Search
  • Follow NativePlanet
Share
» »ಉತ್ತರ ಕರ್ನಾಟಕದ ಅತ್ಯದ್ಭುತ 25 ಐತಿಹಾಸಿಕ ಸ್ಥಳಗಳು

ಉತ್ತರ ಕರ್ನಾಟಕದ ಅತ್ಯದ್ಭುತ 25 ಐತಿಹಾಸಿಕ ಸ್ಥಳಗಳು

By Vijay

ಬಯಲು ಸೀಮೆ, ಗಂಡು ಮೆಟ್ಟಿದ ನಾಡು ಎಂಬೆಲ್ಲ ಖ್ಯಾತಿಗಳಿಸಿದ ಉತ್ತರ ಕರ್ನಾಟಕ ಭಾಗವು ಕರ್ನಾಟಕದ ಒಂದು ವಿಶೇಷ ಪ್ರದೇಶವೆಂದೆ ಹೇಳಬಹುದು. ಏಕೆಂದರೆ ತನ್ನದೆ ಆದ ವೈವಿಧ್ಯಮಯ ಸಂಸ್ಕೃತಿ-ಸಂಪ್ರದಾಯಗಳನ್ನು ಹೊಂದಿರುವ ಈ ಭಾಗವು ಸಾಕಷ್ಟು ವಿಶಿಷ್ಟ ಪ್ರವಾಸಿ ಭಾಗವಾಗಿಯೂ ಜನಮನ್ನಣೆಗಳಿಸಿದೆ.

ಭಾಷಾ ಸೊಗಸು, ಆಚಾರ-ವಿಚಾರ ಪದ್ಧತಿಗಳಿಂದ ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಮಹತ್ತರವಾದ ಕೊಡುಗೆ ನೀಡಿದೆ ಉತ್ತರ ಕರ್ನಾಟಕ. ಕರ್ನಾಟಕದ ಉತ್ತರ ಭಾಗದಲ್ಲಿರುವ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ್, ಕೊಪ್ಪಳ, ಬಳ್ಳಾರಿ ಹಾಗೂ ಹಾವೇರಿ ಜಿಲ್ಲೆಗಳು ಒಟ್ಟಾಗಿ ಸೇರಿ ಉತ್ತರ ಕರ್ನಾಟಕವಾಗಿ ಗುರುತಿಸಲ್ಪಡುತ್ತವೆ.

ಸಾಮಾನ್ಯವಾಗಿ ಎಲ್ಲೆಡೆ ಇರುವಂತೆ ಉತ್ತರ ಕರ್ನಾಟಕದಲ್ಲೂ ಸಹ ಸಾಕಷ್ಟು ಪ್ರವಾಸಿ ಆಕರ್ಷಣೆಗಳಿವೆ. ಆದರೆ ಮುಖ್ಯವಾಗಿ ಪ್ರವಾಸೋದ್ಯಮದ ದೃಷ್ಟಿಯಿಂದ ಉತ್ತರ ಕರ್ನಾಟಕ ಭಾಗವು ಹೆಚ್ಚಾಗಿ ತನ್ನಲ್ಲಿರುವ ಐತಿಹಾಸಿಕ ಮಹತ್ವವುಳ್ಳ, ಶ್ರೀಮಂತ ಶಿಲ್ಪಕಲಾ ರಚನೆಗಳು, ಧಾರ್ಮಿಕ ಮಹತ್ವದ ದೇವಾಲಯಗಳಿಂದ ಹೆಚ್ಚು ಜನಪ್ರೀಯವಾಗಿದೆ.

ಕಾಲದ ವಿವಿಧ ಸಮಯಗಳಲ್ಲಿ ಕರ್ನಾಟಕದ ಭಾಗಗಳನ್ನು ಆಳಿದ್ದ ಚಾಲುಕ್ಯರ, ಕದಂಬರ, ಹೊಯ್ಸಳ ಮುಂತಾದವರ ಶಿಲ್ಪಕಲೆಯ ನೈಪುಣ್ಯತೆಯ ಉದಾಹರಣೆಗಳಾಗಿ ಇಂದು ಉತ್ತರ ಕರ್ನಾಟಕದ ಹಲವು ರಚನೆಗಳನ್ನು ಕಾಣಬಹುದಾಗಿದೆ. ನಿಮಗೇನಾದರೂ ಉತ್ತರ ಕರ್ನಾಟಕದ ಅತಿ ಪ್ರಮುಖ ಐತಿಹಾಸಿಕ ಸ್ಥಳಗಳ್ಯಾವುವು ಎಂಬುದರ ಕುರಿತು ತಿಳಿಯಬೇಕಿದ್ದರೆ ಈ ಲೇಖನವನ್ನೊಮ್ಮೆ ಓದಿ.

