Search
  • Follow NativePlanet
Share
» »ಓಣಂ ಹಬ್ಬಕ್ಕೆ ಕಾರಣವೆ ಈ ವಾಮನ ದೇವಾಲಯ!

ಓಣಂ ಹಬ್ಬಕ್ಕೆ ಕಾರಣವೆ ಈ ವಾಮನ ದೇವಾಲಯ!

By Vijay

ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಅತಿ ಪ್ರಮುಖ ಉತ್ಸವಗಳಲ್ಲೊಂದಾಗಿದೆ ಓಣಂ/ಓಣಮ್. ವಿಶೇಷವಾಗಿ ಕೇರಳ ರಾಜ್ಯದಲ್ಲಾಚರಿಸಲಾಗುವ ಅತಿ ಮಹತ್ವದ ಉತ್ಸವವಾಗಿ ಓಣಂ ಪ್ರಸಿದ್ಧವಾಗಿದೆ. ಈ ಹಬ್ಬದ ಪ್ರಾಮುಖ್ಯತೆ ಎಷ್ಟಿದೆ ಎಂದರೆ ಇದು ರಾಜ್ಯ ಉತ್ಸವವಾಗಿ ಎಲ್ಲೆಡೆ ಅದ್ದೂರಿಯಿಂದ ಆಚರಿಸಲ್ಪಡುತ್ತದೆ.

ತ್ರಿಶ್ಶೂರ್ ಪೂರಂ ಎಂದರೇನು ಹಾಗೂ ಏಕೆ ಪ್ರಸಿದ್ಧ?

ಮಲಯಾಳಂ ಕ್ಯಾಲೆಂಡರಿನ ಅನ್ವಯ ಚಿಂಗಂ ಮಾಸದಲ್ಲಿ (ಸಾಮಾನ್ಯವಾಗಿ ಅಗಸ್ಟ್-ಸೆಪ್ಟಂಬರ್ ಸಮಯ) ಓಣಂ ಹಬ್ಬವನ್ನು ಬಲು ಸಡಗರದಿಂದ ಆಚರಿಸಲಾಗುತ್ತದೆ. ಮೂಲತಃ ಈ ಹಬ್ಬವು ವಿಷ್ಣು ತನ್ನ ದಶಾವತಾರಗಳ ಪೈಕಿ ವಾಮನ ಅವತಾರ ತೆಗೆದುಕೊಳ್ಳುವುದು ಹಾಗೂ ಬಲಿ ಚಕ್ರವರ್ತಿಯು ತನ್ನ ಸಾಮ್ರಾಜ್ಯಕ್ಕೆ ಮರುಳುವುದರ ಸಂಕೇತವಾಗಿ ಆಚರಿಸಲ್ಪಡುತ್ತದೆ.

ಹಾಗಾದರೆ ಈ ಓಣಂ ಹಬ್ಬದ ಮೂಲ ಯಾವುದು ಹಾಗೂ ಇಂದು ಕೇರಳ ರಾಜ್ಯದೆಲ್ಲೆಡೆ ಆಚರಿಸಲಾಗುವ ಈ ಅದ್ದೂರಿ ಉತ್ಸವದ ಮೂಲ ಕೇಂದ್ರ ಯಾವುದು ಎಂಬುದರ ಕುರಿತು ತಿಳಿಯಬೇಕೆ? ಹಾಗಿದ್ದಲ್ಲಿ ಪ್ರಸ್ತುತ ಲೇಖನವನ್ನೊಮ್ಮೆ ಓದಿ. ಇದರಲ್ಲಿ ಓಣಂ ಉತ್ಸವಕ್ಕೆ ನಾಮ್ದಿ ಹಾಡಿದ ಅದರ ಮೂಲ ದೇವಾಲಯದ ಕುರಿತು ತಿಳಿಸುತ್ತದೆ. ಓಣಂ ಸಂದರ್ಭದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪ್ರವಾಸಿಗರು/ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

ಓಣಂ ಹಬ್ಬದ ಮೂಲ ಕೆಂದ್ರ:

ಓಣಂ ಹಬ್ಬದ ಮೂಲ ಕೆಂದ್ರ:

