Search
  • Follow NativePlanet
Share
» »ತಮಿಳುನಾಡಿನಲ್ಲಿದೆ ರೊಮಾಂಚನಗೊಳಿಸುವ ಪ್ರವಾಸಿ ತಾಣಗಳು

ತಮಿಳುನಾಡಿನಲ್ಲಿದೆ ರೊಮಾಂಚನಗೊಳಿಸುವ ಪ್ರವಾಸಿ ತಾಣಗಳು

ತಮಿಳು ನಾಡು ರಾಜ್ಯ ಅತ್ಯಂತ ಸುಂದರವಾದ ತಾಣಗಳಲ್ಲಿ ಒಂದಾಗಿದೆ. ದೇವಾಲಯಗಳ ತವರೂರು ಎಂದು ಖ್ಯಾತಿ ಪಡೆದಿರುವ ತಮಿಳುನಾಡಿನಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಈ ತಾಣಗಳಿಗೆ ಭೇಟಿ ನೀಡಲು ದೇಶದ ಮೂಲೆ ಮೂಲೆಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ಈ

ತಮಿಳು ನಾಡು ರಾಜ್ಯ ಅತ್ಯಂತ ಸುಂದರವಾದ ತಾಣಗಳಲ್ಲಿ ಒಂದಾಗಿದೆ. ದೇವಾಲಯಗಳ ತವರೂರು ಎಂದು ಖ್ಯಾತಿ ಪಡೆದಿರುವ ತಮಿಳುನಾಡಿನಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಈ ತಾಣಗಳಿಗೆ ಭೇಟಿ ನೀಡಲು ದೇಶದ ಮೂಲೆ ಮೂಲೆಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

ತಮಿಳುನಾಡಿನಲ್ಲಿ ಚೇರಾ, ಜೋಳ ಮತ್ತು ಪಾಂಡ್ಯ ಎಂಬ ಹಲವಾರು ವಿವಿಧ ಪ್ರಾಚೀನ ಸಾಮ್ರಾಜ್ಯಗಳು ಆಡಳಿತ ನಡೆಸಿದೆ. ಹಾಗಾಗಿಯೇ ತಮಿಳು ನಾಡು ರಾಜ್ಯದ ಸಂಸ್ಕøತಿ ಹಾಗು ನೈಸರ್ಗಿಕ ಅಂಶಗಳೆರಡರಲ್ಲೂ ಶ್ರೀಮಂತವಾಗಿದೆ. ಈ ಲೇಖನದ ಮೂಲಕ ತಮಿಳು ನಾಡು ರಾಜ್ಯದಲ್ಲಿ ಭೇಟಿ ನೀಡಲೇಬೇಕಾದ 5 ಜನಪ್ರಿಯ ಪ್ರವಾಸಿ ತಾಣಗಳ ಬಗ್ಗೆ ತಿಳಿಯೋಣ.

ಮಹಾಬಲೀಪುರಂ

ಮಹಾಬಲೀಪುರಂ

ಮಾಮಲ್ಲಪುರಂ ಎಂದು ಕರೆಯಲ್ಪಡುವ ಮಹಾಬಲಿಪುರಂ ನಗರವು ಪ್ರಾಚೀನ ಮತ್ತು ಸಾಂಸ್ಕøತಿಕ ಪರಂಪರೆಯನ್ನು ಹೊಂದಿದೆ. ಮಹಾಬಲೀಪುರಂ ನಗರವು 7 ನೇ ಶತಮಾನದಲ್ಲಿ ಪಲ್ಲವರ ಆಳ್ವಿಕೆಯಲ್ಲಿತ್ತು. ಇಲ್ಲಿನ ಸ್ಮಾರಕಗಳು ಯುನೆಸ್ಕೂ ವಿಶ್ವಪರಂಪರೆಯ ತಾಣಗಳ ಪಟ್ಟಿಯಲ್ಲಿ ಒಂದಾಗಿದೆ.


PC:Kavita modi

ಮಹಾಬಲೀಪುರಂ

ಮಹಾಬಲೀಪುರಂ

ಇಲ್ಲಿನ ವಾಸ್ತು ಶಿಲ್ಪವು ಅದ್ಭುತವಾದ ದ್ರಾವಿಡ ಶೈಲಿಯದ್ದಾಗಿದೆ. ಮಳೆಗಾಲವನ್ನು ಹೊರತುಪಡಿಸಿ ವರ್ಷದಲ್ಲಿ ಹೆಚ್ಚಿನ ಸಮಯದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿನ ದೇವಾಲಯವು ಅತ್ಯಂತ ಸುಂದರವಾಗಿದೆ.