ಇಲ್ಲಿ ಆಯ್ದ, ಅತಿ ಪ್ರಮುಖ ಎನ್ನಬಹುದಾದ ಉತ್ತರ ಕರ್ನಾಟಕದ ಬರೋಬ್ಬರಿ 25 ಸ್ಥಳಗಳ ಕುರಿತು ತಿಳಿಸಲಾಗಿದೆ. ಇವುಗಳಲ್ಲಿ ಪ್ರತ್ಯೇಕವಾಗಿ ದೇವಾಲಯ ಹಾಗೂ ಜಿಲ್ಲಾಕೇಂದ್ರಗಳನ್ನೂ ಸಹ ನೀಡಲಾಗಿದೆ. ಹಾಗಾದರೆ ಬನ್ನಿ ಅವುಗಳ ವಿಶೇಷತೆಗಳ ಬಗ್ಗೆ ತಿಳಿಯೋಣ.

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಬಾದಾಮಿ : ಹಿಂದೆ ವಾತಾಪಿ ಎಂದು ಕರೆಯಲ್ಪಡುತ್ತಿದ್ದ ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿ ಒಂದು ಪ್ರಬುದ್ಧ ಐತಿಹಾಸಿಕ ಪ್ರವಾಸಿ ಆಕರ್ಷಣೆಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಜನಮನ್ನಣೆಗಳಿಸಿರುವ ಈ ಸ್ಥಳವು ತನ್ನಲ್ಲಿರುವ ಪುರಾತನ ಕಾಲದ ರಚನೆಗಳು ಹಾಗೂ ಪ್ರಖ್ಯಾತ ಬನಶಂಕರಿ ಅಮ್ಮನವರ ದೇವಾಲಯದಿಂದಾಗಿ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Sanyam Bahga

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಹಿಂದೆ ಚಾಲುಕ್ಯರಾಳಿದ ಈ ಬದಾಮಿಯಲ್ಲಿ ನೋಡಲು ಸುಂದರವಾದ ಭೂತನಾಥ ದೇವಾಲಯ ಸಂಕೀರ್ಣವಿದೆ ಹಾಗು ಇಲ್ಲಿನ ಗುಹಾ ದೇವಾಲಯಗಳು (ಮೇಣದ ಬಸ್ತಿ) ಅತ್ಯದ್ಭುತ ಗುಹಾ ರಚನೆಗಳಾಗಿದ್ದು, ಭಾರತೀಯ ಕಲ್ಲಿನಲ್ಲಿ ಕೆತ್ತನೆಯ ವಾಸ್ತುಶಿಲ್ಪ ಶೈಲಿಗೆ ಉತ್ತಮ ಉದಾಹರಣೆಯಾಗಿವೆ. ಉತ್ತರ ಕರ್ನಾಟಕದಲ್ಲಿ ನೋಡಲೇಬೇಕಾದ ಸ್ಥಳವಾಗಿ ಬಾದಾಮಿ ಹೆಸರುಗಳಿಸಿದೆ.

ಚಿತ್ರಕೃಪೆ: G41rn8

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಐಹೊಳೆ ಮತ್ತು ಪಟ್ಟದಕಲ್ಲು : ಬಾಗಲಕೋಟೆ ಜಿಲ್ಲೆಯಲ್ಲೆ ಇರುವ ಐಹೊಳೆ ಹಾಗೂ ಪಟ್ಟದಕಲ್ಲು ಅವಳಿ ಪ್ರವಾಸಿ ತಾಣಗಳಾಗಿದ್ದು ತಮ್ಮ ಸುಂದರ ಕೆತ್ತನೆಯ ಹಾಗೂ ಅದ್ಭುತ ಶಿಲ್ಪಕಲೆಯಿಂದ ಕೂಡಿರುವ ದೇವಾಲಯಗಳಿಗಾಗಿ ಬಲು ಪ್ರಸಿದ್ಧವಾಗಿವೆ. ಐಹೊಳೆಯ ಸ್ಥಳವೊಂದರಲ್ಲೆ ನೂರಕ್ಕೂ ಅಧಿಕ ಪುರಾತನ ದೇವಾಲಯಗಳನ್ನು ಕಾಣಬಹುದಾಗಿದೆ. ಅಲ್ಲದೆ ಈ ದೇವಾಲಯಗಳು ಆರರಿಂದ ಹನ್ನೆರಡನೇಯ ಶತಮಾನದ ಮಧ್ಯದಲ್ಲಿ ನಿರ್ಮಾಣವಾದವುಗಳಾಗಿವೆ. ಲಾಡ್ ಖಾನ್ ದೇವಾಲಯ.

