• Follow NativePlanet
Share
» »ಗೋವಾದಲ್ಲಿನ ಪ್ರಸಿದ್ಧವಾದ ವಾಟರ್ ಗೇಮ್ಸ್

ಗೋವಾದಲ್ಲಿನ ಪ್ರಸಿದ್ಧವಾದ ವಾಟರ್ ಗೇಮ್ಸ್

Written By:

ಸಾಮಾನ್ಯವಾಗಿ ನೀರಿನಲ್ಲಿ ಆಟ ಆಡುವುದೆಂದರೆ ಚಿಕ್ಕ ಮಕ್ಕಳಿಂದ ದೊಡ್ಡವರವರೆವಿಗೂ ಬಲು ಇಷ್ಟ. ಅದರಲ್ಲೂ ಕಡಲತೀರ(ಬೀಚ್)ಗಳಲ್ಲಿ ಆಡುವುದೆಂದರೆ ಇನ್ನೂ ಇಷ್ಟ. ಹೀಗೆ ತಮ್ಮ ವಾರಾಂತ್ಯವನ್ನು ಆನಂದದಿಂದ ಕಳೆಯಲು ಯಾವುದಾದರು ಪ್ರವಾಸ ತಾಣಕ್ಕೆ ಭೇಟಿ ನೀಡುವುದು ಸಾಮಾನ್ಯ. ಅದರಲ್ಲೂ ಸುರಕ್ಷಿತವಾದ ಸ್ಥಳವಾಗಿರಲೇ ಬೇಕು. ಏಕೆಂದರೆ ನೀರಿನಲ್ಲಿ ಅಡ್ಡಾಡಲು ಇಷ್ಟ ಪಡುವವರಲ್ಲಿ ಮಕ್ಕಳೇ ಮೊದಲಿಗರು.

ಹಾಗಾದರೆ ಯಾವ ತಾಣ ಸುರಕ್ಷಿತವಾದುದು ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ಕೇಳಿ ಕರ್ನಾಟಕ ರಾಜ್ಯದ ಸಮೀಪದ ರಾಜ್ಯ ಗೋವಾ ಬೀಚ್. ಬೀಚ್‍ಗಳೆಂದರೆ ಮೊದಲು ನೆನಪಿಗೆ ಬರುವುದೇ ಗೋವಾ ಬೀಚ್‍ಗಳು. ಗೋವಾ ಎಂದರೆ ಬೀಚ್, ಬೀಚ್ ಎಂದರೆ ಗೋವಾ ಎನ್ನುವಷ್ಟರ ಮಟ್ಟಿಗೆ ಪ್ರಖ್ಯಾತತೆ ಪಡೆದಿದೆ. ಕೇವಲ ಭಾರತೀಯರೇ ಅಲ್ಲದೇ ವಿದೇಶಿಯರಿಗೂ ಕೂಡ ಫೆವರೆಟ್ ಸ್ಫಟ್ ಎಂದರೆ ಗೋವಾ....

ಇಲ್ಲಿ ಬೀಚ್‍ನ ಅದ್ಭುತವಾದ ಸೌಂದರ್ಯವನ್ನು ಕಾಣುತ್ತಾ ವಾಟರ್ ಗೇಮ್ ಆಡಲು ಉತ್ತಮವಾದ ತಾಣವಾಗಿದೆ. ಇಲ್ಲಿ ಪ್ಯಾರಾ-ಸೇಲಿಂಗ್, ಸೂರ್ಯಾಸ್ತದ ಸಮುದ್ರಯಾನ, ಸ್ನಾಕ್ರ್ಲಿಂಗ್ ಮತ್ತು ಡ್ರೈವಿಂಗ್ ಇನ್ನೂ ಹಲವಾರು ರೋಮಾಂಚನಕಾರಿ ನೀರಿನ ಕ್ರೀಡೆಗಳು ಈ ಬೀಚ್ ಒದಗಿಸುತ್ತದೆ.

