• Follow NativePlanet
Share
» »ಪಂಜಾಬ್‌ನಲ್ಲಿ ನೀವು ನೋಡಲೇ ಬೇಕಾದ ಸ್ಥಳಗಳು

ಪಂಜಾಬ್‌ನಲ್ಲಿ ನೀವು ನೋಡಲೇ ಬೇಕಾದ ಸ್ಥಳಗಳು

Posted By: Manjula Balaraj Tantry

ಅನೇಕ ನೈಸರ್ಗಿಕ ಹಾಗೂ ಐತಿಹಾಸಿಕ ಅದ್ಭುತಗಳನ್ನು ಹೊಂದಿದ್ದರೂ ಪಂಜಾಬ್ ಕಡಿಮೆ ಅನ್ವೇಷಣೆಗೊಳಪಟ್ಟ ಭಾರತದ ರಾಜ್ಯಗಳಲ್ಲೊಂದಾಗಿದೆ. ಪಂಜಾಬಿನ ಐತಿಹಾಸಿಕ ಸ್ಥಳಗಳಿಗೆ ಭೇಟಿ ಕೊಡುವ ಬಗ್ಗೆ ಎಂದಾದರೂ ಯೋಚಿಸಿರುವಿರಾ? ಹಾಗಿದ್ದಲ್ಲಿ ಪಂಜಾಬ್ ಅನೇಕ ಐತಿಹಾಸಿಕ ಅದ್ಬುತಗಳಾದ ಖಿಲಾ ಮುಬಾರಕ್, ಗೋಲ್ಡನ್ ದೇವಾಲಯ, ಪಾರ್ಟೀಶಿಯನ್ (ವಿಭಜನಾ) ಮ್ಯೂಸಿಯಂ ಮತ್ತು ಜಲಿಯನ್ವಾಲಾ ಬಾಗ್ ಪಂಜಾಬಿನಲ್ಲಿ ನೋಡಲೇ ಬೇಕಾದ ಸ್ಥಳಗಳಾಗಿವೆ.

1 ಶ್ರೀಹರ್ ಮಂದಿರ್ ಸಾಹಿಬ್

1 ಶ್ರೀಹರ್ ಮಂದಿರ್ ಸಾಹಿಬ್

ಇದನ್ನು ಗೋಲ್ಡನ್ ದೇವಾಲಯವೆಂದೂ ಕೂಡಾ ಕರೆಯಲಾಗುತ್ತದೆ ಶ್ರೀ ಹರ್ ಮಂದಿರ್ ಸಾಹಿಬ್ ಸಿಖ್ಕರ ಪವಿತ್ರ ಸ್ಥಳವಾಗಿದ್ದು, ಭಾರತದ ಅತ್ಯಂತ ಪವಿತ್ರ ಸ್ಥಳಗಳಲ್ಲೊಂದಾಗಿದೆ. ಇದು ಭಾರತದ ಅತೀ ಭೇಟಿ ಕೊಡುವ ಸ್ಥಳಗಳಲ್ಲೊಂದೆನಿಸಿದ್ದು ಮತ್ತು ಇಲ್ಲಿಗೆ ಪ್ರತೀ ವರ್ಷ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಸುತ್ತಲೂ ಕೊಳಗಳಿಂದ ಸುತ್ತುವರಿಯಲ್ಪಟ್ಟ ಈ ಗೋಲ್ಡನ್ ದೇವಾಲಯವನ್ನು 16ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಅಂದರೆ 1604 ರಲ್ಲಿ, ಸಿಖ್ ಧರ್ಮದ ಪವಿತ್ರ ಗ್ರಂಥಗಳನ್ನು ದೇವಾಲಯದಲ್ಲಿ ಪರಿಚಯಿಸಲಾಯಿತು. ಈ ಭವ್ಯವಾದ ದೇವಸ್ಥಾನದ ಮೇಲಿನ ಮಹಡಿಗಳನ್ನು ಮೂಲತಃ ಶುದ್ಧ ಚಿನ್ನದಿಂದ ನಿರ್ಮಿಸಲಾಗಿದೆ. ಈ ಭಕ್ತಿ ಪೂರ್ವ ವಾತಾವರಣದಲ್ಲಿ ಮತ್ತು ದೇವಾಲಯದ ಆರಾಮದಾಯಕ ವಾತಾವರಣದ ಮಧ್ಯೆ ನಿಮ್ಮ ಮೈ ಮನಸ್ಸು ಮತ್ತು ಆತ್ಮವನ್ನು ವಿಶ್ರಾಂತಿಗೊಳಿಸಿದರೆ ಹೇಗಿರಬಹುದು?