ಚಿತ್ರಕೃಪೆ: Mukul Banerjee

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಐಹೊಳೆಯಿಂದ ಕೇವಲ ಹತ್ತು ಕಿ.ಮೀ ದೂರದಲ್ಲಿ ಮಲಪ್ರಭಾ ನದಿಯ ಎಡದಂಡೆಯ ಮೇಲೆ ನೆಲೆಸಿರುವ ಪಟ್ಟದಕಲ್ಲೂ ಸಹ ಆಕರ್ಷಕ ಶಿಲ್ಪಕೆತ್ತನೆಗಳಿಂದ ಕೂಡಿದ ದೇವಾಲಯ ಸಂಕೀರ್ಣಕ್ಕಾಗಿ ಹೆಸರುವಾಸಿಯಾಗಿದೆ. ಐಹೊಳೆಗೆ ಭೇಟಿ ನೀಡುವವರು ಪಟ್ಟದಕಲ್ಲಿಗೆ ಭೇಟಿ ನೀಡದೆ ಮರಳಲಾರರು.

ಚಿತ್ರಕೃಪೆ: T Kempanna

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಮಹಕೂಟ : ಬಾಗಲಕೋಟೆ ಜಿಲ್ಲೆಯಲ್ಲಿರುವ ಮಹಾಕೂಟ ಎಂಬ ಐತಿಹಾಸಿಕ ಪ್ರಸಿದ್ಧ ಪಟ್ಟಣವು ಬಾದಾಮಿಯ ಚಾಲೂಕ್ಯರ ಕಾಲದಲ್ಲಿ ನಿರ್ಮಾಣ ಮಾಡಲಾದ ಸುಮಾರು ಆರನೆ ಹಾಗು ಏಳನೆಯ ಶತಮಾನದ ಶೈವ ಸಮುದಾಯದ ದೇಗುಲಗಳಿಗೆ ಅತಿ ಪ್ರಸಿದ್ಧವಾಗಿದೆ. ಮಹಾಕೂಟವು ಬೆಂಗಳೂರಿನಿಂದ 460 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ಬಾದಾಮಿಗೆ ರಸ್ತೆ ಅಥವಾ ರೈಲುಗಳಿಂದ ತೆರಳಿ ಅಲ್ಲಿಂದ ದೊರಕುವ ಸ್ಥಳೀಯ ಟೆಂಪೊ, ಆಟೊ ಹಾಗು ಖಾಸಗಿ ಬಸ್ಸುಗಳ ಸಹಾಯದಿಂದ ಮಹಾಕೂಟವನ್ನು ಸುಲಭವಾಗಿ ತಲುಪಬಹುದು.

ಚಿತ್ರಕೃಪೆ: Dineshkannambadi

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಮಹಾಕೂಟ ದೇವಾಲಯ ಸಂಕೀರ್ಣದಲ್ಲಿ ಹಲವಾರು ದೇಗುಲಗಳನ್ನು ಕಾಣಬಹುದಾಗಿದ್ದು, ಅವುಗಳಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡ ಮಹಾಕೂಟೇಶ್ವರ ದೇವಸ್ಥಾನ ಹಾಗು ಮಾಲಿಕಾರ್ಜುನ ದೇವಾಲಯಗಳು ದೊಡ್ಡ ರಚನೆಗಳಾಗಿವೆ. ಇವುಗಳ ಆವರಣದಲ್ಲೆ ಶಿವಲಿಂಗವಿರುವ ಚಿಕ್ಕ ದೇಗುಲವೊಂದಿದ್ದು ಅದರ ಮುಂದೆ "ವಿಷ್ಣು ಪುಷ್ಕರಣಿ" ಎಂಬ ಕೊಳವನ್ನು ಕಾಣಬಹುದಾಗಿದೆ. ಈ ದೇಗುಲದ ಲಿಂಗವು ಪಂಚಮುಖ ಲಿಂಗವಾಗಿದೆ.

