• Follow NativePlanet
Share
Menu
» »ಮುತ್ತಿನ ನಗರದ ಮಹತ್ತರದ ಸ್ಥಳಗಳು

ಮುತ್ತಿನ ನಗರದ ಮಹತ್ತರದ ಸ್ಥಳಗಳು

Posted By: Divya

ಮುತ್ತಿನ ನಗರ ಎಂದು ಹೆಸರಾದ ಹೈದರಾಬಾದ್ ಉತ್ತರ ಹಾಗೂ ದಕ್ಷಿಣ ಭಾರತದ ಎರಡು ಸಂಸ್ಕೃತಿಗಳ ಸಮ್ಮಿಲನಗೊಂಡಿದೆ. ಇಲ್ಲಿಯ ಐತಿಹಾಸಿಕ ಪ್ರವಾಸ ತಾಣಗಳು ಜನರನ್ನು ಹೆಚ್ಚು ಆಕರ್ಷಿಸುತ್ತವೆ. ನಿಜಾಮರ ನಗರ ಎನಿಸಿಕೊಂಡ ಹೈದರಾಬಾದ್ ಭೌಗೋಳಿಕವಾಗಿ, ವ್ಯವಹಾರಿಕವಾಗಿ ತನ್ನದೇ ಆದ ವಿಶೇಷತೆಯನ್ನು ಒಳಗೊಂಡಿದೆ. ಇಲ್ಲಿಯ ಭಾಷೆಯಲ್ಲಿ ಪರ್ಷಿಯನ್ ಹಾಗೂ ಸಂಸ್ಕೃತದ ನಂಟಿರುವುದನ್ನು ಕಾಣಬಹುದು. ಈ ಪ್ರದೇಶದಲ್ಲಿ ಮೊಘಲರು ಆಳಿ ಹೋಗಿರುವುದರಿಂದ ಅವರ ಕುರುಹುಗಳಾಗಿ ಅನೇಕ ಪ್ರವಾಸ ಸ್ಥಳಗಳಿವೆ.

ಹೈದೆರಾಬಾದ್ ಬಗ್ಗೆ ಹೆಚ್ಚಿನ ವಿಷಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಉತ್ತಮ ಗುಣಮಟ್ಟದ ಮುತ್ತುಗಳ ವ್ಯಾಪಾರ ಮಾಡುವ ಈ ಪ್ರದೇಶ ವಿಶೇಷ ತಿಂಡಿಗಳಿಗೆ, ವಸ್ತು ಸಂಗ್ರಹಾಲಯಗಳಿಗೆ ಹಾಗೂ ಐತಿಹಾಸಿಕ ತಾಣಗಳಿಗೆ ಹೆಸರಾಗಿದೆ. ಬೆಂಗಳೂರಿನಿಂದ 569 ಕಿ.ಮೀ. ದೂರದಲ್ಲಿರುವ ಈ ತಾಣಕ್ಕೆ ದೀರ್ಘಾವಧಿ ರಜೆಯಲ್ಲಿ ಭೇಟಿ ನೀಡಬಹುದು. ಒಮ್ಮೆ ಈ ತಾಣಕ್ಕೆ ಪ್ರವಾಸ ಕೈಗೊಂಡರೆ ನೋಡಲೇ ಬೇಕಾದ ಸ್ಥಳಗಳ ಪರಿಚಯ ಮಾಡಿಕೊಳ್ಳೋಣ ಬನ್ನಿ...

ಗೋಲ್ಕೊಂಡ ಕೋಟೆ

ಗೋಲ್ಕೊಂಡ ಕೋಟೆ

ಪುರಾತನ ಕಾಲದ ಸುಂದರ ವಾಸ್ತು ಶಿಲ್ಪಗಳಿಂದ ಕೂಡಿರುವ ಈ ಕೋಟೆ ಇಲ್ಲಿಯ ಪ್ರಮುಖ ಆಕರ್ಷಣೆ. ನಿಜಾಮರ ಕಾಲದ ಶ್ರೀಮಂತ ಇತಿಹಾಸವನ್ನು ಸಾರುತ್ತದೆ. ಇಬ್ರಾಹಿಂ ಖುಲಿ ಷಾಹ್ ವಾಲಿಯ ನಂತರ ಅನೇಕ ರಾಜ ಮಹರಾಜರು ಇಲ್ಲಿ ಆಳಿ ಹೋಗಿದ್ದಾರೆ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ಕೋಟೆಯಲ್ಲಿ ಈಗ ಧ್ವನಿ ಬೆಳಕಿನ ಪ್ರದರ್ಶನ ನಡೆಸಲಾಗುತ್ತದೆ. ಇದಕ್ಕೆ ಪ್ರವಾಸಿಗರ ಹರಿವು ಹೆಚ್ಚಾಗಿಯೇ ಇವೆ.
Photos Courtesy : Courtesty: Punitha TB

