Search
  • Follow NativePlanet
Share
» »ಬೆಂಗಳೂರಿನಲ್ಲಿ ಟಾಪ್ 5 ಕ್ರಿಸ್‍ಮಸ್ ಈವೆಂಟ್‍ಗಳು ಎಲ್ಲೆಲ್ಲಿ ನಡೆಯುತ್ತಿವೆ ಗೊತ್ತ?

ಬೆಂಗಳೂರಿನಲ್ಲಿ ಟಾಪ್ 5 ಕ್ರಿಸ್‍ಮಸ್ ಈವೆಂಟ್‍ಗಳು ಎಲ್ಲೆಲ್ಲಿ ನಡೆಯುತ್ತಿವೆ ಗೊತ್ತ?

ವರ್ಷಾಂತ್ಯದಲ್ಲಿ ಸ್ವಲ್ಪ ಮೋಜು-ಮಸ್ತಿ ಮಾಡುವುದು ಸಾಮಾನ್ಯ. ವರ್ಷಾಂತ್ಯವನ್ನು ಆನಂದವಾಗಿ ಕಳೆಯಬೇಕು ಎಂದು ನಿಮಗೆ ಅನ್ನಿಸುತ್ತಿದ್ದರೆ ಬೆಂಗಳೂರಿನಲ್ಲಿ ನಡೆಯುವ ಈವೆಂಟ್‍ಗಳಿಗೆ ಒಮ್ಮೆ ಭೇಟಿ ನೀಡಿ ಎಂಜಾಯ್ ಮಾಡಿ. ಬೆಂಗಳೂರಿನ ಈವೆಂಟ್ ಪಾರ್ಟಿಗೆ ಕೇವಲ ಬೆಂಗಳೂರಿನಿಂದಲೇ ಅಲ್ಲದೇ ವಿವಿಧ ರಾಜ್ಯಗಳಿಂದಲೂ ಕೂಡ ಭೇಟಿ ನೀಡುತ್ತಿರುತ್ತಾರೆ. ಹಾಗಾದರೆ ಬೆಂಗಳೂರಿನಲ್ಲಿ ಕ್ರಿಸ್ಮಮಸ್ ಹಾಗು ಹೊಸವರ್ಷಾಚರಣೆಗೆ ಎಂಜಾಯ್ ಮಾಡಲು ಟಾಪ್ 5 ಕ್ರಿಸ್‍ಮಸ್ ಈವೆಂಟ್‍ಗಳಿವೆ. ಅದರ ಬಗ್ಗೆ ಸಂಕ್ಷೀಪ್ತವಾಗಿ ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ.

ಬೆಂಗಳೂರಿನಲ್ಲಿ ಟಾಪ್ 5 ಕ್ರಿಸ್‍ಮಸ್ ಈವೆಂಟ್‍ಗಳು ಎಲ್ಲೆಲ್ಲಿ ನಡೆಯುತ್ತಿವೆ ಗೊತ್ತ?

ಬೆಂಗಳೂರಿನಲ್ಲಿ ಟಾಪ್ 5 ಕ್ರಿಸ್‍ಮಸ್ ಈವೆಂಟ್‍ಗಳು ಎಲ್ಲೆಲ್ಲಿ ನಡೆಯುತ್ತಿವೆ ಗೊತ್ತ?

