Search
  • Follow NativePlanet
Share
» »ಮೇಲುಕೋಟೆ ಚೆಲುವ ನಾರಾಯಣನ ಸನ್ನಿಧಿಗೆ ಹೋಗಿ ಬನ್ನಿ

ಮೇಲುಕೋಟೆ ಚೆಲುವ ನಾರಾಯಣನ ಸನ್ನಿಧಿಗೆ ಹೋಗಿ ಬನ್ನಿ

By Manjula Balaraj Tantry

ಕರ್ನಾಟಕದ ಒಂದು ಭಾಗವಾಗಿರುವ ಮೇಲುಕೋಟೆಯು ಇತ್ತೀಚೆಗೆ ಸಾಂಸ್ಕೃತಿಕ ಬೆಳವಣಿಗೆಯಿಂದ ವಂಚಿತವಾಗಿದೆ. ಇದು ಅನೇಕ ದೇವಾಲಯಗಳು ಮತ್ತು ಧಾರ್ಮಿಕ ಕೇಂದ್ರಗಳಿಗೆ ನೆಲೆಯಾಗಿದ್ದು ಕರ್ನಾಟಕದ ಪವಿತ್ರವಾದ ಸ್ಥಳಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.ಮಂಡ್ಯ ಜಿಲ್ಲೆಯಲ್ಲಿರುವ ಮೇಲು ಕೋಟೆಗೆ 12 ಶತಮಾನದ ಇತಿಹಾಸವಿದೆ. ಸಂತ ರಾಮಾನುಜಾಚಾರ್ಯರು ಈ ಪಟ್ಟಣದಲ್ಲಿ ಸುಮಾರು 12 ವರ್ಷಗಳ ಕಾಲ ನೆಲೆಸಿದ್ದರಿಂದ ಆ ಸಮಯದ ನಂತರದಿಂದ ಈ ಸ್ಥಳವು ಮಹತ್ವದ ಧಾರ್ಮಿಕ ಕೇಂದ್ರವಾಯಿತು.

ಆದುದರಿಂದ ಮೇಲುಕೋಟೆಗೆ ಪ್ರವಾಸ ಮಾಡುವುದರ ಬಗ್ಗೆ ಆಯೋಜಿಸಿದರೆ ಮತ್ತು ಇಲ್ಲಿಯ ಇತಿಹಾಸ ಮತ್ತು ಪ್ರಾಮುಖ್ಯತೆಯ ಬಗ್ಗೆ ಕಲಿತರೆ ಹೇಗಿರಬಹುದು? ಈ ಕೆಳಗಿನ ಮೇಲುಕೋಟೆಯ ಕೆಲವು ಕಡಿಮೆ ಅನ್ವೇಷಿತ ಮತ್ತು ಪ್ರಮುಖ ಸ್ಥಳಗಳ ಬಗ್ಗೆ ಓದಿ.

ಚೆಲುವನಾರಾಯಣ ಸ್ವಾಮಿ ದೇವಾಲಯ

ಚೆಲುವನಾರಾಯಣ ಸ್ವಾಮಿ ದೇವಾಲಯ

PC- Prathyush Thomas

ಚೆಲುವನಾರಾಯಣ ಸ್ವಾಮಿ ದೇವಸ್ಥಾನವು ಮೆಲುಕೋಟೆಯಲ್ಲಿ ಮೊದಲ ಮತ್ತು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ದೇಶದ ಎಲ್ಲೆಡೆಯ ಹಿಂದು ಭಕ್ತರಲ್ಲಿ ಹೆಸರುವಾಸಿಯಾಗಿರುವ ಈ ದೇವಾಲಯವು ಪ್ರತೀವರ್ಷ ಸಾವಿರಾರು ಜನ ಹಿಂದೂ ಭಕ್ತರು ಮತ್ತು ಪ್ರವಾಸಿಗರಿಂದ ಭೇಟಿ ಕೊಡಲ್ಪಡುತ್ತದೆ. ಈ ಪ್ರಾಚೀನ ದೇವಾಲಯವು ಯಾದವಗಿರಿಯ ಯದುಗಿರಿ ಬೆಟ್ಟದಲ್ಲಿದ್ದು, ವಿಷ್ಣುವಿನ ರೂಪವಾದ ಚೆಲುವನಾರಾಯಣ ದೇವರಿಗೆ ಅರ್ಪಿತವಾಗಿದೆ.

