Search
  • Follow NativePlanet
Share
» » ಈ ಮಂದಿರದೊಳಗೆ ಪ್ರವೇಶಿಸಿದರೆ ಮಾನಸಿಕ ರೋಗಿಗಳೂ ಗುಣಮುಖರಾಗುತ್ತಾರಂತೆ !

ಈ ಮಂದಿರದೊಳಗೆ ಪ್ರವೇಶಿಸಿದರೆ ಮಾನಸಿಕ ರೋಗಿಗಳೂ ಗುಣಮುಖರಾಗುತ್ತಾರಂತೆ !

ದೆಹಲಿಯಿಂದ ಸುಮಾರು 285 ಕಿ.ಮಿ ದೂರದಲ್ಲಿರುವ ದೌಸಾ ರಾಜಸ್ಥಾನದ ಪ್ರಸಿದ್ಧ ನಗರಗಳಲ್ಲೊಂದಾಗಿದೆ. ಇದು ಸಾಂಸ್ಕೃತಿಕ ಹಾಗೂ ಐತಿಹಾಸಿಕ ಮಹತ್ವಗಳಿಗೆ ಪ್ರಸಿದ್ಧಿ ಹೊಂದಿದೆ. ಇದು ಅಲವಾರ ಹಾಗೂ ಭರತಪುರದಿಂದಲೂ ಬಹಳ ಸಮೀಪದಲ್ಲಿದೆ. ಪ್ರವಾಸಿಗರಿಗೆ ಇದೊಂದು ಪ್ರಮುಖ ಪ್ರವಾಸಿ ತಾಣವೂ ಆಗಿದೆ. ಇಲ್ಲಿ ಪ್ರಾಚೀನ ಕಾಲಕ್ಕೆ ಸಂಬಂಧಪಟ್ಟ ಕೋಟೆಗಳು ಹಾಗೂ ಇತರ ಪುರಾತನ ಕಟ್ಟಡಗಳನ್ನು ಕಾಣಸಿಗುತ್ತದೆ.

ಈ ನಗರವು ರಾಜಸ್ಥಾನದ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ. ಇಲ್ಲಿ ಒಂಟೆ ಸವಾರಿಯೂ ಮಾಡಬಹುದಾಗಿದೆ. ಹಾಗಾದ್ರೆ ಬನ್ನಿ ಈ ಲೇಖನದಲ್ಲಿ ದೌಸಾ ನಿಮ್ಮ ಪ್ರಯಾಣವನ್ನು ಯಾವ ರೀತಿ ಇಂಟ್ರಸ್ಟಿಂಗ್ ಆಗಿಸುತ್ತದೆ ಎನ್ನುವುದನ್ನು ನೋಡೋಣ.

ಚಾಂದ್‌ ಬಾವೊರಿ

ಚಾಂದ್‌ ಬಾವೊರಿ

PC-Vetra

ದೌಸಾದ ಐತಿಹಾಸಿಕ ಸ್ಥಳಗಳನ್ನು ನೋಡಬೇಕಾದರೆ ನೀವು ಇಲ್ಲಿನ ಪ್ರಾಚೀನ ಚಾಂದ್‌ ಬಾವೊರಿಯಿಂದ ಪ್ರಾರಂಭಿಸಿ. ಈ ಬಾವಿಯ ನಿರ್ಮಾಣವು 1900 ವರ್ಷಗಳ ಹಿಂದೆ ಚೌಹಾನ ವಂಶದ ರಾಜರಿಂದ ಮಾಡಲಾಗಿದೆ ಎನ್ನಲಾಗುತ್ತದೆ. ಇಡೀ ಏಷ್ಯಾದಲ್ಲೇ ಹಳೆಯ ಸ್ಟೆಪ್ ವೆಲ್‌ ಇದು ಎನ್ನಲಾಗುತ್ತದೆ. ಇತಿಹಾಸ ಪ್ರೇಮಿಗಳಿಗೆ ಈ ಸ್ಥಳವು ಯಾವುದೇ ಖಜಾನೆಗಿಂತಲೂ ಕಮ್ಮಿ ಇಲ್ಲ. ಭಾರತೀಯ ಇತಿಹಾಸದ ಪ್ರಮುಖ ಘಟ್ಟಗಳನ್ನು ತಿಳಿಯಲು ನೀವು ಇಲ್ಲಿನ ಯಾತ್ರೆ ಮಾಡಬಹುದು. ರಾಜಸ್ಥಾನದ ಯಾತ್ರೆ ಮಾಡುವ ಪರ್ಯಾಟಕರು ಈ ಪ್ರಾಚೀನ ಕಟ್ಟಡಗಳನ್ನು ನೋಡಲೇ ಬೇಕು.

