Search
  • Follow NativePlanet
Share
» »ಸುಂದರವಾದ ಲೋಕದಲ್ಲಿ ವಿಹಾರ ಮಾಡಲು ಸಿದ್ಧವಾಗಿದ್ದೀರಾ?

ಸುಂದರವಾದ ಲೋಕದಲ್ಲಿ ವಿಹಾರ ಮಾಡಲು ಸಿದ್ಧವಾಗಿದ್ದೀರಾ?

ಭಾರತ ದೇಶದಲ್ಲಿ ಅತ್ಯಂತ ಸುಂದರ ರಾಜ್ಯ ಎಂದು ಹೇಳುವ ಕೇರಳ ಒಂದು ಅತ್ಯುತ್ತಮವಾದ ಪ್ರವಾಸಿ ತಾಣವಾಗಿದೆ. ಕೇರಳ ರಾಜ್ಯವನ್ನು "ಗಾಡ್ಸ್ ಓನ್ ಕಂಟ್ರಿ" ಎಂದೂ ಕೂಡ ಕರೆಯುತ್ತಾರೆ ಎಂಬ ವಿಷಯ ನಮಗೆಲ್ಲಾ ತಿಳಿದಿರುವುದೇ. ಇಲ್ಲಿರುವ ಹಚ್ಚಹಸಿರಿನ ಅರಣ್ಯಗಳು, ಕಾಫಿ, ಟೀ ತೋಟಗಳು, ಸುಗಂಧ ದ್ರವ್ಯಗಳ ತೋಟಗಳು ಎಂಥವರನ್ನೇ ಆಗಲಿ ಮಂತ್ರಮುಗ್ಧರನ್ನಾಗಿಸದೇ ಇರದು. ಇಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಅದ್ದರಿಂದಲೇ ದೇಶದ ಮೂಲೆ-ಮೂಲೆಗಳಿಂದಲೇ ಅಲ್ಲದೇ ವಿದೇಶದಿಂದಲೂ ಕೂಡ ಅನೇಕ ಪ್ರವಾಸಿಗರು ಆಗಾಗ ಕೇರಳ ರಾಜ್ಯಕ್ಕೆ ಭೇಟಿ ನೀಡುತ್ತಿರುತ್ತಾರೆ.

ಮುಖ್ಯವಾಗಿ ಈ ತಿಂಗಳಿನಲ್ಲಿ ಕೇರಳದಲ್ಲಿನ ಅನೇಕ ಪ್ರದೇಶಗಳು ಮಳೆಯ ಪ್ರಭಾವದಿಂದ ಮತ್ತಷ್ಟು ಸುಂದರವಾಗಿ ಕಾಣುತ್ತವೆ. ಎತ್ತರವಾದ ಪರ್ವತ ಶಿಖರ ಪ್ರದೇಶಗಳು ಪ್ರವಾಸಿಗರನ್ನು ಕೈಬೀಸಿ ಕರೆಯುವುದರಲ್ಲಿ ಅನುಮಾನವೇ ಇಲ್ಲ. ಕೇರಳದಲ್ಲಿ ಅದ್ಭುತವಾದ ಹಿಲ್ ಸ್ಟೇಷನ್‍ಗಳು ಹಾಗು ಸುಂದರವಾದ ಜಲಪಾತಗಳಿಗೆನೂ ಕಡಿಮೆ ಏನೂ ಇಲ್ಲ. ಹಾಗಾದರೆ ಬನ್ನಿ ಕೇರಳದಲ್ಲಿನ ಸುಂದರವಾದ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿಯನ್ನು ಲೇಖನದ ಮೂಲಕ ಪಡೆಯೋಣ.

1.ಮುನ್ನಾರ್

1.ಮುನ್ನಾರ್

PC:YOUTUBE

ಕೇರಳದ ಗಿರಿಧಾಮಗಳ ನಡುವೆ ಬಹು ಜನಪ್ರಿಯವಾದ ಹೆಸರು ಮುನ್ನಾರ್ ನದ್ದಾಗಿದ್ದು, ನಿಜಕ್ಕೂ ಕೇರಳದ ಅತ್ಯುತ್ತಮ ಸ೦ದರ್ಶನೀಯ ಸ್ಥಳಗಳ ಪೈಕಿ ಮುನ್ನಾರ್ ಕೂಡಾ ಒ೦ದೆನಿಸಿಕೊ೦ಡಿದೆ.

