» »ಬೆಂಗಳೂರಿನ 5 ಐಷಾರಾಮಿ ಮಲ್ಟಿಫ್ಲೆಕ್ಸ್

ಬೆಂಗಳೂರಿನ 5 ಐಷಾರಾಮಿ ಮಲ್ಟಿಫ್ಲೆಕ್ಸ್

Written By: Sowmyabhai

ಮಲ್ಟಿಫ್ಲೆಕ್ಸ್ ಒಂದು ಅದ್ಭುತ ಸಿನಿಮಾ ಹಾಲ್ ಇಲ್ಲಿನ ಸಿನಿಮಾ ವೀಕ್ಷಣೆಯು ಜೀವನದಲ್ಲಿ ಎಂದೂ ಮರೆಯಲಾಗದ ಸುಮಧುರ ಅನುಭವ ನೀಡುತ್ತದೆ. ಬೆಂಗಳೂರಿನ ಜನತೆಯು ದಿನನಿತ್ಯ ಬ್ಯುಸಿಯಾಗಿರುತ್ತಾರೆ ವಾರಾಂತ್ಯ ಬಂದರೆ ಒಂದು ಸುಂದರವಾದ ಸಿನಿಮಾ ನೋಡಿ ಮೈಂಡ್ ಫ್ರೆಶ್ ಮಾಡಿಕೊಳ್ಳಲು ಬಯಸುತ್ತಾರೆ. ಆದರೆ ಜನರ ಜಂಗುಳಿಯ ಮಧ್ಯೆ, ಕಿರುಚಾಟಗಳ ನಡುವೆ ಸಿನಿಮಾ ನೋಡಲು ಯಾರಿಗೆ ತಾನೆ ಇಷ್ಟವಾಗುತ್ತದೆ?. ಸಿನಿಮಾ ಎಂದರೆ 3 ತಾಸು ಬೇರೆಯೇ ಪ್ರಪಂಚಕ್ಕೆ ನಮ್ಮನ್ನು ಕೊಂಡುಯ್ಯುವ ಮನರಂಜನ ತಾಣ. ಅದ್ದರಿಂದ ನೀವು ನೋಡಲು ಹೋಗುವ ಸಿನಿಮಾ ಅತ್ಯಂತ ಕಡಿಮೆ ಜನರಿದ್ದು, ವ್ಯವಸ್ಥಿತ ಆಸನಗಳಿರಬೇಕು, ಸ್ವಚತೆಯಿಂದ ಕೂಡಿರಬೇಕು ಎಂಬುದು ನಿಮ್ಮ ಬಯಕೆಯಾಗಿದ್ದರೆ ಬೆಂಗಳೂರಿನ ಸುಸಜ್ಜಿತವಾದ ಪ್ರಸಿದ್ದ ಮಲ್ಟಿಫ್ಲೆಕ್ಸ್‍ಗಳ ಬಗ್ಗೆ ಪ್ರಸ್ತುತ ಲೇಖನದಲ್ಲಿ ತಿಳಿಯಿರಿ.

ಪಿ,ವಿ,ಆರ್ ಸಿನಿಮಾ

ಪಿ,ವಿ,ಆರ್ ಸಿನಿಮಾ

ಈ ಮಲ್ಟಿಫ್ಲೆಕ್ಸ್ 1997 ರಿಂದ ಮೊದಲು ದೆಹಲಿಯಲ್ಲಿ ಪ್ರಾರಂಭವಾಯಿತು. ಇದು ಒಂದು ಪ್ರಖ್ಯಾತವಾದ ಮಲ್ಟಿಫ್ಲೆಕ್ಸ್‍ಗಳಲ್ಲಿ ಮೊದಲ ಸ್ಥಾನ ಪಡೆದಿದೆ. ಈ ಪಿ,ವಿ,ಆರ್ ಸಿನಿಮಾ ಪ್ರಮುಖ 3 ಸ್ಥಳಗಳಲ್ಲಿ ಇದ್ದು, ಅದರಲ್ಲಿ ಬೆಂಗಳೂರು ಕೂಡ ಒಂದು. ಬೆಂಗಳೂರಿನ ರಾಜಾಜಿನಗರದ ಬಳಿಯ ಒರಿಯಾನ್ ಮಾಲ್‍ನಲ್ಲಿ ಪಿ,ವಿ,ಆರ್ ಕಾಣಬಹುದು.
PC:Ashwin Kumar

INOX ಲೀಸರ್ ಲೀ

INOX ಲೀಸರ್ ಲೀ

ಈನಾಕ್ಸ್ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಲ್ಟಿಫ್ಲೆಕ್ಸ್ ಆಗಿದೆ. ಈ ಈನಾಕ್ಸ್ ಲೀಸರ್ ಲೀ ಮಲ್ಟಿಫ್ಲೆಕ್ಸ್ ಬೆಂಗಳೂರಿನ ಗರುಡಮಾಲ್‍ನಲ್ಲಿ ಕಾನಬಹುದು. ಇಲ್ಲಿ 23 ಸ್ಕ್ರೀನ್ ಅನ್ನು ಹೊಂದಿದೆ. ಇಲ್ಲಿ ಹಿಂದಿ, ಇಂಗ್ಲೀಷ್ ಹಾಗೂ ಪ್ರಾಂತ್ಯೀಯ ಭಾಷೆಗಳ ಸಿನಿಮಾಗಳನ್ನು ವಿಕ್ಷೀಸಬಹುದಾಗಿದೆ. ಇದು ಅತ್ಯಂತ ಸ್ವಚ ಹಾಗೂ ಸುಸಜ್ಜಿತವಾದ ಮಲ್ಟಿಫ್ಲೆಕ್ಸ್ ಆಗಿದೆ.

