Search
  • Follow NativePlanet
Share
» »ಹನಿಮೂನ್‍ಗೆ ಸೂಕ್ತವಾದ ಸ್ಥಳಗಳು ಯಾವುವು ಗೊತ್ತ?

ಹನಿಮೂನ್‍ಗೆ ಸೂಕ್ತವಾದ ಸ್ಥಳಗಳು ಯಾವುವು ಗೊತ್ತ?

By Sowmyabhai

ಹೊಸ ಜೀವನ ವಿವಾಹದಿಂದ ಪ್ರಾರಂಭವಾಗುತ್ತದೆ. ಗಂಡು-ಹೆಣ್ಣಿನ ಸಂಬಂಧಕ್ಕೆ ಪವಿತ್ರವಾದ ಬಂಧನವಾಗಿ ಮದುವೆ ಎಂಬ ಪದವನ್ನು ಬಳಸಲಾಗುತ್ತದೆ. ಪ್ರಾರಂಭದ ಉತ್ಸಾಹದ ಒಂದು ಹೊಸ ಜೀವನವನ್ನು ನಿಮ್ಮ ಮಧುಚಂದ್ರದಿಂದಾಗಿ ಮತ್ತಷ್ಟು ಬಂಧನ ಗಟ್ಟಿಗೊಳಿಸುತ್ತದೆ. ಯಾವುದೇ ಜಂಜಾಟವಿಲ್ಲದೇ ಕೆಲವು ಕಾಲ ತಮ್ಮ ಸಂಗಾತಿಯೊಂದಿಗೆ ಕಾಲ ಕಳೆಯಬೇಕು ಎಂದು ಪ್ರತಿಯೊಬ್ಬರ ಸಹಜವಾದ ಬಯಕೆಯೇ ಆದರೆ ಕೆಲವೊಮ್ಮೆ ಅದು ಸಾಧ್ಯವಾಗುವುದಿಲ್ಲ. ಹೀಗಾಗಿ ಲೇಖನದಲ್ಲಿ ಮಧುಚಂದ್ರಕ್ಕೆ ರೋಮ್ಯಾಂಟಿಕ್ ಪ್ರದೇಶಗಳ ಬಗ್ಗೆ ಲೇಖನದ ಮೂಲಕ ತಿಳಿದುಕೊಂಡು ಒಮ್ಮೆ ಭೇಟಿ ನೀಡಿ ಬನ್ನಿ.

ನಿಮ್ಮ ಪ್ರಣಯ ವಿರಾಮಕ್ಕಾಗಿ ಭಾರತದಲ್ಲಿನ ಅತ್ಯುತ್ತಮವಾದ 5 ಮಧುಚಂದ್ರದ ಸ್ಥಳಗಳನ್ನು ಆಯ್ಕೆ ಮಾಡಿ ತಿಳಿಸುತ್ತಿದ್ದೇನೆ. ಈ ಸುಂದರವಾದ ಸ್ಥಳಗಳಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಕಾಲ ಕಳೆದರೆ ಜೀವನದಲ್ಲಿ ಎಂದಿಗೂ ಮರೆಯಲಾಗದಂತಹ ಅನುಭೂತಿಯನ್ನು ನೀವು ಹೊಂದಬಹುದು.

ಹಾಗಾದರೆ ಬನ್ನಿ ಆ ಸ್ಥಳಗಳು ಯಾವುವು? ಎಲ್ಲಿವೆ? ಎಂಬುದನ್ನು ಸಂಕ್ಷೀಪ್ತವಾಗಿ ತಿಳಿಯೋಣ.

1.ಯುವಕರಿಗೆ ಇಷ್ಟವಾದ ಪ್ರದೇಶ...

1.ಯುವಕರಿಗೆ ಇಷ್ಟವಾದ ಪ್ರದೇಶ...

