Search
  • Follow NativePlanet
Share
» »ನೀವು ಚಾಕೊಲೇಟ್ ಪ್ರೀಯರೆ? ಈ ಸ್ಥಳಗಳಿಗೆ ತೆರಳಿ!

ನೀವು ಚಾಕೊಲೇಟ್ ಪ್ರೀಯರೆ? ಈ ಸ್ಥಳಗಳಿಗೆ ತೆರಳಿ!

By Vijay

ಚಾಕೊಲೇಟ್ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಚಿಕ್ಕ ಮಕ್ಕಳಿನಿಂದ ಹಿಡಿದು ಹಲ್ಲುಗಳೆಲ್ಲ ಬಿದ್ದಿರುವ ವಯಸ್ಸಾದವರೂ ಸಹ ಚಪ್ಪರಿಸಲು ಇಷ್ಟ ಪಡುತ್ತಾರೆ. ಅಲ್ಲದೆ ಚಾಕೊಲೇಟ್ ಗೆಂದೆ ಒಂದು ದಿನವನ್ನು ಆಚರಿಸುತ್ತಾರೆ. ಹೌದು ಪ್ರತಿ ವರ್ಷ ಜುಲೈ 7 ರಂದು ಜಾಗತಿಕ ಚಾಕೊಲೇಟ್ ದಿನವನ್ನಾಗಿ 2009 ರಿಂದ ಆಚರಿಸಲಾಗುತ್ತಿದೆ.

ಭಾರತ ದೇಶದಲ್ಲೊಂದು ಖಾದ್ಯಗಳ ಪ್ರವಾಸ ಮಾಡಿ

ಚಾಕೊಲೇಟುಗಳಿಗೆ ಸಂಧಿಸಿದ ಖಾದ್ಯಗಳನ್ನು, ತಿನಿಸುಗಳನ್ನು ತಮ್ಮ ಬಂಧುಗಳು, ಸ್ನೇಹಿತರೊಂದಿಗೆ ಸೇರಿ ತಿನ್ನುವುದರ ಮೂಲಕ ಐರೋಪ್ಯ ರಾಷ್ಟ್ರಗಳಲ್ಲಿ ಹಾಗೂ ಭಾರತದ ಕೆಲವು ಮಹಾ ನಗರಗಳಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಜುಲೈ 7, 2015 ಯುರೋಪ್ ಖಂಡದಲ್ಲಿ ಚೊಕೊಲೇಟ್ ಪರಿಚಯವಾಗಿ 465 ವರ್ಷಗಳು ಗತಿಸಿದ ಕಾರಣ ಈ ದಿನಕ್ಕೆ ಹೆಚ್ಚಿನ ಮಹತ್ವ ಬಂದಿದೆ.

ಹಾಗಾದರೆ ಬನ್ನಿ ಪ್ರಸ್ತುತ ಲೇಖನದ ಮೂಲಕ, ಭಾರತದಲ್ಲಿ ಅತಿ ಅದ್ಭುತವಾಗಿ, ಸ್ವಾದಿಷ್ಟಮಯವಾಗಿ, ಚಾಕೊಲೇಟ್ ಉತ್ಪನ್ನಗಳನ್ನು ಬಡಿಸುವ ಅಥವಾ ದೊರೆಯುವ ಅತಿ ಹೆಚ್ಚು ಜನಪ್ರೀಯತೆಗಳಿಸಿರುವ ಹತ್ತು ಸ್ಥಳಗಳ ಕುರಿತು ತಿಳಿಯಿರಿ. ನೀವು ಚಾಕೊಲೇಟ್ ಪ್ರೀಯರಾಗಿದ್ದಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿದಾಗ ಇವುಗಳನ್ನು ತಿನ್ನಲು ಮರೆಯದಿರಿ.