ಚಿತ್ರಕೃಪೆ: Dineshkannambadi

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಬೆಳಗಾವಿ : ಮಲೆನಾಡಿನ ಒಂದು ಭಾಗವೂ ಸಹ ಆಗಿರುವ ಬೆಳಗಾವಿ ಉತ್ತರ ಕರ್ನಾಟಕದ ದೊಡ್ಡ ನಗರ ಕೇಂದ್ರವಾಗಿದೆ. ನಗರದಲ್ಲಿರುವ ಕಮಲ ಬಸದಿ ಒಂದು ಪುರಾತನ ಜೈನ ರಚನೆಯಾಗಿದ್ದು ಚಾಲುಕ್ಯ ವಾಸ್ತು ಶೈಲಿಗೆ ಅದ್ಭುತ ಉದಾಹರಣೆಯಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ಹಳಸಿ ಹಾಗೂ ಹೂಲಿಗಳಂತಹ ಐತಿಹಾಸಿಕ ಸ್ಥಳಗಳಿವೆ.

ಚಿತ್ರಕೃಪೆ: Manjunath Doddamani Gajendragad

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಅಲ್ಲದೆ ಇದೆ ಜಿಲ್ಲೆಯಲ್ಲಿರುವ ಹಂಪಿಯು ವಿಶ್ವ ಪಾರಂಪರಿಕ ತಾಣವಾಗಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ ಅದ್ಭುತ ಐತಿಹಾಸಿಕ ಪ್ರವಾಸಿ ಸ್ಥಳವಾಗಿದೆ.

ಚಿತ್ರಕೃಪೆ: Bjørn Christian Tørrissen

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಬೀದರ್ : ಕರ್ನಾಟಕದ ಉತ್ತರದ ತುತ್ತ ತುದಿಯಲ್ಲಿರುವ ಬೀದರ್ ಜಿಲ್ಲೆಯೂ ಸಹ ಐತಿಹಾಸಿಕ ತಾಣವಾಗಿದೆ. ಬೀದರ್ ನಗರದಲ್ಲಿ ಬಹಮನಿ ಸುಲ್ತಾನರಿಂದ ಕಟ್ಟಲ್ಪಟ್ಟ ಕೋಟೆಯನ್ನು ಕಾಣಬಹುದಾಗಿದ್ದು ಈ ಕೋಟೆಯು ನಿಜಕ್ಕೂ ತನ್ನ ಅಂದ ಚೆಂಗಳಿಂದ ಪ್ರವಾಸಿಗರು ಮೂಕವಿಸ್ಮಿತರಾಗುವಂತೆ ಮಾಡುತ್ತದೆ.

ಚಿತ್ರಕೃಪೆ: Santosh3397

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಇಲ್ಲಿರುವ ಶ್ರೀಕ್ಷೇತ್ರ ಝರಣಿ ನರಸಿಂಹ ಗುಹಾ ದೇವಾಲಯ ಅತಿ ಪ್ರಮುಖ ದೇವಸ್ಥಾನವೆಂದೆ ಹೇಳಬಹುದು. ಇದೊಂದು ಸುರಂಗ ಮಾರ್ಗ ಹೊಂದಿರುವ ಕೊನೆಯಲ್ಲಿ ಗೋಡೆಯ ಮೇಲೆ ಸ್ವಯಂಭೂ ನರಸಿಂಹನಿರುವ ದೇವಾಲಯ ಎನ್ನಲಾಗುತ್ತದೆ. ಒಟ್ಟಾರೆ ಸುರಂಗ ಮಾರ್ಗವು 300 ಮೀ. ಗಳಷ್ಟು ಉದ್ದವಿದೆ. ಇನ್ನೊಂದು ವಿಶೇಷವೆಂದರೆ ಈ ಸುರಂಗ ಮಾರ್ಗದಲ್ಲಿ ನೂರಾರು ವರ್ಷಗಳಿಂದ ನೀರಿನ ಮೂಲವೊಂದು ಹರಿದಿರುವುದು.

