Search
  • Follow NativePlanet
Share
» »ಮಂಗಳೂರಿನ 6 ಅದ್ಭುತ ತಾಣಗಳು ಒಮ್ಮೆ ಭೇಟಿ ನೀಡಿ

ಮಂಗಳೂರಿನ 6 ಅದ್ಭುತ ತಾಣಗಳು ಒಮ್ಮೆ ಭೇಟಿ ನೀಡಿ

ಮಂಗಳೂರು ಕರ್ನಾಟಕ ರಾಜ್ಯದಲ್ಲಿನ ಸುಂದರವಾದ ಪಟ್ಟಣಗಳಲ್ಲಿ ಒಂದು. ಮಂಗಳೂರು ತನ್ನ ದೇವಾಲಯಗಳಿಗೆ, ಕಡಲತೀರಗಳಿಗೆ ಹಾಗೂ ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿ. ಇಲ್ಲಿನ ಭಾಷೆ, ಆಚಾರ, ವಿಚಾರಗಳು, ಕಲೆಗಳಿಂದ ತನ್ನದೇ ಆದ ವೈಶಿಷ್ಟತೆಯಿಂದ ಕರ್ನಾಟಕಕ್ಕೆ ಇನ್ನಷ್ಟೂ ಮೆರಗನ್ನು ನೀಡಿದೆ.

ಹಿಂದೂ ಪುರಾಣಗಳ ಪ್ರಕಾರ ಈಗಿನ ಮಂಗಳೂರು ಪ್ರದೇಶವು ಪರಶುರಾಮ ಸೃಷ್ಟಿಯ ಒಂದು ಭಾಗವಾಗಿತ್ತು. ಮಹರ್ಷಿ ಶ್ರೀ ಪರಶುರಾಮನು ಸಮುದ್ರದಿಂದ ಹಿಂದಕ್ಕೆ ಪಡೆದುಕೊಂಡ ಕರಾವಳಿ ಪ್ರದೇಶವೇ ಈ ಪರಶುರಾಮ ಸೃಷ್ಟಿ. ಭಾರತದ ಸ್ವಚ್ಚವಾದ ನಗರಗಳಲ್ಲಿ ಒಂದಾದ ಮಂಗಳೂರು ಮಹೋನ್ನತ ವ್ಯಾಪಾರ ಕೇಂದ್ರವಾಗಿದೆ ಮತ್ತು ಅದ್ಭುತವಾದ ಬೀಚ್, ಬಂದರು, ವೈವಿದ್ಯಮಯವಾದ ಸಂಸ್ಕøತಿಗೆ ಹೆಸರುವಾಸಿಯಾಗಿದೆ.

ಮಂಗಳೂರನ್ನು ಪ್ರಾಚೀನ ಕಾಲದಿಂದ ಕದಂಬರು, ರಾಷ್ಟ್ರಕೂಟರು, ಚಾಲುಕ್ಯರು, ವಿಜಯನಗರ ಸಾಮ್ರಾಜ್ಯ, ಪೋರ್ಚುಗೀಸರು, ಬ್ರಿಟೀಷರು ಆಳಿದ್ದಾರೆ. ಮಂಗಳೂರು ಐತಿಹಾಸಿಕವಾಗಿ ಪ್ರಸಿದ್ಧವಾದ ಪ್ರವಾಸಿ ಆಕರ್ಷಣೆಯಾಗಿದೆ. ಮಂಗಳೂರಿನಲ್ಲಿ ನೀವು ಭೇಟಿ ನೀಡಬೇಕಾದ ಅತ್ಯುತ್ತಮ ಸ್ಥಳಗಳ ಪಟ್ಟಿ ಇಲ್ಲಿದೆ.

