Search
  • Follow NativePlanet
Share
» »ಜೂನ್ ತಿಂಗಳಲ್ಲಿನ ಸುಖಕರ ಪ್ರವಾಸಿ ತಾಣಗಳು

ಜೂನ್ ತಿಂಗಳಲ್ಲಿನ ಸುಖಕರ ಪ್ರವಾಸಿ ತಾಣಗಳು

ಬೇಸಿಗೆ ಮುಕ್ತಾಯವಾಗಿ ಚಳಿಗಾಲ ಪ್ರಾರಂಭವಾಗುತ್ತಾ ಇದೆ. ಚುಮು ಚುಮು ಚಳಿಯಲ್ಲಿ ಬೆಚ್ಚನೆಯ ಬೇಸಿಗೆ ಕಾಲವನ್ನು ನೆನಪಿಸಿಕೊಳ್ಳುತ್ತೆವೆ.

ಬೇಸಿಗೆ ಮುಕ್ತಾಯವಾಗಿ ಚಳಿಗಾಲ ಪ್ರಾರಂಭವಾಗುತ್ತಾ ಇದೆ. ಚುಮು ಚುಮು ಚಳಿಯಲ್ಲಿ ಬೆಚ್ಚನೆಯ ಬೇಸಿಗೆ ಕಾಲವನ್ನು ನೆನಪಿಸಿಕೊಳ್ಳುತ್ತೆವೆ. ಬೇಸಿಗೆಯಲ್ಲಿ ಮಕ್ಕಳಿಗೆ ರಜಾದಿನಗಳಿದ್ದರು ಕೂಡ ಬೇಸಿಗೆಯ ತಾಪಕ್ಕೆ ಎಲ್ಲಿಗೂ ಪ್ರವಾಸಕ್ಕೆ ಹೋಗದೆ ಇರಬಹುದು. ಈ ತಿಂಗಳ ಹವಾಮಾನ ಬೇಸಿಗೆ. ಮಳೆ, ಚಳಿ ಮೂರು ಕಾಲವು ಒಟ್ಟಿಗೆ ಬಂದಿದೆ. ಸುಡು ಬೇಸಿಗೆಯಿಂದಾಗಿ ನಿಮ್ಮ ಪ್ರವಾಸಕ್ಕೆ ಅಡ್ಡಿಯಾಗಿದ್ದರೆ ಈ ತಿಂಗಳು ಅತ್ಯಂತ ಉತ್ತಮವಾದ ಕಾಲ ಎಂದೇ ಹೇಳಬಹುದು. ನಿಮ್ಮ ಕುಟುಂಬದ ಸದಸ್ಯರ ಜೊತೆ ಸುಖಕರ ಪ್ರವಾಸ ನಿಮ್ಮದಾಗಲಿ. ಪ್ರಸ್ತುತ ಲೇಖನದಲ್ಲಿ ಜೂನ್ ತಿಂಗಳಿನಲ್ಲಿ ಕರ್ನಾಟಕದಲ್ಲಿನ ಉತ್ತಮವಾದ ಪ್ರವಾಸ ಸ್ಥಳದ ಬಗ್ಗೆ ತಿಳಿಯಿರಿ ಒಮ್ಮೆ ಭೇಟಿ ಕೊಡಿ.