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಊಟಿ : ನೀಲ್ಗಿರಿ ಗುಡ್ಡಗಳ ರಾಣಿ ಎಂದೆ ಪ್ರಖ್ಯತವಾದ ದಕ್ಷಿಣ ಭಾರತದ ಪ್ರಸಿದ್ಧ ಗಿರಿಧಾಮಗಳಲ್ಲೊಂದಾದ ತಮಿಳುನಾಡಿನ ಊಟಿ ನಿಜಕ್ಕೂ ಚಾಕೊಲೇಟ್ ನಂತಹ ತಿನಿಸುಗಳಿಗೆ ಸ್ವರ್ಗವೆನಿಸಿದೆ. ಇಲ್ಲಿನ ಬೊಟಾನಿಕಲ್ ಉದ್ಯಾನದ ಬಳಿಯಿರುವ ಊಟಿ ಬಜಾರ್ ನಲ್ಲಿ ಹಲವು ಅಂಗಡಿಗಳು ಲಭ್ಯವಿದ್ದು ಮತ್ತೆ ನಿಮಗೆಲ್ಲೂ ಕಾಣಸಿಗದ ವೈವಿಧ್ಯಮಯ, ಒಣ ಹಣ್ಣುಗಳ ಬಗೆ ಬಗೆಯ ಚಾಕೊಲೇಟುಗಳು ಇಲ್ಲಿ ದೊರೆಯುತ್ತವೆ. ಆದರೆ ಕೇವಲ ಒಂದೆ ಅಂಗಡಿಯಲ್ಲಿ ಖರೀದಿಸದೆ ಬೇರೆ ಬೇರೆ ಅಂಗಡಿಗಳಿಗೆ ಭೇಟಿ ನೀಡಿ ಅತ್ಯುತ್ತಮ ಚಾಕೊಲೇಟುಗಳನ್ನು ಖರೀದಿಸಿ.

ಚಿತ್ರಕೃಪೆ: Harsha K R

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಊಟಿ ಕುರಿತು ಸಮಗ್ರವಾಗಿ ತಿಳಿಯಲು ನಿಮಗನುಕೂಲವಾಗುವಂತಹ ಸುಂದರ ಲೇಖನಕ್ಕೆ ಕ್ಲಿಕ್ ಮಾಡಿ.

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಕುಣ್ಣೂರು, ಊಟಿಯ ಬಳಿಯಲ್ಲೆ ಸ್ಥಿತವಿರುವ ತಾಜಾ ಪರಿಸರದ, ನಯನ ಮನೋಹರ ಭೂದೃಶ್ಯಾವಳಿಗಳ ಮತ್ತೊಂದು ಗಿರಿಧಾಮವೆ ಕುಣ್ಣೂರು.ನೀವೇನಾದರೂ ಕುಣ್ಣೂರಿಗೆ ಭೇಟಿ ನೀಡಿದರೆ ಅಲ್ಲಿರುವ ಹೈ ಫೀಲ್ಡ್ ಟೀ ಕೇಂದ್ರಕ್ಕೆ ತೆರಳಲು ಮಾತ್ರ ಮರೆಯಬೇಡಿ. ಇಲ್ಲಿ ದೊರಕುವ ಹಲವು ಟೀ ಗಳಲ್ಲಿ ಚಾಕೊಲೇಟ್ ಟೀ ಸಹ ಸಾಕಷ್ಟು ಜನಮನ್ನಣೆಗಳಿಸಿದೆ. ನಿಮ್ಮೆಲ್ಲ ಒತ್ತಡವನ್ನು ಒಂದೆ ಕ್ಷಣದಲ್ಲಿ ದೂರ ಮಾಡಿಬಿಡುತ್ತದೆ ಈ ಚಹಾ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Mitch & Bonnie Lewandowski Follow

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಕುಣ್ಣೂರು ಗಿರಿಧಾಮದ ಪರಿಚಯ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಬೆಲ್ಲ, ಕಡಲೆ ಬಿಜ, ಎಳ್ಳು ಮುಂತಾದವುಗಳಿಂದ ಅದ್ಭುತವಾಗಿ ತಯಾರಿಸಲಾಗುವ ಚಿಕ್ಕಿಗಳು ಬಹುಶಃ ಎಲ್ಲರಿಗೂ ಗೊತ್ತಿರಬಹುದು. ಕೆಲಸ ಕಾರ್ಯಗಳಲ್ಲಿ ನಿರತವಾದಾಗ ಒಂದು ಕ್ಷಣ ಹಸಿವಾಯಿತೆಂದರೆ ಸಾಕು, ಚಿಕ್ಕಿಗಳು ಸಂತೃಪ್ತಿ ನೀಡುತ್ತವೆ ಅಲ್ಲವೆ? ಆದರೆ ನಿಮಗಿದು ಗೊತ್ತೆ, ಚಾಕೊಲೇಟ್ ಫ್ಲೇವರುಗಳಲ್ಲೂ ರುಚಿಕಟ್ಟಾದ ಈ ಚಿಕ್ಕಿಗಳು ಲಭ್ಯ. ಅದರಲ್ಲೂ ಮಹಾರಾಷ್ಟ್ರದ ಪುಣೆ ನಗರದಲ್ಲಿರುವ ಮಗನ್ ಲಾಲ್ ನಲ್ಲಿ ದೊರಕುವ ಈ ಚಿಕ್ಕಿಗಳು ಬಹು ಸ್ವಾದಿಷ್ಟವಾಗಿರುತ್ತವೆ. ಸಾಂದರ್ಭಿಕ ಚಿತ್ರ

