• Follow NativePlanet
Share
Menu
» »ಈ ಪರ್ವತದ ಮೇಲೆ ಸಾವಿರ ದೇವಾಲಯವಿದೆ

ಈ ಪರ್ವತದ ಮೇಲೆ ಸಾವಿರ ದೇವಾಲಯವಿದೆ

Written By:

ದೇವಾಲಯವೆಂದರೆ ನೆಮ್ಮದಿ ದೊರೆಯುವ ಸ್ಥಳ. ಸಾಮಾನ್ಯವಾಗಿ ಒಬ್ಬೊಬ್ಬರಿಗೆ ಒಂದೊಂದು ದೇವಾಲಯಗಳೆಂದರೆ ಇಷ್ಟ. ಕೆಲವರು ಶಕ್ತಿ ದೇವತೆಯ ಆರಾಧಕರಾಗಿದ್ದರೆ ಇನ್ನೂ ಕೆಲವರು, ಶಾಂತ ಸ್ವರೂಪಿಯಾದ ದೇವತಾ ಮೂರ್ತಿಗಳ ಆರಾಧಕರಾಗಿರುತ್ತಾರೆ. ಭಾರತ ದೇಶದಲ್ಲಿ ಮೂರು ಕೋಟೆ ದೇವರುಗಳಿರುವುದೇ ಇದಕ್ಕೆ ಕಾರಣವೆಂದೂ ಸಹ ಹೇಳಬಹುದು.

ತೀರ್ಥ ಕ್ಷೇತ್ರಗಳ ವಿಷಯಕ್ಕೆ ಬಂದರೆ ಆ ಪುಣ್ಯಕ್ಷೇತ್ರಕ್ಕೆ ಹೋಗಿ ದರ್ಶನ ಪಡೆಯಬೇಕು. ಈ ತೀರ್ಥಕ್ಷೇತ್ರಕ್ಕೆ ಹೋದರೆ ಒಳ್ಳೆಯದಾಗುತ್ತದೆ ಎಂದು ಹಲವಾರು ಜನರು ಹೇಳುತ್ತಾ ಇರುತ್ತಾರೆ. ಪ್ರಸ್ತುತ ನಾನು ಹೇಳಲು ಬಯಸುತ್ತಿರುವುದೇನೆಂದರೆ ಒಂದೇ ಸ್ಥಳದಲ್ಲಿ 1000 ದೇವಾಲಯದ ದರ್ಶನ ಭಾಗ್ಯ ಪಡೆಯಿರಿ ಎಂದು.

ಏನು ಒಂದೇ ಸ್ಥಳದಲ್ಲಿ 1000 ದೇವಾಲಯಗಳೇ ಎಂದುಕೊಳ್ಳುತ್ತಿದ್ದೀರಾ? ಹೌದು ಗುಜಾರಾತ್ ರಾಜ್ಯದ ಒಂದು ಸುಂದರವಾದ ಪರ್ವತದ ಮೇಲೆ 1000 ದೇವಾಯಗಳಿವೆ. ಈ ಬೃಹತ್ ತೀರ್ಥಕ್ಷೇತ್ರ ಬೇರೆಲ್ಲೂ ಕಾಣಲಾಗದು.

ಪ್ರಸ್ತುತ ಲೇಖನದ ಮೂಲಕ ಸಾವಿರ ದೇವಾಲಯಗಳು ಒಂದೇ ಸ್ಥಳದಲ್ಲಿರುವುದರ ಮಹತ್ವವನ್ನು ತಿಳಿಯೋಣ.

ದೇವಾಲಯ ಎಲ್ಲಿದೆ?

ದೇವಾಲಯ ಎಲ್ಲಿದೆ?

ಭಾರತದಲ್ಲಿ ಪರ್ವತ ಮೇಲೆ ದೇವಾಲಯಗಳಿರುವುದು ಸಾಧಾರಾಣವಾದ ವಿಚಾರ ಆದರೆ ಒಂದೇ ಬೃಹತ್ ಪರ್ವತದಲ್ಲಿ ಸಾವಿರ ದೇವಾಲಯದ ಬಗ್ಗೆ ಅಷ್ಟು ನಿಮಗೆ ಪರಿಚಯವಿಲ್ಲದಿರಬಹುದು. ಹಾಗಾದರೆ ಈ ದೇವಾಲಯಗಳು ಗುಜರಾತ್ ರಾಜ್ಯದ ಭಾವ ಜಿಲ್ಲೆಯ ಪಾಲಿಟಾನ್ ನಗರದಲ್ಲಿ ಶತೃಂಜಯ ಎಂಬ ಪರ್ವತದ ಮೇಲೆ ಸಾವಿರ ದೇವಾಲಯಗಳನ್ನು ಕಾಣಬಹುದಾಗಿದೆ.