1.ಕಬಿನಿ ಅರಣ್ಯ

1.ಕಬಿನಿ ಅರಣ್ಯ

ಕಬಿನಿಯು ಕರ್ನಾಟಕದ ಪ್ರಸಿದ್ದವಾದ ವನ್ಯಜೀವ ಧಾಮ. ಕಬಿನಿ ಅರಣ್ಯದಲ್ಲಿ ಹಲವಾರು ಪ್ರಾಣಿಗಳನ್ನು ಕಾಣಬಹುದು. ವನ್ಯಜೀವಿಗಳ ಪ್ರೇಮಿ ನೀವಾಗಿದ್ದರೆ ಇದೊಂದು ಸುಂದರವಾದ ಪ್ರವಾಸ ನಿಮಗೆ ಆಗಲಿದೆ. ಮುಖ್ಯವಾಗಿ ಚಳಿಗಾಲದಲ್ಲಿ ಈ ಅರಣ್ಯದಲ್ಲಿ ಸುತ್ತಾಡುವುದೇ ಒಂದು ಅದ್ಭುತ ಅನುಭವ. ಇಲ್ಲಿ ನಿಮಗಿಷ್ಟವಾದ ಸಿಂಹ, ಚಿರತೆ, ಕಾಡು ನಾಯಿ ಮತ್ತು ಆನೆಗಳನ್ನು ನೀವು ಕಾಣಬಹುದು. ವಿಶೇಷ ಏನೆಂದರೆ ಕಣ್ಣಿಗೆ ಮುದ ನೀಡುವ ನವಿಲಿನ ನೃತ್ಯ ಕಣ್ಣಾರೆ ಕಂಡು ಬೆರಗಾಗಬಹುದು.
PC:Vjgeorgeinn

2.ಅಗುಂಬೆ

2.ಅಗುಂಬೆ

ಈ ಅಗುಂಬೆಯು ಅತ್ಯಂತ ಸುಂದರವಾದ ಪ್ರಕೃತಿಯನ್ನು ತನ್ನಲ್ಲಿ ಸೆರೆಹಿಡಿದಿದೆ. ಅಗುಂಬೆಯ ಸೌಂದರ್ಯ ನೋಡುವುದೇ ಒಂದು ಸುಯೋಗವೇ ಸರಿ. ಇಲ್ಲಿನ ವಿಶೇಷವೆನೆಂದರೆ ಕೋಬ್ರ ಹಾವು ಇಲ್ಲಿ ನೆಲೆಸಿರುವುದು. ಸುಂದರ ಅರಣ್ಯದ ಸುತ್ತಲೂ ಹಸಿರಿನ ಹಾಸಿಗೆಯಿದ್ದು ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತದೆ. ಇಲ್ಲಿಗೆ ಯುವಕರು ಟ್ರೆಕ್ಕಿಂಗ್ ಮಾಡಲು ಬಯಸುತ್ತಾರೆ. ಪ್ರಾಕೃತಿಕ ಸೌಂದರ್ಯದ ಹಾಗೂ ಇತಿಹಾಸದ ಪ್ರೇಮಿಗಳು ಇಲ್ಲಿಗೆ ಒಮ್ಮೆ ಭೇಟಿ ಕೊಡಿ. ಪ್ರಕೃತಿಯ ಮಡಿಲಲ್ಲಿ ಮಲಗಿ ಬನ್ನಿ.

PC:Dinesh Valke

3.ಕುಂದಾಪುರ ನದಿ

3.ಕುಂದಾಪುರ ನದಿ

ಕುಂದಾಪುರ ನದಿಯು ಅತ್ಯಂತ ರಮಣೀಯವಾದ ಸ್ಥಳ. ಕುಟುಂಬ ಸಮೇತರಾಗಿ ಆನಂದಮಯವಾದ ನದಿಗೆ ಹೋಗಬೇಕು ಎಂದು ನದಿಯ ಅನ್ವೇಷಣೆಯಲ್ಲಿದ್ದರೆ ಅಂತಹವರಿಗೆ ಈ ಕುಂದಾಪುರ ನದಿ ಹೇಳಿ ಮಾಡಿಸಿದ ಪ್ರವಾಸ ತಾಣ. ಈ ನದಿಯ ಸುತ್ತಲು ಹಸಿರಿನ ವನ, ಹಕ್ಕಿಗಳ ಚಿಲಿಪಿಲಿ . ನೀರಿನ ಜುಳು ಜುಳು ಶಬ್ದ, ತಂಪಾದ ಗಾಳಿ ಎಂಥವರನ್ನು ಆನಂದಮಯವಾಗಿಸದೆ ಇರದು.
PC:Bharath Badakere

