Search
  • Follow NativePlanet
Share
» »ತೀರ್ಥಹಳ್ಳಿಯ ಎಳ್ಳಮವಾಸ್ಯೆ ಬಲು ವಿಶಿಷ್ಟ

ತೀರ್ಥಹಳ್ಳಿಯ ಎಳ್ಳಮವಾಸ್ಯೆ ಬಲು ವಿಶಿಷ್ಟ

By Vijay

ಮಲೆನಾಡಿನ ಅದ್ಭುತ ಗಿರಿಕನ್ಯೆಯರ ಮಧ್ಯೆ, ನೀರೆಯರೆ ನಾಚಿ ನೀರಾಗುವಂತಹ ಸುಂದರ ಪ್ರಕೃತಿ ಸೊಬಗಿನ ಆಸರೆಯಲ್ಲಿ, ನಿತ್ಯ ಹರಿದ್ವರ್ಣದ ದಟ್ಟ ಕಾಡಿನಲ್ಲಿ ಹಾಯಾಗಿ ಅವಿತು ಕುಳಿತಿರುವ ತೀರ್ಥ ಕ್ಷೇತ್ರವೆ ತೀರ್ಥಹಳ್ಳಿ. ತೀರ್ಥಹಳ್ಳಿಯು ಶಿವಮೊಗ್ಗ ನಗರದಿಂದ ಸುಮಾರು 65 ಕಿ.ಮೀ ಗಳಷ್ಟು ದೂರವಿದ್ದು ರಸ್ತೆಯ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಹಿಂದೆ ಇದನ್ನು "ಹಿಮವಿಲ್ಲದ ಕಾಶ್ಮೀರ" ಎಂತಲೂ ಕರೆಯುತ್ತಿದ್ದರು.

ಋತುಮಾನದಂತ್ಯದ ಸೇಲ್ : ಹೋಟೆಲ್ ಮತ್ತು ಫ್ಲೈಟ್ ಬುಕ್ಕಿಂಗ್ ಮೇಲೆ 50% ರವರೆಗೆ ಕಡಿತ ಪಡೆಯಿರಿ

ಹಿಂದೂ ಕ್ಯಾಲೆಂಡರಿನ ಪ್ರಕಾರ ಮಾರ್ಗಶಿರ ಮಾಸದ ಮೊದಲ ಹೊಸ ಚಂದ್ರ ದಿನದಂದು (ಅಮವಾಸ್ಯೆ) ಆಚರಿಸಲಾಗುವ ಎಳ್ಳು ಅಮವಾಸ್ಯೆಯನ್ನು ಅತಿ ವಿಶಿಷ್ಟ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ ತೀರ್ಥಹಳ್ಳಿಯಲ್ಲಿ. ಜಾತ್ರೆಯು ಸಾಮಾನ್ಯವಾಗಿ ಐದು ದಿನಗಳವರೆಗೆ ನಡೆದರೂ ಸಹ ಮೊದಲ ಮೂರು ದಿನಗಳು ಸಾರ್ವಜನಿಕರ ಮುಖ್ಯ ಆಕರ್ಷಣೆಗಳಾಗಿರುತ್ತವೆ.

