ರಕೃಪೆ: Premnath Thirumalaisamy

ಬೆಂಗಳೂರಿನ ಸುತ್ತಮುತ್ತಲು:

ಬೆಂಗಳೂರಿನ ಸುತ್ತಮುತ್ತಲು:

ಕುರುಡುಮಲೆ (105 ಕಿ.ಮೀ) : ಕುರುಡುಮಲೆಯು ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿದ್ದು, ಪ್ರಸಿದ್ಧ ಯಾತ್ರಾ ಸ್ಥಳವೆಂದು ಖ್ಯಾತಿ ಪಡೆದಿದೆ. ಕುರುಡು ಮಲೆಯ ಗಣಪತಿ ಮೂರ್ತಿಯು ಅತ್ಯಂತ ಪ್ರಭಾವಶಾಲಿ ಮೂರ್ತಿಯೆಂದು ಹೆಸರಾಗಿದೆ. ಕುರುಡುಮಲೆಯಲ್ಲಿ ಸೋಮೇಶ್ವರ ದೇವಾಲಯವಿದ್ದು, ಅದು ಇಲ್ಲಿನ ಗಣಪತಿ ದೇವಾಲಯಕ್ಕಿಂತ ಹಳೆಯದಾಗಿದೆ. ಇದರ ನಿರ್ಮಾಣ ಕಾಲವು ನಮ್ಮನ್ನು ಚೋಳರ ಆಡಳಿತ ಕಾಲದಷ್ಟರವರೆಗು ಕೊಂಡೊಯ್ಯುತ್ತದೆ.

ಚಿತ್ರಕೃಪೆ: Dineshkannambadi

ಬೆಂಗಳೂರಿನ ಸುತ್ತಮುತ್ತಲು:

ಬೆಂಗಳೂರಿನ ಸುತ್ತಮುತ್ತಲು:

ಪಾಂಡವಪುರ (132 ಕಿ.ಮೀ) : ಮಂಡ್ಯ ಜಿಲ್ಲೆಯ ಪಾಂಡವಪುರ ಒಂದು ಭೇಟಿ ನೀಡಬಹುದಾದ ಪ್ರೇಕ್ಷಣೀಯ ಸ್ಥಳವಾಗಿದೆ. ತನ್ನಲ್ಲಿರುವ ಕುಂತಿ ಬೆಟ್ಟ ಹಾಗೂ ಇತರೆ ಅನೇಕ ಪ್ರವಾಸಿ ಆಕರ್ಷಣೆಗಳಿಗಾಗಿ ಪ್ರಸಿದ್ಧವಾಗಿದೆ. ಬೆಂಗಳೂರಿನಿಂದ ಪಾಂಡವಪುರ 132 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Shyamal

ಬೆಂಗಳೂರಿನ ಸುತ್ತಮುತ್ತಲು:

ಬೆಂಗಳೂರಿನ ಸುತ್ತಮುತ್ತಲು:

ಶ್ರೀರಂಗಪಟ್ಟಣ (125 ಕಿ.ಮೀ) : ಐತಿಹಾಸಿಕ ಸ್ಥಳಗಳಿಂದ ಕೂಡಿದ ಶ್ರೀರಂಗಪಟ್ಟಣಕ್ಕೆ ಭೇಟಿಕೊಡುವುದು ನಿಜಕ್ಕು ಒಂದು ಮೌಲ್ಯಯುತವಾದ ಪ್ರವಾಸವಾಗುತ್ತದೆ. ಶ್ರೀರಂಗಪಟ್ಟಣವು ಕಾವೇರಿ ನದಿಯ ಎರಡು ಕವಲುಗಳಿಂದ ನಿರ್ಮಾಣವಾದ ದ್ವೀಪದ ಊರಾಗಿದೆ. ಈ ದ್ವೀಪವು 13 ಚ.ಕಿ.ಮೀ ವಿಸ್ತೀರ್ಣವಿದ್ದು, ಮೈಸೂರಿಗೆ ತುಂಬ ಹತ್ತಿರದಲ್ಲಿದ್ದರೆ ಬೆಂಗಳೂರಿನಿಂದ 125 ಕಿ.ಮೀ ಗಳಷ್ಟು ದೂರದಲ್ಲಿದೆ. ಪ್ರವಾಸಿಗರು ಶ್ರೀರಂಗಪಟ್ಟಣಕ್ಕೆ ಭೇಟಿಕೊಟ್ಟಾಗ 9 ನೇ ಶತಮಾನದಲ್ಲಿ ಗಂಗರು ಕಟ್ಟಿಸಿದ ಶ್ರೀರಂಗನಾಥಸ್ವಾಮಿ ದೇವಾಲಯವನ್ನು ತಪ್ಪದೆ ನೋಡಬೇಕು. ಈ ದೇವಾಲಯವನ್ನು ದೊಡ್ಡ ದೇವಾಲಯಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