PC:Raghunath Mva

ಕನ್ಯಾಕುಮಾರಿ

ಕನ್ಯಾಕುಮಾರಿ

ಪುರಾತನ ಪಟ್ಟಣವಾದ ಕನ್ಯಾಕುಮಾರಿಯು ಚೋಳ, ಚೇರ ಮತ್ತು ಪಾಂಡ್ಯ ರಾಜವಂಶಗಳು ಇಲ್ಲಿ ಆಳ್ವಿಕೆ ಮಾಡಿದ್ದಾರೆ. ಇಲ್ಲಿ ಸುಂದರವಾದ ಬೀಚ್, ದೇವಾಲಯಗಳು, ಸ್ಮಾರಕಗಳು ಮತ್ತು ಸಾಂಸ್ಕøತಿಕ ಕೇಂದ್ರಗಳಿಗೆ ಕನ್ಯಾಕುಮಾರಿಯು ಪ್ರಸಿದ್ಧಿಯನ್ನು ಹೊಂದಿದೆ. ಈ ಪಟ್ಟಣವು ತನ್ನ ವಿಶಿಷ್ಟವಾದ ಸಂಸ್ಕøತಿ ಮತ್ತು ಆತಿಥ್ಯಗಳಿಂದ ಹೆಸರುವಾಸಿಯಾಗಿದೆ.


PC:Aleksandr Zykov

ಕನ್ಯಾಕುಮಾರಿ

ಕನ್ಯಾಕುಮಾರಿ

ಹಿಂದೂ ಮಹಾಸಾಗರ, ಅರೇಬಿಯನ್ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಮೂರು ಸಂಗಮದಲ್ಲಿ ಈ ಪಟ್ಟಣವು ನೆಲೆಸಿದೆ. ಅದ್ದರಿಂದಲೇ ಭಾರತದ ದಕ್ಷಿಣ ಭಾಗದಲ್ಲಿನ ಪ್ರಮುಖವಾದ ಯಾತ್ರಾ ಸ್ಥಳವಾಗಿ ಕನ್ಯಾಕುಮಾರಿಯನ್ನು ಪರಿಗಣಿಸಲಾಗಿದೆ.

PC:Aleksandr Zykov

ಮಧುರೈ

ಮಧುರೈ

ತಮಿಳುನಾಡಿನಲ್ಲಿ 3 ನೇ ಅತಿ ದೊಡ್ಡದಾದ ನಗರ ಎಂದರೆ ಅದು ಮಧುರೈ. ಆಶ್ಚರ್ಯ ಎಂದರೆ ಈ ಮಧುರೈ ನಗರವು ವಿಶ್ವದಲ್ಲಿಯೇ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದೆ. ಈ ನಗರವು ಹಲವಾರು ಭವ್ಯ ದೇವಾಲಯವನ್ನು ಹೊಂದಿದೆ. ಭೌಗೋಳಿಕವಾಗಿ ಮಧುರೈ ನಗರದ ವೈಗೈ ಎಂಬ ನದಿಯ ಸಮೀಪದಲ್ಲಿರುವ ಬಯಲು ಪ್ರದೇಶದಲ್ಲಿದೆ.


PC:எஸ்ஸார்

ಮಧುರೈ

ಮಧುರೈ

ಮಧುರೈಗೆ ಭೇಟಿ ನೀಡುವ ಹಲವಾರು ಪ್ರವಾಸಿಗರು ಈ ಪ್ರಾಚೀನವಾದ ನಗರದಲ್ಲಿ ನಿರ್ಮಿಸಲಾಗಿರುವ ದೇವಾಲಯವನ್ನು ಕಾಣಲು ತೆರಳುತ್ತಾರೆ. ಮೀನಾಕ್ಷಿ ಅಮ್ಮನ್ ದೇವಾಲಯವು ಇಲ್ಲಿ ಪ್ರಮುಖವಾದ ಆರ್ಕಷಣೆಯಾಗಿದೆ.