ದಕ್ಷಿಣಭಾರತದ ಒಂದು ಅತ್ಯಂತ ಪ್ರೀತಿದಾಯಕವಾದ ಗಿರಿಧಾಮವಾಗಿದ್ದು ಸೆಪ್ಟಂಬರ್ ನಿಂದ ಮೇ ತಿಂಗಳುಗಳ ಮದ್ಯದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ. ಮುನ್ನಾರ್ ಗೆ ಚಳಿಗಾಲದಲ್ಲಿ ಹೋಗುವುದೆಂದರೆ ಮಳೆಗಾಲದ ನಂತರದ ಇಲ್ಲಿಯ ಗಿರಿಧಾಮಗಳ ಸೌಂದರ್ಯವನ್ನು ವೀಕ್ಷಿಸಬಹುದಾಗಿದೆ. ಇಲ್ಲಿಯ ಗಿರಿಧಾಮಗಳ ಸುತ್ತವೂ ಚಹಾದ ತೋಟಗಳಿಂದ ಆವೃತ್ತಗೊಂಡಿದ್ದು ಈ ನೋಟವು ನಿಮ್ಮನ್ನು ಬೆರಗುಗೊಳಿಸಿ ಮೂಕವಿಸ್ಮಿತರನ್ನಾಗಿಸುತ್ತದೆ. ಮಟ್ಟುಪೆಟ್ಟಿ ಅಣೆಕಟ್ಟು, ಪೊಥಮೆಡು ವ್ಯೂ ಪಾಯಿಂಟ್, ಎತ್ತರವಾದ ಧಾಮಗಳು, ಎಕೋ ಪಾಯಿಂಟ್, ಇತ್ಯಾದಿಗಳು ಮುನ್ನಾರ್ ನಲ್ಲಿರುವಾಗ ಭೇಟಿ ಕೊಡಬಹುದಾದ ಸ್ಥಳಗಳು.

2.ವಯನಾಡ್

2.ವಯನಾಡ್

PC: Dhruvaraj S

ಕೇರಳ ರಾಜ್ಯದ ಅತ್ಯ೦ತ ಹಚ್ಚಹಸುರಿನ ಸ೦ದರ್ಶನೀಯ ಸ್ಥಳಗಳ ಪೈಕಿ ವಯನಾಡ್ ಕೂಡಾ ಒ೦ದಾಗಿದ್ದು, ವರ್ಣಾತೀತ ಪ್ರಾಕೃತಿಕ ಸೌ೦ದರ್ಯ, ಪ್ರಶಾ೦ತ ವಾತಾವರಣ, ಮತ್ತು ಶ್ರೀಮ೦ತ ಸ೦ಸ್ಕೃತಿಯಿ೦ದ ವಯನಾಡ್ ಸ೦ಪನ್ನವಾಗಿದೆ. ನಿಸರ್ಗ ಮತ್ತು ಮಾನವ-ನಿರ್ಮಿತ ಪರ೦ಪರೆಗಳ ಪರಿಪೂರ್ಣ ಮಿಶ್ರಣವಾಗಿರುವ ಈ ಸ್ಥಳವು, ತನ್ನ ಶ್ರೀಮ೦ತ ಸ೦ಸ್ಕೃತಿಗಳು, ಸ೦ಪ್ರದಾಯಗಳು, ಹಾಗೂ ಬುಡಕಟ್ಟು ಪರ೦ಪರೆಗೆ ಹೆಸರುವಾಸಿಯಾಗಿದೆ. ಹೆಸರಿಲ್ಲದ ಅನೇಕ ಜಲಪಾತಗಳು ವಯನಾಡ್ ಪಟ್ಟಣಾದ್ಯ೦ತ ಅಡ್ಡಾದಿಡ್ಡಿಯಾಗಿ ಪ್ರವಹಿಸುತ್ತಿದ್ದು, ಇವು ವಯನಾಡ್ ಗೆ ಮಾ೦ತ್ರಿಕ ಶೋಭೆಯನ್ನೊದಗಿಸುತ್ತವೆ.

