Search
  • Follow NativePlanet
Share
» »ಸ್ವಯಂವಾಗಿ ಯಮನೇ ನಿರ್ಮಾಣ ಮಾಡಿರುವ ಸರೋವರವಿದು...

ಸ್ವಯಂವಾಗಿ ಯಮನೇ ನಿರ್ಮಾಣ ಮಾಡಿರುವ ಸರೋವರವಿದು...

By Sowmyabhai

ಯಮನು ನಮ್ಮ ಪ್ರಾಣಗಳನ್ನು ತೆಗೆದುಕೊಳ್ಳುವ ದೇವನಾಗಿದ್ದಾನೆ. ಆದರೆ ಯಮನು ಕೇವಲ ತನ್ನ ಕಾರ್ಯವನ್ನು ಪಾರಿಪಾಲಿಸುತ್ತಿದ್ದಾನೆ. ಇದಕ್ಕೆ ಸೂತ್ರದಾರ ಆ ಲಯಕಾರನಾದ ಪರಮೇಶ್ವರ. ಪರಮಶಿವನು ಆದೇಶಿಸಿದಂತೆ ಯಮಧರ್ಮರಾಜನು ತನ್ನ ಕಾರ್ಯವನ್ನು ಮುಂದುವರೆಸುತ್ತಾನೆ. ಆ ಪರಮಶಿವನನ್ನು ನಾವು ನಿಷ್ಟೆ-ಭಕ್ತಿಯಿಂದ ಆರಾಧಿಸುತ್ತೇವೆ. ಅದ್ದರಿಂದಲೇ ಪುರಾಣಗಳ ಕಾಲದಿಂದಲೂ ಕೂಡ ಭಾರತ ದೇಶದಲ್ಲಿ ಮಹಾಶಿವನಿಗೆ ಎಂದು ಹಲವಾರು ಗುಡಿ, ಗೋಪುರಗಳು ಇರುವುದು ಕಾಣುತ್ತಿದ್ದೇವೆ.

ಆದರೆ ಕೇವಲ ಆತನು ಹೇಳಿದ ಆಜ್ಞೆಯನ್ನು ಚಾಚುತಪ್ಪದೇ ಪಾಲಿಸುವ ಯಮಧರ್ಮರಾಜನಿಗೆ ಮಾತ್ರ ದೇವಾಲಯಗಳಿರುವುದು ಕೇವಲ ಬೆರೆಳಣಿಕೆಯಷ್ಟು ಎಂದೇ ಹೇಳಬಹುದು. ಯಮಧರ್ಮರಾಜನು ಕೂಡ ಸ್ವಯಂ ತನ್ನ ಕೈಯಾರೆ ನಿರ್ಮಾಣ ಮಾಡಿರುವ ಸರೋವರವಿದೆ. ಆ ಸರೋವರವನ್ನು ಯಮಧರ್ಮರಾಜ ಎಂದೇ ಭಕ್ತರು ಆರಾಧಿಸುತ್ತಾರೆ. ಅಲ್ಲಿ ಭಕ್ತಿಯಿಂದ ಭಕ್ತರು ಆರಾಧಿಸಿ ಸ್ನಾನವನ್ನು ಆಚರಿಸುತ್ತಾರೆ. ಹೀಗೆ ಸ್ನಾನವನ್ನು ಆಚರಿಸುವುದರಿಂದ ತಮ್ಮ ಮೃತ್ಯುಭಯವು ದೂರವಾಗುತ್ತದೆ ಎಂದು ನಂಬಲಾಗಿದೆ.

ಸ್ವಯಂವಾಗಿ ಯಮಧರ್ಮರಾಜನೇ ನಿರ್ಮಾಣ ಮಾಡಿರುವ ಸರೋವರದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಲೇಖನದ ಮೂಲಕ ಮಾಹಿತಿಯನ್ನು ಪಡೆಯೋಣ.

1.ತಿರುವೈಕಾವೂರ್‍ನಲ್ಲಿನ ಯಮಧರ್ಮರಾಜ ದೇವಾಲಯ

1.ತಿರುವೈಕಾವೂರ್‍ನಲ್ಲಿನ ಯಮಧರ್ಮರಾಜ ದೇವಾಲಯ

PC:YOUTUBE

ಈ ದೇವಾಲಯದಲ್ಲಿ ಪ್ರಧಾನವಾದ ದೈವವಾಗಿ ಮಹಾಶಿವನು ನೆಲೆಸಿದ್ದಾನೆ. 7 ನೇ ಶತಮಾನದಲ್ಲಿ ತಮಿಳು ಭಾಷೆಯ ಪ್ರಸಿದ್ಧವಾದ ಆಧ್ಯಾತ್ಮಿಕ ಕವಿಯಾಗಿ ಹೆಸರುವಾಸಿಯಾಗಿದ್ದ ತಿರುಜ್ಜಾನ ಸಂಬಂಧಾರ್ ತನ್ನ ರಚನೆಯಲ್ಲಿ ಕೂಡ ಈ ದೇವಾಲಯದ ಬಗ್ಗೆ ಉಲ್ಲೇಖಿಸಿದ್ದಾರೆ. ಆ ದೇವಾಲಯವೇ ತಿರುವೈಕಾವೂರ್.