ಚೆಲುವ ನಾರಾಯಣ ದೇವಾಲಯದ ಬಗ್ಗೆ ಮಾಹಿತಿ

ಮೈಸೂರು ಸಾಮ್ರಾಜ್ಯದ ರಾಜರು ಆಭರಣಗಳು, ಕಿರೀಟಗಳು ಮತ್ತು ರತ್ನಗಳನ್ನು ದೊಡ್ಡ ಪ್ರಮಾಣದಲ್ಲಿ ದೇವರಿಗೆ ಉಡುಗೊರೆಯ ರೂಪದಲ್ಲಿ ಅರ್ಪಿಸಿದ್ದಾರೆ . ಈ ಅಮೂಲ್ಯವಾದ ವಸ್ತುಗಳನ್ನು ಪ್ರತೀವರ್ಷ ವೈರಮುಡಿ ಉತ್ಸವದ ಸಮಯದಲ್ಲಿ ಚೆಲುವನಾರಾಯಣ ಸ್ವಾಮಿ ದೇವರ ಮೂರ್ತಿಯನ್ನು ಅಲಂಕರಿಸಲು ಮತ್ತು ದೇವಾಲಯದ ಸಂಕೀರ್ಣವನ್ನು ಸುಂದರಗೊಳಿಸಲು ತರಲಾಗುತ್ತದೆ.

ಸಂಸ್ಕೃತ ಸಂಶೋಧನಾ ಕೇಂದ್ರ ( ಅಕಾಡಮಿ ಆಫ್ ಸಂಸ್ಕೃತ ರಿಸರ್ಚ್)

ಸಂಸ್ಕೃತ ಸಂಶೋಧನಾ ಕೇಂದ್ರ ( ಅಕಾಡಮಿ ಆಫ್ ಸಂಸ್ಕೃತ ರಿಸರ್ಚ್)

1977 ರಲ್ಲಿ ಸ್ಥಾಪಿಸಲಾದ ಸಂಸ್ಕೃತ ಸಂಶೋಧನಾ ಕೇಂದ್ರವು ಅನೇಕ ಸಂಶೋಧನಾ ವಿದ್ವಾಂಸರಿಗೆ ನೆಲೆಯಾಗಿದೆ. ಇವರು ಸಂಸ್ಕೃತದ ವಿಷಯದಲ್ಲಿ ಅನೇಕ ಅನ್ವೇಷಣೆಗಳನ್ನು ಹೊರ ತರಲು ನೇಮಕಗೊಂಡಿರುತ್ತಾರೆ.ಆದುದರಿಂದ ನೀವು ಇಲ್ಲಿ ಅನೇಕ ಪ್ರಾಚೀನ ಹಸ್ತಪ್ರತಿಗಳು ಮತ್ತು ಸಾವಿರಾರು ಪುರಾತನ ಗ್ರಂಥಗಳನ್ನು ಕಾಣಬಹುದಾಗಿದೆ. ಇಲ್ಲಿ ಹಿಂದಿನ ಕಾಲದ ವಿದ್ವಾಂಸರು ಸಂಸ್ಕೃತದ ಬಳಕೆಗಳನ್ನು ಮತ್ತು ಅದರ ವಿಕಾಸವನ್ನು ಸಂಶೋಧಿಸುತ್ತಿದ್ದರು. ಇಂತಹ ಸ್ಥಳಗಳಲ್ಲಿ ಸಂಸ್ಕೃತವನ್ನು ಸ್ವಲ್ಪ ಮಟ್ಟಿಗೆ ಕಲಿತರೆ ಹೇಗಿರಬಹುದು?