PC:Tahir Hashmi

ಇನೋವೆಟಿವ್ ಮಲ್ಟಿಫ್ಲೆಕ್ಸ್

ಇನೋವೆಟಿವ್ ಮಲ್ಟಿಫ್ಲೆಕ್ಸ್

ಈ ಇನೋವೆಟಿವ್ ಮಲ್ಟಿಫ್ಲೆಕ್ಸ್ ಬೆಂಗಳೂರಿನ ಮಾರತಳ್ಳಿಯಲ್ಲಿದೆ. ಇಲ್ಲಿ ಹೈ ಕ್ವಾಲಿಟಿ ಸಿನಿಮಾ, ವ್ಯವಸ್ಥಿತವಾದ ಸೀಟ್‍ಗಳು ಹಾಗೂ ಆನ್‍ಲೈನ್ ಬುಕ್ಕಿಂಗ್ ಸೌಲಭ್ಯ ಕೂಡ ಇದೆ. ಇಲ್ಲಿಗೆ ಹಲವಾರು ವೀಕ್ಷಕರು ಸಿನಿಮಾ ನೋಡಿ ತೃಪ್ತಿಗೊಳ್ಳುತ್ತಾರೆ.

PC:Amol.Gaitonde

ಊರ್ವಶಿ ಸಿನಿಮಾ

ಊರ್ವಶಿ ಸಿನಿಮಾ

ಊರ್ವಶಿ ಸಿನಿಮಾ ಅತ್ಯಂತ ಸುಸಜ್ಜಿತವಾದ ಹಾಗೂ ಸೌಕರ್ಯಯುತವಾದ ಮಲ್ಟಿಫ್ಲೆಕ್ಸ್ ಆಗಿದೆ. ಇಲ್ಲಿ ನಿಮ್ಮ ಸಿನಿಮಾದ ನೋಡಿದ ಅನುಭವ ಅತ್ಯಂತ ಆನಂದದಾಯಕವಾಗಿರುತ್ತದೆ. ಇದು ಬೆಂಗಳೂರಿನ ಲಾಲ್ ಭಾಗ್ ರೋಡ್‍ನಲ್ಲಿದೆ. ಇಲ್ಲಿ 3ಡಿ ಟೆಕ್ನಾಲಜಿ ಬಳಸಲಾಗುತ್ತದೆ. ಉತ್ತಮವಾದ ಸೌಂಡ್ ಕ್ವಾಲಿಟಿ, ಬಿಗ್ ಸ್ಕ್ರಿನ್, ತಿನಿಸುಗಳು ಹಾಗೂ ಉತ್ತಮವಾದ ಸೀಟ್‍ಗಳನ್ನು ಈ ಮಲ್ಟಿಫ್ಲೆಕ್ಸ್‍ನಲ್ಲಿ ಕಾಣಬಹುದು.
PC:LAN

ರಾಕ್‍ಲೈನ್ ಸಿನಿಮಾ ಮಲ್ಟಿಫ್ಲೆಕ್ಸ್

ರಾಕ್‍ಲೈನ್ ಸಿನಿಮಾ ಮಲ್ಟಿಫ್ಲೆಕ್ಸ್

ಈ ರಾಕ್‍ಲೈನ್ ಸಿನಿಮಾ ಮಲ್ಟಿಫ್ಲೆಕ್ಸ್ ಬೆಂಗಳೂರಿನ ದಾಸರಹಳ್ಳಿಯ ಬಳಿ ಇದೆ. ಈ ಮಲ್ಟಿಫ್ಲೆಕ್ಸ್ 2011 ರಲ್ಲಿ ಪ್ರಾರಂಭವಾಯಿತು. ಮಲ್ಟಿಫ್ಲೆಕ್ಸ್‍ನಲ್ಲಿ 4 ಸ್ಕ್ರೀನ್‍ಗಳಿವೆ. ಇಲ್ಲಿಗೆ ಸಿನಿಮಾ ವಿಕ್ಷೀಸಲು ಬರುವವರಿಗೆ ರಾಕ್ ಲೈನ್ ಉತ್ತಮ ಅನುಭವನ್ನು ನೀಡುತ್ತದೆ. ವೀಕ್ಷಕರು 2ಡಿ, 3ಡಿ ಮತ್ತು 4ಡಿಗಳ ಸೌಲಭ್ಯವನ್ನು ಪಡೆಯಬಹುದಾಗಿದೆ.
PC:Ramesh NG

Please Wait while comments are loading...