2.ತಿರುವೈಕಾವೂರ್‍ನಲ್ಲಿನ ಯಮಧರ್ಮರಾಜ ದೇವಾಲಯ

2.ತಿರುವೈಕಾವೂರ್‍ನಲ್ಲಿನ ಯಮಧರ್ಮರಾಜ ದೇವಾಲಯ

PC:YOUTUBE

ತಮಿಳುನಾಡಿನಲ್ಲಿನ ತಂಜಾವೂರು ಜಿಲ್ಲೆಯ ತಿರುವೈಕಾವೂರ್ ಎಂಬ ಚಿಕ್ಕ ಗ್ರಾಮದಲ್ಲಿ ಈ ದೇವಾಲಯವಿದೆ. ತಮಿಳುನಾಡುವಿನಲ್ಲಿ ಪ್ರಮುಖ ಪ್ರವಾಸಿ ಕೇಂದ್ರವಾಗಿ ಕುಂಭಕೋಣಂನಿಂದ ಕೇವಲ 14 ಕಿ.ಮೀ ದೂರದಲ್ಲಿ ಈ ಮಹಿಮಾನ್ವಿತವಾದ ದೇವಾಲಯವಿದೆ. ಈ ದೇವಾಲಯಕ್ಕೆ ತೆರಳಲು ಉತ್ತಮವಾದ ವಾಹನ ಸೌಕರ್ಯವು ಕೂಡ ಇದೆ.

3.ತಿರುವೈಕಾವೂರ್‍ನಲ್ಲಿನ ಯಮಧರ್ಮರಾಜ ದೇವಾಲಯ

3.ತಿರುವೈಕಾವೂರ್‍ನಲ್ಲಿನ ಯಮಧರ್ಮರಾಜ ದೇವಾಲಯ

PC:YOUTUBE

ಅದೇ ವಿಧವಾಗಿ ಸ್ವಾಮಿಮಲೈನಿಂದ ಕೇವಲ 8 ಕಿ.ಮೀ ದೂರದಲ್ಲಿ ತಿರುವೈಕಾವೂರ್ ದೇವಾಲಯವಿದೆ. ಈ ದೇವಾಲಯವನ್ನು ಯಮಧರ್ಮರಾಜನ ಪ್ರತೀಕ ಎಂದು ಕೂಡ ಭಕ್ತರು ಭಾವಿಸುತ್ತಾರೆ. ಈ ದೇವಾಲಯದ ನಾಲ್ಕು ದಿಕ್ಕಿನಲ್ಲಿ ನಾಲ್ಕು ದ್ವಾರಗಳಿರುವುದನ್ನು ಕಾಣಬಹುದು.

4.ತಿರುವೈಕಾವೂರ್‍ನಲ್ಲಿನ ಯಮಧರ್ಮರಾಜ ದೇವಾಲಯ

4.ತಿರುವೈಕಾವೂರ್‍ನಲ್ಲಿನ ಯಮಧರ್ಮರಾಜ ದೇವಾಲಯ

PC:YOUTUBE

ತಿರುವೈಕಾವೂರ್‍ನಲ್ಲಿನ ಯಮಧರ್ಮರಾಜ ದೇವಾಲಯಪೂರ್ವ ಇಲ್ಲಿ ಒಂದು ಸಾಧುವು ತಪಸ್ಸು ಮಾಡುತ್ತಾ ಇದ್ದನಂತೆ. ಒಂದು ದಿನ ಒಬ್ಬ ಬೇಟೆಗಾರನು ಜಿಂಕೆಯನ್ನು ಬೇಟೆಯಾಡುತ್ತಾ ಈ ಪ್ರದೇಶಕ್ಕೆ ಬಂದನು. ಇದರಿಂದಾಗಿ ಆ ಜಿಂಕೆಯು ಪ್ರಾಣ ಭಯದಿಂದ ಅಲ್ಲಿದ್ದ ಮುನಿಯ ಬಳಿ ಹೋಗಿ ರಕ್ಷಣೆ ಕೋರುತ್ತದೆ. ಆ ಸಾಧುಪ್ರಾಣಿಯ ದೀನ ಸ್ಥಿತಿಗೆ ಕರಗಿ ಹೋದ ಸಾಧುವು ಒಂದು ಹುಲಿಯಾಗಿ ಮಾರ್ಪಾಟಾಗುತ್ತಾನೆ.