PC:Pratap Tur

ಜೈನ

ಜೈನ

ಈ ದೇವಾಲಯಗಳು ಜೈನರ ಪಂಚ ಕ್ಷೇತ್ರಗಳಲ್ಲಿ ಇದು ಒಂದು. ಈ ದೇವಾಲಯಗಳಲ್ಲಿ ಮುಖ್ಯವಾದುದು ಆದೀಶ್ವರ ದೇವಾಲಯ. ಮಾರ್ಬಲ್‍ನಿಂದ ನಿರ್ಮಿಸಲಾದ ಈ ದೇವಾಲಯದ ಶಿಲ್ಪಗಳು ಅತ್ಯಂತ ಆಕರ್ಷಣಿಯವಾಗಿದೆ. ಹೆಚ್ಚು ದೇವಾಲಯಗಳು ಜೈನ ಧರ್ಮದ ದೇವಾಲಯವಾಗಿ ಮಾರ್ಪಾಟಾಗಿದೆ.


PC:Nirajdharamshi

ಶಿಲ್ಪಗಳು

ಶಿಲ್ಪಗಳು

19 ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯದ ವಾಸ್ತು ಶಿಲ್ಪ ಹಾಗೂ ಶಿಲ್ಪ ಕಲೆಗಳು ಅತ್ಯಂತ ಮನಮೋಹಕವಾಗಿದೆ. ಇಲ್ಲಿಗೆ ಬರುವ ಹಲವಾರು ಪ್ರವಾಸಿಗರು ಇಲ್ಲಿನ ದೇವಾಲಯಗಳ ಶಿಲ್ಪಗಳಿಗೆ ಮಾರು ಹೋಗುತ್ತಾರೆ.


PC:Nirajdharamshi

ಬೌದ್ಧ ದೇವಾಲಯಗಳು

ಬೌದ್ಧ ದೇವಾಲಯಗಳು

ಈ ಸುಂದರ ಸಾವಿರ ದೇವಾಲಯಗಳಲ್ಲಿ ಜೈನ ಮೂರ್ತಿಗಳೇ ಅಲ್ಲದೇ ಬೌದ್ಧ ಮೂರ್ತಿ ಹಾಗೂ ದೇವಾಲಯವನ್ನು ಕೂಡ ಕಾಣಬಹುದಾಗಿದೆ. ಇಲ್ಲಿರುವ ದೇವಾಲಯಗಳು ಪವಿತ್ರವಾದ ತೀರ್ಥಕ್ಷೇತ್ರವಾಗಿ ಪ್ರಸಿದ್ಧಿ ಹೊಂದುತ್ತಿದೆ.

PC:Nirajdharamshi

ಜೈನ ತೀರ್ಥಂಕರ

ಜೈನ ತೀರ್ಥಂಕರ

ಈ ದೇವಾಲಯಗಳಲ್ಲಿ ಪ್ರಮುಖವಾದ ಜೈನ ದೇವಾಲಯವೆಂದರೆ ಅದು ಜೈನ ತೀರ್ಥಂಕರನಲ್ಲಿ ಮೊದಲನೇಯವನಾದ ಸ್ವಾಮಿ ವೃಶಭನಾಥ ಅಸತೃಂಜಯ ಪರ್ವತದಲ್ಲಿ ಜೈನ ದೇಗುಲಗಳ ಸಮೂಹವಿದೆ. ಇವುಗಳನ್ನು 11 ನೇ ಶತಮಾನದಿಂದ 19 ನೇ ಶತಮಾನದಲ್ಲಿ ಜೈನರು ನಿರ್ಮಿಸದರು.

PC:Bernard Gagnon

ಮೆಟ್ಟಿಲು

ಮೆಟ್ಟಿಲು

ಈ ದೇವಾಲಯಗಳಿಗೆ ಭೇಟಿ ನೀಡಲು ಸುಮಾರು 3,500 ಕ್ಕಿಂತ ಅಧಿಕ ಮೆಟ್ಟಿಲುಗಳನ್ನು ಏರಬೇಕಾಗುತ್ತದೆ. ವೃಶಭನಾಥನ ದೇವಾಲಯ ಅತ್ಯಂತ ಸುಂದರವಾದ ಹಾಗೂ ಪ್ರಸಿದ್ಧವಾದ ದೇವಾಲಯ. ಇದು ಮೊದಲ ತೀರ್ಥಂಕರ ದೇವಾಲಯ.

PC:Bernard Gagnon

ಇತರ ಪ್ರಸಿದ್ಧವಾದ ದೇವತ ಮೂರ್ತಿಗಳು

ಇತರ ಪ್ರಸಿದ್ಧವಾದ ದೇವತ ಮೂರ್ತಿಗಳು

ಇತರ ಪ್ರಸಿದ್ಧವಾದ ಜೈನ ದೇವತಾ ಮೂತಿಗಳೆಂದರೆ ವಿಮಲ್ ಪಾಲ್. ಸಂಪ್ರೀತಿ ರಾಜ ಮತ್ತು ಸೋಲಂಕಿ ಕೂಮಾರ್ ಪಾಲ್ ಅತ್ಯಂತ ಮುಖ್ಯವಾದ ಮೂರ್ತಿಗಳು.