ಶಮಿಯಾನಾ ಕಿರು ಚಲನಚಿತ್ರ ಸ್ಕ್ರೀನಿಂಗ್

ನೀವು ಸಾಕಷ್ಟು ಕಿರುಚಿತ್ರಗಳನ್ನು ಕಾಣುವ ಆಸೆಯಲ್ಲಿದ್ದರೆ ಒಮ್ಮೆ ಶಮಿಯಾನಾ ಕಿರು ಚಲನಚಿತ್ರ ಸ್ಕ್ರೀನಿಂಗ್‍ಕ್ಕೆ ಭೇಟಿ ನೀಡಿ ಬನ್ನಿ. ನಿಮ್ಮ ಕ್ರಿಸ್‍ಮಸ್ ಸಂಭ್ರಮವನ್ನು ಮತ್ತಷ್ಟು ಆನಂದದಾಯಕವಾಗಿರಲಿ. ಇಲ್ಲಿ ನಿಮಗಾಗಿ ಆರಿಸಿದ 5 ಅದ್ಭುತವಾದ ಕಿರುಚಿತ್ರಗಳನ್ನು ನೋಡಬಹುದು. ಡಿಸೆಂಬರ್ 25 ರಂದು ಸಂಜೆ 7:30 ಕ್ಕೆ ಈ ಪ್ರದರ್ಶನ ಪ್ರಾರಂಭವಾಗಲಿದೆ. ಈ ಈವೆಂಟ್ ನಡೆಯುವ ಸ್ಥಳ ಹಮ್ಮಿವ ಮರ, ನಂ 949, 12 ನೇ ಮುಖ್ಯ ರಸ್ತೆ, ದೂಪನಹಳ್ಳಿ, ಇಂದಿರಾ ನಗರ ಬೆಂಗಳೂರು. ಯಾವುದೇ ಪ್ರವೇಶ ಶುಲ್ಕವಿಲ್ಲ. ಉಚಿತ...ಉಚಿತ...ಉಚಿತ...

PC: Mike Prince

ಬೆಂಗಳೂರಿನಲ್ಲಿ ಟಾಪ್ 5 ಕ್ರಿಸ್‍ಮಸ್ ಈವೆಂಟ್‍ಗಳು ಎಲ್ಲೆಲ್ಲಿ ನಡೆಯುತ್ತಿವೆ ಗೊತ್ತ?

ಬೆಂಗಳೂರಿನಲ್ಲಿ ಟಾಪ್ 5 ಕ್ರಿಸ್‍ಮಸ್ ಈವೆಂಟ್‍ಗಳು ಎಲ್ಲೆಲ್ಲಿ ನಡೆಯುತ್ತಿವೆ ಗೊತ್ತ?

ಕೆಫೆ ಮ್ಯಾಕ್ಸ್ ಕ್ರಿಸ್‍ಮಸ್ ಪಾರ್ಟಿ

ಕ್ರಿಸ್‍ಮಸ್‍ಗೆ ಅತ್ಯುತ್ತಮವಾದ ಈವೆಂಟ್ ಎಂದರೆ ಅದು ಕೆಫೆ ಮ್ಯಾಕ್ಸ್ ಕ್ರಿಸ್‍ಮಸ್ ಪಾರ್ಟಿಯಾಗಿದೆ. ನೀವು ರೊಮಾಂಟಿಕ್ ವ್ಯಕ್ತಿಯಾಗಿದ್ದರೆ ಈ ಪಾರ್ಟಿಗೆ ನಿಮ್ಮ ಸಂಗಾತಿಯೊಂದಿಗೆ ತೆರಳಬಹುದು. ಮೇಣದ ಬತ್ತಿದ ಬೆಳಕಿನಲ್ಲಿ ಊಟವನ್ನು ಕೂಡ ಮಾಡಬಹುದು. ವಿಶೇಷವಾದ ಕ್ರಿಸ್‍ಮಸ್ ಆಚರಿಸಬೇಕು ಎಂದು ಬಯಸುವವರು ಈ ಪಾರ್ಟಿಗೆ ಭಾಗವಹಿಸಿ. ಈ ಈವೆಂಟ್ ಡಿಸೆಂಬರ್ 24 ರಂದು 1 ಗಂಟೆಗೆ ನಡೆಯಲಿದೆ. ಕೆಫೆ ಮ್ಯಾಕ್ಸ್, ಸಂಖ್ಯೆ 716 ಸಿ, ಸಿ.ಎಂ.ಹೆಚ್ ರಸ್ತೆ 3 ನೇ ಮಹಡಿ, ಮ್ಯಾಕ್ಸ್‍ಮುಲ್ಲರ್ ಭವನ, 1 ನೇ ಹಂತ ಇಂದಿರಾ ನಗರ ಬೆಂಗಳೂರು.