4.ಕೂರ್ಗ್

4.ಕೂರ್ಗ್

ಕೂರ್ಗ್ ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಇಲ್ಲಿನ ಪ್ರಕೃತಿಯ ವರ್ಣನೆಯು ಬಣ್ಣಿಸಲು ಅಸಾಧ್ಯವಾದುದು. ಇಲ್ಲಿನ ಪ್ರವಾಸಿಗರು ಟ್ರೆಕ್ಕಿಂಗ್ ತೆರಳಲು ಇಷ್ಟ ಪಡುತ್ತಾರೆ. ಈ ಹಸಿರಿನ ತಂಪಾದ ಗಾಳಿ ನಿಮಗೆ ಬೇರೆಯೇ ಲೋಕಕ್ಕೆ ಕೊಂಡ್ಯುವುದರಲ್ಲಿ ಅನುಮಾನವಿಲ್ಲ. ಒಮ್ಮೆ ಕೂರ್ಗ್‍ನ ಪ್ರವಾಸಕ್ಕೆ ಭೇಟಿ ಕೊಡಿ.
PC:L. Shyamal

5.ಕೆಮ್ಮನಗುಂಡಿ

5.ಕೆಮ್ಮನಗುಂಡಿ

ಎಲ್ಲಾರಿಗೂ ಕೆಮ್ಮನಗುಂಡಿ ಸಹಜವಾಗಿ ಕರ್ನಾಟಕದಲ್ಲಿದೆ ಎಂದು ನಿಮಗೆ ತಿಳಿದಿದೆ. ಆದರೆ ಒಮ್ಮೆ ಈ ಪ್ರಕೃತಿಯ ಹಾಗೂ ಈ ಜಲಪಾತದ ನಡುವೆ ಒಮ್ಮೆ ಹೋಗಿ ಬನ್ನಿ ಇನ್ನೆಂದೂ ಮರೆಯಲಾಗದ ಅನುಭವ ನಿಮ್ಮದಾಗುತ್ತದೆ. ಕರ್ನಾಟಕದಲ್ಲಿನ ಅತ್ಯಂತ ಎತ್ತರದ ಪರ್ವತಗಳಲ್ಲಿ ಕೆಮ್ಮನ ಗುಂಡಿಯ ಪರ್ವತಗಳು ಒಂದಾಗಿದೆ. ಇಲ್ಲಿ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಟ್ರೆಕ್ಕಿಂಗ್ ಮಾಡಲು ಬರುವವರೆ ಇಲ್ಲಿಗೆ ಹೆಚ್ಚು.
PC:Yathin S Krishnappa

6.ಸೀತಾ ನದಿ

6.ಸೀತಾ ನದಿ

ಉಡುಪಿಯಲ್ಲಿರು ಈ ಸೀತಾ ನದಿ ಪ್ರವಾಸಿಗರ ಅಚ್ಚು ಮೆಚ್ಚಿನ ಪ್ರವಾಸ ತಾಣ. ಇಲ್ಲಿಗೆ ಬರುವ ಪ್ರವಾಸಿಗರು ರ್ಯಾಫ್‍ಟಿಂಗ್ ಮಾಡಲು ಇಷ್ಟ ಪಡುತ್ತಾರೆ. ಇಲ್ಲಿನ ಅಲೆಗಳು ನಮ್ಮನ್ನು ಮತ್ತೊಮ್ಮೆ ಆಹ್ವಾನಿಸುವಂತೆ ಮಾಡುತ್ತವೆ. ರ್ಯಾಫ್‍ಟಿಂಗ್ ಮಾಡಲು ಅತ್ಯಂತ ಸೂಕ್ತ ಸ್ಥಳಗಳಲ್ಲಿ ಇದು ಆಗ್ರಗಣ್ಯದಲ್ಲಿದೆ. ಈ ನದಿಯ ಸುತ್ತಲು ಸುಂದರವಾದ ಮರ ಗಿಡಗಳಿವೆ. ಇಲ್ಲಿಗೆ ಸಮೀಪದ ಕೂಡ್‍ಲು ತೀರ್ಥ ಫಾಲ್ಸ್‍ಗೆ ಟ್ರೆಕ್ಕಿಂಗ್ ಗೆ ತೆರಳಬಹುದು.
PC:Pudelek