ಗೋವಾದಲ್ಲಿ ನೀಬೋರ್ಡಿಂಗ್

ಗೋವಾದಲ್ಲಿ ನೀಬೋರ್ಡಿಂಗ್

ನೀರಿನ ಸ್ಕೀಯಿಂಗ್ ಮತ್ತು ವೀಕ್ಬೋಡ್ರ್ನ ಆಧುನಿಕವಾದ ಆಟಗಳು ಎಂದು ಪರಿಗಣಿಸಲಾಗಿದೆ. ಈ ಅದ್ಭುತವಾದ ನೀರಿನ ಚಟುವಟಿಕೆಯು ಯುವ ಜನರ ಇತ್ತೀಚಿನ ಜನಪ್ರಿಯವಾದ ಆಟವಾಗಿದೆ. ಇದು ಸಮುದ್ರ ತೀರದಲ್ಲಿರುವ ಮೃದು ನೀರಿನ ಸಾಹಸಗಳಲ್ಲಿ ಒಂದಾಗಿದೆ. ಇದೊಂದು ರೋಮಾಂಚಕಾರಿ ಆಟವಾಗಿದೆ. ಹಾಗಾಗಿ ಇದನ್ನು ಮಕ್ಕಳು ಕೂಡ ಆಡಲು ಇಷ್ಟ ಪಡುತ್ತಾರೆ.

ಗೋವಾದಲ್ಲಿ ನೀಬೋರ್ಡಿಂಗ್

ಗೋವಾದಲ್ಲಿ ನೀಬೋರ್ಡಿಂಗ್

ಈ ನೀಬೋರ್ಡಿಂಗ್ ಆಟವಾಡಲು ಗೋವಾದ ಅತ್ಯುತ್ತಮವಾದ ಬೀಚ್ ಯಾವುವು ಎಂದರೆ ಅದು ಕ್ಯಾಂಡೊಲಿಮ್ ಬೀಚ್, ಮೊಬೋರ್ ಬೀಚ್ ಮತ್ತು ರಾಜ್ಬಾಗಾ ಬೀಚ್. ಈ ಕ್ರೀಡೆಗೆ ಕೆಲವು ತರಬೇತಿ ಅಗತ್ಯವಾಗಿರುತ್ತದೆ. ಗೋವಾದಲ್ಲಿ ವರ್ಷದ ಯಾವ ಸಮಯದಲ್ಲಿಯಾದರು ಭೇಟಿ ನೀಡಬಹುದಾಗಿದೆ. ಆದರೆ ಅಕ್ಟೋಬರ್ ತಿಂಗಳಿನಿಂದ ಜೂನ್ ತಿಂಗಳವರೆಗೆ ಅತ್ಯುತ್ತಮವಾದ ಕಾಲವಾಗಿದೆ.

ಗೋವಾದಲ್ಲಿ ಕಯಾಕಿಂಗ್

ಗೋವಾದಲ್ಲಿ ಕಯಾಕಿಂಗ್

ರೋಮಾಂಚಕ ಹಾಗು ಹೆಚ್ಚು ಶಾಂತವಾದ ನೀರಿನ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ನೀವು ಬಯಸುವಿರಾ? ಹಾಗಾದರೆ ಕಯಾಕಿಂಗ್ ನಿಮಗೆ ಉತ್ತಮವಾದ ಅನುಭವವನ್ನು ಒದಗಿಸುತ್ತದೆ. ಇದೊಂದು ಯಾವುದೇ ಭಯವಿಲ್ಲದ, ಶಾಂತವಾದ ಮನರಂಜನ ಆಟವಾಗಿದೆ. ಬೀಚ್‍ನ ಸೌಂದರ್ಯವನ್ನು ಪರಿಶೋಧಿಸುತ್ತಾ ನಿಮ್ಮ ಕಯಾಕಿಂಗ್ ಅನ್ನು ಆನಂದಿಸಬಹುದಾಗಿದೆ.