5.ತಿರುವೈಕಾವೂರ್‍ನಲ್ಲಿನ ಯಮಧರ್ಮರಾಜ ದೇವಾಲಯ

5.ತಿರುವೈಕಾವೂರ್‍ನಲ್ಲಿನ ಯಮಧರ್ಮರಾಜ ದೇವಾಲಯ

PC:YOUTUBE

ಅಷ್ಟೇ ಅಲ್ಲದೇ, ದೂರದಲ್ಲಿದ್ದ ಆ ಬೇಟೆಗಾರನು ಅಲ್ಲಿಂದಲೇ ಹೊರಡುವಂತೆ ಗಟ್ಟಿಯಾಗಿ ಹುಲಿಯು ಘರ್ಜನೆ ಮಾಡುತ್ತದೆ. ಹುಲಿಯನ್ನು ಕಂಡ ಬೇಟೆಗಾರನು ಪ್ರಾಣಭಯದಿಂದ ಅಲ್ಲಿಯೆ ಇದ್ದ ಬಿಲ್ವ ಪತ್ರೆಯ ಗಿಡವನ್ನು ಏರಿ ಕುಳಿತುಕೊಳ್ಳುತ್ತಾನೆ ಹಾಗೂ ಆ ಹುಲಿಯ ನಿರ್ಗಮಿಸುವಿಕೆಯನ್ನು ಕಾಯಲು ಪ್ರಾರಂಭಿಸುತ್ತಾನೆ. ಆದರೆ ಹುಲಿಯು ಅಲ್ಲಿಂದ ಒಂದಿಂಚೂ ಸಹ ಕದಲುವುದಿಲ್ಲ.

6.ತಿರುವೈಕಾವೂರ್‍ನಲ್ಲಿನ ಯಮಧರ್ಮರಾಜ ದೇವಾಲಯ

6.ತಿರುವೈಕಾವೂರ್‍ನಲ್ಲಿನ ಯಮಧರ್ಮರಾಜ ದೇವಾಲಯ

PC:YOUTUBE

ಹೀಗೆ ರಾತ್ರಿಯಾಗುತ್ತದೆ. ನಂತರ ಬೇಟೆಗಾರನು ತಾನು ನಿದ್ದೆಗೆ ಜಾರಬಾರದೆಂದು ಗಿಡದ ಬಿಲ್ವ ಪತ್ರೆಗಳನ್ನು ಕೀಳುತ್ತ ಭೂಮಿಯ ಮೇಲೆ ಉದುರಿಸುತ್ತ ನಿದ್ದೆಯನ್ನು ತಡೆದುಕೊಳ್ಳುತ್ತಾನೆ. ಆದರೆ ಅವನು ಉದುರಿಸುತ್ತಿದ್ದ ಎಲೆಗಳು ಒಂದೊಂದಾಗಿ ಆ ಗಿಡದ ಕೆಳಗಿದ್ದ ಶಿವಲಿಂಗದ ಮೇಲೆ ಬೀಳುತ್ತಿರುತ್ತದೆ. ಕಾಕತಾಳೀಯವೆಂಬಂತೆ ಆ ದಿಅನ ಶಿವರಾತ್ರಿ ಬೇರೆ ಆಗಿರುತ್ತದೆ.

7.ತಿರುವೈಕಾವೂರ್‍ನಲ್ಲಿನ ಯಮಧರ್ಮರಾಜ ದೇವಾಲಯ

7.ತಿರುವೈಕಾವೂರ್‍ನಲ್ಲಿನ ಯಮಧರ್ಮರಾಜ ದೇವಾಲಯ

PC:YOUTUBE

ಇದರಿಂದ ಶಿವನು ಪ್ರಸನ್ನನಾಗಿ ಬೇಟೆಗಾರನಿಗೆ ಹರಸಿ ಆಶೀರ್ವದಿಸುತ್ತಾನೆ. ಮರುದಿನ ಬೆಳಿಗ್ಗೆ ಭೂಲೋಕದಲ್ಲಿ ಆ ಬೇಟೆಗಾರನ ಕೊನೆಯ ದಿನವಾಗಿರುತ್ತದೆ, ಹಾಗಾಗಿ ಸ್ವತಃ ಯಮನೆ ಅವನ ಪ್ರಾಣ ಕೀಳಲು ಅಲ್ಲಿಗೆ ಬರುತ್ತಾನೆ. ಆದರೆ ಶಿವನ ಕೃಪಾಕಟಾಕ್ಷವಿರುವುದರಿಂದ ನಂದಿ ಹಾಗೂ ದಕ್ಷಿಣ ಮೂರ್ತಿ ದೇವತೆಗಳು ಯಮನನ್ನೆ ತಡೆಯುತ್ತವೆ.

