• Follow NativePlanet
Share
Menu
» »ರುಚಿ ರುಚಿಯಾದ ಬಿರಿಯಾನಿಗೆ ಈ ಹೋಟೆಲ್ ಫೆಮಸ್

ರುಚಿ ರುಚಿಯಾದ ಬಿರಿಯಾನಿಗೆ ಈ ಹೋಟೆಲ್ ಫೆಮಸ್

Written By:

ರುಚಿ ರುಚಿಯಾದ ಭೋಜನ ಎಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ಮಾಂಸ ಆಹಾರಿಗಳಿಗಂತೂ ಬಾಯೂರಿಸುವ ಮಾಂಸ ಆಹಾರವನ್ನು ಸೇವಿಸುವುದು ಅಂದರೆ ಅಚ್ಚು ಮೆಚ್ಚು. ಈಗಾಗಲೇ ರಂಜಾನ್ ಹಬ್ಬ ಮುಗಿದಿದೆ. ನಾವು ನಾನ್ ವೆಜ್ ಮಾಡಿಕೊಂಡು ತಿನ್ನೊಣ ಎಂದರೆ ಸೋಮವಾರ.

ಒಮ್ಮೆ ಒಂದು ಒಳ್ಳೆ ಹೋಟೆಲ್‍ಗೆ ಹೋಗಿ ಬಾಯುರಿಸುವ ನಾನ್ ವೆಜ್‍ನ ಸೇವಿಸಬೇಕು, ಕುಟುಂಬದವರ ಜೊತೆ ಅಥವಾ ಸ್ನೇಹಿತರ ಜೊತೆ ಸಂತೋಷವಾಗಿ ಹೊರಗಡೆ ಆಹಾರ ಸೇವಿಸ ಬೇಕು ಎಂಬುವವರಿಗೆ ಈ ಲೇಖನದಲ್ಲಿನ ಹೋಟೆಲ್‍ಗೆ ಒಮ್ಮೆ ತೆರಳಿ. ನಿಮಗಿಷ್ಟವಾದ ಭೋಜನ ಮಾಡಿ ಸಂತೋಷ ಹೊಂದಿರಿ.

ಸಾಮಾನ್ಯವಾಗಿ ಯಾವುದೇ ಒಂದು ಹೋಟೆಲ್‍ಗೆ ಹೋದರೂ ಯಾವ ಆಹಾರ ಸ್ವಾಧಿಷ್ಟವಾಗಿರುತ್ತದೆ ಎಂದು ಯೋಚಿಸುತ್ತಿರುತ್ತೇವೆ. ಮಾಂಸ ಆಹಾರಿಗಳಿಗಂತೂ ಬಿರಿಯಾನಿ, ಚಿಕನ್ ಪ್ರೈ, ಲೆಗ್ ಪೀಸ್, ಫಿಶ್ ಫ್ರೈ ಇನ್ನೂ ಹಲವಾರು ರುಚಿಕರವಾದ ಆಹಾರಗಳು ಹಾಗೆಯೇ ಸಸ್ಯಹಾರಿಗಳಿಗೂ ಕೂಡ ಈ ಹೋಟೆಲ್‍ನಲ್ಲಿ ರುಚಿ ಯ ಜೊತೆ ಜೊತೆಗೆ ಶುಚಿಯು ಕೂಡ ಇಲ್ಲಿ ಇದೆ.

ಹಾಗಾದರೆ ಒಮ್ಮೆ ಭೇಟಿ ನೀಡಲೇ ಬೇಕು ಅಲ್ಲವೇ? ಅಂತವರು ಬಿರಿಯಾನಿ ಹಾಲಿಕ್ಸ್ ಪ್ಯಾರೆಡ್ಸೈಗೆ ಒಮ್ಮೆ ಭೇಟಿ ಕೊಡಿ.

ಬಿರಿಯಾನಿ ಹಾಲಿಕ್ಸ್ ಪ್ಯಾರೆಡ್ಸೈ

ಬಿರಿಯಾನಿ ಹಾಲಿಕ್ಸ್ ಪ್ಯಾರೆಡ್ಸೈ

ಬಿರಿಯಾನಿ ಹಾಲಿಕ್ಸ್ ಬೆಂಗಳೂರು ನಗರದಲ್ಲಿನ ಪ್ರಸಿದ್ಧವಾದ ಬಿರಿಯಾನಿ ವಲಯ. ಇಲ್ಲಿನ ಬಾಣಸಿಗರು ಅತ್ಯುತ್ತಮವಾದ ಪರಿಣಿತಿಯನ್ನು ಹೊಂದಿದವರು ಎಂದು ಈ ಹೋಟೆಲ್‍ನವರು ಹೇಳುತ್ತಾರೆ. 2010ರ ಆರಂಭವಾಗಿನಿಂದ 5 ಶಾಖೆಗಳನ್ನು ಇವರು ತೆರೆದಿದ್ದಾರೆ. ಇವರು ರುಚಿಗೆ ಅಲ್ಲದೇ ಶುಚಿಗೂ ಹೆಚ್ಚು ಪ್ರಾಶಸ್ಯವನ್ನು ನೀಡುತ್ತಾರೆ. ಈ ಹೋಟೆಲ್‍ನ ಆಹಾರವನ್ನು ಹರಿಸಿ ಬರುವ ಗ್ರಾಹಕರಿಗೆ ಉತ್ತಮವಾಗಿ ಆಥಿತ್ಯವನ್ನು ನೀಡುತ್ತಾರೆ.

