ಭಾರತದ ಆಂಧ್ರಪ್ರದೇಶ ರಾಜ್ಯದ, ಚಿತ್ತೂರು ಜಿಲ್ಲೆಯ, ತಿರುಪತಿ ನಗರದ ಪ್ರಸಿದ್ದ ವೆಂಕಟೇಶ್ವರ ದೇವಾಲಯವು ವಿಶ್ವವಿಖ್ಯಾತವಾಗಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡಿ ದೇಣಿಗೆ ನೀಡುತ್ತಾರೆ. ಇದರಿಂದಾಗಿ ಈ ದೇವಾಲಯವು ವಿಶ್ವದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ತಿರುಪತಿಯಲ್ಲಿ ನೀವು ಭಗವಂತನ ದರ್ಶನದ ಜೊತೆಗೆ ಸುಂದರವಾದ ಪ್ರಾಕೃತಿಕ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಯಾರೇ ಇಲ್ಲಿ ದರ್ಶನಕ್ಕೆ ಬಂದರೆ ಅವರ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ.
ದೇವಸ್ಥಾನದ ಬಗ್ಗೆ ಮಾಹಿತಿ
ಇಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೆ ದೇವರ ದರ್ಶನ ಮಾಡಬಹುದು. ಈ ದೇವಾಲಯದಲ್ಲಿ ಮೂರು ಬಾರಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಮೊದಲ ದರ್ಶನ ಬೆಳಗ್ಗೆ, ಎರಡನೇ ದರ್ಶನ ಮಧ್ಯಾಹ್ನ ಮತ್ತು ಮೂರನೇ ದರ್ಶನ ಸಂಜೆ, ಶುಕ್ರವಾರ ಬೆಳಗ್ಗೆ ಅಭಿಷೇಕ ಸಮಯದಲ್ಲಿ ಬಾಲಾಜಿ ಅಂದರೆ ವೆಂಕಟೇಶ್ವರ ದೇವರ ಸಂಪೂರ್ಣ ವಿಗ್ರಹವನ್ನು ಕಾಣಬಹುದು. ಹೇಗಾದರೂ ಮಾಡಿ ತಿರುಪತಿಯಲ್ಲಿ ದೇವರ ದರ್ಶನ ಪಡೆಯಬೇಕು ಎಂಬ ಆಸೆ ಎಲ್ಲರ ಮನದಲ್ಲೂ ಇರುತ್ತದೆ. ಹಾಗಾಗಿ ದೇವರ ದರ್ಶನ ಪಡೆಯುವವರು ಮೊದಲು ಆನ್‌ಲೈನ್‌ನಲ್ಲಿ ಬುಕ್ ಮಾಡಬೇಕು. ನಂತರ ನೀವು ನಿಮ್ಮ ರಿಟರ್ನ್ ಟಿಕೆಟ್ ಅನ್ನು ಬುಕ್ ಮಾಡಬಹುದು. ಟಿಟಿಡಿ ವೆಬ್‌ಸೈಟ್‌ನಲ್ಲಿ ವಾಸ್ತವ್ಯಕ್ಕಾಗಿ ಮುಂಗಡ ಬುಕಿಂಗ್ ಸೌಲಭ್ಯವೂ ಲಭ್ಯವಿದೆ.

ವಿಗ್ರಹಕ್ಕೆ ಪುನುಗು ಎಣ್ಣೆ
ರಾತ್ರಿ ದರ್ಶನದ ಸಮಯದಲ್ಲಿ ದೇವಾಲಯದ ಪ್ರಾಂಗಣದಿಂದ ತೆರೆದ ಅಕಾಶದ ಅದ್ಭುತ ನೋಟವನ್ನು ನೋಡಬಹುದು, ಇದಲ್ಲದೇ ಬೆಟ್ಟದ ಹಾದಿಯಲ್ಲಿ ದೇವಾಲಯದ ಕಡೆಗೆ ಹೋಗುವಾಗ ಪ್ರಕೃತಿಯ ಸಂಗೀತವನ್ನು ಆನಂದಿಸಬಹುದು. ಮಾನ್ಸೂನ್ ಸಮಯದಲ್ಲಿಯಂತೂ ಬೆಟ್ಟಗಳ ಮಧ್ಯೆ ಮೋಡಗಳ ನಡುವೆ ವಾಸಿಸುತ್ತಿರುವಂತೆ ಭಾಸವಾಗುತ್ತದೆ. ದೇವಾಲಯದಲ್ಲಿರುವ ವಿಗ್ರಹವು 9 ಅಡಿ ಮತ್ತು 9 ಇಂಚು ಎತ್ತರವಾಗಿದೆ ಮತ್ತು ಅದರ ಬಣ್ಣ ಕೆಂಪು-ಕಪ್ಪು. ಪುರೋಹಿತರು ಪುನುಗು ಎಣ್ಣೆಯನ್ನು ಈ ವಿಗ್ರಹಕ್ಕೆ ಹಚ್ಚುವುದರಿಂದ ಈ ವಿಗ್ರಹದ ಬಣ್ಣವು ಕಪ್ಪಾಗಿ ಕಾಣತೊಡಗುತ್ತದೆ. ವಿಗ್ರಹವನ್ನು ವಿವಿಧ ಆಭರಣಗಳು ಮತ್ತು ಹೂವುಗಳಿಂದ ಅಲಂಕರಿಸಲಾಗಿರುತ್ತದೆ. ತಾಯಿ ಲಕ್ಷ್ಮಿ ದೇವರ ಎದೆಯ ಮೇಲೆ ಕುಳಿತಿದ್ದಾಳೆ. ಕೂದಲು ಉದ್ದವಾಗಿದ್ದು, ಗುಂಗುರು ಕೂದಲಿನಂತೆ ಕಟ್ಟಲಾಗಿದೆ.