8.ತಿರುವೈಕಾವೂರ್‍ನಲ್ಲಿನ ಯಮಧರ್ಮರಾಜ ದೇವಾಲಯ

8.ತಿರುವೈಕಾವೂರ್‍ನಲ್ಲಿನ ಯಮಧರ್ಮರಾಜ ದೇವಾಲಯ

PC:YOUTUBE

ಈ ಪವಾಡವನ್ನು ಅಗ್ನಿ-ಬ್ರಹ್ಮ ದೇವತೆಯರು ನೋಡಿ ಶಿವನನ್ನು ಆರಾಧಿಸಿ ಅಲ್ಲಿಯೆ ಯಮನನ್ನು ಕಲ್ಯಾಣಿಯ ರೂಪದಲ್ಲಿ ಅವತರಿಸುವಂತೆ ಕೇಳಿ ಕೊಳ್ಳಲು, ಯಮನು ಸಂತಸದಿಂದ ಅದಕ್ಕೊಪ್ಪುತ್ತಾನೆ ಹಾಗೂ ತೀರ್ಥ ರೂಪದಲ್ಲಿ ಅಲ್ಲಿಯೆ ನೆಲೆಸುತ್ತಾನೆ.

9.ತಿರುವೈಕಾವೂರ್‍ನಲ್ಲಿನ ಯಮಧರ್ಮರಾಜ ದೇವಾಲಯ

9.ತಿರುವೈಕಾವೂರ್‍ನಲ್ಲಿನ ಯಮಧರ್ಮರಾಜ ದೇವಾಲಯ

PC:YOUTUBE

ಹಾಗಾಗಿ ಈ ದೇವಾಲಯದಾವರಣದಲ್ಲಿ ಯಮತೀರ್ಥವನ್ನು ಕಾಣಬಹುದಾಗಿದೆ. ನಂಬಿಕೆಯಂತೆ ಯಾರು ಈ ನೀರನ್ನು ತಮ್ಮ ಮೇಲೆ ಪುಳಕಿಸಿಕೊಳ್ಳುವರೊ ಅವರಿಗೆ ಮೃತ್ಯು ಭಯ ದೂರವಾಗುತ್ತದೆ ಎನ್ನಲಾಗಿದೆ. ಅಲ್ಲದೆ ಸಪ್ತಮಾತೃಕೆಯರು ಈ ತೀರ್ಥದಲ್ಲಿ ಮಿಂದು ತಮ್ಮ ಸಿದ್ಧ ಶಕ್ತಿಯನ್ನು ಪುನಃ ಪಡೆದಿದ್ದರೆನ್ನಲಾಗುತ್ತದೆ. ಯಮತೀರ್ಥ.

10.ತಿರುವೈಕಾವೂರ್‍ನಲ್ಲಿನ ಯಮಧರ್ಮರಾಜ ದೇವಾಲಯ

10.ತಿರುವೈಕಾವೂರ್‍ನಲ್ಲಿನ ಯಮಧರ್ಮರಾಜ ದೇವಾಲಯ

PC:YOUTUBE

ಇದನ್ನು ತಿರುವೈಕಾವೂರು ದೇವಾಲಯ ಎನ್ನುತ್ತಾರೆ ಹಾಗು ಇದು ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುವೈಕಾವೂರು ಎಂಬ ಹಳ್ಳಿಯಲ್ಲಿ. ಕುಂಭಕೋಣಂ-ತಿರುವೈಕಾವೂರು ಮಾರ್ಗದಲ್ಲಿ ಕುಂಭಕೋಣಂನಿಂದ 14 ಕಿ.ಮೀ ಹಾಗೂ ಸ್ವಾಮಿಮಲೈನಿಂದ 8 ಕಿ.ಮೀ ಗಳಷ್ಟು ದೂರದಲ್ಲಿದೆ. ಕುಂಭಕೋಣಂನಿಂದ ಇಲ್ಲಿಗೆ ತೆರಳಲು ಬಸ್ಸುಗಳು ದೊರೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X