3.ಶ್ರೀ ಪದ್ಮನಾಭ ಸ್ವಾಮಿ ದೇವಾಲಯ, ತಿರುವನಂತಪುರ

3.ಶ್ರೀ ಪದ್ಮನಾಭ ಸ್ವಾಮಿ ದೇವಾಲಯ, ತಿರುವನಂತಪುರ

PC: Ashcoounter

ಶ್ರೀ ಪದ್ಮನಾಭ ಸ್ವಾಮಿ ದೇವಾಲಯವು ಕೇರಳದ ಅತ್ಯಂತ ಜನಪ್ರಿಯವಾದ ದೇವಾಲಯಗಳಲ್ಲಿ ಒಂದಾಗಿದೆ. ಇದು ತನ್ನದೇ ಆದ ವಾಸ್ತು ಶಿಲ್ಪದಿಂದ ವಿಶ್ವವಿಖ್ಯಾತತೆ ಪಡೆದಿದೆ. ಈ ಪವಿತ್ರವಾದ ದೇವಾಲಯವು ಕೇರಳ ರಾಜ್ಯದ ತಿರುವನಂತಪುರದಲ್ಲಿದೆ. ಇಲ್ಲಿನ ಗರ್ಭಗುಡಿಯಲ್ಲಿ ವಿಷ್ಣು ಮೂರ್ತಿಯು ಪದ್ಮನಾಭ ಸ್ವಾಮಿಯಾಗಿ ನೆಲೆಸಿದ್ದಾನೆ.

ಈ ಮಾಹಿಮಾನ್ವಿತವಾದ ದೇವಾಲಯವನ್ನು 8 ನೇ ಶತಮಾನದಲ್ಲಿ ನಿರ್ಮಾಣ ಮಾಡಿರುವ ಪುರಾತನವಾದ ದೇವಾಲಯವಾಗಿದೆ. ದೇವಾಲಯದ ನಿರ್ಮಾಣವು ದ್ರಾವಿಡ ಶೈಲಿಯಲ್ಲಿದೆ. ಇಲ್ಲಿ ಪ್ರಮುಖವಾಗಿ 2 ಹಬ್ಬಗಳನ್ನು ಆಚರಿಸಲಾಗುತ್ತದೆ. ಆ ಸಮಯದಲ್ಲಿ ಪ್ರಪಂಚದಾದ್ಯಂತ ಪ್ರವಾಸಿಗರು ಭೇಟಿ ನೀಡುತ್ತಾರೆ.

4.ವಾಗಮಾನ್

4.ವಾಗಮಾನ್

PC:YOUTUBE

ಸಮುದ್ರ ಮಟ್ಟದಿಂದ ಸುಮಾರು 1200 ಮೀಟರ್ ಎತ್ತರದಲ್ಲಿರುವ ಈ ಹಿಲ್ ಸ್ಟೇಷನ್ ಕಂಕ್ರಿಟ್ ಜಂಗಲ್‍ನಿಂದ ವಿಶ್ರಾಂತಿ ಕೋರುವವರಿಗೆ ಈ ಸುಂದರವಾದ ಸ್ಥಳವು ಪ್ರವಾಸಿ ಕೇಂದ್ರವಾಗಲಿದೆ ಎಂದು ಹೇಳಬಹುದು. ಇಲ್ಲಿ ಮುಖ್ಯವಾಗಿ ಸುಂದರವಾದ ಜಲಪಾತಗಳ ಜೊತೆ-ಜೊತೆಗೆ ನದಿಗಳನ್ನು ಕೂಡ ವಾಗಮಾನ್ ಹೊಂದಿದೆ. ಇಲ್ಲಿ ಇಲ್ಲಿಕಲ್ ಪರ್ವತ ಶಿಖರ, ಪೊಂಜಾರ್‍ನಂತಹ ಪ್ರಮುಖ ಪ್ರವಾಸಿ ಪ್ರದೇಶಗಳಿಗೂ ಕೂಡ ಭೇಟಿ ನೀಡಬಹುದು.

ಕೇವಲ ಕೇರಳದ ಜನರೇ ಅಲ್ಲದೇ ದೇಶದ ಮೂಲೆ-ಮೂಲೆಗಳಿಂದ ಹಾಗು ವಿದೇಶಿಗರು ಕೂಡ ಭೇಟಿ ನೀಡುವ

ತಾಣ ಇದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more