ಮಂಗಳಾ ದೇವಿ ದೇವಾಲಯ

ಮಂಗಳಾ ದೇವಿ ದೇವಾಲಯ

ಮಂಗಳಾ ದೇವಿ ದೇವಾಲಯವು ಮಂಗಳೂರಿನ ಬೋಳಾರಿನಲ್ಲಿದೆ. ವಿಶೇಷವೆನೆಂದರೆ ಮಂಗಳಾದೇವಿ ದೇವಾಲಯದ ಪ್ರಧಾನ ದೇವತೆಯಾದ "ಮಂಗಳಾಂಬೆ"ಯಿಂದಲೆ ಈ ಪ್ರದೇಶಕ್ಕೆ ಮಂಗಳೂರು ಎಂಬ ಹೆಸರು ಬಂದಿತು. ಮಂಗಳಾ ದೇವಿಯ ದೇವಾಲಯವನ್ನು 9 ನೇ ಶತಮಾನದಲ್ಲಿನ ಅರಸ ಕುಂದವರ್ಮನ ಕಾಲದಲ್ಲಿ ಪ್ರತಿಷ್ಟಾಪನೆ ಗೊಂಡಿತು.

ಮಂಗಳಾ ದೇವಿ ದೇವಾಲಯದಲ್ಲಿ ವರ್ಷಕ್ಕೆ ಎರಡು ಪ್ರಮುಖವಾದ ಉತ್ಸವಗಳು ನಡೆಯುತ್ತವೆ. ಅವುಗಳೆಂದರೆ ಆಶ್ವಿಜಮಾಸದಲ್ಲಿ ನವರಾತ್ರಿಯ ವೈಭವ ಹಾಗೂ ಇನ್ನೊಂದು ಮಾರ್ಚ್ ತಿಂಗಳ ಸಮಯದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ. ವಿಜಯ ದಶಮಿಯ ದಿನದಂದೂ ಒಂಬತ್ತು ದಿನವೂ ವಿಧ ವಿಧವಾದ ಅಲಂಕಾರದಿಂದ ದೇವಿಯನ್ನು ಅಲಂಕರಿಸುತ್ತಾರೆ.

PC:Vinay bhat

ಪನಂಬೂರ್ ಬೀಚ್

ಪನಂಬೂರ್ ಬೀಚ್

ಹೊಸ ಮಂಗಳೂರು ಬಂದರಿನ ಸ್ಥಳವಾದ ಪನಂಬೂರ್ ಬೀಚ್ ಮಂಗಳೂರಿನಿಂದ ಕೇವಲ 13 ಕಿ,ಮೀ ದೂರದಲ್ಲಿದೆ. ಮಂಗಳೂರು ಎಂದರೆ ಬೀಚ್‍ಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಅವುಗಳಲ್ಲಿ ವಿರಳವಾದ ಕ್ಕಿಕ್ಕಿರಿದ ಕಡಲ ತೀರಗಳಲ್ಲಿ ಈ ಬೀಚ್ ಕೂಡ ಒಂದು. ಏಕಾಂತವಾಗಿ ಈಜು ಮಾಡಲು, ವಿಶ್ರಾಂತಿ ಪಡೆಯಲು, ರಿಫ್ರೆಶ್ ಆಗಲು ಉತ್ತಮವಾದ ಬೀಚ್ ಇದಾಗಿದೆ. ಪನಂಬೂರ್ ಬೀಚ್ ಸುರಕ್ಷಿತವಾದ ಮತ್ತು ಅತ್ಯುತ್ತಮ ನಿರ್ವಹಣೆಯ ಕಡಲ ತೀರವಾಗಿದೆ.

ಈಗ ಈ ಬೀಚ್ ಅನ್ನು "ಪನಂಬೂರ್ ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ"ಯ ಅಡಿಯಲ್ಲಿ ಖಾಸಗಿ ಉದ್ಯಮ ನಿರ್ವಹಿಸುತ್ತಿದೆ. ಇಲ್ಲಿನ ಆಕರ್ಷಣೆಗಳಲ್ಲಿ ಜೆಟ್ ಸ್ಕೀ ಸವಾರಿಗಳು, ಬೋಟಿಂಗ್, ಡಾಲ್ಫಿನ್ ವೀಕ್ಷಣೆ, ಆಹಾರ ಮಳಿಗೆಗಳು ಇನ್ನೂ ಹಲವಾರು ಇಲ್ಲಿ ಕಾಣಬಹುದಾಗಿದೆ.