ಕೋರಿಕೆ ಈಡೇರಿದರೆ ಈ ದೇವಾಲಯಕ್ಕೆ ಬಂದು ಗಂಟೆ ಕಟ್ಟುತ್ತಾರಂತೆ !

ಹರ್ಸತ್ ಮಾತ ಮಂದಿರ

ಹರ್ಸತ್ ಮಾತ ಮಂದಿರ

PC- Adityavijayavargia

ಚಾಂದ್‌ ಬಾವೊರಿಯ ಸಮೀಪದಲ್ಲಿ ಇನ್ನೊಂದು ಐತಿಹಾಸಿಕ ಸ್ಥಳವಿದೆ. ಅದು ಪ್ರವಾಸಿಗರನ್ನು ಇನ್ನಷ್ಟು ಹೆಚ್ಚು ಆಕರ್ಷಿಸುತ್ತದೆ. ಅದುವೇ ಮಾತಾ ಹರ್ಸತ್ ಮಂದಿರ. ಹರ್ಸತ್ ಮಾತೆಗೆ ಸಮರ್ಪಿತವಾಗಿರುವ ಈ ಮಂದಿರವು ಪವಿತ್ರ ಧಾರ್ಮಿಕ ಸ್ಥಳವೂ ಆಗಿದೆ. ಈ ಮಂದಿರವು ಸಮಯದ ಜೊತೆಗೆ ಬಹಳ ಕಠಿಣ ದಿನಗಳನ್ನೂ ನೋಡಿದೆ. ಮುಸ್ಲಿಮ್ ರಾಜರುಗಳು ಈ ಮಂದಿರವನ್ನು ನೆಲಸಮ ಮಾಡುವ ಪ್ರಯತ್ನ ಮಾಡಿದ್ದರು. ಈಗಿನ ಪರಿಸ್ಥಿತಿಯಲ್ಲಿ ಈ ಮಂದಿರವು ಕೇವಲ ಒಂದು ಪುರಾತನ ಕಟ್ಟಡದಂತೆ ಪಾಳು ಬಿದ್ದಿದೆ. ಆದರೆ ಮಂದಿರದ ಭವ್ಯತೆಯನ್ನು ಇಂದಿಗೂ ಕಾಣಬಹುದು. ಇಲ್ಲಿನ ದೊಡ್ಡ ಅಂಗಳದ ಜೊತೆಗೆ ಸುಂದರವಾದ ಮೂರ್ತಿಗಳು ಪ್ರವಾಸಿಗರ ಗಮನವನ್ನು ತನ್ನತ್ತ ಸೆಳೆಯುತ್ತದೆ.

ಬಂಡಾರೇಜ್

ಬಂಡಾರೇಜ್

ದೌಸಾದ ಐತಿಹಾಸಿಕ ಸ್ಥಳಗಳಲ್ಲಿ ನೀವು ಇಲ್ಲಿನ ಬಂಡಾರೇಜ್‌ ನಗರದ ಪ್ರವಾಸವನ್ನೂ ಕೈಗೊಳ್ಳಬಹುದು. ಈ ಹಳ್ಳಿಯಲ್ಲೂ ಒಂದು ಆಕರ್ಷಕ ಬಾವಿ ಇದೆ. ಇದು ತನ್ನ ವಾಸ್ತುಕಲೆಯ ಮೂಲಕ ಎಲ್ಲರನ್ನೂ ಆಕರ್ಷಿಸುತ್ತದೆ. ಆದರೆ ಇಲ್ಲಿನ ಪ್ರಮುಖ ಆಕರ್ಷಣೆ ಎಂದರೆ ಭದ್ರಾವತಿ ಮಹಲ್. ಇದು ತನ್ನ ಅದ್ಭುತ ಸೌಂದರ್ಯದಿಂದ ಎಲ್ಲರ ಗಮನ ಸೆಳೆಯುತ್ತದೆ.