ಗೋವಾದಲ್ಲಿ ಕಯಾಕಿಂಗ್

ಗೋವಾದಲ್ಲಿ ಕಯಾಕಿಂಗ್

ನೀವು ಈ ಪ್ಯಾಡಲ್ ಅನ್ನು ಬಳಸಿಕೊಂಡು ಮುಕ್ತವಾಗಿ ಚಲಿಸಬಹುದಾಗಿದೆ. ಗೋವಾದ ನೈಸರ್ಗಿಕ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ ಗೋವಾದಂತಹ ಸುಂದರವಾದ ತಾಣವನ್ನು ಸವಿಯಬಹುದಾಗಿದೆ. ಈ ಕಯಾಕಿಂಗ್‍ನ ಪ್ರಯೋಗ ಮಾಡಲು ಪಾಲೊಲಿಮ್ ಬೀಚ್, ಡೊನಾ ಪೌಲಾ ಜೆಟ್ಟಿ ಮತ್ತು ಹೊಲ್ಲಂಟ್ ಬೀಚ್ ಅತ್ಯುತ್ತಮವಾದುದು.

ಗೋವಾದಲ್ಲಿ ವೇಕ್ಬೋರ್ಡಿಂಗ್

ಗೋವಾದಲ್ಲಿ ವೇಕ್ಬೋರ್ಡಿಂಗ್

ಗೋವಾದಲ್ಲಿ ಹಲವು ಜಲ ಕ್ರೀಡೆಗಳಲ್ಲಿ ಅತ್ಯಂತ ಪ್ರಸಿದ್ಧವಾದ ಕ್ರೀಡೆಗಳೆಂದರೆ ಅದು ವೇಕ್ಬೋರ್ಡಿಂಗ್. ಇದು ವಾಟರ್ ಸ್ಕೀಯಿಂಗ್‍ನಂತೆ ಒಂದು ಕ್ರೀಡೆಯಾಗಿದೆ. ಇತರ ಜಲ ಕ್ರೀಡೆಗಳಿಗೆ ಹೋಲಿಸಿದರೆ ಇದು ಸುಲಭವಾದ ಹಾಗು ಸಮತೋಲನದ ಮೇಲೆ ಹೆಚ್ಚಿನ ಗಮನ ಬೇಕಾಗುತ್ತದೆ.

ಗೋವಾದಲ್ಲಿ ವೇಕ್ಬೋರ್ಡಿಂಗ್

ಗೋವಾದಲ್ಲಿ ವೇಕ್ಬೋರ್ಡಿಂಗ್

ಹೊಸ ನೀರಿನ ಕ್ರೀಡೆಗಳಲ್ಲಿ ಇದು ಒಂದಾಗಿದೆ. ಇದು ನೀರಿನ ಸಾಹಸ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ದೇಶದ ವಿವಿಧ ಭಾಗಗಳಿಂದ ಗೋವಾಕ್ಕೆ ಭೇಟಿ ನೀಡುವ ಪ್ರವಾಸಿಗರಿಂದ ಪರಿಚಿತವಾದ ಕ್ರೀಡೆಯಾಗಿದೆ. ವೇಕ್ಬೋರ್ಡಿಂಗ್ ಉತ್ತಮವಾದ ಬೀಚ್‍ಗಳೆಂದರೆ ಕ್ಯಾಂಡೋಲಿಮ್ ಬೀಚ್, ಮಾಬೋರ್ ಬೀಚ್ ಮತ್ತು ರಾಜ್ಬಾಗಾ ಬೀಚ್‍ಗಳಾಗಿವೆ.

ಗೋವಾದಲ್ಲಿ ವಿಂಡ್ಸರ್ಫಿಂಗ್

ಗೋವಾದಲ್ಲಿ ವಿಂಡ್ಸರ್ಫಿಂಗ್

ವಿಂಡ್ಸರ್ಫಿಂಗ್ ಭಾರತದಲ್ಲಿ ಅತ್ಯಂತ ಜನಪ್ರಿಯ ಮತ್ತು ವ್ಯಾಪಕವಾಗಿ ಪ್ರಸಿದ್ಧಿ ಪಡೆದಿರುವ ಜಲ ಕ್ರೀಡೆಯಲ್ಲಿ ಒಂದಾಗಿದೆ. ಗೋವಾಗೆ ಭೇಟಿ ನೀಡುವ ಹೆಚ್ಚಿನ ಪ್ರವಾಸಿಗರು ವಿವಿಧ ನೀರಿನ ಚಟುವಟಿಕೆಗಳನ್ನು ನಿರ್ವಹಿಸುತ್ತಾರೆ. ಇದು ವಿದೇಶಿ ಪ್ರಯಾಣಿಕರಲ್ಲಿ ಅತ್ಯಂತ ಜನಪ್ರಿಯವಾಗಿದೆ.