PC: Shreveport-Bossier Convention and Tourist Bureau

ಬೆಂಗಳೂರಿನಲ್ಲಿ ಟಾಪ್ 5 ಕ್ರಿಸ್‍ಮಸ್ ಈವೆಂಟ್‍ಗಳು ಎಲ್ಲೆಲ್ಲಿ ನಡೆಯುತ್ತಿವೆ ಗೊತ್ತ?

ಬೆಂಗಳೂರಿನಲ್ಲಿ ಟಾಪ್ 5 ಕ್ರಿಸ್‍ಮಸ್ ಈವೆಂಟ್‍ಗಳು ಎಲ್ಲೆಲ್ಲಿ ನಡೆಯುತ್ತಿವೆ ಗೊತ್ತ?

ಕ್ರಿಸ್‍ಮಸ್ ಈವ್ ಸ್ಪೇಷಲ್ ಪಾರ್ಟಿ

ಕ್ರಿಸ್‍ಮಸ್ ಅನ್ನು ಎಂಜಾಯ್ ಮಾಡಬೇಕು ಎಂದು ಬಯಸುವವರು ಈ ಕ್ರಿಸ್‍ಮಸ್ ಈವ್ ಸ್ಪೇಷಲ್ ಪಾರ್ಟಿಗೆ ತೆರಳಬಹುದು. ಅದ್ಭುತವಾದ ಹೊರಂಗಣ ಸೆಟ್ಟಿಂಗ್ ಮತ್ತು ಕೆಲವು ರುಚಿಕರವಾದ ಅಮೆರಿಕನ್ ಸ್ವಾದೀಷ್ಟವಾದ ಆಹಾರವನ್ನು ಕೂಡ ಇಲ್ಲಿ ಸವಿಯಬಹುದು. ಡಿಸೆಂಬರ್ 24 ರಂದು ರಾತ್ರಿ 8 ಗಂಟೆಗೆ ಈ ಪಾರ್ಟಿ ನಡೆಯಲಿದೆ. ಈ ಈವೆಂಟ್ ಹಾರ್ಡ್ ರಾಕ್ ಕೆಫೆ ನಂ 40, ಸೇಂಟ್ ಮಾಕ್ರ್ಸ್ ರಸ್ತೆ, ಆಪ್ ಎಲ್.ಐ.ಸಿ ಬಿಲ್ಡಿಂಗ್ ಬೆಂಗಳೂರು. ಪ್ರವೇಶ ಶುಲ್ಕ 1500 ರೂಪಾಯಿಯನ್ನು ಪಾವತಿಸಬೇಕಾಗುತ್ತದೆ.

PC: Alexas_Fotos

ಬೆಂಗಳೂರಿನಲ್ಲಿ ಟಾಪ್ 5 ಕ್ರಿಸ್‍ಮಸ್ ಈವೆಂಟ್‍ಗಳು ಎಲ್ಲೆಲ್ಲಿ ನಡೆಯುತ್ತಿವೆ ಗೊತ್ತ?

ಬೆಂಗಳೂರಿನಲ್ಲಿ ಟಾಪ್ 5 ಕ್ರಿಸ್‍ಮಸ್ ಈವೆಂಟ್‍ಗಳು ಎಲ್ಲೆಲ್ಲಿ ನಡೆಯುತ್ತಿವೆ ಗೊತ್ತ?