ದೇವಸ್ಥಾನಕ್ಕೆ ಸಂಬಂಧಿಸಿದ ಹಲವು ರಹಸ್ಯಗಳು
· ಇಲ್ಲಿ ಶ್ರೀ ವೆಂಕಟೇಶ್ವರನಿದ್ದಾನೆ ಎಂದು ಹೇಳಲಾಗುತ್ತದೆ ಮತ್ತು ಈ ವಿಗ್ರಹದ ಮೇಲಿನ ಕೂದಲು ನೈಜವಾಗಿದೆ ಮತ್ತು ಯಾವಾಗಲೂ ಮೃದುವಾಗಿರುತ್ತದೆ.
· ದೇವರ ಬೆವರು ಮತ್ತು ಹನಿಗಳು ವಿಗ್ರಹದ ಮೇಲೆ ಗೋಚರಿಸುತ್ತವೆ ಎಂದು ಕೂಡ ಹೇಳಲಾಗುತ್ತದೆ.
· ಗರ್ಭಗುಡಿ ಪ್ರವೇಶಿಸುವಾಗ ಮಧ್ಯದಲ್ಲಿ ವಿಗ್ರಹ ಮತ್ತು ಗರ್ಭಗುಡಿಯಿಂದ ಹೊರಬರುವಾಗ ಬಲಭಾಗದಲ್ಲಿ ಭಗವಂತನ ಮೂರ್ತಿ ಕಾಣುತ್ತದೆ.
· ದೇವರಿಗೆ ಶ್ರೀಗಂಧ ಹಚ್ಚುವಾಗ ಹೃದಯ ಭಾಗದಲ್ಲಿ ತಾಯಿ ಲಕ್ಷ್ಮಿಯ ಆಕೃತಿ ಕಂಡುಬರುತ್ತದೆ. ಆದ್ದರಿಂದ ವಿಗ್ರಹಕ್ಕೆ ಗಂಡು ಮತ್ತು ಹೆಣ್ಣು ಎರಡೂ ರೀತಿಯ ಬಟ್ಟೆಗಳನ್ನು ಧರಿಸಲಾಗುತ್ತದೆ.
· ದೇವಸ್ಥಾನದಲ್ಲಿ ದೀಪವು ಯಾವಾಗಲೂ ಉರಿಯುತ್ತಿರುತ್ತದೆ ಮತ್ತು ಈ ದೀಪದಲ್ಲಿ ಎಣ್ಣೆ ಅಥವಾ ತುಪ್ಪವನ್ನು ಹಾಕುವುದಿಲ್ಲ.
· ವಿಗ್ರಹದ ಮೇಲೆ ಕಿವಿಯನ್ನಿಟ್ಟು ಆಲಿಸಿದರೆ ಸಮುದ್ರದ ಅಲೆಗಳ ಸದ್ದು ಕೇಳಿಸುತ್ತದೆ

ದೇವಸ್ಥಾನದ ನಿರ್ವಹಣೆ
ಆಂಧ್ರಪ್ರದೇಶ ಸರ್ಕಾರವು ಸ್ಥಾಪಿಸಿದ ಸ್ವಾಯತ್ತ ಸಂಸ್ಥೆಯಾದ ತಿರುಮಲ ತಿರುಪತಿ ದೇವಸ್ಥಾನಮ್ಸ್ ( ಟಿಟಿಡಿ ) ಇದರ ಮಾಲೀಕತ್ವ ಹೊಂದಿದೆ. ಇದು ದೇವಾಲಯದ ಆಡಳಿತ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ. ಟಿಟಿಡಿ ಅಪಾರ ಸಂಪನ್ಮೂಲಗಳು ಸೇರಿದಂತೆ ಹಣಕಾಸಿನ ನಿರ್ವಹಣೆಯನ್ನು ಸಹ ಒಳಗೊಂಡಿದೆ. ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಪ್ರತಿದಿನ ಸುಮಾರು 1 ಲಕ್ಷ ಭಕ್ತರು ಭೇಟಿ ನೀಡುತ್ತಾರೆ. ವಾರ್ಷಿಕ ಬ್ರಹೋತ್ಸವ ಮತ್ತು ಉತ್ಸವಗಳಂತಹ ಕೆಲವು ವಿಶೇಷ ಸಂದರ್ಭಗಳಲ್ಲಿ ಈ ಸಂಖ್ಯೆ ಇನ್ನು ದಾಟುತ್ತದೆ.