ಗೋವಾದಲ್ಲಿ ವಿಂಡ್ಸರ್ಫಿಂಗ್

ಗೋವಾದಲ್ಲಿ ವಿಂಡ್ಸರ್ಫಿಂಗ್

ವಿಂಡ್ಸರ್ಫಿಂಗ್ ಸುಮಾರು 2-4 ಮೀಟರ್ ಉದ್ದವಾಗಿರುತ್ತದೆ. ಈ ವಿಂಡ್ಸರ್ಫಿಂಗ್ ಅತ್ಯುತ್ತಮವಾದ ಬೀಚ್‍ಗಳೆಂದರೆ ಡೊನಾ ಪೌಲಾ ಬೀಚ್, ಬೊಗ್ಮಾಲೋ ಬೀಚ್, ವಾಗೋಟರ್ ಬೀಚ್, ಕ್ಯಾಲಂಗುಟ್, ಕೋಲ್ವಾ, ಪಲ್ಲೊಲೆಮ್, ಮಿರಾಮಾರ್ ಮತ್ತು ಬಾಗಾ ಬೀಚ್.

ಸ್ಕೂಬಾ ಡ್ರೈವಿಂಗ್

ಸ್ಕೂಬಾ ಡ್ರೈವಿಂಗ್

ನೀರಿನ ಒಳಭಾಗದಲ್ಲಿ ಸಾಹಸ ಕ್ರೀಡೆಯನ್ನು ಆನಂದಿಸುವವರಿಗೆ ಈ ಸ್ಕೂಬಾ ಡ್ರೈವಿಂಗ್ ಅತ್ಯಂತ ಉತ್ತಮವಾದ ಕ್ರೀಡೆಯಾಗಿದೆ. ಬೀಚ್‍ನಲ್ಲಿ ಹಲವಾರು ಅಂಶಗಳನ್ನು ಅನ್ವೇಷಿಸಬಹುದಾಗಿದೆ.

ಸ್ಕೂಬಾ ಡ್ರೈವಿಂಗ್

ಸ್ಕೂಬಾ ಡ್ರೈವಿಂಗ್

ಸ್ಕೂಬಾ ಡ್ರೈವಿಂಗ್ ಅತ್ಯುತ್ತಮವಾದ ಬೀಚ್‍ಗಳೆಂದರೆ ಗ್ರಾಂಡೆ ದ್ವೀಪಗಳು, ಸೇಂಟ್ ಜಾರ್ಜ್ ದ್ವೀಪ, ದೇವಘ್ ದ್ವೀಪ ಮತ್ತು ಪಾರಿವಾಳ ದ್ವೀಪವಾಗಿದೆ. ಅಕ್ಟೋಬರ್ ತಿಂಗಳಿನಿಂದ ಏಪ್ರಿಲ್ ಉತ್ತಮವಾದ ಕಾಲಾವಧಿಯಾಗಿದೆ.

ತಲುಪುವ ಬಗೆ?

ತಲುಪುವ ಬಗೆ?

ಗೋವಾ ಕರ್ನಾಟಕದಿಂದ ಹತ್ತಿರವಿರುವ ರಾಜ್ಯವಾದ್ದರಿಂದ ವಿಮಾನ, ರೈಲು ಮತ್ತು ಖಾಸಗಿ ಬಸ್ಸುಗಳ ಸೌಕರ್ಯವಿದೆ. ಹೀಗಾಗಿ ಸುಲಭವಾಗಿ ಸುಂದರವಾದ ಗೋವಾಗೆ ತಲುಪಬಹುದಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