ಭಾರತದಲ್ಲಿ ಹಲವಾರು ಪ್ರಮುಖ ದೇವ ದೇವತೆಗಳಿಗೆ ಮುಡಿಪಾದ ಸಾಕಷ್ಟು ದೇವಾಲಯಗಳನ್ನು ಕಾಣಬಹುದು. ಅದಾಗ್ಯೂ ಕೆಲವು ಪ್ರಮುಖ ದೇವರುಗಳಿಗೆ ಮುಡಿಪಾದ ದೇವಾಲಯಗಳು ಬಲು ಅಪರೂಪವೆಂದೆ ಹೇಳಬಹುದು. ಉದಾಹರಣೆಗೆ ಬ್ರಹ್ಮ, ಸರಸ್ವತಿ ಮುಂತಾದವುಗಳು. ಈ ಪಟ್ಟಿಯಲ್ಲಿ ವಿಷ್ಣುವಿನ ಅವತಾರವಾದ ವಾಮನ ದೇವರಿಗೆ ಮುಡಿಪಾದ ದೇವಾಲಯಗಳೂ ಸಹ ಬಲು ವಿರಳ. ಅಂತಹ ಒಂದು ದೇವಾಲಯವೆ ಓಣಂ ಹಬ್ಬದ ರೂವಾರಿ. ಆ ದೇವಾಲಯವೆ ಕೇರಳದಲ್ಲಿರುವ ವಾಮನ ದೇವರ ದೇವಾಲಯ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Rajasekhar1961

ಓಣಂ ಹಬ್ಬದ ಮೂಲ ಕೆಂದ್ರ:

ಓಣಂ ಹಬ್ಬದ ಮೂಲ ಕೆಂದ್ರ:

ವಾಮನನಿಗೆ ಮುಡಿಪಾದ ಈ ಪ್ರಖ್ಯಾತ ದೇವಾಲಯವು ಕೇರಳ ರಾಜ್ಯದ ಎರ್ನಾಕುಲಂ ಜಿಲ್ಲೆಯ ತ್ರಿಕ್ಕಾಕರಾ ಪಟ್ಟಣದಲ್ಲಿದೆ. ಎರ್ನಾಕುಲಂ-ತ್ರಿಶ್ಶೂರ್‍ ಹೆದ್ದಾರಿಯ ಮೇಲೆ ಎರ್ನಾಕುಲಂ ಕೆಂದ್ರದಿಂದ ಹತ್ತು ಕಿ.ಮೀ ಗಳಷ್ಟು ದೂರದಲ್ಲಿ ತ್ರಿಕ್ಕಾಕರಾ ಪಟ್ಟಣವಿದ್ದು, ಇದು ವಾಮನ ದೇವಾಲಯದಿಂದಾಗಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Ranjithsiji

ಓಣಂ ಹಬ್ಬದ ಮೂಲ ಕೆಂದ್ರ:

ಓಣಂ ಹಬ್ಬದ ಮೂಲ ಕೆಂದ್ರ:

ಈ ದೇವಾಲಯವು ಸಾಕಷ್ಟು ಪುರಾತನವಾಗಿದ್ದು ಹೆಚ್ಚಿನ ಮಹತ್ವ ಪಡೆದಿದೆ. ಸುಮಾರು ಐದು ಸಾವಿರ ವರ್ಷಗಳ ಹಿಂದೆ ಜೀವಿಸಿದ್ದ ತಮಿಳು ವೈಷ್ಣ ಸಂತ ಕವಿಯಾದ ನಮ್ಮಳ್ವರ್ ತಮ್ಮ ರಚನೆಗಳಲ್ಲಿ ಈ ದೇವಾಲಯದ ಕುರಿತು ಶ್ಲಾಘಿಸಿ ಹಾಡಿದ್ದಾರೆ.

ಚಿತ್ರಕೃಪೆ: Ssriram mt

ಓಣಂ ಹಬ್ಬದ ಮೂಲ ಕೆಂದ್ರ:

ಓಣಂ ಹಬ್ಬದ ಮೂಲ ಕೆಂದ್ರ:

ಅಲ್ಲದೆ ಈ ದೇವಾಲಯದಲ್ಲಿ ದೊರೆತ ಹಲವಾರು ಶಿಲಾ ಶಾಸನಗಳ ಪ್ರಕಾರವಾಗಿ, ಈ ಕ್ಷೇತ್ರಕ್ಕಿದ್ದ ಮಹತ್ವವನ್ನು ತಿಳಿಯಬಹುದಾಗಿದೆ. ಪ್ರತೀತಿಯಂತೆ ಮಹಾಬಲಿ ಚಕ್ರವರ್ತಿಯ ಸಾಮ್ರಾಜ್ಯ ಇದಾಗಿತ್ತೆಂದು ಹೇಳಲಾಗಿದೆ.