PC:Malaiya at en.wikipedia

ಸೋಲಂಕಿ ಕೂಮಾರ್ ಪಾಲ್

ಸೋಲಂಕಿ ಕೂಮಾರ್ ಪಾಲ್

ಸೋಲಂಕಿ ಕೂಮಾರ್ ಪಾಲ್ ಒಬ್ಬ ಜೈನ ಪೋಷಕ. ಈತ ಸಾವಿರ ದೇವಾಲಯಗಳನ್ನು ನಿರ್ಮಿಸಿದ್ದಾನೆ. ಈ ದೇವಾಲಯದಲ್ಲಿ ಒಂದು ಸುಂದರವಾದ ಹಾಗೂ ಗುಪ್ತವಾದ ಕೊಠಡಿಯಿದ್ದು, ಅನುಮತಿಯ ಮೇರೆಗೆ ಈ ಕೊಠಡಿಯ ಒಳಗೆ ಪ್ರವೇಶ ಪಡೆಯಬಹುದು.

PC:Bernard Gagnon

ಜೀವನದಲ್ಲಿ ಒಮ್ಮೆ

ಜೀವನದಲ್ಲಿ ಒಮ್ಮೆ

ಈ ದೇವಾಲಯಗಳನ್ನು 11 ನೇ ಶತಮಾನದಿಂದ 20 ನೇ ಶತಮಾನದ ಮಧ್ಯೆ ಕಾಲಿನದು. ಈ ಪರ್ವತದ ಮೇಲೆ ಜೈನ ದೇವಾಲಯದ ಪ್ರಸಿದ್ಧವಾದ ದೇಗುಲವಿರುವುದರಿಂದ ಜೈನ ಧರ್ಮದವರು ಜೀವನದಲ್ಲಿ ಒಮ್ಮೆಯಾದರೂ ಈ ಪವಿತ್ರ ಪುಣ್ಯ ಕ್ಷೇತ್ರದ ದರ್ಶನ ಪಡೆಯಬೇಕು ಎಂಬುದಾಗಿದೆ.

PC:Cakothari

ಅಂಗರ್ ಪೀರ್

ಅಂಗರ್ ಪೀರ್

ಈ ದೇವಾಲಯದಲ್ಲಿ ಅಂಗರ್ ಪೀರ್ ಎಂಬ ಇಸ್ಲಾಂ ಧರ್ಮದ ವಿಗ್ರಹವನ್ನು ಕಾಣಬಹುದಾಗಿದೆ.


PC: Arian Zwegers

ಶ್ವೇತಾಂಬರರ ದೇವಾಲಯ

ಶ್ವೇತಾಂಬರರ ದೇವಾಲಯ

ಸಾಮಾನ್ಯವಾಗಿ ಜೈನ ಧರ್ಮದಲ್ಲಿ ಶ್ವೇತಂಬರ ಹಾಗೂ ದಿಗಂಬರ ಎಂದು ಇಬ್ಬಾಗಗಳಿವೆ, ಅದರಲ್ಲಿ ಈ ದೇವಾಲಯವು ಶ್ವೇತಾಂಬರರಿಗೆ ಸಂಬಂಧಿಸಿದ ದೇವಾಲಯವಾಗಿದೆ. ಆದರೆ ದಿಗಂಬರರಿಗೆ ಕೇವಲ ಒಂದು ದೇವಾಲಯವನ್ನು ಇಲ್ಲಿ ಕಾಣಬಹುದಾಗಿದೆ.


PC:Nirajdharamshi

ವಿಶೇಷ ಪೂಜೆ

ವಿಶೇಷ ಪೂಜೆ

ಈ ದೇವಾಲಯಗಳಲ್ಲಿ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಹಲವಾರು ಜೈನ ಧರ್ಮಕ್ಕೆ ಸಂಬಂಧಿಸಿದಂತೆ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ.


PAL:Bernard Gagnon

ಸಮೀಪದ ಪ್ರಸಿದ್ಧವಾದ ದೇವಾಲಯಗಳು

ಸಮೀಪದ ಪ್ರಸಿದ್ಧವಾದ ದೇವಾಲಯಗಳು

ಸಮೀಪದ ಪ್ರಸಿದ್ಧವಾದ ಸ್ಥಳಗಳೆಂದರೆ ಬಟ್ಟರ್ ಫ್ಲೆ, ಮಹದೆಜೀ ಶಿಂದೆ ಛತ್ರಿ, ಶನಿವರ್ ವಡ ಪ್ಯಾಲೆಸ್, ಪಾಥಳೇಶ್ವರ, ಸಿಂಗದ್ ಕೋಟೆ, ಕರಾಲ ಗುಹೆ ಇನ್ನೂ ಹಲವಾರು.


PC:Bernard Gagnon

ವಿಮಾನ ಮಾರ್ಗ

ವಿಮಾನ ಮಾರ್ಗ

ಈ ಸಾವಿರ ದೇವಾಲಯಕ್ಕೆ ತೆರಳಬೇಕಾದರೆ ಭಾವನಗರವು ಸಮೀಪದ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ದೇವಾಲಯಕ್ಕೆ ತೆರಳಲು ಕೇವಲ 50 ಕಿ,ಮೀ ಆಂತರದಲ್ಲಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