ಚಿತ್ರಕೃಪೆ: epuja.co.in

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಕಲಬುರಗಿ ಕೋಟೆ : ಕಲಬುರಗಿ ನಗರದಲ್ಲಿರುವ ಈ ಕೋಟೆಯು ಐತಿಹಾಸಿಕ ಆಕರ್ಷಣೆಯಾಗಿದೆ. ಹಿಂದೆ ರಾಜಾ ಗುಲ್ಚಂದ್ ಎಂಬಾತನಿಂದ ಈ ಕೋಟೆಯ ನಿರ್ಮಾಣವಾಗಿತ್ತು. ನಂತರ ಬಹಮನಿ ಸುಲ್ತಾನರ ತೆಕ್ಕೆಯಲ್ಲಿ ಕಲಬುರಗಿ ಬಂದಾಗ ಬಹಮನಿ ಸುಲ್ತಾನನಾದ ಅಲ್ ಉದ್ ದಿನ್ ಬಹಮನಿ, ಕ್ರಿ.ಶ. 1347 ರಲ್ಲಿ ಇದನ್ನು ನವೀಕರಣಗೊಳಿಸಿದ. 1880 ರ ಸಮಯದಲ್ಲಿ.

ಚಿತ್ರಕೃಪೆ: Dayal, Deen

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ವಿಜಯಪುರ : ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿ ಹಾಗು ಬೆಂಗಳೂರಿನ ವಾಯವ್ಯ ದಿಕ್ಕಿನಲ್ಲಿ ನೆಲೆಸಿರುವ ಬಯಲು ಸೀಮೆ ಪ್ರದೇಶವಾದ ವಿಜಯಪುರ (ಹಿಂದೆ ಬಿಜಾಪುರ) ಜಿಲ್ಲೆಯು ಅದ್ಭುತ ಸ್ಮಾರಕಗಳುಳ್ಳ ಒಂದು ಐತಿಹಾಸಿಕ ಪ್ರಸಿದ್ಧ ಕ್ಷೇತ್ರವಾಗಿದೆ. ಇಲ್ಲಿ ನೋಡಬಹುದಾದ ಅತಿ ಪ್ರಮುಖ ಆಕರ್ಷಣೆ ಎಂದರೆ ಗೋಲ ಗುಮ್ಮಟ ಅಥವಾ ಗೋಳ ಗುಮ್ಮಟ.

ಚಿತ್ರಕೃಪೆ: Amith

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಬಸವನ ಬಾಗೇವಾಡಿ : ವಿಜಯಪುರ ಜಿಲ್ಲೆಯ ಈ ಬಾಗೇವಾಡಿ ಗ್ರಾಮ ವಿಜಯಪುರ ನಗರ ಕೇಂದ್ರದಿಂದ ಸುಮಾರು 45 ಕಿ.ಮೀ ಗಳಷ್ಟು ದೂರವಿದ್ದು ಲಿಂಗಾಯತ ಧರ್ಮದ ಸಂಸ್ಥಾಪಕರಾದ ಶ್ರೀ ಬಸವೇಶ್ವರರು ಹುಟ್ಟಿದ ಸ್ಥಳ ಇದೆಂದು ನಂಬಲಾಗಿದೆ. ಹಾಗಾಗಿ ಇದೊಂದು ಧಾರ್ಮಿಕ ಮಹತ್ವವನ್ನೂ ಪಡೆದಿರುವ ಸ್ಥಳವಾಗಿದೆ. ಇಲ್ಲಿ ಬಸವೇಶ್ವರರ ದೇವಾಲಯವನ್ನು ಕಾಣಬಹುದು.