ಸಲಾರ್ ಜಂಗ್ ವಸ್ತುಸಂಗ್ರಹಾಲಯ

ಸಲಾರ್ ಜಂಗ್ ವಸ್ತುಸಂಗ್ರಹಾಲಯ

ಭಾರತದ ರಾಷ್ಟ್ರೀಯ ವಸ್ತುಸಂಗ್ರಹಾಲಯಗಳಲ್ಲಿ ಇದೂ ಒಂದು. ಜಪಾನ್, ಉತ್ತರ ಅಮೆರಿಕಾ, ಚೀನಾ ಸೇರಿದಂದೆ ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಅಪರೂಪದ ವಸ್ತುಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ. ಪೀಠೋಪಕರಣಗಳು, ಶಿಲ್ಪಕಲೆ, ವರ್ಣಚಿತ್ರ, ಜವಳಿ ಹಾಗೂ ಇನ್ನಿತರ ವಸ್ತುಗಳನ್ನು ಕಣ್ತುಂಬಿಕೊಳ್ಳಬಹುದು.
PC: wikimedia.org

ಚಾರ್‍ಮಿನಾರ್

ಚಾರ್‍ಮಿನಾರ್

ಹೈದರಾಬಾದ್‍ನ ಪ್ರಮುಖ ಆಕರ್ಷಣೆಯಲ್ಲಿ ಇದೂ ಒಂದು. ನಾಲ್ಕು ಸ್ತಂಭಗೋಪುರಗಳನ್ನು ಹೊಂದಿರುವ ಮಸೀದಿ ಇದು. ಇಸ್ಲಾಮ್‍ನ ವಾಸ್ತುಶಿಲ್ಪವನ್ನು ಒಳಗೊಂಡಿರುವ ನಾಲ್ಕು ಕಂಬದ ಗೋಪುರ 48.7 ಮೀ. ಎತ್ತರವನ್ನು ಹೊಂದಿದೆ. ಗೋಪುರದ ಒಳಭಾಗದಲ್ಲಿ ಸುರಳಿ ಆಕಾರದ 149 ಮೆಟ್ಟಿಲುಗಳಿವೆ. ಹೆಚ್ಚಿನ ಜನಸಂದಣಿ ಇರುವ ಈ ಪ್ರದೇಶದಲ್ಲಿ ಹಲವು ಬಗೆಯ ಕುರುಕಲು ತಿಂಡಿಗಳು ದೊರೆಯುತ್ತವೆ. ಇವುಗಳ ರುಚಿಯನ್ನು ತಪ್ಪದೆ ನೋಡಿ.

ಫಲಕ್ನುಮಾ ಅರಮನೆ

ಫಲಕ್ನುಮಾ ಅರಮನೆ

32 ಎಕರೆ ಪ್ರದೇಶದಲ್ಲಿ ನಿಂತಿರುವ ಈ ಅರಮನೆ ಹೈದರಾಬಾದ್‍ನ ಪ್ರಮುಖ ಆಕರ್ಷಣೆಯಲ್ಲಿ ಒಂದು. ನಿಜಾಮರ ಕಾಲದಲ್ಲಿ ನಿರ್ಮಿಸಲಾದ ಈ ಅರಮನೆ ಚಾರ್‍ಮಿನಾರ್‍ನಿಂದ 5 ಕಿ.ಮೀ. ದೂರದಲ್ಲಿದೆ. ಆ ಕಾಲದಲ್ಲಿ ಈ ಅರಮನೆಯ ನಿರ್ಮಾಣಕ್ಕೆ ನಾಲ್ಕು ಲಕ್ಷ ರೂಪಾಯಿಯನ್ನು ವಿನಿಯೋಗಿಸಲಾಗಿತ್ತು ಎನ್ನಲಾಗುತ್ತದೆ. ಸುಂದರ ವಿನ್ಯಾಸ, ಕೆತ್ತನೆ ಹಾಗೂ ಅದ್ಭುತವಾದ ವರ್ಣ ಚಿತ್ರಗಳಿರುವುದನ್ನು ಇಲ್ಲಿ ಕಾಣಬಹುದು.
PC: wikimedia.org

ಹುಸೇನ್ ಸಾಗರ

ಹುಸೇನ್ ಸಾಗರ

ಈ ಸಾಗರವು ಹೃದಯದ ಆಕೃತಿಯಲ್ಲಿದೆ. ಇದು ಸುಮಾರು 5.7 ಸ್ಕ್ವೇರ್ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಈ ಸರೋವರದ ಮಧ್ಯ ಭಾಗದಲ್ಲಿ ಕಲ್ಲಿನಲ್ಲಿ ಕೆತ್ತಲಾದ ಭವ್ಯ ಬುದ್ಧನ ಮೂರ್ತಿ ಇರುವುದುನ್ನು ಕಾಣಬಹುದು. ಇಲ್ಲಿಯ ಸೂರ್ಯಾಸ್ತ ಹಾಗೂ ಸೂರ್ಯೋದಯದ ಸೌಂದರ್ಯ ನೋಡುವುದೇ ಒಂದು ಚೆಂದ. ಈ ಸಾಗರ 32 ಅಡಿ ಆಳವನ್ನು ಹೊಂದಿದೆ ಎನ್ನಲಾಗುತ್ತದೆ.
PC: wikimedia.org