2 ಖಿಲಾ ಮುಬಾರಕ್

2 ಖಿಲಾ ಮುಬಾರಕ್

PC- Guneeta

ಭಾತಿಂದಾ ಕೋಟೆ ಎಂದು ಕರೆಯಲ್ಪಡುವ ಖಿಲಾ ಮುಬಾರಕ್ ಒಂದು ಐತಿಹಾಸಿಕ ಸ್ಮಾರಕವಾಗಿದ್ದುಅದ್ಬುತವಾದ ಪಂಜಾಬ್ ರಾಜ್ಯದ ಭಾತಿಂದಾ ನಗರದಲ್ಲಿದೆ. 11ನೇ ಶತಮಾನದ ಇತಿಹಾಸದೊಂದಿಗೆ, ಈ ನಗರದ ಅನ್ವೇಷಣೆ ಮಾಡಲು ನೋಡುತ್ತಿರುವಿರಾದರೆ ಖಿಲಾ ಮುಬಾರಕ್ ಭೇಟಿ ನೀಡಬೇಕಾದ ಸ್ಥಳವಾಗಿದೆ. ಭಾರತದ ಮೊದಲ ಮಹಿಳಾ ಆಡಳಿತಗಾರ್ತಿ ರಝಿಯ ಸುಲ್ತಾನ್ ಅವರು ಈ ಕೋಟೆಯ ಗಡಿಯೊಳಗೆ ಸೋಲಿಸಲ್ಪಟ್ಟರು ಮತ್ತು ದೆಹಲಿ ಕ್ಷೇತ್ರದಿಂದ ಪದಚ್ಯುತಗೊಳಿಸಲಾದರು ಎಂದು ಹೇಳಲಾಗುತ್ತದೆ. ಭಾರತಕ್ಕೆ ಹೊರಗಿನ ಕೆಲವು ಆಡಳಿತಗಾರರಿಗೆ ಇದು ದೆಹಲಿಗೆ ಒಂದು ಗೇಟ್‌ವೇ ಆಗಿದೆ. ಉದಾಹರಣೆಗೆ ಬಾಬರ್ ಮತ್ತು ಮೊಹಮ್ಮದ್ ಘೋರಿ. ಪೃಥ್ವಿರಾಜ್ ಚೌಹಾನ್ ನಂತಹ ಹಲವು ಭಾರತದ ಆಡಳಿತಗಾರರ ಆಳ್ವಿಕೆಗೆ ಒಳಪಟ್ಟಿತ್ತು.ಇಂದು ಭಾರತದ ಇದು ಪುರಾತತ್ವ ಶಾಸ್ತ್ರದ ಸಮೀಕ್ಷೆಯ ಆರೈಕೆಯಲ್ಲಿದೆ ಮತ್ತು ಪ್ರತಿ ತಿಂಗಳು ಸಾವಿರಾರು ಸಂದರ್ಶಕರನ್ನು ಸೆಳೆಯುವ ಮಹತ್ವದ ಕೋಟೆಯಾಗಿದೆ.

3 ಜಲಿಯನ್ ವಾಲಾ ಭಾಗ್

3 ಜಲಿಯನ್ ವಾಲಾ ಭಾಗ್

PC- Bijay chaurasia

ದೇಶದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನರಲ್ ಡೈಯರ್ ತನ್ನ ಸೈನಿಕ ಪಡೆಯಿಂದ ನೂರಾರು ಜನ ಅಮಾಯಕ ಹೋರಾಟಗಾರರ ಮೇಲೆ ಗುಂಡಿನ ದಾಳಿ ನಡೆಸಲು ಆದೇಶ ನೀಡಿದ ಈ ಜಲಿಯನ್ ವಾಲಾಭಾಗ್ ನಲ್ಲಿ ನಡೆದ ಹತಾಶ ಘಟನೆಯನ್ನು ಯಾರು ತಾನೇ ಮರೆಯಲು ಸಾಧ್ಯ?