ಚಿತ್ರಕೃಪೆ: Sivahari

ಓಣಂ ಹಬ್ಬದ ಮೂಲ ಕೆಂದ್ರ:

ಓಣಂ ಹಬ್ಬದ ಮೂಲ ಕೆಂದ್ರ:

ಇತರೆ ಉತ್ಸವಗಳನ್ನು ಇಲ್ಲಿ ಆಚರಿಸಲಾಗುತ್ತಾದರೂ ಓಣಂ ಇಲ್ಲಿ ಆಚರಿಸಲಾಗುವ ಪ್ರಧಾನ ಹಾಗೂ ಮುಖ್ಯ ಉತ್ಸವ. ಜಗತ್ತಿನಾದ್ಯಂತ ಮಲಯಾಳಿಗರು ಆನಂದದಿಂದ ಆಚರಿಸುವ ಓಣಂ ಹಬ್ಬದ ಮೂಲ ಹಾಗೂ ಕೇಂದ್ರ ವಾಮನನ ಈ ದೇವಾಲಯ.

ಚಿತ್ರಕೃಪೆ: Ranjithsiji

ಓಣಂ ಹಬ್ಬದ ಮೂಲ ಕೆಂದ್ರ:

ಓಣಂ ಹಬ್ಬದ ಮೂಲ ಕೆಂದ್ರ:

ಇಲ್ಲಿ ನಡೆಯುವ ಓಣಂ ಹಬ್ಬವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಯಾವುದೆ ಜಾತಿ-ಧರ್ಮಗಳ ಅಂತರವಿಲ್ಲದೆ ಸಹಸ್ರ ಸಹಸ ಸಂಖ್ಯೆಯಲ್ಲಿ ಜನರು ನೆರೆಯುತ್ತಾರೆ. ಹೌದು, ಕೋಮು ಸಾಮರಸ್ಯಕ್ಕೆ ಅದ್ಭುತ ಉದಾಹರಣೆಯಾಗಿದೆ ಈ ದೇವಾಲಯದಲ್ಲಿ ಜರುಗುವ ಓಣಂ ಉತ್ಸವ.

ಚಿತ್ರಕೃಪೆ: Hari Vishnu

ಓಣಂ ಹಬ್ಬದ ಮೂಲ ಕೆಂದ್ರ:

ಓಣಂ ಹಬ್ಬದ ಮೂಲ ಕೆಂದ್ರ:

ದಂತಕಥೆಯಂತೆ, ಪ್ರಹ್ಲಾದನ ಮೊಮ್ಮಗನಾದ ಹಾಗೂ ಅಸುರ ರಾಜನಾದ ಬಲಿ ಚಕ್ರವರ್ತಿಯು ತನ್ನ ಪರೋಪಕಾರ ಹಾಗೂ ಕಠಿಣ ತಪಸ್ಸಿನಿಂದ ಸಂಪೂರ್ಣ ಭೂಮಂಡಲ, ಆಕಾಶವನ್ನೆ ಗೆದ್ದಿದ್ದ. ಇದರಿಂದ ಇಂದ್ರ ದೇವರಿಗೆ ಯಾವ ಸ್ಥಾನವಿಲ್ಲದ ಹಾಗಾಯಿತು. ಇದರಿಂದ ದುಸ್ಥಿತಿಗೆ ತಲುಪಿದ ಎಲ್ಲ ದೇವರುಗಳು ನಾರಾಯಣನ ಮೊರೆ ಹೋದರು.

ಚಿತ್ರಕೃಪೆ: Ssriram mt

ಓಣಂ ಹಬ್ಬದ ಮೂಲ ಕೆಂದ್ರ:

ಓಣಂ ಹಬ್ಬದ ಮೂಲ ಕೆಂದ್ರ:

ಅವರ ಈ ಸ್ಥಿತಿಯನ್ನು ಕಂಡ ವಿಷ್ಣು, ಕುಬ್ಜ ಬ್ರಾಹ್ಮಣ ಅವತಾರ ಧರಿಸಿ ವಾಮನ ರುಪದಲ್ಲಿ ಬಲಿ ಚಕ್ರವರ್ತಿಯ ಸಾಮ್ರಾಜ್ಯಕ್ಕೆ ಬಂದು ದಾನ ಬೇಡಿದ. ಸರ್ವಸ್ವವೂ ಇದ್ದ ಬಲಿಯು ವಾಮನನ್ನು ಕುರಿತು ಏನು ಬೇಕಾದರೂ ಬೇಡು ಎಂದು ಕೇಳಿದರು. ಅದಕ್ಕೆ ವಾಮನನು ಜಾಸ್ತಿ ಬೇಡ ಕೇವಲ ತಾನು ಇಡುವ ಮೂರು ಹೆಜ್ಜೆಗಳಷ್ಟು ಜಾಗವನ್ನು ದಾನ ಮಾಡು ಎಂದಾಗ, ಮೊದ ಮೊದಲು ಅದು ಅತ್ಯಂತ ಕನಿಷ್ಠ ದಾನ ಎಂದು ಒಪ್ಪದ ಬಲಿಯು ಕೊನೆಗೆ ಒಪ್ಪಿದನು.

ಚಿತ್ರಕೃಪೆ: wikipedia

ಓಣಂ ಹಬ್ಬದ ಮೂಲ ಕೆಂದ್ರ:

ಓಣಂ ಹಬ್ಬದ ಮೂಲ ಕೆಂದ್ರ:

ವಾಮನ ರೂಪದಲ್ಲಿದ್ದ ವಿಷ್ಣು ತನ್ನ ದೈತ್ಯ ಸ್ವರೂಪವನ್ನು ಪಡೆದು ಒಂದು ಹೆಜ್ಜೆಯ ಮೂಲಕ ಭೂಮಂಡಲವನ್ನು ಎರಡನೇಯ ಹೆಜ್ಜೆಯ ಮೂಲಕ ಸ್ವರ್ಗವನ್ನು ಆಕ್ರಮಿಸಿಕೊಂಡ. ಇನ್ನೂ ಮೂರನೇಯ ಹೆಜ್ಜೆ ಇಡಲು ಏನೂ ದೊರಕದಿದ್ದಾಗ ಬಲಿಯು ತನ್ನ ತಲೆಯನ್ನೆ ವಾಮನನ ಮುರನೇಯ ಹೆಜ್ಜೆಗೆಂದು ಸಮರ್ಪಿಸಿದ.

ಚಿತ್ರಕೃಪೆ: wikipedia

ಓಣಂ ಹಬ್ಬದ ಮೂಲ ಕೆಂದ್ರ:

ಓಣಂ ಹಬ್ಬದ ಮೂಲ ಕೆಂದ್ರ:

ಇದರಿಂದ ಪ್ರಸನ್ನನಾದ ವಾಮನನು ಬಲಿಯನ್ನು ಪಾತಾಳಕ್ಕೆ ತಳ್ಳುತ್ತ, ಪಾತಾಳ ಲೋಕವನ್ನು ಬಲಿ ಚಕ್ರವರ್ತಿಗೆ ಅರ್ಪಿಸಿ ಅವನನ್ನು ಚಿರಂಜೀವಿಯನ್ನಾಗಿ ಮಾಡಿ ವರ ನೀಡಿದ. ಈ ಒಂದು ಪ್ರಸಂಗ ನಡೆದಿರುವ ಸ್ಥಳವೆ ಇಂದಿನ ತ್ರಿಕ್ಕಾಕರ ದೇವಾಲಯ ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Ssriram mt

ಓಣಂ ಹಬ್ಬದ ಮೂಲ ಕೆಂದ್ರ:

ಓಣಂ ಹಬ್ಬದ ಮೂಲ ಕೆಂದ್ರ:

ಹೀಗೆ ಬಲಿ ಹೊಸ ಸಾಮ್ರಾಜ್ಯಕ್ಕೆ ಅಧಿಪತಿಯಾದ ಹಾಗೂ ವಿಷ್ಣುವಿನ ವಾಮನಾವತಾರಕ್ಕೆ ಸಾಕ್ಷಿಯಾದ ಈ ದೇವಾಲಯದಲ್ಲಿ ಅದ್ಭುತ ಘಟನೆಯ ಸ್ಮರಣಾರ್ಥವಾಗಿ ಓಣಂ ಹಬ್ಬ ಜನ್ಮಿಸಿ ಅಂದಿನಿಂದ ಪ್ರವರ್ಧಮಾನಕ್ಕೆ ಬಂದಿತೆನ್ನಲಾಗಿದೆ. ದೇವಾಲಯದ ಪುಷ್ಕರಿಣಿ.

ಚಿತ್ರಕೃಪೆ: Ssriram mt

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more