PC:: urbz

ಕೇವಲ ಯುವಕರಿಗೆ ಅಲ್ಲದೇ ದಂಪತಿಗಳು ತಮ್ಮ ಸಂಗಾತಿಯೊಂದಿಗೆ ಏಕಾಂತವಾಗಿ ಕಾಲಕಳೆಯಲು ಸೂಕ್ತವಾದ ಸ್ಥಳವೆಂದರೆ ಗೋವಾ. ಗೋವಾ ಪ್ರಪಂಚ ಪ್ರವಾಸಿ ಪ್ರದೇಶದಲ್ಲಿ ಟಾಪ್ ಮೂವತ್ತರಲ್ಲಿ ಒಂದಾಗಿದೆ. ಅದೇ ವಿಧವಾಗಿ ಮದ್ಯವನ್ನು ಸೇವಿಸುವುದು, ಡ್ರಗ್ಸ್ ಸಂಸ್ಕøತಿ ಕೂಡ ಹೆಚ್ಚು. ಗೋವಾ ದಂಪತಿಗಳಿಗೆ ಭಾರತದ ಅತ್ಯಂತ ಜನಪ್ರಿಯವಾದ ಮಧುಚಂದ್ರದ ತಾಣವಾಗಿದೆ. ಇಲ್ಲಿ ಅನೇಕ ಬೀಚ್‍ಗಳು, ಪ್ರವಾಸಿ ತಾಣಗಳು, ನೈಟ್ ಪಾರ್ಟಿಗಳು, ರೆಸ್ಟೋರೆಂಟ್‍ಗಳು, ಶಾಂಪಿಂಗ್ ಸೆಂಟರ್‍ಗಳು ಒಂದೇ, ಎರಡೇ ಅನೇಕ ಪ್ರದೇಶಗಳಿಗೆ ಸಂಗಾತಿಯೊಂದಿಗೆ ಕಾಲ ಕಳೆಯಬಹುದು.

ನೀವು ಗೋವಾಗೆ ತೆರಳಿದಾಗ ಮಾಡಬೇಕಾದ ಕೆಲಸಗಳು

1.ನಿಮ್ಮ ಪ್ರೀತಿಪಾತ್ರರನ್ನು ಚಾಪೋರಾ ಕೋಟೆಯ ಸೂರ್ಯಾಸ್ತದ ಅದ್ಭುತವಾದ ನೋಟವನ್ನು ತೋರಿಸಿ.
2.ಕೆಲವು ಬೀಚ್‍ಗೆ ತೆರಳಿ, ಬಿಳಿ ಮರಳಿನ ಮೇಲೆ ನಿಮ್ಮ ಸಂಗಾತಿಯ ಕೈಯನ್ನು ಹಿಡಿದುಕೊಂಡು ವಾಕಿಂಗ್ ತೆರಳಿ.
3.ರಾತ್ರಿಯ ಸಮಯದಲ್ಲಿ ಲವ್ ಪ್ಯಾಶನ್, ಮಾಂಬೊಸ್ ಅಥವಾ ಟಿಟೋಸ್, ಗೋವಾದಲ್ಲಿನ
ಅತ್ಯುತ್ತಮವಾದ ಕ್ಲಬ್‍ಗಳಿಗೆ ತೆರಳಿ ನೃತ್ಯ ಮಾಡಿ ಆನಂದಿಸಿ.

2.ಅಂಡಮಾನ್

2.ಅಂಡಮಾನ್

PC: Bob Peterson

ಅಂಡಮಾನ್ ಕೂಡ ದಂಪತಿಗಳ ಮಧುಚಂದ್ರಕ್ಕೆ ಸೂಕ್ತವಾದ ಸ್ಥಳ ಎಂದೇ ಹೇಳಬಹುದು. ಇಲ್ಲಿನ ಸೊಬಗಿಗೆ ಯಾರೇ ಆಗಲಿ ಮರಳು ಆಗಲೇಬೇಕು. ಇಲ್ಲಿ ಸುಂದರವಾದ ಬೀಚ್‍ಗಳನ್ನು ಕೂಡ ಕಾಣಬಹುದಾಗಿದೆ. ಮುಖ್ಯವಾಗಿ ವಾಟರ್ ಗೇಮ್ಸ್‍ನಂತಹ ಚಟುವಟಿಕೆಯನ್ನು ಇಲ್ಲಿ ಆನಂದಿಸಬಹುದಾಗಿದೆ. ಜಲಕ್ರೀಡೆಗೆ ಎಂದೇ ಅನೇಕ ಮಂದಿ ಪ್ರವಾಸಿಗರು ಅಂಡಮಾನ್‍ಗೆ ಭೇಟಿ ನೀಡುವುದುಂಟು. ಇದೊಂದು ಅದ್ಭುತವಾದ ಸ್ಥಳವಾಗಿದ್ದು, ಕೇವಲ ದೇಶದ ಮೂಲೆ-ಮೂಲೆಯಿಂದಲೇ ಅಲ್ಲದೇ ವಿದೇಶಿಯರು ಕೂಡ ಇಷ್ಟ ಪಡುವ ಸುಂದರವಾದ ಸ್ಥಳಗಳಲ್ಲಿ ಅಂಡಮಾನ್ ಕೂಡ ಒಂದು. ನವದಂಪತಿಗಳಿಗೆ ಎಂದೂ ಮರೆಯಲಾಗದ ಅನುಭೂತಿಯನ್ನು ಉಂಟು ಮಾಡುತ್ತದೆ.