ಚಿತ್ರಕೃಪೆ: Divya Kudua

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಪುಣ್ಯ ನಗರಿ ಪುಣೆಯ ಪ್ರಮುಖ ಆಕರ್ಷಣೆಗಳು. ಓದಿ ನೋಡಿ.

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಮ್ಯಾಪ್ರೊ ಗಾರ್ಡನ್ ಅಥವಾ ಉದ್ಯಾನ ಮಹಾರಾಷ್ಟ್ರದ ಪ್ರಖ್ಯಾತ ಪ್ರವಾಸಿ ತಾಣ ಮಹಾಬಲೇಶ್ವರದಲ್ಲಿರುವ ಉಪಹಾರಗೃಹವಾಗಿದೆ. ಇಲ್ಲಿ ದೊರೆಯುವ ಚಾಕೊಲೇಟ್ ಬ್ರಾವ್ನಿ ಎಂಬ ಸಿಹಿ ತಿನಿಸು ಎಂಥವರ ಬಾಯಲ್ಲೂ ನೀರೂರಿಸುವಂತಿರುತ್ತದೆ. ಇನ್ನೇಕೆ ತಡ ಮಹಾಬಲೇಶ್ವರಕ್ಕೆ ಭೇಟಿ ನೀಡಲು ಇದು ಸುಸಮಯ. ಯೋಜಿಸಿ ತೆರಳಿ ಹಾಗೂ ಬ್ರಾವ್ನಿಯನ್ನು ಆಸ್ವಾದಿಸಿ! ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: jamieanne

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಮಹಾಬಲೇಶ್ವರ ಪ್ರವಾಸಿ ಕೈಪಿಡಿ.

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಚಾಕೊಲೇಟ್ ಸ್ಯಾಂಡ್ವಿಚ್ ಸವಿದಿದ್ದೀರಾ? ಏನು, ಹೆಸರು ಕೇಳುತ್ತಲೆ ಬಾಯಲ್ಲಿ ನೀರೂರುತ್ತಿದೆಯಾ? ಹಾಗಾದರೆ ಗುಜರಾತ್ ರಾಜ್ಯದ ಅಹ್ಮದಾಬಾದಿಗೆ ಭೇಟಿ ನೀಡಿ. ಇಲ್ಲಿರುವ ಮಾಣೇಕ್ ಚೌಕ್ ನಲ್ಲಿ ಇಂತಹ ಹಲವು ಬಗೆಯ ವೈವಿಧ್ಯಮಯ ತಿಂಡಿ ತಿನಿಸುಗಳು ಲಭ್ಯ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Anubis From Memphis

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಮೋದಿಯ ಮೋಡಿ ಮಾಡುವ ಗುಜರಾತ್ ಬಗ್ಗೆ ತಿಳಿಯಿರಿ.

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ತಿರಾಮಿಸು ಒಂದು ವಿಶಿಷ್ಟ ರೀತಿಯ ಐಸ್ ಕ್ರೀಮ್. ಅದರಲ್ಲೂ ವಿಶೇಷವಾಗಿ ಚಾಕೊಲೇಟ್ ಫ್ಲೆವರಿನ ತಿರಾಮಿಸು ಮತ್ತಷ್ಟು ರುಚಿಕರ. ಇದನ್ನು ಸವಿಯ ಬೇಕೆಂದಿದ್ದರೆ ನೀವು ಮಂಗಳೂರಿಗೆ ತೆರಳಿದ್ದ ಸಂದರ್ಭದಲ್ಲಿ ಒಂದ್ಸಲ ಪಬ್ಬಾ'ಸ್ ಐಸ್ ಕ್ರೀಮ್ ಪಾರ್ಲರಿಗೆ ಭೇಟಿ ನೀಡಿ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Rizka Budiati Szkutnik

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ದಂದುಬಡಿಸುವ ಮಂಗಳೂರಿನ ಪ್ರವಾಸಿ ತಾಣಗಳು