ವಿಶೇಷ ಲೇಖನ : ತೀರ್ಥಹಳ್ಳಿಯ ಸಾರ್ಥಕ ಪ್ರವಾಸ

ತೀರ್ಥಹಳ್ಳಿಯ ಪ್ರಮುಖ ದೇವಾಲಯವಾದ ರಾಮೇಶ್ವರ ದೇವಸ್ಥಾನದಿಂದ ಆರಂಭಗೊಳ್ಳುವ ಜಾತ್ರೆಯು ಸಾಕ್ಷಾತ್ ಹಳ್ಳಿಗಳಲ್ಲಿ ಕಂಡು ಬರುವ ಜಾತ್ರೆಗಳ ಕಳೆಯನ್ನೇ ನೆರೆದವರಿಗೆ ಉಣಬಡಿಸುತ್ತದೆ. ಅಪಾರ ಜನಜಂಗುಳಿ, ಬಾಯಲ್ಲಿ ನೀರೂರಿಸುವ ವಿವಿಧ ಭಕ್ಷ್ಯಗಳು, ಮನರಂಜನಾ ಚಟುವಟಿಕೆಗಳು, ಮಕ್ಕಳಿಗೋಸ್ಕರ ಸಿಗುವ ಆಟಿಕೆಗಳು, ಹಿರಿಯರು ಕೊಳ್ಳಲು ಉಡುಗೆ ತೊಡುಗೆಗಳು ಹೀಗೆ ಹಲವಾರು ಅಂಶಗಳು ಒಟ್ಟಾಗಿ ಸೇರಿ ಜಾತ್ರೆಯ ಕಳೆಯನ್ನು ರಂಗೇರಿಸುತ್ತವೆ.

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ಈ ಪ್ರದೇಶಕ್ಕೆ ತೀರ್ಥಹಳ್ಳಿ ಅಥವಾ ಪರಶುರಾಮ ಕ್ಷೇತ್ರ/ರಾಮ ಕ್ಷೇತ್ರ ಎಂಬ ಹೆಸರು ಬರಲು ಹಾಗೂ ಅವಮಾಸ್ಯೆಯನ್ನು ಅದ್ದೂರಿಯಾಗಿ ಆಚರಿಸುವ ಹಿಂದೆ ಬಲು ರೋಚಕವಾದ ಕಥೆಯೆ ಇದೆ. ಮುಂದಿನ ಸ್ಲೈಡುಗಳಲ್ಲಿ ಆ ಕಥೆಯ ಕುರಿತು ತಿಳಿಯಿರಿ.

ಚಿತ್ರಕೃಪೆ: Manjeshpv

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ಹಿಂದೆ ಜಮದಗ್ನಿ ಋಷಿಯ ಆದೇಶದಂತೆ ಅವರ ಮಗನಾದ ಪರಶುರಾಮನು ತನ್ನ ಕೊಡಲಿಯಿಂದ ತಾಯಿಯ ರುಂಡವನ್ನು ಕಡಿದು, ನಂತರ ಆ ಕೊಡಲಿಗೆ ತಾಕಿದ ರಕ್ತದ ಕಲೆಯನ್ನು ಅಳಿಸಲೆಂದು ಸಾಕಷ್ಟು ನದಿಗಳಲ್ಲಿ ಶುಚಿಗೊಳಿಸಿದರು ಆದರೂ ಎಳ್ಳಿನ ಗಾತ್ರದಷ್ಟು ಒಂದು ಹನಿ ರಕ್ತದ ಕಲೆಯು ಎಲ್ಲೂ ಹೋಗದಾಯಿತು.

ಚಿತ್ರಕೃಪೆ: Manjeshpv

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ಕೊನೆಗೆ ಈ ಕ್ಷೇತ್ರದಲ್ಲಿ ಹರಿದಿರುವ ತುಂಗಾ ನದಿಯಲ್ಲಿ ಪರಶುರಾಮರು ತಮ್ಮ ಕೊಡಲಿಯನ್ನು ಅದ್ದಿದಾಗ ಕೊಡಲಿಗೆ ತಾಕಿದ ಕೊನೆಯ ಒಂದು ಹನಿಯ ರಕ್ತದ ಕಲೆ ಹೊರಟು ಹೋಯಿತು. ಈ ರೀತಿಯಾಗಿ ಪಾವಿತ್ರ್ಯತೆ ಹೊಂದಿರುವ ತುಂಗಾ ನದಿಯು ತೀರ್ಥಕ್ಕೆ ಸಮನಾಗಿರುವುದರಿಂದ ಇದಕ್ಕೆ ತೀರ್ಥಹಳ್ಳಿ ಎಂಬ ಹೆಸರು ಬಂದಿತು.