ಮಾಡಬೇಕಾಗಿರುವ ರೋಮ್ಯಾಂಟಿಕ್ಸ್ ಥಿಂಗ್ಸ್

1.ತಾರೆಗಳ ಅಡಿಯಲ್ಲಿ ಕಡಲತೀರದ ಒಂದು ಮೇಣದಬತ್ತಿಯ ಊಟ.
2.ಅಂಡಮಾನ್‍ನ ಕಡಲತೀರದಲ್ಲಿ ವಾಟರ್ ಗೇಮ್ಸ್‍ಗಳು.
3.ಅದ್ಭುತವಾದ ಸೂರ್ಯಾಸ್ತಗಳನ್ನು ಕಳೆಯುವುದು. ಅದರಲ್ಲೂ ಸನ್ಸೆಟ್ ಪಾಯಿಂಟ್‍ನಲ್ಲಿರುವ
ಕಡಲತೀರದ ಪಶ್ಚಿಮ ಭಾಗದಲ್ಲಿದೆ.

3.ಮುನ್ನಾರ್

3.ಮುನ್ನಾರ್

PC: NATIVE PLANET

ಪರ್ವತಗಳು ಮತ್ತು ಸರೋವರಗಳ, ಕಾಫಿ ತೋಟಗಳು ಮತ್ತು ಹುಲ್ಲಿನ ಹಾಸಿಗೆಗಳು ದಂಪತಿಗಳಿಗೆ ಆಹ್ಲಾದಕರವಾಗಿರುತ್ತದೆ. ಸ್ಪಾ ಹಾಗು ಮಸಾಲೆಯುಕ್ತ ಪರ್ದಾಥಗಳನ್ನು ಇಲ್ಲಿ ಸವಿಯಬಹುದು. ಸಮೃದ್ಧ ಹಸಿರು ಚಹಾ ತೋಟಗಳ ನಡುವೆ ತಮ್ಮ ಸಂಗಾತಿಯೊಂದಿಗೆ ಸಂತೋಷದಿಂದ ಕಾಲ ಕಳೆಯಬಹುದು. ಕೇರಳದ ಮೋಡಿ ನೀವು ಎಂದಿಗೂ ಮರೆಯಲಾಗದಂತಹ ಅನುಭೂತಿಯನ್ನು ಉಂಟು ಮಾಡುತ್ತದೆ. ನೀವು ಇಲ್ಲಿ ಸಾಕಷ್ಟು ಹಿನ್ನೀರು ಮತ್ತು ಕೇರಳದ ಮನೋಹರವಾದ ದೃಶ್ಯವನ್ನು ಕಣ್ಣು ತುಂಬಿಕೊಳ್ಳಬಹುದು.

ಮಾಡಬೇಕಾಗಿರುವ ರೋಮ್ಯಾಂಟಿಕ್ಸ್ ಥಿಂಗ್ಸ್

1.ಐಷಾರಾಮಿ ಸ್ಪಾ ಸೆಷನ್‍ನಲ್ಲಿ ಪಾಲ್ಗೊಳ್ಳಿ.
2.ಇಲ್ಲಿ ಅನೇಕ ರೋಮ್ಯಾಂಟಿಕ್ ಸ್ಥಳಗಳಿದ್ದು, ಅಲ್ಲಿ ಕೂಡ ಒಮ್ಮೆ ಭೇಟಿ ನೀಡಿ ಬನ್ನಿ.
3.ಇಲ್ಲಿ ನಿಮ್ಮ ಸಂಗಾತಿಯೊಂದಿಗೆ ಬೋಟ್ ಸವಾರಿ ಕೂಡ ಮಾಡಬಹುದು.
4.ಒಂದು ಕಾರು ಅಥವಾ ಬೈಕ್ ಬಾಡಿಗೆಗೆ ತೆಗೆದುಕೊಂಡು ವಯನಾಡ್ ಪರ್ವತಗಳಿಗೆ ತೆರಳಿ.

4.ಕಾಶ್ಮೀರ್

4.ಕಾಶ್ಮೀರ್

PC:Wikipedia

ಕಾಶ್ಮೀರ ಒಂದು ಅತ್ಯದ್ಭುತವಾದ ತಾಣ. ಮಧುಚಂದ್ರಕ್ಕೆ ಇದೊಂದು ಸೂಕ್ತವಾದ ಸ್ಥಳ ಎಂದೇ ಹೇಳಬಹುದು. ಇಲ್ಲಿ ಬಿಳಿ ಹಿಮ ಹಾಗು ಪೂರಕವಾದ ಶೀತ ಹವಾಮಾನವು ನೀವು ಯಾವುದೇ ಸಮಯದಲ್ಲಿಯೂ ನಿಮ್ಮ ಸಂಗಾತಿಯೊಂದಿಗೆ ಮಧುರವಾದ ಅನುಭೂತಿಯನ್ನು ಹೊಂದಬಹುದು. ಕಾಶ್ಮೀರದ ವೀಕ್ಷಣೆ ಪ್ರತಿಯೊಬ್ಬರಿಗೂ ಕನಸ್ಸು ಎಂದೇ ಹೇಳಬಹುದು. ಇಲ್ಲಿನ ಸ್ಥಳೀಯ ಪರಿಮಳವನ್ನು, ತಿನಿಸುಗಳು, ಹಿಮಪದರಗಳ ಬೆಚ್ಚಗಿನ ಪರ್ವತಗಳನ್ನು, ಕಾಡು ಹೂವುಗಳ ಸಾಲುಗಳನ್ನು ಮತ್ತು ಅದ್ಭುತವಾದ ದಾಲ್ ಸರೋವರವನ್ನು ನಿಮ್ಮ ಪ್ರೀತಿಯ ಸಂಗಾತಿಯೊಂದಿಗೆ ಸಮಯವನ್ನು ಕಳೆಯಿರಿ.