ಚಿತ್ರಕೃಪೆ: Rajesh dangi

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ತ್ರಿಕೂಟೇಶ್ವರ ದೇವಾಲಯ : ಗದಗ್ ಜಿಲ್ಲೆಯ ಗದಗ್ ಪಟ್ಟಣದಲ್ಲಿರುವ ಈ ದೇವಾಲಯ ಸುಂದರ ಶಿಲ್ಪಕಲೆಯಿಂದ ಕೂಡಿದ್ದು ನೋಡಲು ಸಾಕಷ್ಟು ಆಕರ್ಷಕವಾಗಿದೆ. ಬಾದಾಮಿ ಚಾಲುಕ್ಯ ಶೈಲಿಯನ್ನು ಹೊಂದಿರುವ ಈ ದೇವಾಲಯದ ರಚನೆಯ ವಿನ್ಯಾಸ ಅಮರ ಶಿಲ್ಪಿ ಜಕಣಾಚಾರ್ಯರಿಂದ ಮಾಡಲಾಗಿದೆ ಎನ್ನಲಾಗುತ್ತದೆ ಹಾಗೂ ವಿಶೇಷವೆಂದರೆ ಒಂದೆ ಕಲ್ಲಿನಲ್ಲಿ ಮೂರು ಶಿವಲಿಂಗಗಳಿರುವುದನ್ನು ಇಲ್ಲಿ ಕಾಣಬಹುದು. ಹಾಗಾಗಿ ಇದಕ್ಕೆ ತ್ರಿಕೂಟೇಶ್ವರ ಎಂಬ ಹೆಸರು ಬಂದಿದೆ ಎನ್ನಲಾಗಿದೆ.

ಚಿತ್ರಕೃಪೆ: Manjunath nikt

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಮಹಾದೇವ ದೇವಾಲಯ, ಇಟಗಿ : ಕೊಪ್ಪಳ ಜಿಲ್ಲೆಯ ಯಲಬರ್ಗ ತಾಲೂಕಿನಲ್ಲಿರುವ ಇಟಗಿ ಗ್ರಾಮವು ಮಹಾದೇವ ದೇವಾಲಯದಿಂದಾಗಿ ಖ್ಯಾತಿಗಳಿಸಿದೆ. ಪಶ್ಚಿಮ ಚಾಲುಕ್ಯ ವಾಸ್ತುಶೈಲಿಯ ಈ ಅದ್ಬುತ ದೇವಸ್ಥಾನವು ನೋಡಲು ಬಲು ಆಕರ್ಷಕವಾಗಿದೆ.

ಚಿತ್ರಕೃಪೆ: Dineshkannambadi

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಲಕ್ಕುಂಡಿ : ಗದಗ್ ಜಿಲ್ಲೆಯಲ್ಲಿರುವ ಲಕ್ಕುಂಡಿ ಗ್ರಾಮದ ಕುರಿತು ಬಹುಶಃ ಅನೇಕರಿಗೆ ತಿಳಿದಿರಿಲಿಕ್ಕಿಲ್ಲ. ಈ ಗ್ರಾಮವು ಒಂದು ಐತಿಹಾಸಿಕ ವೈಶಿಷ್ಟ್ಯವುಳ್ಳ ಗ್ರಾಮವಾಗಿದ್ದು ಅದ್ಭುತ ಶಿಲ್ಪ ಕಲೆಗಳಿಂದ ಕೂಡಿದ ಅನೇಕ ಹಿಂದು ಹಾಗೂ ಜೈನ ದೇವಾಲಯಗಳ ತವರೂರಾಗಿದೆ. ಲಕ್ಕುಂಡಿಯಲ್ಲಿ ಪ್ರಮುಖವಾಗಿ ನೋಡಬಹುದಾದ ರಚನೆಗಳೆಂದರೆ ಕಾಶಿ ವಿಶ್ವೇಶ್ವರ ದೇವಾಲಯ, ಬ್ರಹ್ಮ ಜೀನಾಲಯ, ಮೆಟ್ಟಿಲು ಬಾವಿ ಹಾಗೂ ನನ್ನೇಶ್ವರ ದೇವಾಲಯ. ಅದರಲ್ಲೂ ವಿಶೇಷವಾಗಿ ಕಾಶಿ ವಿಶ್ವೇಶ್ವರ ದೇವಾಲಯವು ಚಾಲುಕ್ಯ ವಾಸ್ತುಶೈಲಿಯ ಅದ್ಭುತ ಉದಾಹರಣೆಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Dineshkannambadi