7.ಹೊಗೆನಕಲ್ ಜಲಪಾತ

7.ಹೊಗೆನಕಲ್ ಜಲಪಾತ

ಹಲವಾರು ಪ್ರವಾಸಿಗರು ತಿಳಿದಂತೆ ಹೊಗೆನಕಲ್ ಇರುವುದು ತಮಿಳುನಾಡಿನಲ್ಲಿ ಎಂದು ತಿಳಿದಿದ್ದಾರೆ ಆದರೆ ಈ ಜಲಪಾತ ಇರುವುದು ಕರ್ನಾಟಕದ ಸರಹದ್ದಿನಲ್ಲಿ. ಹೊಗೆನಕಲ್‍ನ ಇತರ ಪ್ರವಾಸಿ ಆಕರ್ಷಣೀಯ ಸ್ಥಳಗಳೆಂದರೆ ಮೊಸಳೆ ಫಾರಂ, ಪ್ರಾಣಿ ಸಂಗ್ರಹಾಲಯ ಮತ್ತು ಸಸ್ಯ ಅಭಿವೃದ್ದಿ ಕೇಂದ್ರ. ಒಮ್ಮೆ ಈ ಹಾಲಿನ ನೊರೆಯಂತೆ ಬೀಳುವ ಜಲಪಾತವನ್ನು ಒಮ್ಮೆ ಭೇಟಿ ಕೊಡಿ.
PC:Mithun Kundu

8. ಶಾರವತಿ ನದಿಯ ಕಣಿವೆಗಳು

8. ಶಾರವತಿ ನದಿಯ ಕಣಿವೆಗಳು

ಕರ್ನಾಕದ ಅತ್ಯಂತ ಆಕರ್ಷಣೀಯವಾದ ನದಿ ಕಣಿವೆ ಈ ಶಾರವತಿ ಕಣಿವೆ. ಇಲ್ಲಿ ಶೂಲ ಅರಣ್ಯವೂ ಕೂಡ ಇದೆ. ಅರಣ್ಯದಲ್ಲಿ ಅಡ್ಡಾಡುವ ಪ್ರೇಮಿಗಳಿಗೆ ಇದು ಸೂಕ್ತವಾದ ಸ್ಥಳವಾಗಿದೆ. ಇಲ್ಲಿನ ಜೋಗ ಜಲಪಾತ ವಿಶ್ವ ವಿಖ್ಯಾತಿ ಪಡೆದಿದೆ. ಇಲ್ಲಿಗೆ ಸಾವಿರಾರು ಪ್ರವಾಸಿಗರು ಈ ಪ್ರಕೃತಿಯೊಂದಿಗೆ ಕೆಲವು ಸಮಯ ಸ್ವರ್ಗದಲ್ಲಿನ ಸುಖವನ್ನು ಅಸ್ವಾಧಿಸುತ್ತಾರೆ. ಜೋಗ ಜಲಪಾತ ಕರ್ನಾಟಕದ ಅತ್ಯಂತ ಎತ್ತರದ ಜಲಪಾತ ಎಂಬ ಪಟ್ಟವನ್ನು ಮುಡಿಗೇರಿಸಿಕೊಂಡಿದೆ.
PC:DARSHAN SIMHA

9.ಕುದುರೆ ಮುಖ

9.ಕುದುರೆ ಮುಖ

ಕುದುರೆ ಮುಖ ಒಂದು ಅದ್ಭುತ ಪ್ರಕೃತಿ. ಇಲ್ಲಿ ಟೀ ಎಸ್ಟೆಟ್ ಅಧಿಕವಾಗಿ ಕಣ್ಣಿಗೆ ಗೋಚರಿಸುತ್ತದೆ. ನೀವು ಪ್ರಕೃತಿ ಪ್ರೇಮಿಗಳಾಗಿದ್ದರೆ ಈ ತಾಣ ನಿಮ್ಮನ್ನು ಎಂದೂ ನಿರಾಶೆಗೊಳಿಸದು. ಯುವಕರು ಟ್ರೆಕ್ಕಿಂಗ್‍ಗೆ ಕೂಡ ಇದು ಉತ್ತಮವಾದ ಸ್ಥಳವಾಗಿದೆ. ಇಲ್ಲಿನ ಕುದುರೆ ಮುಖ ನ್ಯಾಷನಲ್ ಪಾರ್ಕ್ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣ. ಇಲ್ಲಿನ ಅರಣ್ಯ, ಹನುಮಾನ ಗುಂಡಿ ಫಾಲ್ಸ್ ಮತ್ತಷ್ಟು ಸುಂದರವಾಗಿದೆ.
PC:solarisgirl

