Search
  • Follow NativePlanet
Share
» »ಶತ್ರು ಸಂಹಾರ ಪೂಜೆಗೆ ಫೇಮಸ್ ಈ ಭದ್ರಕಾಳಿ ದೇವಸ್ಥಾನ

ಶತ್ರು ಸಂಹಾರ ಪೂಜೆಗೆ ಫೇಮಸ್ ಈ ಭದ್ರಕಾಳಿ ದೇವಸ್ಥಾನ

ಈ ಭದ್ರಕಾಳಿ ದೇವಸ್ಥಾನದಲ್ಲಿ ಪಾರ್ವತಿ ದೇವಿಯು ಭದ್ರಕಾಳಿಯಾಗಿ ಸಂಚರಿಸುತ್ತಾಳಂತೆ, ಅಂತಹ ಮಹಿಮಾನ್ವೀತ ದೇವಾಲಯವೇ ತಿರುವಾರಾಡು ಭಗವತಿ ದೇವಸ್ಥಾನ, ಅಥವಾ ಮಡಾಯಿಯ ಕಾವು ದೇವಸ್ಥಾನ. ಇದು ಉತ್ತರ ಕೇರಳದ ಎಲ್ಲಾ ಭದ್ರಕಾಳಿ ದೇವಾಲಯಗಳ ತಾಯಿ ದೇವಸ್ಥಾನವಾಗಿದೆ. ಇಲ್ಲಿನ ದೇವತೆಯು ಭದ್ರಾಕಳಿಯು ಉಗ್ರ ರೂಪವಾಗಿದೆ. ಬನ್ನಿ ಈ ದೇವಾಲಯದ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ.

ರಾತ್ರಿ ಯಾರು ಪ್ರದಕ್ಷಿಣೆ ಹಾಕುವಂತಿಲ್ಲ

ರಾತ್ರಿ ಯಾರು ಪ್ರದಕ್ಷಿಣೆ ಹಾಕುವಂತಿಲ್ಲ

PC:Ram K Bhattatirippad

ತಲಿಪರಂಬದ ರಾಜರಾಜೇಶ್ವರ ದೇವಸ್ಥಾನದಲ್ಲಿ ಶಿವ, ಪಾರ್ವತಿ ನೆಲೆಸಿದ್ದಾರೆ. ಇಲ್ಲಿಗೆ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆ. ರಾತ್ರಿ ಎಂಟು ಗಂಟೆಯ ನಂತರ ದೇವಸ್ಥಾನದ ಹೊರ ಆವರಣದಲ್ಲಿ ಯಾರೂ ಪ್ರದಕ್ಷಿಣೆ ಹಾಕುವಂತಿಲ್ಲ, ಈ ದೇವಸ್ಥಾನದ ಅರ್ಚಕರು ಹಾಗೂ ಕಾವಲುಗಾರರನ್ನು ಹೊರತುಪಡಿಸಿ ಬೇರೆ ಯಾರು ಇಲ್ಲಿ ಇರುವಂತಿಲ್ಲ. ಯಾಕೆಂದರೆ ರಾತ್ರಿ ಎಂಟು ಗಂಟೆಯ ನಂತರ ದೇವಿ ಪಾರ್ವತಿ ರುದ್ರಕಾಳಿಯಾಗಿ ಇಲ್ಲಿ ಸಂಚರಿಸುತ್ತಾಳಂತೆ.

ಎಲ್ಲಿದೆ ಈ ಭದ್ರಕಾಳಿ ದೇವಾಲಯ

ಎಲ್ಲಿದೆ ಈ ಭದ್ರಕಾಳಿ ದೇವಾಲಯ

PC:Ilango adikal chera

ಈ ದೇವಾಲಯವಿರುವುದು ಕಣ್ಣೂರು ಜಿಲ್ಲೆಯಲ್ಲಿರುವ ಮಾಡಾಯಿ ಕಾವುನಲ್ಲಿ. ಇಲ್ಲಿನ ಆವರಣದ ಒಳಗೆ ಐದು ದೇವಾಲಯವಿದೆ . ಶಿವನದ್ದು ಶಿವ ಪೂರ್ವಕ್ಕೆ ಮುಖಮಾಡಿದ್ದರೆ ಭದ್ರಕಾಳಿಯು ಪಶ್ವಿಮಕ್ಕೆ ಮುಖ ಮಾಡಿದ್ದಾಳೆ.