ಯೋಗ ನರಸಿಂಹ ದೇವಾಲಯ

ಯೋಗ ನರಸಿಂಹ ದೇವಾಲಯ

PC- Philanthropist

ಯದುಗಿರಿ ಬೆಟ್ಟದ ಮೇಲೆ ನೆಲೆಸಿರುವ ಮೇಲುಕೋಟೆಯಿಂದ ಕೆಳಗೆ ನೋಡಿದರೆ ಸುಂದರವಾದ ಪಟ್ಟಣದ ದೃಶ್ಯವು ಕಾಣುತ್ತದೆ. ಯೋಗ ನರಸಿಂಹ ದೇವಾಲಯವು ಮೇಲುಕೋಟೆಯಲ್ಲಿ ಅತ್ಯಂತ ಹೆಚ್ಚು ಭೇಟಿ ಕೊಡುವ ಸ್ಥಳಗಳಲ್ಲೊಂದಾಗಿದೆ.

ದಂತಕಥೆಗಳ ಪ್ರಕಾರ , ಸಾವಿರಾರು ವರ್ಷಗಳ ಹಿಂದೆ ಪ್ರಹ್ಲಾದ ಎಂಬ ಒಬ್ಬ ಭಕ್ತರಿಂದ ದೇವಾಲಯದ ಒಳಗೆ ನರಸಿಂಹ ದೇವರನ್ನು ಪ್ರತಿಸ್ಥಾಪನೆ ಮಾಡಲಾಯಿತು ಎಂದು ನಂಬಲಾಗುತ್ತದೆ. ಅಲ್ಲಿಂದ ಮುಂದೆ ಇದು ಹಿಂದು ಧರ್ಮದವರ ಪ್ರಮುಖ ಧಾರ್ಮಿಕ ಕೇಂದ್ರವಾಯಿಯಿತು ಎನ್ನಲಾಗುತ್ತದೆ.ದಕ್ಷಿಣ ಭಾರತದಲ್ಲಿ ನರಸಿಂಹ ಭಗವಂತನ 14 ಮುಖ್ಯ ದೇಗುಲಗಳನ್ನು ರಾಮ ಮತ್ತು ಕೃಷ್ಣ ಪರಮಾತ್ಮರಿಂದ ಆರಾಧಿಸಲಾಗಿದೆ ಎಂದು ಹೇಳಲಾಗುತ್ತದೆ. ನರಸಿಂಹ ಜಯಂತಿ ಇಲ್ಲಿ ನಡೆಯುವ ಮುಖ್ಯ ಉತ್ಸವವಾಗಿದೆ.

ಮೇಲುಕೋಟೆ ದೇವಾಲಯ ವನ್ಯಜೀವಿ ಧಾಮ

ಮೇಲುಕೋಟೆ ದೇವಾಲಯ ವನ್ಯಜೀವಿ ಧಾಮ

ಮೇಲುಕೋಟೆ ದೇವಸ್ಥಾನಗಳಿಂದ ಗಡಿಯಾಗಿರುವ ಮೇಲುಕೋಟೆ ದೇವಸ್ಥಾನ ವನ್ಯಜೀವಿ ಧಾಮವು ಸುಮಾರು 50 ಚದರ ಕಿಲೋಮೀಟರ್ ಪ್ರದೇಶದಲ್ಲಿ ವ್ಯಾಪಿಸಿದೆ. ಇದು ಕಪ್ಪು ಬಕ್ ಮತ್ತು ಬೂದು ತೋಳದ ರಕ್ಷಣೆಗಾಗಿ ಜನಪ್ರಿಯವಾಗಿದೆ. ಈ ಪ್ರಾಣಿಗಳು ಅಭಯಾರಣ್ಯದ ಒಳಗೆ ಸಮೃದ್ಧವಾಗಿ ಕಂಡುಬರುತ್ತದೆ ಈ ವನ್ಯಜೀವಿ ಅಭಯಾರಣ್ಯದ ಭೂದೃಶ್ಯವನ್ನು ಬಂಡೆಗಳು ಮತ್ತು ಪತನಶೀಲ ಮರಗಳಿಂದ ಅವೃತವಾಗಿವೆ. ಇಲ್ಲಿ ಅನೇಕ ಜಾತಿಯ ವರ್ಣಮಯವಾದ ಚಿಟ್ಟೆಗಳನ್ನೂ ಕೂಡ ನೀವು ಕಾಣಬಹುದಾಗಿದೆ.