ಚಿತ್ರಕೃಪೆ: Adam63

ಬೆಂಗಳೂರಿನ ಸುತ್ತಮುತ್ತಲು:

ಬೆಂಗಳೂರಿನ ಸುತ್ತಮುತ್ತಲು:

ತಲಕಾಡು : ಬೆಂಗಳೂರಿನಿಂದ ತಲಕಾಡು ಸುಮಾರು 130 ಕಿ.ಮೀ ಗಳಷ್ಟು ದೂರವಿದ್ದು ತೆರಳಲು ಎರಡು ಪ್ರಮುಖ ಆಯ್ಕೆಗಳಿವೆ. ಸ್ವಾರಸ್ಯಕರ ಸಂಗತಿಯೆಂದರೆ ಈ ಸ್ಥಳವು ಮರಳಿನಿಂದ ಆವೃತವಾಗಿರುವುದು.

ಚಿತ್ರಕೃಪೆ: Ashwin Kumar

ಬೆಂಗಳೂರಿನ ಸುತ್ತಮುತ್ತಲು:

ಬೆಂಗಳೂರಿನ ಸುತ್ತಮುತ್ತಲು:

ಶಿವನಸಮುದ್ರ (136 ಕಿ.ಮೀ) : ಶಿವನಸಮುದ್ರವು ಗಗನಚುಕ್ಕಿ ಹಾಗೂ ಭರಚುಕ್ಕಿ ಜಲಪಾತಗಳಿಗೆ ಪ್ರಖ್ಯಾತಿ ಪಡೆದಿದೆ. ಮಳೆಗಾಲದ ಮಧ್ಯದ ಸಮಯದಿಂದ ಹಿಡಿದು ಹೆಚ್ಚು ಕಮ್ಮಿ ಚಳಿಗಾಲದವರೆಗೆ ಕಾವೇರಿ ನೀರು ಹಾಲ್ನೋರೆಯಂತೆ ಹೂಂಕಾರ ಹಾಕುತ್ತ ರಭಸದಿಂದ ಭುವಿಗೆ ಬಿಳುವುದನ್ನು ನೋಡಿದಾಗ ರೋಮ ರೋಮಗಳೂ ಸೆಟೆದು ನಿಲ್ಲುತ್ತವೆ.

ಬೆಂಗಳೂರಿನ ಸುತ್ತಮುತ್ತಲು:

ಬೆಂಗಳೂರಿನ ಸುತ್ತಮುತ್ತಲು:

ಮೈಸೂರು (150 ಕಿ.ಮೀ) : ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂಬ ಬಿರುದುಗಳಿಸಿದೆ. ಸಾಕಷ್ಟು ರಾಜ ವೈಭೋಗದ ಆಕರ್ಷಣೆಗಳನ್ನು ಈ ನಗರದಲ್ಲಿ ಹಾಗೂ ಇದರ ಸುತ್ತಮುತ್ತಲು ಕಾಣಬಹುದಾಗಿದೆ. ಬೆಂಗಳೂರಿನಿಂದ ಮೈಸೂರು ಸುಮಾರು 150 ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಬಸ್ಸು ಹಾಗೂ ರೈಲಿನ ಸಾಕಷ್ಟು ಸೌಕರ್ಯವಿದೆ. ಮೈಸೂರಿನ ಸಮಗ್ರ ಪ್ರವಾಸಿ ಕೈಪಿಡಿ.

ಚಿತ್ರಕೃಪೆ: Spiros Vathis

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more