Search
  • Follow NativePlanet
Share
» »ಒಂಟಿಯಾಗಿ ಪ್ರಯಾಣ ಮಾಡುವ ಮಹಿಳೆಯರಿಗಾಗಿ ಕೆಲವು ಸಲಹೆಗಳು

ಒಂಟಿಯಾಗಿ ಪ್ರಯಾಣ ಮಾಡುವ ಮಹಿಳೆಯರಿಗಾಗಿ ಕೆಲವು ಸಲಹೆಗಳು

By Manjula Balaraj Tantry

ಒಬ್ಬಂಟಿಯಾಗಿ ಪ್ರಯಾಣ ಮಾಡುವುದೆಂದರೆ ಮೋಜು ಮತ್ತು ಸವಾಲುದಾಯಕ ಎರಡೂ ಆಗಿದೆ. ನೀವೊಬ್ಬ ಅನ್ವೇಷಕರಾಗಿದ್ದಲ್ಲಿ, ಕೆಲವು ಕಷ್ಟಕರ ಸನ್ನಿವೇಶಗಳಲ್ಲಿ ಹೇಗೆ ನಿಭಾಯಿಸಬೇಕೆನ್ನುವ ಕೆಲವು ಮೌಲ್ಯಯುತ ಅನುಭವಗಳನ್ನು ಪಡೆಯಬಹುದಾಗಿದೆ. ಇದು ಭಾರತದಲ್ಲಿ ಮಾತ್ರ ಪ್ರತ್ಯೇಕವಾಗಿ ಅನ್ವಯಿಸುವುದಿಲ್ಲವಾದರೂ ಜಗತ್ತಿನ ಪ್ರತೀ ದೇಶಗಳಲ್ಲಿಯೂ ತನ್ನದೇ ಆದ "ಪ್ರಯಾಣದ ಏಕೈಕ ನಿಯಮಗಳನ್ನು" ಹೊಂದಿದ್ದು ಅದನ್ನು ನೀವು ಅನುಸರಿಸಲೇ ಬೇಕಾಗುತ್ತದೆ. ಇಲ್ಲಿ ಕೆಲವು ಅತ್ಯಂತ ಪ್ರಮುಖವಾದ ವಿಷಯಗಳು ಮತ್ತು ಕೆಲವು ಉತ್ತಮವಾದ ಸಲಹೆಗಳಿವೆ. ಇವು ನೀವು ಭಾರತಕ್ಕೆ ಪ್ರಯಾಣ ಮಾಡುವ ಮೊದಲು ಅನುಸರಿಸಬೇಕಾದವುಗಳಾಗಿವೆ

ಸಭ್ಯರಾಗಿರುವುದಕ್ಕಿಂತ ಹೆಚ್ಚಾಗಿ ಆತ್ಮವಿಶ್ವಾಸದಿಂದಿರಿ

ಸಭ್ಯರಾಗಿರುವುದಕ್ಕಿಂತ ಹೆಚ್ಚಾಗಿ ಆತ್ಮವಿಶ್ವಾಸದಿಂದಿರಿ

ಕೆಲವು ಅನಗತ್ಯ ವಿಷಯಗಳಲ್ಲಿ ಗಮನ ಹರಿಸುವುದಿಲ್ಲ ಎನ್ನುವ ಆತ್ಮವಿಶ್ವಾಸವನ್ನು ನೀವು ಹೊಂದಿದ್ದರೆ ಅದು ಒಪ್ಪಬಹುದಾದಂತಹ ಸಂಗತಿ. ಸ್ಪಷ್ಟವಾಗಿ ಹೇಳಬೇಕೆಂದರೆ ಮಹಿಳೆಯರಲ್ಲಿ ಹೋರಾಡುವ ಶಕ್ತಿ ಇಲ್ಲ ಎಂದು ಕಂಡ ಕೂಡಲೇ ಅತ್ಯಾಚಾರಿಗಳ ದೃಷ್ಟಿಗೆ ಗುರಿಯಾಗಬಹುದು ಅಲ್ಲದೆ ಇಂತಹ ಮಹಿಳೆಯರನ್ನು ತಮ್ಮ ಗುರಿಯಾಗಿಟ್ಟುಕೊಳ್ಳಬಹುದು.