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಲಕ್ಷ್ಮೇಶ್ವರ : ಲಕ್ಷ್ಮೇಶ್ವರ ಎಂಬುದು ಗದಗ್ ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿರುವ ಒಂದು ಪುಟ್ಟ ಪಟ್ಟಣ. ಆದರೆ ಕನ್ನಡದ ಕಂಪನ್ನು ಎಳೆ ಎಳೆಯಾಗಿ ಪಸರಿಸಿರುವುದರಲ್ಲಿ ಈ ಸ್ಥಳದ ಕೊಡುಗೆ ಅಪಾರ. ಇಲ್ಲಿರುವ ಸೋಮೇಶ್ವರ ದೇವಸ್ಥಾನ ಸಂಕೀರ್ಣದಲ್ಲಿ 50 ಕ್ಕೂ ಅಧಿಕ ಸಂಖ್ಯೆಯಲ್ಲಿ ಕನ್ನಡದಲ್ಲಿ ಬರೆಯಲಾದ ಶಿಲಾ ಶಾಸನಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Manjunath Doddamani

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಉತ್ಸವ ರಾಕ್ ಗಾರ್ಡನ್ : ಉತ್ಸವ ರಾಕ್ ಗಾರ್ಡನ್ ಎಂಬ ಹೆಸರಿನ ಈ ತಾಣವು ಇರುವುದು ಉತ್ತರ ಕರ್ನಾಟಕದಲ್ಲಿ. ಹಾವೇರಿ ಜಿಲ್ಲೆಯ ಹಾವೇರಿ ಪಟ್ಟಣದಿಂದ ವಾಯವ್ಯ ದಿಕ್ಕಿಗೆ 30 ಕಿ.ಮೀ ಚಲಿಸಿದರೆ ಸಿಗುವ ಪಟ್ಟಣ ಶಿಗ್ಗಾಂವ್. ಇಲ್ಲಿಂದ ಮತ್ತೆ ವಾಯವ್ಯ ದಿಕ್ಕಿಗೆ ಸುಮಾರು 10 ಕಿ.ಮೀ ಕ್ರಮಿಸಿದರೆ ಗೊಟಗೋಡಿ ಎಂಬ ಹಳ್ಳಿಯ ಸರಹದ್ದಿನಲ್ಲಿರುವ ಉತ್ಸವ ರಾಕ್ ಗಾರ್ಡನ್ ಸಿಗುತ್ತದೆ.

ಚಿತ್ರಕೃಪೆ: http://www.utsavrock.com/

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಹಳ್ಳಿಯ ಸಮಗ್ರ ಜೀವನದ ಚಿತ್ರಣವನ್ನು ಮಾದರಿ ಪ್ರತಿಮೆಗಳ ಮೂಲಕ ಸುಂದರವಾಗಿ ಇಲ್ಲಿ ನಿರ್ಮಿಸಲಾಗಿದೆ. ಅಲ್ಲದೆ ಸುಂದರವಾದ ಉದ್ಯಾನವನವನ್ನೂ ಸಹ ಇಲ್ಲಿ ಕಾಣಬಹುದು. ಹುಬ್ಬಳ್ಳಿ ಹಾಗೂ ಹಾವೇರಿಗಳಿಂದ ಗೊಟಗೋಡಿಯವರೆಗೆ ಬಸ್ಸುಗಳು ಸುಲಭವಾಗಿ ದೊರೆಯುತ್ತವೆ.

ಚಿತ್ರಕೃಪೆ: http://www.utsavrock.com/

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಗಜೇಂದ್ರಗಡ್ : ಉತ್ತರ ಕರ್ನಾಟಕ ಭಾಗದ ಗದಗ್ ಜಿಲ್ಲೆಯಲ್ಲಿರುವ ಗಜೇಂದ್ರಗಡವು ಖಂಡಿತವಾಗಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಸುಂದರ ಪ್ರವಾಸಿ ಆಕರ್ಷಣೆಯಾಗಿದೆ. ಸಹಜ ಪ್ರಕೃತಿ ಸೌಂದರ್ಯದಿಂದ ಕೂಡಿದ ಈ ಸ್ಥಳವು ಪ್ರಧಾನವಾಗಿ ತನ್ನಲ್ಲಿರುವ ಕಾಲಕಾಲೇಶ್ವರ ದೇವಾಲಯದಿಂದಾಗಿ ಪ್ರಖ್ಯಾತವಾಗಿದೆ. ಇದನ್ನು ದಕ್ಷಿಣ ಕಾಶಿ ಎಂದೂ ಕೂಡ ಕರೆಯಲಾಗುತ್ತದೆ. ಇದೊಂದು ಬೃಹತ್ ಬೆಟ್ಟದ ಮೇಲೆ ಕೆತ್ತಲಾದ ಸುಂದರ ದೇವಾಲಯವಾಗಿದೆ.