ತಿರುಪತಿ ದೇವಸ್ಥಾನದಲ್ಲಿ ಭಕ್ತರು ಬಹಿರಂಗವಾಗಿ ದೇಣಿಗೆ ನೀಡುತ್ತಾರೆ. ಇಲ್ಲಿ ಚಿನ್ನ, ಬೆಳ್ಳಿ, ರೂಪಾಯಿ, ಲ್ಯಾಂಡ್ ಪೇಪರ್‌ಗಳಲ್ಲದೆ ಡಿಮ್ಯಾಟ್ ಷೇರುಗಳನ್ನು ಕೊಟ್ಟಿದ್ದಾರೆ. ದೇವಸ್ಥಾನದಲ್ಲಿ ಪ್ರತಿ ತಿಂಗಳು ಮಾಡುವ ನೈವೇದ್ಯವನ್ನು ಕೇಳಿ ಜನರು ಆಶ್ಚರ್ಯ ಪಡುತ್ತಾರೆ. ಪ್ರತಿ ತಿಂಗಳು ಹುಂಡಿ ಅಥವಾ ಕಾಣಿಕೆ ಮೂಲಕ ಅಂದಾಜು 100 ಕೋಟಿ ರೂ.ದೇಣಿಗೆ ಸಂಗ್ರಹವಾಗುತ್ತದೆ. ವಿಶೇಷವಾಗಿ ಕೆಲವು ಆಚರಣೆಗಳು ಮತ್ತು ಹಬ್ಬಗಳ ಸಂದರ್ಭದಲ್ಲಿ, ಈ ಮೊತ್ತವು ಮತ್ತಷ್ಟು ಹೆಚ್ಚಾಗುತ್ತದೆ. ಇದರ ಪ್ರಕಾರ, ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ವಾರ್ಷಿಕವಾಗಿ ಸುಮಾರು 1,000 ರಿಂದ 1,200 ಕೋಟಿ ರೂ.ಗಿಂತ ಹೆಚ್ಚು ದೇಣಿಗೆ ನೀಡುತ್ತಾರೆ ಭಕ್ತರು.
ದೇವರು 10 ಪಟ್ಟು ಹಣ ಕೊಡುತ್ತಾನೆ!
ವರದಿಯ ಪ್ರಕಾರ,.ತಿರುಪತಿ ಬಾಲಾಜಿ ದೇವಸ್ಥಾನದ ಒಟ್ಟು ಸಂಪತ್ತಿನ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ, ಆದರೆ ವಜ್ರದಿಂದ ಅಲಂಕರಿಸಲ್ಪಟ್ಟ ದೇವಾಲಯದಲ್ಲಿರುವ ಬಾಲಾಜಿ ಮತ್ತು ಇತರ ವಿಗ್ರಹಗಳು ನೂರಾರು ಕೋಟಿ ಮೌಲ್ಯದವು. ನಿರ್ದಿಷ್ಟ ವಾರ್ಷಿಕ ಆದಾಯದ ಅಂಕಿಅಂಶಗಳು ಬದಲಾಗಬಹುದು. ಸಾಮಾನ್ಯವಾಗಿ ಇದನ್ನು TTD ಯಿಂದ ಸಾರ್ವಜನಿಕಗೊಳಿಸಲಾಗುವುದಿಲ್ಲ. ಭಕ್ತರು ತಮ್ಮ ತಲೆಯ ಕೂದಲನ್ನು ದಾನ ಮಾಡುವ ವಿಶ್ವದ ವಿಶಿಷ್ಟ ದೇವಾಲಯ ಇದಾಗಿದೆ. ತಿರುಪತಿ ಬಾಲಾಜಿಯಲ್ಲಿ ಮುಡಿ ದಾನ ಮಾಡುವ ವ್ಯಕ್ತಿಗೆ ದೇವರು 10 ಪಟ್ಟು ಹಣವನ್ನು ದಾನ ಮಾಡುತ್ತಾನೆ ಎಂದು ನಂಬಲಾಗಿದೆ.


Click it and Unblock the Notifications

