ರೋಮ್ಯಾಂಟಿಕ್ಸ್ ಥಿಂಗ್ಸ್

1.ಗೊಂಡೊಲಾ ಸವಾರಿ ಒಟ್ಟಿಗೆ ತೆಗೆದುಕೊಳ್ಳಿ. 14,000 ಅಡಿಗಳಿಂದ ಗುಲ್ಮಾರ್ಗ್ ನೋಡಿದಾಗ ಅತಿವಾಸ್ತವಿಕ ಅನುಭವ.
2.ಗುಲ್ಮಾರ್ಗ್‍ನ ಸ್ಟ್ರಾಬೇರಿ ಕಣಿವೆಯಲ್ಲಿ ನಡೆಯಿರಿ.
3.ಶ್ರೀನಗರದಲ್ಲಿ, ದಾಲ್ ಸರೋವರದಿಂದ ನೌಕಾಯಾನ ನಡೆಸಿ.

5.ರಾಜಸ್ಥಾನ (ಉದಯ್‍ಪುರ)

5.ರಾಜಸ್ಥಾನ (ಉದಯ್‍ಪುರ)

PC:Avgr8

ಬಾಲಿವುಡ್‍ನಂತೆ ಉದಯಪುರವು ಅದ್ಭುತವಾದುದು. ಸಾಂಪ್ರದಾಯಿಕ ಅರಮನೆಗಳು, ವಸ್ತು ಸಂಗ್ರಹಾಲಯಗಳು ಮತ್ತು ಹೊಳೆಯುವ ಸರೋವರಗಳು ಉದಯಪುರ್‍ನ ಸೊಬಗು ಭಾರತದ ಅತ್ಯಂತ ರೋಮ್ಯಾಂಟಿಕ್ ಸ್ಥಳಗಳಲ್ಲಿ ಒಂದಾಗಿದೆ. ಉದಯ್‍ಪುರಗಳ ಬೀದಿಗಳ ಮೂಲಕ ಬಣ್ಣಗಳನ್ನು ನೆನೆಸುವ ಮತ್ತು ಸಂಸ್ಕøತಿಯ ವೈವಿದ್ಯತೆಯ ಮೂಲಕ ನಿಮ್ಮ ಪ್ರೀತಿಪಾತ್ರರ ಜೊತೆ ಕಾಲ ಕಳೆಯಿರಿ. ಇಲ್ಲಿ ಮುಖ್ಯವಾಗಿ ದೋಣಿ ಸವಾರಿಯನ್ನು ಆನಂದಿಸಿ. ಮಧುಚಂದ್ರಕ್ಕೆ ಸೂಕ್ತವಾದ ಸ್ಥಳ ಎಂದೇ ಹೇಳಬಹುದು.

ರೋಮ್ಯಾಂಟಿಕ್ಸ್ ಥಿಂಗ್ಸ್

1.ಇಲ್ಲಿನ ಸುಂದರವಾದ ಅರಮನೆಗಳಲ್ಲೊಂದನ್ನು ಆರಿಸಿ ಮತ್ತು ಕೆಲವು ಮದುವೆಯ ಛಾಯಾಗ್ರಹಣದಲ್ಲಿ ಪಾಲ್ಗೊಳ್ಳಿ.
2.ಲೇಕ್ ಪಿಚೋಲಾದಲ್ಲಿ ಸೂರ್ಯಾಸ್ತದ ಬೋಟ್ ಕ್ರಾಸ್ ಅನ್ನು ತೆಗೆದುಕೊಳ್ಳಿ.
3.ನಗರದ ಅಸಂಖ್ಯಾತ ಛಾವಣಿಯ ರೆಸ್ಟೋರೆಂಟ್‍ಗಳಿಂದ ಉದಯಪುರದ ಪ್ರಕಾಶಿತವಾದ ಸ್ಕೈಲೈನ್ ಅನ್ನು ಆನಂದಿಸಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X