PC:Premnath Kudva

ಪಿಲಿಕುಲಾ ನಿಸರ್ಗಧಾಮ

ಪಿಲಿಕುಲಾ ನಿಸರ್ಗಧಾಮ

ಮಂಗಳೂರಿನಿಂದ ಸುಮಾರು 15 ಕಿ,ಮೀ ದೂರದಲ್ಲಿರುವ ಪಿಲಿಕುಲಾ ನಿಸರ್ಗಧಾಮ ಅಥವಾ ಪಿಲಿಕುಲಾ ನಗರಕ್ಕೆ ಸಮೀಪವಿರುವ ಅತ್ಯಂತ ಜನಪ್ರಿಯ ಪಿಕ್ನಿಕ್ ತಾಣಗಳಲ್ಲಿ ಇದೂ ಕೂಡ ಒಂದಾಗಿದೆ. ಪಿಲಿಕುಲಾ ಪ್ರಕೃತಿ ಮತ್ತು ವನ್ಯಜೀವಿ ಪ್ರೀಯರಿಗೆ ಒಂದು ಸ್ವರ್ಗವಿದ್ದಂತೆ. ಇಲ್ಲಿ ಹುಲಿಗಳು, ಚಿರತೆಗಳು, ಕರಡಿಗಳು ಮತ್ತು ವಿವಿಧ ಸರೀಸೃಪಗಳಾದ ಹಾವುಗಳು ಸೇರಿದಂತೆ ಪಾರ್ಕ್‍ನಲ್ಲಿ ಹಲವಾರು ವನ್ಯಜೀವಿ ಜಾತಿಗಳನ್ನು ಕಾಣಬಹುದಾಗಿದೆ.

ಇಲ್ಲಿನ ಪ್ರವಾಸಿಗರಿಗೆ ಬೋಟಾನಿಕಲ್ ಗಾರ್ಡನ್, ಕೇಜ್ ಮೃಗಾಲಯ ಮತ್ತು ಗಾಲ್ಫ್ ಕೋರ್ಸ್ ಕೂಡ ಇಲ್ಲಿ ಆನಂದಿಸಬಹುದಾಗಿದೆ. ಪಿಲಿಕುಲಾ ನಿಸರ್ಗಧಾಮವು ಸುಮಾರು 82 ಎಕರೆಗಳಷ್ಟು ವಿಸ್ತಾರವಾಗಿದೆ. ಇಲ್ಲಿಗೆ ಭೇಟಿ ನೀಡಲು ಉತ್ತಮವಾದ ಸಮಯವೆಂದರೆ ಬೆಳಗ್ಗೆ 9:30 ರಿಂದ ಸಂಜೆ 5:30 ರವರೆಗೆ. ಸೋಮವಾರ ವಾರದ ರಜೆ.

PC:Vaikoovery

ಗೋಕರ್ಣ ನಾಥೇಶ್ವರ

ಗೋಕರ್ಣ ನಾಥೇಶ್ವರ

ಗೋಕರ್ಣ ನಾಥೇಶ್ವರ ಹಿಂದೂ ದೇವತೆ ಶಿವನಿಗೆ ಆರಾಧಿಸುವ ಪುಣ್ಯಕ್ಷೇತ್ರವಾಗಿದೆ. ಈ ಮಾಹಿಮಾನ್ವಿತವಾದ ದೇವಾಲಯದ ವಾಸ್ತು ಶಿಲ್ಪವು ದ್ರಾವಿಡ ಶೈಲಿಯನ್ನು ಹೋಲುತ್ತದೆ. ಈ ದೇವಾಲಯದ ಗೋಪುರವು ಸುಮಾರು 60 ಅಡಿ ಎತ್ತರದಲ್ಲಿದೆ.