ಕ್ರಿಸ್‍ಮಸ್ ಈವ್ ಪಾರ್ಟಿ-ರೋಹಿತ್ ಬಾರ್ಕರ್

ಇಲ್ಲಿ ಲೈವ್ ಪ್ರದರ್ಶನಗಳು, ಕೇಕ್ ಕಟ್ ಮಾಡುತ್ತಾ ಕ್ರಿಸ್‍ಮಸ್ ಅದ್ಭುತವಾಗಿ ಆಚರಿಸಲಾಗುತ್ತದೆ. ಇಲ್ಲಿ ಅನೇಕ ಕಲಾವಿದರು ಕೂಡ ಭಾಗವಹಿಸುತ್ತಾರೆ. ಇಲ್ಲಿ ಉಚಿತವಾದ ವೈಫೈ, ನಿಮಗೆ ಇಷ್ಟವಾದ ಪಾನೀಯಗಳು ದೊರೆಯುತ್ತವೆ. ಈ ಈವೆಂಟ್ ಡಿಸೆಂಬರ್ 24 ರಂದು ರಾತ್ರಿ 8 ಗಂಟೆಗೆ ಪ್ರಾರಂಭವಾಗುತ್ತದೆ. ನೀಲಿ ಫ್ರಾಗ್, ನಂ 3 ಚರ್ಚ್ ಸೇಂಟ್, ಮ್ಯಾಟೊ ಕಾಫಿ ಮಳಿಗೆ, ಅಶೋಕ ನಗರ, ಬೆಂಗಳೂರು. ಯಾವುದೇ ಪ್ರವೇಶ ಶುಲ್ಕವಿಲ್ಲ.

PC:Natesh Ramasamy

ಬೆಂಗಳೂರಿನಲ್ಲಿ ಟಾಪ್ 5 ಕ್ರಿಸ್‍ಮಸ್ ಈವೆಂಟ್‍ಗಳು ಎಲ್ಲೆಲ್ಲಿ ನಡೆಯುತ್ತಿವೆ ಗೊತ್ತ?

ಬೆಂಗಳೂರಿನಲ್ಲಿ ಟಾಪ್ 5 ಕ್ರಿಸ್‍ಮಸ್ ಈವೆಂಟ್‍ಗಳು ಎಲ್ಲೆಲ್ಲಿ ನಡೆಯುತ್ತಿವೆ ಗೊತ್ತ?

ಬಿ ಫ್ಲಾಟ್‍ನಲ್ಲಿ ಕ್ರಿಸ್‍ಮಸ್ ಈವ್ ಪಾರ್ಟಿ

ನೀವು ಕ್ರಿಸ್‍ಮಸ್ ಸಂಭ್ರಮದ ದಿನದಂದು ಉಚಿತ ಚಲನಚಿತ್ರಗಳ ಟೆಕೆಟ್‍ಗಾಗಿ ಹುಡುಕಾಡುತ್ತಿದ್ದೀರಾ? ಹಾಗಾದರೆ ನಿಮಗೆ ಇಲ್ಲೊಂದು ಸದಾವಕಾಶ, ಇಲ್ಲಿ ನಿಮಗೆ ಉಚಿತ ಚಲನಚಿತ್ರದ ಟಿಕೆಟ್‍ಗಳನ್ನು ನೀಡುತ್ತಾರೆ. ಸಂಜೆಯ ಸಮಯದಲ್ಲಿ ಮನರಂಜನೆ, ಹಾಸ್ಯಗಳು, ಪ್ರದರ್ಶನಗಳನ್ನು ಕೂಡ ನೀವು ಆನಂದಿಸಬಹುದಾಗಿದೆ. ಇದು ಡಿಸೆಂಬರ್ 24 ರಂದು ರಾತ್ರಿ 8:30 ಕ್ಕೆ ಪ್ರಾರಂಭವಾಗಲಿದೆ. ಬಿ ಫ್ಲಾಟ್, 776 2 ನೇ ಮಹಡಿ, 100 ಫೀಟ್ ರೋಡ್, ಇಂದಿರಾ ನಗರ, ಕೋಟಾಕ್ ಬ್ಯಾಂಕ್, ಬೆಂಗಳೂರು.

PC:Mikhail Esteves

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more