ಭದ್ರಕಾಳಿ ಪ್ರಸಾದ

ಭದ್ರಕಾಳಿ ಪ್ರಸಾದ

PC:Ilango adikal chera

ಭದ್ರಕಾಳಿಗೆ ಪೂಜೆ ಮಾಡುವ ಬ್ರಾಹ್ಮಣರು ಮಾಂಸ ಸೇವನೆ ಮಾಡುತ್ತಾರೆ. ಕೋಟಿ ಕಲಶಂ ಎನ್ನುವ ಪೂಜೆ ನಡೆಸುವಾಗ ಕೋಳಿಗಳನ್ನು ಬಲಿ ಕೊಡಲಾಗುತ್ತದೆ. ಇಲ್ಲಿ ಭಕ್ತರಿಗೆ ಪ್ರಸಾದವಾಗಿ ಕೋಳಿ ಮಾಂಸವನ್ನು ನೀಡಲಾಗುತ್ತದೆ. ಮಾಂಸಾಹಾರ ತಿನ್ನದವರಿಗೆ ಬೇಯಿಸಿದ ಹೆಸರು ಕಾಳು, ಅಕ್ಕಿ, ಬೆಲ್ಲದಿಂದ ಮಾಡಲಾದ ಪ್ರಸಾದವನ್ನು ನೀಡಲಾಗುತ್ತದೆ.

ಬಂಗಾರದ ಕವಚದ ಖಡ್ಗ

ಬಂಗಾರದ ಕವಚದ ಖಡ್ಗ

PC: youtube

ಬಂಗಾರದ ಕವಚದ ಖಡ್ಗವಿದೆ. ಇದು ಶತ್ರು ಸಂಹಾರದ ಸಂಖೇತವಾಗಿದೆ. ವರ್ಷಕ್ಕೊಮ್ಮೆ ಇದನ್ನು ಹೊರತರಲಾಗುತ್ತದೆ. ಪೂಜೆ ನಡೆಸಿ ಭಕ್ತರ ದರ್ಶನಕ್ಕೆ ಇಡಲಾಗುತ್ತದೆ. ಪೂಜೆ ಆದ ನಂತರ ಮತ್ತೆ ಈ ಖಡ್ಗವನ್ನು ಅಲ್ಲೇ ಇಡಲಾಗುತ್ತದೆ. ಚರಕಲ ರಾಜರು ಯುದ್ಧಕ್ಕೆ ಹೋಗುವ ಮುನ್ನ ಭದ್ರಕಾಳಿಯನ್ನು ಪೂಜಿಸುತ್ತಿದ್ದರು. ಭದ್ರಕಾಳಿ ಶತ್ರು ಸಂಹಾರ ನಡೆಸುತ್ತಾಳಂತೆ.

ಶತ್ರು ಸಂಹಾರ ಪೂಜೆ

ಶತ್ರು ಸಂಹಾರ ಪೂಜೆ

PC:Ram K Bhattatirippad

ಇಲ್ಲಿ ಎಂಟು ವಿಧಧ ಪೂಜೆ ಮಾಡುತ್ತಾರೆ. ಬೆಲ್ಲದ ಪಾಯಸ ಪೂಜೆ 5 ರೂ. ಪುಷ್ಪಾಂಜಲಿ 3 ರೂ. ತ್ರಿಕಾಲ ಪುಷ್ಪಾಂಜಲಿ 15 ರೂ., ರಕ್ತ ಪುಷ್ಪಾಂಜಲಿ ಮುಂತಾದ ಪೂಜೆಗಳನ್ನು ನಡೆಸಲಾಗುತ್ತದೆ. ಶತ್ರು ಸಂಹಾರ ಪೂಜೆಗೆ ಕೇವಲ 50 ರೂ. ಮಧ್ಯಾಹ್ನ 12 ಗಂಟೆ ಹಾಗೂ ಸಂಜೆ 6 ಗಂಟೆಗೆ ಈ ಪೂಜೆ ನಡೆಯುತ್ತದೆ. ಈ ಸಂದರ್ಭದಲ್ಲಿ ಪೂಜೆ ಮಾಡೊಸುವವರನ್ನು ಹೊರತುಪಡಿಸಿ ಬೇರೆ ಯಾರಿಗೂ ಪ್ರವೇವಿಲ್ಲ. ಪೂಜೆ ವಿಧಿ ವಿಧಾನಗಳು ಗೌಪ್ಯವಾಗಿರುತ್ತವೆ.