ಎತ್ತರವಾದ ಆನೆಗಳ ಪ್ರತಿಮೆಗಳು ಭಕ್ತರನ್ನು ಸ್ವಾಗತಿಸುತ್ತವೆ. ವಿಶಾಲವಾದ ಪ್ರಕಾರವಿರುವ ಈ ದೇವಾಲಯದ ಗೋಪುರದಲ್ಲಿ ಈಶ್ವರ, ಶಿವ ಸೇರಿದಂತೆ ಹಲವಾರು ದೇವತಾ ಮೂರ್ತಿಗಳಿರುವುದನ್ನು ಕಾಣಬಹುದಾಗಿದೆ. ದೇವಾಲಯದ ಒಳಭಾಗದಲ್ಲಿ ಗಣಪತಿ, ಕೃಷ್ಣ ಹಾಗೂ ನಾರಾಯಣ ಗುರುಗಳ ಪ್ರತ್ಯೇಕವಾದ ಮಂದಿರಗಳಿವೆ. ಈ ದೇವಾಲಯವನ್ನು ಕುದ್ರೋಳಿ ಗೋಕರ್ಣನಾಥೇಶ್ವರ ಎಂದೂ ಸಹ ಕರೆಯುತ್ತಾರೆ. ಇಲ್ಲಿ ಸದಾಭಕ್ತರು ತುಂಬಿತುಳುಕುತ್ತಿರುತ್ತಾರೆ.

PC:Vaikoovery

ಸುರತ್ಕಲ್ ಬೀಚ್

ಸುರತ್ಕಲ್ ಬೀಚ್

ಸುರತ್ಕಲ್ ಕಡಲ ತೀರವು ಮಂಗಳೂರಿನ ಮತ್ತೊಂದು ಸುಂದರವಾದ ತೀರವಾಗಿದೆ. ಈ ಬೀಚ್ ಮಂಗಳೂರಿಗೆ ಸುಮಾರು 12 ಕಿ,ಮೀ ದೂರದಲ್ಲಿದೆ. ಈ ಕಡಲ ತೀರವು ತನ್ನ ವಿಶಿಷ್ಟವಾದ ಮರಳಿನಿಂದ ಹೆಸರುವಾಸಿಯಾಗಿದೆ. ಈ ಸುರತ್ಕಲ್ ಬೀಚ್ ಪ್ರವಾಸಿಗರಿಗೆ ಬಹಳ ಜನಪ್ರಿಯವಾಗಿದ್ದು, ಇಲ್ಲಿನ ಸುಂದರವಾದ ನೈಸರ್ಗಿಕ ಪರಿಸರವನ್ನು ಹೊಂದಿದೆ. ಕ್ಕಿಕ್ಕಿರಿದ ಮತ್ತು ನಗರ ಜೀವನದ ಸ್ವಲ್ಪ ಸಮಯವನ್ನು ಕಾಲ ಕಳೆಯಲು ಬಯಸುವ ಪ್ರವಾಸಿಗರಿಗೆ ಇದು ಸುಕ್ತವಾದ ಬೀಚ್ ಆಗಿದೆ.

ಮಂಗಳೂರಿನ ಕಡಲತೀರಗಳು ಸಾಕಷ್ಟು ಪ್ರಸಿದ್ಧವಾಗಿವೆ ಮತ್ತು ಸುರತ್ಕಲ್ ಬೀಚ್ ಅವುಗಳಲ್ಲಿ ಒಂದಾಗಿದೆ. ಮಂಗಳೂರಿನ ಸುರತ್ಕಲ್ ಬೀಚ್ ಅನ್ನು ನಗರದ ಪ್ರಮುಖ ಭಾಗಗಳಿಂದ ಸುಲಭವಾಗಿ ತಲುಪಬಹುದಾಗಿದೆ.