ಚೌಮಹಲ್ ಅರಮನೆ

ಚೌಮಹಲ್ ಅರಮನೆ

ಹೈದರಾಬಾದ್‍ನ ಈ ಅರಮನೆ ನಿಜಾಮರ ಅಧಿಕೃತ ನಿವಾಸವಾಗಿತ್ತು ಎಂದು ಹೇಳಲಾಗುತ್ತದೆ. ಈ ಅರಮನೆ ಬಹಳ ವಿಶಾಲವಾಗಿ, ವರ್ಣರಂಜಿತವಾಗಿದೆ. ಹೈದರಾಬಾದ್‍ನ ಐತಿಹಾಸಿಕ ತಾಣದಲ್ಲಿ ಇದೊಂದು ಮಹತ್ವದ ಪಾತ್ರವನ್ನು ವಹಿಸುತ್ತದೆ. ಬ್ರಿಟಿಷರ ಕಾಲದಲ್ಲಿ ಅನೇಕ ಸಭೆ ಸಮಾರಂಭಗಳು ನಡೆಯುತ್ತಲೇ ಇರುತ್ತಿದ್ದವು ಎನ್ನಲಾಗುತ್ತದೆ.
PC: wikimedia.org

ಮೆಕ್ಕಾ ಮಸೀದಿ

ಮೆಕ್ಕಾ ಮಸೀದಿ

ಇಸ್ಲಾಂ ಧರ್ಮದವರ ಪವಿತ್ರ ಕ್ಷೇತ್ರವಿದು. ಮೆಕ್ಕಾದಿಂದ ತಂದ ಮಣ್ಣುಗಳಿಂದಲೇ ಕಲ್ಲನ್ನು ತಯಾರಿಸಿ ಈ ಮಸೀದಿಯನ್ನು ನಿರ್ಮಿಸಲಾಗಿದೆ. 16ನೇ ಶತಮಾನದಲ್ಲಿ ಮಹಮ್ಮದ್ ಖುಲಿ ಖುತಬ್ ಷಾಹ್ ಈ ಮಸೀದಿಯನ್ನು ಕಟ್ಟಿಸಿದನು. ಇದು ಭಾರತದ ಅತಿದೊಡ್ಡ ಮಸೀದಿಗಳಲ್ಲಿ ಒಂದು. ಚಾರ್‍ಮಿನಾರ್ ಹಾಗೂ ಬೌಮಹಲ್ ಅರಮನೆಗೆ ಸಮೀಪದಲ್ಲಿದೆ.
PC: wikimedia.org

ರಾಮೋಜಿ ಫಿಲ್ಮ್ ಸಿಟಿ

ರಾಮೋಜಿ ಫಿಲ್ಮ್ ಸಿಟಿ

ಹೈದರಾಬಾದ್‍ನ ಹೊರ ವಲಯದಲ್ಲಿರುವ ಈ ತಾಣ ಪ್ರವಾಸಿಗರಿಗೊಂದು ಆಕರ್ಷಕ ಸ್ಥಳ. ಇಲ್ಲಿ ಧಾರವಾಹಿ ಹಾಗೂ ಚಲನಚಿತ್ರಗಳ ಚಿತ್ರೀಕರಣವನ್ನು ಮಾಡಲಾಗುತ್ತದೆ. ನೈಸರ್ಗಿಕವಾದ ಉದ್ಯಾನ ಹಾಗೂ ಕೃತಕವಾಗಿ ನಿರ್ಮಿಸಲಾದ ಉದ್ಯಾನವನಗಳೆರಡನ್ನು ನೋಡಬಹುದು. ಮಕ್ಕಳಿಗೆ ಈ ತಾಣ ಹೆಚ್ಚು ಇಷ್ಟವಾಗುವುದು.
PC: wikipedia.org

ಮುತ್ತುಗಳು

ಮುತ್ತುಗಳು

ನೈಜ ಮುತ್ತುಗಳು ವಿಶೇಷ ಬಗೆಗಳಲ್ಲಿ ಇಲ್ಲಿ ದೊರೆಯುತ್ತವೆ. ಪ್ರೀತಿ ಪಾತ್ರರಿಗೆ ಹಾಗೂ ನಿಮ್ಮ ಪ್ರವಾಸದ ನೆನಪಿಗಾಗಿ ಇಲ್ಲಿ ಮುತ್ತುಗಳನ್ನು ಖರೀದಿಸುವುದನ್ನು ಮರೆಯಬೇಡಿ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