ನೀವು ನಿಮ್ಮ ಸಂಶೋಧನೆಯನ್ನು ನಡೆಸಿ

ನೀವು ನಿಮ್ಮ ಸಂಶೋಧನೆಯನ್ನು ನಡೆಸಿ

ಭಾರತಕ್ಕೆ ಹೋಗುವುದೆಂದರೆ ಕೆರೆಬಿಯನ್, ಗ್ರೀಸ್ ಅಥವಾ ಥೈಲ್ಯಾಂಡಿಗೆ ಹೋಗುವಷ್ಟು ಸುಲಭವಲ್ಲ. ಇದೊಂದು ವಿಶಾಲವಾದ ವೈವಿಧ್ಯತೆಗಳನ್ನೊಳಗೊಂಡ ದೇಶವಾಗಿದ್ದು ಇದರ ಸಂಪ್ರದಾಯಗಳು, ಪ್ರಾಚೀನ... ಇತ್ಯಾದಿಗಳು ನಿಮ್ಮ ಪ್ರವಾಸ ತಾಣದಲ್ಲಿಯೂ ಕಾಣಬಹುದಾಗಿದೆ.
ಸಂಸ್ಕೃತಿಯ ಬಗ್ಗೆ ಹೆಚ್ಚಿನದನ್ನು ತಿಳಿಯುವುದರಿಂದ ನೀವು ನಿಮ್ಮನ್ನು ಸಿದ್ದ ಪಡಿಸಿಕೊಳ್ಳಬಹುದು. ಉದಾಹರಣೆಗೆ, ಕೆಲವು ಪ್ರವಾಸಿಗರು ರಾಜಸ್ಥಾನಕ್ಕೆ ಹೋಗುತ್ತಾರೆ ಹಾಗೆಂದರೆ ಮರುಭೂಮಿಯ ಈ ರಾಜ್ಯವನ್ನು ಪಾಶ್ಚಿಮಾತ್ಯ ಗೊಳಿಸುವುದು ಎಂದು ಅರ್ಥವಲ್ಲ.

ಅದಕ್ಕಿಂತ ಹೆಚ್ಚಾಗಿ ರಾಜಸ್ಥಾನವು ಭಾರತದ ಅತ್ಯಂತ ಹೆಚ್ಚು ಸಾಂಪ್ರದಾಯಿಕ ರಾಜ್ಯಗಳಲ್ಲೊಂದಾಗಿದೆ. ಇಲ್ಲಿ ತುಂಡು ಬಟ್ಟೆಗಳು ಮತ್ತು ಕಿರಿದಾದ ಬಟ್ಟೆಗಳನ್ನು ಧರಿಸುವುದು ಹೆಚ್ಚು ಸೂಕ್ತವಲ್ಲ. ಏಕೆಂದರೆ ಇದು ಕೆಲವು ಅನಗತ್ಯ ಗಮನ ಸೆಳೆಯುವುದಕ್ಕೆ ಕಾರಣವಾಗಬಹುದು. ಇನ್ನೊಂದು ಕಡೆ ಮುಂಬೈನ ಕೋಲಬಾ ಮತ್ತು ಬಾಂದ್ರಾದಂತಹ ಸ್ಥಳಗಳಲ್ಲಿ ಪಾಶ್ಚಾತ್ಯ ಉಡುಗೆಗಳನ್ನು ಧರಿಸುವುದು ಹೆಚ್ಚು ಸ್ವೀಕಾರಾರ್ಹವಾಗಿದೆ.

ನಿಮ್ಮ ನಿರೀಕ್ಷೆಗಳನ್ನು ಸರಿಹೊಂದಿಸಿಕೊಳ್ಳಿ

ನಿಮ್ಮ ನಿರೀಕ್ಷೆಗಳನ್ನು ಸರಿಹೊಂದಿಸಿಕೊಳ್ಳಿ

ನೀವೇನಾದರೂ ಕೆನಡಾ, ಯು.ಎಸ್, ಯು.ಕೆ, ಜರ್ಮನಿ ಅಥವಾ ಆಸ್ಟ್ರೇಲಿಯಾದಂತಹ ಪಾಶ್ಚಿಮಾತ್ಯ ದೇಶಗಳಿಂದ ಬಂದವರಾಗಿದ್ದಲ್ಲಿ, ನೀವು ಭಾರತಕ್ಕೆ ಬರಲು ಕಷ್ಟವಾಗಬಹುದು ಮತ್ತು ನೀವು ಮನೆಯಲ್ಲಿ ಮಾಡುವ ಎಲ್ಲಾ ಕೆಲಸಗಳನ್ನು ನೀವು ಮುಕ್ತವಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಿ ಆವಾಗ ನೀವು ಸತ್ಯ ಸಂಗತಿಯನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.