PC:Faheem Kv

ಸೆಂಟ್ ಅಲೋಶಿಯಸ್ ಚರ್ಚ್

ಸೆಂಟ್ ಅಲೋಶಿಯಸ್ ಚರ್ಚ್

ಮಂಗಳೂರಿನ ಅದ್ಭುತ ತಾಣಗಳಲ್ಲಿ ಈ ಚರ್ಚ್ ಕೂಡ ಒಂದು. ಸೆಂಟ್ ಅಲೋಶಿಯಸ್ ಚರ್ಚ್ ಅನ್ನು 1880ರಲ್ಲಿ ಜೆಸ್ಯೂಟ್ ಮಿಷನರಿ ನಿರ್ಮಿಸಿತ್ತು. ಇದು ಅದ್ಭುತ ವಾಸ್ತುಶಿಲ್ಪ ಮತ್ತು ಒಳಾಂಗಣದ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ವಿಶಿಷ್ಟವೆನೆಂದರೆ ಈ ಚರ್ಚಿನಲ್ಲಿ ಇಟಾಲಿಯನ್ ಕಲಾವಿದ ಆಂಟೋನಿಯೋ ಮೊಸ್ಟೆನಿ ವರ್ಣಚಿತ್ರಗಳನ್ನು ಒಳಗೊಂಡಿದೆ. ಇಲ್ಲಿ ಕ್ರಿಶ್ಚಿಯನ್ ಧರ್ಮದಲ್ಲಿನ ವಿವಿಧ ಸಂತರ ವರ್ಣಚಿತ್ರಗಳನ್ನು ಇಲ್ಲಿ ಕಾಣಬಹುದಾಗಿದೆ.

ಇದೊಂದು ಅದ್ಭುತವಾದ ಕ್ರೈಸ್ತ ಪುಣ್ಯಕ್ಷೇತ್ರ ಇಲ್ಲಿಗೆ ಹಲವಾರು ಭಕ್ತರು ಜಿಸಸ್‍ನ ಪಾರ್ಥಿಸಲು ಬರುತ್ತಾರೆ.

PC:Ppntori

ತಲುಪುವ ಬಗೆ?

ತಲುಪುವ ಬಗೆ?

ಸುಂದರವಾದ ಮಂಗಳೂರನ ಪ್ರಸಿದ್ಧ ತಾಣಗಳಿಗೆ ಭೇಟಿ ನೀಡಲು ಬೆಂಗಳೂರಿನಿಂದ ಸುಮಾರು 351 ಕಿ,ಮೀ ಅಂತರದಲ್ಲಿದೆ. 6 ಗಂಟೆ 50 ನಿಮಿಷಗಳ ಕಾಲ ಪ್ರಯಾಣವನ್ನು ಮಾಡಬೇಕಾಗಿರುತ್ತದೆ.

ವಿಮಾನ ನಿಲ್ದಾಣ: ಬೆಂಗಳೂರಿನಿಂದ ಮಂಗಳೂರಿಗೆ ಸಮೀಪದ ವಿಮನ ನಿಲ್ದಾಣವೆಂದರೆ ಅದು ಮಂಗಳೂರು ಇಂಟರ್ ನ್ಯಾಷನಲ್ ಏರ್ಪೋಟ್ ಆಗಿದೆ.

ರೈಲ್ವೆ ಮಾರ್ಗದ ಮೂಲಕ: ಬೆಂಗಳೂರಿನಿಂದ ಮಂಗಳೂರಿಗೆ ನೇರವಾದ ರೈಲ್ವೆ ಸಂಪರ್ಕವಿದ್ದು ಮಂಗಳೂರು ಜಂಗ್ಷನ್ ಹಾಗೂ ಮಂಗಳೂರು ಸೆಂಟ್ರಲ್.

ರಸ್ತೆ ಮಾರ್ಗದ ಮೂಲಕ: ಬೆಂಗಳೂರಿನಿಂದ ಮಂಗಳೂರಿಗೆ ಹಲವಾರು ಖಾಸಗಿ ಹಾಗೂ ಸರ್ಕಾರಿ ಬಸ್‍ಗಳ ಸೌಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more