PC: Simply CVR

ಕೊಡೈಕೆನಾಲ್

ಕೊಡೈಕೆನಾಲ್

ಕೊಡೈಕೆನಾಲ್ ಗಿರಿಧಾಮಗಳ ರಾಜಕುಮಾರಿ ಎಂದು ಗುರುತಿಸಲಾಗಿದೆ. ಈ ಕೊಡೈಕೆನಾಲ್ ಸಮುದ್ರ ಮಟ್ಟದಿಂದ ಸುಮಾರು 2,331 ಮೀಟರ್ ಎತ್ತರದಲ್ಲಿರುವ ಒಂದು ಸಣ್ಣ ಗಿರಿಧಾಮವಾಗಿದೆ. ಇಲ್ಲಿ ಹೆಚ್ಚಾಗಿ ನವದಂಪತಿಗಳು ಭೇಟಿ ನೀಡುತ್ತಾರೆ. ಈ ಸ್ಥಳವು ದಟ್ಟವಾದ ಅರಣ್ಯಗಳಿಂದ ಅವೃತ್ತವಾಗಿದೆ.

PC:Jaseem Hamza

ಕೊಡೈಕೆನಾಲ್

ಕೊಡೈಕೆನಾಲ್

ಕೊಡೈಕೆನಾಲ್ ತನ್ನ ಸುಂದರವಾದ ಸೌಂದರ್ಯಕ್ಕೆ ಪ್ರಸಿದ್ಧವಾಗಿದೆ. ಇಲ್ಲಿ ಹಲವಾರು ನೈಸರ್ಗಿಕವಾದ ಆರ್ಕಷಣೆಗಳು ಇವೆ. ಅವುಗಳೆಂದರೆ ಸರೋವರಗಳು, ಉದ್ಯಾನವನಗಳು ಮತ್ತು ವಿವಿಧ ಜಲಪಾತಗಳು ಸಮೃದ್ಧ ಸಸ್ಯ ಮತ್ತು ಪ್ರಾಣಿಗಳನ್ನು ಕಾಣಬಹುದಾಗಿದೆ.


PC : Parthan

ಊಟಿ

ಊಟಿ

ತಮಿಳು ನಾಡಿನ ಮತ್ತೊಂದು ಆಕರ್ಷಣೆ ಎಂದರೆ ಅದು ಊಟಿ. ಇದು ಕೂಡ ನೀಲಗಿರಿ ಜಿಲ್ಲೆಯ ರಾಜಧಾನಿ. ವಿಶೇಷವೆನೆಂದರೆ ಭಾರತದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಗಿರಿಧಾಮಗಳಲ್ಲಿ ಊಟಿ ಒಂದಾಗಿದೆ. ಈ ಸ್ಥಳವು ಸಮುದ್ರ ಮಟ್ಟದಿಂದ ಸುಮಾರು 2,240 ಮೀಟರ್ ಎತ್ತರದಲ್ಲಿದೆ. ದಟ್ಟವಾದ ನೀಲಗಿರಿ ಕಾಡುಗಳಿಂದ ನೀಲಿ ಬಣ್ಣದ ಹೊಗೆ ಮಂಜುಗಳನ್ನು ಇಲ್ಲಿನ ಪ್ರವಾಸಿಗರು ಅಸ್ವಾಧಿಸಬಹುದಾಗಿದೆ.

PC: Pranav

ಊಟಿ

ಊಟಿ

ಇಲ್ಲಿ ಅಪರೂಪದ ಕುರುಂಜಿ ಹೂವನ್ನು ಕೂಡ ಕಾಣಬಹುದಾಗಿದೆ. ಈ ನಗರದ ಅತ್ಯಂತ ಪ್ರಮುಖವಾದ ಆರ್ಥಿಕತೆಯ ಮೂಲವೆಂದರೆ ಅದು ಪ್ರವಾಸೋದ್ಯಮವಾಗಿದೆ. ಬ್ರಿಟೀಷ್ ಸರ್ಕಾರದ ಹಲವಾರು ಅಧಿಕಾರಿಗಳು ಊಟಿಯನ್ನು "ಭಾರತದ ಸ್ವಿಟ್ಜರ್ ಲ್ಯಾಂಡ್" ಎಂದು ಬಣ್ಣಿಸಿದಾರೆ.


PC:Pranav

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X