10.ಕುಮಾರ ಪರ್ವತ

10.ಕುಮಾರ ಪರ್ವತ

ಟ್ರೆಕ್ಕಿಂಗ್ ಪ್ರೇಮಿಗಳು ಕುಮಾರ ಪರ್ವತವನ್ನು ಅನ್ವೇಷಿಸಲು ಇಷ್ಟ ಪಡುತ್ತಾರೆ. ಈ ಪರ್ವತವು ಸುಬ್ರಮಣ್ಯ ಸ್ವಾಮಿಯ ನೆಲೆಸಿದ ಪರ್ವತ ಎಂದೇ ಖ್ಯಾತಿಯನ್ನು ಹೊಂದಿದೆ. ಇಲ್ಲಿರುವ ಪ್ರಕೃತಿಯ ಸೌಂದರ್ಯ ಸ್ವರ್ಗಕ್ಕೆ ಏಣಿ ಇಟ್ಟಂತೆ. ಇಂಥಹ ಸ್ಥಳಗಳಿಗೆ ಒಮ್ಮೆ ಭೇಟಿ ಕೊಟ್ಟು ಬನ್ನಿ.
PC:Naveenkumar Avalakki suresh

11. ಗೋಕರ್ಣ ಬೀಚ್

11. ಗೋಕರ್ಣ ಬೀಚ್

ಗೋಕರ್ಣ ತಾಣದಲ್ಲಿ ಮಹಾ ಶಿವನ ಪುಣ್ಯಕ್ಷೇತ್ರವಿದೆ. ಇಲ್ಲಿನ ಗೋಕರ್ಣನ ಸಮುದ್ರ ತೀರವು ಅತ್ಯಂತ ಸುಂದರವಾಗಿದೆ. ಈ ದೇವಾಲಯಕ್ಕೆ ಬರುವ ಹಲವಾರು ಪ್ರವಾಸಿಗರು ಗೋಕರ್ಣದ ಈ ಸಮುದ್ರ ತೀರ ಪ್ರೀಯವಾದುದು. ಈ ಸಮುದ್ರ ತೀರ ಪರ್ವತಗಳ ನಡುವೆ , ಹಸಿರಿನ ನಡುವೆ ಕಂಗೊಳಿಸುತ್ತಿದೆ. ಇಂಥಹ ತಾಣದ ವೀಕ್ಷಣೆ ಮಾಡುವುದು ಮರೆಯಲಾದ ಸನ್ನಿವೇಶ.
PC:Sudharsan.Narayanan

12.ಬೃಂದಾವನ ಗಾರ್ಡನ್

12.ಬೃಂದಾವನ ಗಾರ್ಡನ್

ಮೈಸೂರಿನ ಈ ಗಾರ್ಡನ್ ಅತಿ ಹೆಚ್ಚು ಸಂಖ್ಯೆಯಲ್ಲಿ ಭೇಟಿ ನೀಡುವ ಪ್ರವಾಸಿ ಸ್ಥಳ ಇದಾಗಿದೆ. ಇಲ್ಲಿನ ಸ್ಥಳವು ನೋಡುಗರನ್ನು ಮಂತ್ರಮುಗ್ದರನ್ನಾಗಿಸದೆ ಬಿಡದು. ಒಮ್ಮೆ ಈ ಸುಂದರ ಸ್ಥಳಕ್ಕೆ ಭೇಟಿ ಕೊಡಿ.
PC:Ashwin Kumar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X