ಭಾರತವು ಅನೇಕ ವಿಧವಿಧದ ವಿಭಿನ್ನತೆಗಳ ಸಂಪ್ರದಾಯಗಳನ್ನೊಳಗೊಂಡ ದೇಶವಾಗಿದೆ. ಇಲ್ಲಿ ಸುರಕ್ಷಿತರಾಗಿರುವುದು ಉತ್ತಮ. ಸಡಿಲವಾದ ಆಧುನಿಕ ಬಟ್ಟೆಗಳನ್ನು ಧರಿಸುವುದು ಅಪರಿಚಿತ ವ್ಯಕ್ತಿಗಳಿಂದ ಹೆಚ್ಚಾಗಿ ಸ್ನೇಹ ಬೆಳಸದೇ ಇರುವುದು ಮತ್ತು ರಾತ್ರಿ ಹೊತ್ತು ತಿರುಗಾಡುವಾಗ ಅತ್ಯಂತ ಜಾಗರೂಕರಾಗಿರುವುದು ಇವೆಲ್ಲವು ನೀವು ಸುರಕ್ಷಿತರಾಗಿರಲು ಸಹಾಯವಾಗುತ್ತದೆ.

ಸಾರಿಗೆ ಕಾರ್ಯ ತಂತ್ರಗಳನ್ನು ಬಳಸಿ

ಸಾರಿಗೆ ಕಾರ್ಯ ತಂತ್ರಗಳನ್ನು ಬಳಸಿ

ಭಾರತವನ್ನು ಸುತ್ತುವಾಗ ಅದೂ ರಾತ್ರಿ ಹೊತ್ತಿನಲ್ಲಿ ಅಸಂಖ್ಯಾತ ಆಟೋ ರಿಕ್ಷಾಗಳಲ್ಲಿ, ಮತ್ತು ಟ್ಯಾಕ್ಸಿಗಳಲ್ಲಿ ಮತ್ತು ಕೆಲವೊಮ್ಮೆ ಪ್ರಯಾಣ ಮಾಡುವಾಗ ಮೋಟಾರು ಸೈಕಲುಗಳ ಹಿಂದೆ ಸವಾರಿ ಮಾಡಬೇಕಾಗುತ್ತದೆ. ರಾತ್ರಿ ಹೊತ್ತಿನಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ಗಳಿಂದ ಹೊರಟಾಗ ನಿಮ್ಮೊಂದಿಗೆ ಯಾರಾದರೂ ಆಟೋ ಅಥವಾ ಟ್ಯಾಕ್ಸಿ ಇರುವ ಕಡೆಗೆ ಬರುವುದು ಒಳಿತು. ಅಥವಾ ಯಾರಿಗಾದರೂ ಕರೆ ಮಾಡಿ ನೀವು ಕುಳಿತಿರುವ ಟ್ಯಾಕ್ಸಿಯ ನಂಬರನ್ನು ಜೋರಾಗಿ ಚಾಲಕನಿಗೆ ಕೇಳುವಂತೆ ಹೇಳಬೇಕು.