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಉತ್ತರಾಖಂಡದ ಅಲ್ಮೋರಾ ಒಂದು ಸುಂದರ ಪ್ರವಾಸಿ ಪಟ್ಟಣ. ಸಮುದ್ರ ಮಟ್ಟದಿಂದ ಸಾಕಷ್ಟು ಎತ್ತರದಲ್ಲಿರುವ ಈ ಪಟ್ಟಣ ಸಾಕಷ್ಟು ತಾಜಾ ಪರಿಸರ ಹೊಂದಿದೆ ಹಾಗೂ ಇಲ್ಲಿ ಸ್ಥಳೀಯವಾಗಿ ಸಿಗುವ ಚಾಕೊಲೇಟ್ ಸ್ವಾದದ ಬಾಲ್ ಮಿಠಾಯಿ ಸಾಕಷ್ಟು ಜನಪ್ರೀಯವಾದ ಸಿಹಿ ತಿನಿಸಾಗಿದೆ.

ಚಿತ್ರಕೃಪೆ: vkumar

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಉತ್ತರಾಖಂಡದ ಪ್ರಮುಖ ಆಕರ್ಷಣೆಗಳು.

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಬೆಂಗಳೂರಿನ ಇಂದಿರಾನಗರದಲ್ಲಿರುವ ಕಾರ್ನರ್ ಹೌಸ್ ಐಸ್ ಕ್ರೀಮ್ ಪಾರ್ಲರ್ ಕೆಲವು ವಿಶಿಷ್ಟ ಚಾಕೊಲೇಟ್ ಐಸ್ ಕ್ರೀಮ್ ಗಳಿಗಾಗಿ ಹೆಚ್ಚಿನ ಜನಮನ್ನಣೆಗಳಿಸಿವೆ. ಇಲ್ಲಿ ದೊರಕುವ ಚಾಕೊಲೇಟ್ ಫಡ್ಜ್ ಹಾಗೂ ಡೆತ್ ಬೈ ಚಾಕೊಲೇಟ್ ಉತ್ಕೃಷ್ಟ ಗುಣಮಟ್ಟದ ಸ್ವಾದಿಷ್ಟ ಐಸ್ ಕ್ರೀಮ್ ಗಳಾಗಿವೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Sunset Sarsaparilla

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಬೆಂಗಳೂರಿನ ಕೆಲ ಪ್ರತಿಷ್ಠಿತ ಬಡಾವಣೆಗಳಲ್ಲಿ ವಿಹಾರ

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಮಸ್ಸೂರಿ ಒಂದು ಸುಂದರ ಗಿರಿಧಾಮ ಹಾಗೂ ಪ್ರವಾಸಿ ತಾಣ. ಇಲ್ಲಿನ ಚಿಕ್ ಚಾಕೊಲೇಟ್ ಎಂಬ ಕೇಂದ್ರದಲ್ಲಿ ದೊರಕುವ ಹಾಜೆಲ್ನಟ್ಟುಗಳ ಚಹಾ ಹಾಗೂ ಚಾಕೊಲೇಟ್ ಎಂದಿಗೂ ಮರೆಯದ ಅದ್ಭುತ ಸ್ವಾದವನ್ನು ನೀಡುತ್ತದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Breville USA

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಅದ್ಭುತ ಮೈಸಿರಿ ಹೊತ್ತ ಮಸ್ಸೂರಿ ಹೇಗಿದೆ ಗೊತ್ತೆ?

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಬಾಯಲ್ಲಿ ನೀರೂರಿಸುವ ಚಾಕೊಲೇಟ್ ಸ್ಥಳಗಳು:

ಮಾರ್ಜ್ - ಒ - ರಿನ್ ಪುಣೆ ನಗರದಲ್ಲಿರುವ ಒಂದು ಉಪಹಾರ ಕೇಂದ್ರ. ಇಲ್ಲಿ ದೊರಕುವ ಚಾಕೊಲೇಟ್ ಪೇಸ್ಟ್ರೀಗಳು ನೋಡುತ್ತಲೆ ಬಾಯಲ್ಲಿ ನೀರೂರುವಂತೆ ಮಾಡುವುದಲ್ಲದೆ ತಿಂದಾಗ ಒಂದು ಕ್ಷಣ ನಿಮ್ಮನ್ನೆ ಮೈಮರೆಯುವಂತೆ ಮಾಡುತ್ತದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Susanne Nilsson

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more