ಪುಷ್ಕರಣಿ ಕೆರೆ (ಪಾಂಡ್)

ಪುಷ್ಕರಣಿ ಕೆರೆ (ಪಾಂಡ್)

PC- Bharath

ಇದನ್ನು ಕಲ್ಯಾಣಿ ಕೆರೆ ಎಂದೂ ಕರೆಯಲಾಗುತ್ತದೆ. ಈ ಸಣ್ಣ ಹಾಗೂ ಅತ್ಯಂತ ಸುಂದರವಾದ ಕೆರೆಯು ದೇವಾಲಯದ ಸುತ್ತಲಲ್ಲಿ ಇದ್ದು ಈ ಪರಿಸರಕ್ಕೆ ಪ್ರಶಾಂತವಾದ ಮತ್ತು ವಿಶ್ರಾಂತಿಗೊಳಿಸುವಂತಹ ಸೆಳವನ್ನು ನೀಡುತ್ತದೆ. ನೀವು ಮೇಲುಕೋಟೆಯ ಸುಂದರವಾದ ಪರಿಸರದಲ್ಲಿ ಸ್ವಲ್ಪ ಸಮಯವನ್ನು ಆರಾಮವಾಗಿ ಕಳೆಯಬಯಸುವಿರಾದಲ್ಲಿ ಈ ಕೆರೆಗೆ ಭೇಟಿ ಕೊಡಿ. ಮತ್ತು ಹತ್ತಿರದ ದೇವಾಲಯಗಳಿಂದ ಕೇಳಿ ಬರುವ ಭಕ್ತಿಮಯ ಸಂಗೀತದ ಸದ್ದನ್ನು ಆಲಿಸಬಹುದು. ಭಾರತದ ಈ ಸರೋವರಗಳ ದೇವಾಲಯಗಳ ಸೌಂದರ್ಯವನ್ನು ಅನ್ವೇಷಿಸಿ.

ಆಸಕ್ತಿದಾಯಕ ಇನ್ನಿತರ ಸ್ಥಳಗಳು

ಆಸಕ್ತಿದಾಯಕ ಇನ್ನಿತರ ಸ್ಥಳಗಳು

PC- sai sreekanth

ಮೇಲೆ ಹೇಳಿದ ಸ್ಥಳಗಳ ಹೊರತಾಗಿ, ಮೇಲುಕೋಟೆಯಲ್ಲಿ ಅನ್ವೇಷಿಸ ಬೇಕಾದುದು ಬಹಳಷ್ಟಿದೆ. ಇಲ್ಲಿ ನೀವು ರಾಯಗೋಪುರಕ್ಕೆ ಭೇಟಿ ನೀಡಬಹುದಾಗಿದೆ. ಇದು ಒಂದು ಪಾಳುಬಿದ್ದ ಸ್ಮಾರಕವಾಗಿದ್ದು, ಇತಿಹಾಸ ಪ್ರಿಯರು ಮತ್ತು ವಾನಪ್ರಸ್ಥ ಆಶ್ರಮಗಳಿಗೆ ಜನಪ್ರೀಯವಾಗಿದ್ದು, ಇದು ಬೋಧನಾ ಕೇಂದ್ರವಾಗಿದೆ. ಥೊಂದನೂರ್ ಸರೋವರವು ಮೇಲುಕೋಟೆಯ ಇನ್ನೊಂದು ಪ್ರಸ್ದಿದ್ದ ಪ್ರವಾಸೀ ಆಕರ್ಷಣೆಯಾಗಿದ್ದು, ವೈಷ್ಣವ ಪಂಥದ ಬ್ರಾಹ್ಮಣರಿಗೆ ಇದು ಅತ್ಯಂತ ಪವಿತ್ರವಾದ ಸ್ಥಳವೆಂದು ಪರಿಗಣಿಸಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more