ಮನುಷ್ಯ ಮೊಗದ ಗಣೇಶ; ಪಿತೃ ಪಿಂಡಗಳು ಶಿವಲಿಂಗಗಳಾಗಿ ಪರಿವರ್ತಿತವಾಗಿದ್ದು ಇಲ್ಲೇ

ಮೆಹಂದಿಪುರ ಬಾಲಾಜಿ ಮಂದಿರ

ಮೆಹಂದಿಪುರ ಬಾಲಾಜಿ ಮಂದಿರ

PC- Seoduniya

ದೌಸಾವು ತನ್ನ ಐತಿಹಾಸಿಕ ಸ್ಥಳಗಳ ಜೊತೆಗೆ ಧಾರ್ಮಿಕ ಸ್ಥಳಗಳಿಗೂ ಹೆಸರುವಾಸಿಯಾಗಿದೆ. ನೀವು ಇಲ್ಲಿನ ಪ್ರಸಿದ್ಧ ಮೆಹಂದಿಪುರ ಬಾಲಾಜಿ ಮಂದಿರದ ದರ್ಶನವೂ ಮಾಡಬಹುದು. ಹನುಮಂತನಿಗೆ ಸಮರ್ಪಿತವಾಗಿರುವ ಈ ಮಂದಿರವು ತನ್ನ ಅದ್ಭುತ ಚಮತ್ಕಾರಿ ಶಕ್ತಿಗಳಿಂದಾಗಿ ಪ್ರಸಿದ್ಧಿ ಹೊಂದಿದೆ. ಈ ಮಂದಿರವು ಮಾನಸಿಕ ವಿಕಲಾಂಗರನ್ನು ಗುಣಪಡಿಸುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಇಲ್ಲಿ ಪ್ರವೇಶಿಸುವ ಪ್ರತಿಯೊಬ್ಬ ಮಾನಸಿಕ ರೋಗಿಯು ಗುಣಮುಖವಾಗಿ ಹೊರಬರುತ್ತಾನೆ ಎನ್ನಲಾಗುತ್ತದೆ. ಆದರೆ ಈ ಮಾತಿನಲ್ಲಿ ಎಷ್ಟು ಸತ್ಯವಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಈ ಬಗ್ಗೆ ಕಂಡುಕೊಳ್ಳಲು ಹಲವು ವೈದ್ಯರುಗಳು ಬಂದಿದ್ದರೂ ಆದರೂ ಅವರಿಂದಲೂ ಇದನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ.

ಮೋಹನ್‌ಘಡ್‌ ಕೋಟೆ

ಮೋಹನ್‌ಘಡ್‌ ಕೋಟೆ

PC- Shelleysweety58

ಈ ಮೇಲಿನ ತಾಣಗಳನ್ನು ಹೊರತುಪಡಿಸಿ ನೀವು ಮೋಹನ್‌ ಘಡ್‌ ಕೋಟೆಯ ದರ್ಶನವನ್ನೂ ಮಾಡಬಹುದು. ಬೆಟ್ಟದ ಮೇಲಿರುವ ಈ ಕೋಟೆಯು ಅದ್ಭುತ ದೃಶ್ಯವನ್ನು ನೀಡುತ್ತದೆ. ಈ ಕೋಟೆಯನ್ನು ಒಂದು ಐಷಾರಾಮಿ ಹೋಟೆಲ್‌ ಜೊತೆ ಸೇರಿಸಲಾಗಿದೆ. ಇಲ್ಲಿ ನೀವು ಸ್ವಲ್ಪ ಸಮಯ ಕಾಳ ಕಳೆದು ಆ ನಂತರ ಐಷರಾಮಿ ಜೀವನ ಶೈಲಿಯ ಅನುಭವವನ್ನು ಪಡೆಯಲಬಹುದು. ಈ ಕೋಟೆಯು ಬೆಟ್ಟದ ಮೇಲಿರುವುದರಿಂದ ಇಲ್ಲಿನ ಸುತ್ತಮುತ್ತಲ ರಮಣೀಯ ದೃಶ್ಯವನ್ನು ನೀವು ಕಣ್ತುಂಬಿಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more