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಸಿದ್ಧೇಶ್ವರ ದೇವಾಲಯ, ಹಾವೇರಿ : ಹಾವೇರಿ ಜಿಲ್ಲೆಯ ಹಾವೇರಿ ಪಟ್ಟಣದಲ್ಲಿರುವ ಸಿದ್ಧೇಶ್ವರ ದೇವಾಲಯವು ಒಂದು ಸುಂದರ ಅತಿಹಾಸಿಕ ಪ್ರವಾಸಿ ಆಕರ್ಷಣೆಯಾಗಿದೆ. ಹನ್ನೆರಡನೇಯ ಶತಮಾನದ ಪಶ್ಚಿಮ ಚಾಲುಕ್ಯ ವಾಸ್ತುಶೈಲಿಗೆ ಉದಾಹರಣೆಯಾಗಿರುವ ಈ ದೇವಾಲಯ ಶಿವನಿಗೆ ಮುಡಿಪಾಗಿದೆ.

ಚಿತ್ರಕೃಪೆ: Dineshkannambadi

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ದೊಡ್ಡಬಸಪ್ಪ ದೇವಾಲಯ, ಡಂಬಳ : ಇದೂ ಸಹ ಇರುವುದು ಗದಗ್ ಜಿಲ್ಲೆಯಲ್ಲಿ. ಗದಗಿನಿಂದ ಸುಮಾರು ಇಪ್ಪತ್ತು ಕಿ.ಮೀ ದೂರದಲ್ಲಿರುವ ಡಂಬಳ ಎಂಬ ಗ್ರಾಮದಲ್ಲಿ ಪಶ್ಚಿಮ ಚಾಲುಕ್ಯ ವಾಸ್ತುಶೈಲಿಯ ಈ ಸುಂದರ ದೇವಾಲಯವಿದೆ. ಇಲ್ಲಿನೆ ಕೆತ್ತನೆ ಕೆಲಸವು ಬಲು ಅದ್ಭುತವಾಗಿದೆ.

ಚಿತ್ರಕೃಪೆ: Dineshkannambadi

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಚಂದ್ರಮೌಳೀಶ್ವರ ದೇವಾಲಯ : ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಅದರಲ್ಲೂ ವಿಶೇಷವಾಗಿ ಹುಬ್ಬಳ್ಳಿಯಲ್ಲಿರುವ ಉಣಕಲ್ ಕೆರೆಯ ಬಳಿ ಶಿವನಿಗೆ ಮುಡಿಪಾದ ಈ ಪುರಾತನ ದೇವಾಲಯವಿದೆ. ಬಾದಾಮಿ ಚಾಲುಕ್ಯ ವಾಸ್ತುಶೈಲಿ ಹೊಂದಿರುವ ಈ ದೇವಾಲಯವು ಸುಮಾರು 900 ವರ್ಷಗಳಷ್ಟು ಪುರಾತನವಾದುದೆನ್ನಲಾಗಿದೆ.

ಚಿತ್ರಕೃಪೆ: Chetuln

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು:

ಅಮೃತೇಶ್ವರ ದೇವಾಲಯ : ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿರುವ ಅಣ್ಣಿಗೇರಿ ಎಂಬ ಗ್ರಾಮದಲ್ಲಿ ಈ ಅದ್ಭುತ ಕೆತ್ತನೆಯ ಪುರಾತನ ದೇವಾಲಯವಿದೆ. ಕಪ್ಪು ಶಿಲೆಯಿಂದ ನಿರ್ಮಿಸಲಾದ ಪಶ್ಚಿಮ ಚಾಲುಕ್ಯ ವಾಸ್ತು ಶೈಲಿ ಹೊಂದಿರುವ ಸುಂದರ ದೇವಾಲಯ ಇದಾಗಿದೆ. ಇನ್ನೊಂದು ಅಂಶವೆಂದರೆ ಅಣ್ಣಿಗೇರಿ ಆದಿಕವಿ ಪಂಪನ ಹುಟ್ಟು ಸ್ಥಳವಾಗಿದೆ.

ಚಿತ್ರಕೃಪೆ: Dineshkannambadi

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X