ಭಾರತದ ಸ್ವಾತಂತ್ರ್ಯ ಸಮರದಲ್ಲಿ ನಡೆದ ಹೋರಾಟದ ಸಮಯದಲ್ಲಿ ನಡೆದ ಅತ್ಯಂತ ಅಮಾನವೀಯ ಕೃತ್ಯವು 1919ರಲ್ಲಿ ಈ ಉದ್ಯಾನವನದಲ್ಲಿಯೇ ನಡೆಯಿತು. ಜಲಿಯನ್ ವಾಲಾ ಗೋಲ್ಡನ್ ಟೆಂಪಲ್ ಗೆ ಹತ್ತಿರದಲ್ಲಿದ್ದು ಈ ಉದ್ಯಾನವನವು ಬ್ರಿಟಿಷ್ ಅಧಿಕಾರಿಯ ದುಷ್ಕ್ರತ್ಯಕ್ಕೆ ಬಲಿಯಾದ ಅಮಾಯಕ ಜನರ ಸ್ಮರಣಾರ್ಥವಾಗಿ ಮಾಡಲಾದ ಸ್ಮಾರಕವಿದೆ. ಇಂದು ಇದು ಅಮೃತಸರದ ಅತ್ಯಂತ ಹೆಚ್ಚು ಭೇಟಿ ನೀಡುವ ಸ್ಥಳಗಳಲ್ಲೊಂದಾಗಿದೆ.

4 ಪಾರ್ಟೀಶಿಯನ್ (ವಿಭಜನಾ) ವಸ್ತು ಸಂಗ್ರಹಾಲಯ

4 ಪಾರ್ಟೀಶಿಯನ್ (ವಿಭಜನಾ) ವಸ್ತು ಸಂಗ್ರಹಾಲಯ

PC- Government of India

ಭಾರತ ಸರಕಾರದಿಂದ 2017 ರ ಆಗಸ್ಟ್ 17 ರಂದು ಉದ್ಘಾಟನೆಯಾಯಿತು. ವಿಭಜನಾ ವಸ್ತುಸಂಗ್ರಹಾಲಯವು ಪ್ರಪಂಚದಲ್ಲೇ ಒಂದು ವಿಭಿನ್ನ ರೀತಿಯದ್ದಾಗಿದೆ ಮತ್ತು 1947ರಲ್ಲಿ ಭಾರತದ ವಿಭಜನೆಗೆ ಸಂಬಂಧಿಸಿದ ಕೆಲವು ಸಾಮಗ್ರಿಗಳನ್ನು ಮತ್ತು ದಾಖಲೆಗಳನ್ನು ಹೊಂದಿದೆ. ಈ ವಸ್ತುಸಂಗ್ರಹಾಲಯವು ಅಮೃತಸರ್ ನಲ್ಲಿದ್ದು ಇದರ ರಚನೆಯಾದಂದಿನಿಂದಲೂ ಇದು ಪ್ರಮುಖ ಪ್ರವಾಸಿ ಕೇಂದ್ರವಾಗಿದೆ. ಈ ಅದ್ಭುತ ವಸ್ತುಸಂಗ್ರಹಾಲಯದ ನಡುದಾರಿಗಳ ಮೂಲಕ ನಡೆಯುತ್ತಾ ಮತ್ತು ಪ್ರಸ್ತುತ ಭಾರತದ ವಿಕಾಸದ ಬಗ್ಗೆ ತಿಳುವಳಿಕೆ ಪಡೆದರೆ ಹೇಗೆ? ಈ ವಸ್ತುಸಂಗ್ರಹಾಲಯದ ಗೋಡೆಗಳ ಮೇಲೆ ತೂಗಾಡುವ ವಿಭಜನೆಯ ದುಃಖಕರ ಕಥೆಗಳನ್ನು ವಿವರಿಸುವ ಕೆಲವು ಛಾಯಾ ಚಿತ್ರಗಳು ಮತ್ತು ವರ್ಣಚಿತ್ರಗಳನ್ನು ಕಾಣಬಹುದಾಗಿದೆ.