ಶತ್ರುಗಳ ಸಂಹಾರವಲ್ಲ ಅಡೆತಡೆಗಳ ನಿವಾರಣೆ

ಶತ್ರುಗಳ ಸಂಹಾರವಲ್ಲ ಅಡೆತಡೆಗಳ ನಿವಾರಣೆ

PC: youtube

ಈ ಪೂಜೆಯಿಂದ ಮನಸ್ಸಿನ ಬೇಡಿಕೆ ಈಡೇರುತ್ತದೆ. ಸಂಕಷ್ಟ ಪರಿಹಾರವಾಗುತ್ತದೆ. ಉದ್ಯೋಗ, ವ್ಯವಹಾರ, ವಿವಾಹಕ್ಕಾಗಿ ಈ ಪೂಜೆಯನ್ನು ಮಾಡಿಸುತ್ತಾರೆ. ಸಾಕಷ್ಟು ರಾಜಕಾರಣಿಗಳು ಇಲ್ಲಿಗೆ ಬಂದು ಶತ್ರು ಸಂಹಾರ ಪೂಜೆ ಮಾಡಿಸುತ್ತಾರೆ. ಇದರಿಂದ ಅಡೆತಡೆಗಳು ನಿವಾರಣೆಯಾಗುತ್ತವಂತೆ. ಸಾವಿರಾರು ವರ್ಷಗಳಿಂದ ಭಕ್ತರ ಬೇಡಿಕೆಯನ್ನು ಈಡೇರಿಸುತ್ತಿದ್ದಾಳೆ ಈ ಭಗವತಿ ದೇವಿ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: youtube

ಪಯಂಗಡಿ ರೈಲು ನಿಲ್ದಾಣವು ಹತ್ತಿರದ ರೈಲು ನಿಲ್ದಾಣವಾಗಿದ್ದು, ಇದು ಮಡಾಯಿಕಾವು ಭಗವತಿ ದೇವಸ್ಥಾನದಿಂದ 2 ಕಿ.ಮೀ ದೂರದಲ್ಲಿದೆ. ಪಯಂಗಡಿ ರೈಲು ನಿಲ್ದಾಣದ ಮೂಲಕ ಹಾದು ಹೋಗುವ ಕೆಲವು ಪ್ರಮುಖ ರೈಲುಗಳು ಪರಶುರಾಮ್ ಎಕ್ಸ್ಪ್ರೆಸ್, ಮಂಗಳೂರು ಮೇಲ್, ಮಂಗಳಾ ಲಕ್ಷದ್ವೀಪ ಎಕ್ಸ್ಪ್ರೆಸ್, ಮಲಬಾರ್ ಎಕ್ಸ್ಪ್ರೆಸ್, ಚೆನ್ನೈ ಮೇಲ್, ಮಾವೆಲಿ ಎಕ್ಸ್ಪ್ರೆಸ್, ತಿರುವನಂತಪುರ ಎಕ್ಸ್ಪ್ರೆಸ್ ಇತ್ಯಾದಿ.

ಕಣ್ಣೂರು, ಪಯ್ಯನೂರು, ತಲಿಪರಂಬ ನಿಂದ ಬಸ್ಸುಗಳು ಪಯಾಂಗಡಿಗೆ ತಲುಪುತ್ತವೆ. ಇದು ಪಯಂಗಡಿ ಬಸ್ ನಿಲ್ದಾಣದಿಂದ ಕೇವಲ 1 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X