PC:pelican

ಬಿರಿಯಾನಿ

ಬಿರಿಯಾನಿ

ಇಲ್ಲಿನ ಬಿರಿಯಾನಿಯ ಅದ್ಭುತ ಸವಿಯನ್ನು ಯಾವುದೇ ಬಿರಿಯಾನಿ ಪ್ರೇಮಿ ಎಂದಿಗೂ ಮರೆಯುವುದಿಲ್ಲ. ಸುವಾಸನೆಯುಕ್ತ ತುಪ್ಪ, ಶುದ್ದವಾದ ಚಿಕನ್ ಬಳಸಿ ತಾಯಾರು ಮಾಡಲಾಗುತ್ತದೆ. ಹೋಟೆಲ್‍ನ ವಾತಾವರಣವು ಶಾಂತಿಯುತವಾದ ಪರಿಸರ, ಶಾಂತ ಸಂಗೀತ ಮತ್ತು ಉತ್ತಮ ಸೇವೆ ನೀಡುವ ಸಿಬ್ಬಂದಿಗಳನ್ನು ಈ ಹೋಟೆಲ್‍ನಲ್ಲಿ ಕಾಣಬಹುದಾಗಿದೆ.


PC:insatiablemunch

ಸಸ್ಯಹಾರಿ

ಸಸ್ಯಹಾರಿ

ಕೇವಲ ಮಾಂಸ ಆಹಾರಿಗಳಿಗೇ ಅಲ್ಲದೇ ಸಸ್ಯಹಾರಿಗಳಿಗೂ ಚೀನಿಯರ ತಾಂಡೂರಿ ಮತ್ತು ಪೇಷಾವರಿ ಚಾಟ್ಸ್‍ಗಳನ್ನು ಒದಗಿಸಲಾಗುತ್ತದೆ. ಇಲ್ಲಿ ಗುಂಟೂರ್ ಚಿಕನ್ ಮತ್ತು ಲೆಮನ್ ಚಿಕನ್ ಮುಂತಾದ ವಿಶೇಷವಾದ ಆಹಾರವನ್ನು ಸವಿಯಬಹುದು. ಸೊಗಸಾದ ಒಳಾಂಗಣದೊಂದಿಗೆ ತಾಜಾ ಭಾವಪೂರ್ಣವಾದ ಆಹಾರ ಅನುಭವ ಹಾಗೂ ಬೆಳಕಿನ ಸಂಗೀತದೊಂದಿಗೆ ಕುಟುಂಬ ಸಭ್ಯದವರೊಂದಿಗೆ ಆನಂದವಾಗಿ ಭೋಜನ ಮಾಡಲು ಈ ಹೋಟೆಲ್‍ಗೆ ಒಮ್ಮೆ ಭೇಟಿ ಕೊಡಿ.


PC:insatiablemunch

ಎಲ್ಲಿದೆ?

ಎಲ್ಲಿದೆ?

ಈ ಸುಂದರವಾದ ಹೋಟೆಲ್ ಬೆಂಗಳೂರಿನ ಮಾರತ್ ಹಳ್ಳಿಯ ಸಮೀಪ ಚಂದ್ರ ಲೇಔಟ್. 92/6 ಸರ್‍ಜಾ ಪುರದ ಬಳಿ ಇದೆ. ಬೆಳಗ್ಗೆ 11 ಗಂಟೆಯಿಂದ ಮದ್ಯಾಹ್ನ 3:30 ರವರೆಗೆ ಹಾಗೂ ಸಂಜೆ 6:30 ರಿಂದ ರಾತ್ರಿ 11 ರವೆಗೆ ತೆರೆದಿರಲಾಗುತ್ತದೆ.

PC:Alpha

ಇಲ್ಲಿನ ಸ್ವಾಧಿಷ್ಟವಾದ ಆಹಾರಗಳು

ಇಲ್ಲಿನ ಸ್ವಾಧಿಷ್ಟವಾದ ಆಹಾರಗಳು

ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ವೆಜ್ ಬಿರಿಯಾನಿ, ತಂದೂರಿ ಚಿಕನ್, ಎಗ್ ಬಿರಿಯಾನಿ, ಚಿಕನ್ ಲಾಲಿಪುಪ್, ಗುಂಟೂರು ಚಿಕನ್, ಜೀರಾ ರೈಸ್, ಘೀ ರೈಸ್, ಪನ್ನಿರ್ ಬಿರಿಯಾನಿ, ಫಿಶ್ ಬಿರಿಯಾನಿ ಇನ್ನೂ ಹಲವಾರು.

PC:Leon Brocard

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