ಮಧ್ಯರಾತ್ರಿಗೆ ಹೋಗಿ ತಲುಪದಂತೆ ನಿಮ್ಮ ಪ್ರಯಾಣವನ್ನು ಆಯೋಜಿಸಿಕೊಳ್ಳ ಬೇಕು ಮತ್ತು ವಿಮಾನ ನಿಲ್ದಾಣ ಅಥವಾ ರೈಲ್ವೇ ನಿಲ್ದಾಣದಲ್ಲಿ ನಿಮ್ಮನ್ನು ಬರಮಾಡಿಕೊಳ್ಳಲು ಯಾರಾದರೂ ಬರುವವರಿದ್ದರೆ ಒಳಿತು. ಕೆಲವು ಹೋಟೇಲುಗಳು ಮತ್ತು ಪ್ರವಾಸೋದ್ಯಮಗಳು ಈ ಸೇವೆಯನ್ನು ಒದಗಿಸುತ್ತವೆ. ನೀವು ಹೋಗುವ ಜಾಗದ ಬಗ್ಗೆ ಗೊತ್ತಿರುವವರಿಗೆ ತಿಳಿಸಿ. ಮತ್ತು ನಿಮ್ಮ ಸ್ನೇಹಿತರೊಂದಿಗೆ ಮಾಧ್ಯಮಗಳ ಮೂಲಕ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಯಾವಾಗಲೂ ಸಂಪರ್ಕದಲ್ಲಿರಿ.

ಭಾರತೀಯ ಉಡುಗೆಗಳನ್ನು ತೊಡಬೇಕು

ಭಾರತೀಯ ಉಡುಗೆಗಳನ್ನು ತೊಡಬೇಕು

ಭಾರತೀಯ ಉಡುಗೆಗಳು ಹಗುರವಾಗಿ ಮತ್ತು ಆರಾಮದಾಯಕವಾದುದು, ಕಡಿಮೆ ವೆಚ್ಚದ್ದಾಗಿರುತ್ತದೆ ಮತ್ತು ವಾತಾವರಣಕ್ಕೆ ಹೊಂದಿಕೊಂಡಿರುತ್ತವೆ ಮತ್ತು ಆಧುನಿಕವಾಗಿಯೂ ಇರುತ್ತದೆ.

ಮೊಬೈಲ್ ಪೊನ್ ಅನ್ನು ಕೊಂಡೊಯ್ಯಿರಿ

ಮೊಬೈಲ್ ಪೊನ್ ಅನ್ನು ಕೊಂಡೊಯ್ಯಿರಿ

ಮೊಬೈಲ್ ಪೋನ್ ಅನ್ನು ನಿಮ್ಮೊಂದಿಗೆ ಕೊಂಡೊಯ್ಯುವುದು ಅನುಕೂಲಕರ ಮತ್ತು ಸುರಕ್ಷತೆಯ ದೃಷ್ಟಿಯಲ್ಲಿ ಉತ್ತಮ. ಭಾರತವು ಮೊಬೈಲ್ ಫೋನ್ ಬಳಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲ್ಪಡುವ ದೇಶವಾಗಿದೆ. ಮೆಸೇಜ್ ಮಾಡುವ ಮೂಲಕ ಎಲ್ಲವನ್ನೂ ಮಾಡಬಹುದಾಗಿದೆ.
ಅವುಗಳಲ್ಲಿ ರೈಲ್ವೇ ಟಿಕೇಟ್ ನಿಂದ ಹಿಡಿದು ಪ್ರತಿಯೊಂದು ಕೆಲಸವನ್ನೂ ಮಾಡಬಹುದಾಗಿದೆ. ಭಾರತಕ್ಕೆ ಬಂದ ನಂತರ ಇಲ್ಲಿ ನೀವು ಕಡಿಮೆ ದರದ ಫೋನ್ ಅನ್ನು ಖರೀದಿಸಬಹುದು ಅಥವಾ ಒಂದು ಸಿಮ್ ಖರೀದಿಸಿ ನಿಮ್ಮ ಫೋನಿಗೆ ಹಾಕಬಹುದು.

ನೀವು ಪೋನು ಅಥವಾ ಸಿಮ್ ಖರೀದಿಸಲು ಅಂಗಡಿಗೆ ಹೋಗುವಾಗ ನಿಮ್ಮಲ್ಲಿ ಪಾಸ್ ಪೋರ್ಟ್ ಮತ್ತು ಭಾರತೀಯ ವೀಸಾ ಮತ್ತು ಪಾಸ್ ಪೋರ್ಟ್ ಸೈಜಿನ ಪೋಟೋ ಇದೆಯೇ ಎಂದು ಖಚಿತ ಪಡಿಸಿಕೊಳ್ಳಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X