5 ಮೋತಿ ಭಾಗ್ ಅರಮನೆ

5 ಮೋತಿ ಭಾಗ್ ಅರಮನೆ

PC- IP SingH

ಪಂಜಾಬಿನ ಪಟಿಯಾಲ ನಗರದಲ್ಲಿರುವ ಮತ್ತೊಂದು ಅದ್ಬುತವಾದ ಕಟ್ಟಡವೆಂದರೆ ಅದು ಮೋತಿ ಭಾಗ್ ಅರಮನೆ. ಇದನ್ನು 1840ರಲ್ಲಿ ಪಟಿಯಾಲದ ಮಹಾರಾಜರಿಂದ ನಿರ್ಮಿಸಲ್ಪಟ್ಟಿತು. ಇಂದು ಇದನ್ನು ವಸ್ತು ಸಂಗ್ರಹಾಲಯ ಮತ್ತು ಆರ್ಟ್ ಗ್ಯಾಲರಿಯಾಗಿ ಪರಿವರ್ತಿಸಲಾಗಿದೆ. ಇಲ್ಲಿ ಅನೇಕ ಹಳೇಯ ವರ್ಣಚಿತ್ರಗಳು ಮತ್ತು ಪ್ರಾಚೀನ ಭಾರತದ ಕಲಾಕೃತಿಗಳನ್ನು ಸಂರಕ್ಷಿಸಲಾಗಿದೆ. ಮೋತಿ ಬಾಗ್ ಅರಮನೆಯು ಉತ್ತರ ವಲಯ ಸಾಂಸ್ಕೃತಿಕ ಕೇಂದ್ರವಾಗಿದೆ. ಇದು ಪಂಜಾಬಿನ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ಮತ್ತು ಸಂರಕ್ಷಿಸುವ ಒಂದು ಪ್ರಾದೇಶಿಕ ಕೇಂದ್ರವಾಗಿದೆ. ಭಾರತದ ಈ ಅದ್ಭುತವಾದ ಅರಮನೆಗಳಿಗೆ ಪ್ರಯಾಣ ಮಾಡಿ.

6 ದೇವಿ ತಾಲಾಬ್ ಮಂದಿರ

6 ದೇವಿ ತಾಲಾಬ್ ಮಂದಿರ

PC- Nitjsandy

ಪಂಜಾಬಿನ ಜಲಂಧರ್ ನಲ್ಲಿರುವ 200 ವರ್ಷಗಳಷ್ಟು ಹಳೆಯದಾದ ದೇವಿ ತಾಲಾಬ್ ಮಂದಿರವು ದುರ್ಗಾ ದೇವಿಗೆ ಅರ್ಪಿತವಾದುದಾಗಿದೆ. ಈ ಸುಂದರವಾಗಿ ನಿರ್ಮಿಸಲಾದ ದೇವಾಲಯವು ಪ್ರತೀ ವರ್ಷ ಸಾವಿರಾರು ಭಕ್ತರು ಭೇಟಿ ನೀಡುವುದಕ್ಕೆ ಸಾಕ್ಷಿಯಾಗಿದೆ. ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ದೇವಾಲಯದಲ್ಲಿ 200 ವರ್ಷ ಹಳೆಯ ಕೊಳ, ಅಮರನಾಥ್ ಗುಹೆ ಮತ್ತು ವೈಷ್ಣೋ ದೇವಿ ಗುಹೆಯ ಪ್ರತಿಕೃತಿ ಸೇರಿವೆ. ನಗರದ ಹೃದಯಭಾಗದಲ್ಲಿರುವ ದೇವಿ ತಲಾಬ್ ದೇವಾಲಯವು ಪಂಜಾಬ್ ರಾಜ್ಯದ ಅತ್ಯಂತ ಹೆಚ್ಚು ಭೇಟಿ ಕೊಡಲ್ಪಡುವ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