ಚಿತ್ರಕೃಪೆ: Hari Prasad Nadig

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ಈ ನದಿಯಲ್ಲಿ ಮಿಂದರೆ ಅಥವಾ ಪುಣ್ಯ ದಿನಗಳಂದು ಸ್ನಾನ ಮಾಡಿದರೆ ಸರ್ವ ಪಾಪ ಕರ್ಮಗಳು ಅಳಿಸಿ ಹೋಗುತ್ತವೆ ಎಂಬ ಅಚಲವಾದ ನಂಬಿಕೆ ಇಂದಿಗೂ ಚಾಲ್ತಿಯಲ್ಲಿದೆ. ಆದ್ದರಿಂದ ಎಳ್ಳವಮಾಸ್ಯೆಯ ದಿನದಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡಿ ತುಂಗೆಯಲ್ಲಿ ಮಿಂದು ಪುನಿತರಾಗುತ್ತಾರೆ.

ಚಿತ್ರಕೃಪೆ: Manjeshpv

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ಇನ್ನೊಂದು ದಂತಕಥೆಯ ಪ್ರಕಾರ, ಒಮ್ಮೆ ರಾವಣನ ಸಂಬಂಧಿ ಮಾರೀಚ ಎಂಬ ಅಸುರ ರಾವಣನ ಆದೇಶದಂತೆ ಸೀತೆಯನ್ನು ಸಮ್ಮೋಹನಗೊಳಿಸಲು ಸುಂದರವಾದ ಜಿಂಕೆಯರೂಪದಲ್ಲಿ ಬರಲಾಗಿ ಅದನ್ನು ಕಂಡು ಸೀತೆಯು ಆ ಜಿಂಕೆಯು ತನಗೆ ಬೇಕೆಂಬ ಆಸೆಯನ್ನು ಪತಿ ಶ್ರೀರಾಮನಿಗೆ ವ್ಯಕ್ತಪಡಿಸಿದಳು.

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ತೀರ್ಥಹಳ್ಳಿಯಲ್ಲಿ ಹರಿದಿರುವ ತುಂಗಾ ನದಿಯ ತಟದಲ್ಲಿ ನೆಲೆಸಿರುವ ರಾಮೇಶ್ವರ ದೇವಸ್ಥಾನವು ಬಹು ಪ್ರಮುಖ ಆಕರ್ಷಣೆಯಾಗಿದೆ. ಕಲ್ಲಿನಲ್ಲಿ ನಿರ್ಮಾಣಗೊಂಡಿರುವ ಈ ದೇವಸ್ಥಾನದಲ್ಲಿ ಶಿವನನ್ನು ಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ. ಈ ದೇವಸ್ಥಾನದ ಬಳಿಯೆ ನದಿಯ ಚಿಕ್ಕ ನಡುಗಡ್ಡೆಯೊಂದರ ಮೇಲೆ ಪರಶುರಾಮ ತೀರ್ಥವನ್ನು ಕಾಣಬಹುದು.

ಚಿತ್ರಕೃಪೆ: Manjeshpv

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ರಾಮೇಶ್ವರ ದೇವಸ್ಥಾನದಲ್ಲಿರುವ ಶಿವಲಿಂಗವನ್ನು ಸ್ವತಃ ಪರಶುರಾಮರೆ ಪ್ರತಿಷ್ಠಾಪಿಸಿದ್ದಾರೆನ್ನಲಾಗಿದೆ. ಅವರು ಇಲ್ಲಿ ತಮ್ಮ ಕೊಡಲಿಗಂಟಿದ ರಕ್ತದ ಎಳ್ಳಿನಂತಹ ಕಲೆಯನ್ನು ಶುದ್ಧ ಗೊಳಿಸಿದ್ದ ದಿನ ಮಾರ್ಗಶಿರ ಮಾಸದ ಹೊಸ ಚಂದ್ರ ದಿನದಂದೆ. ಪರಶುರಾಮರು ತಮ್ಮ ಕೊಡಲಿಯನ್ನು ಶುದ್ಧಗೊಳಿಸಿದ ಸ್ಥಳ.

ಚಿತ್ರಕೃಪೆ: Manjeshpv

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ಆದ್ದರಿಂದ ಈ ದಿನವನ್ನು ಎಳ್ಳು ಅಮಾವಸ್ಯೆಯ ದಿನವಾಗಿ ಬಹು ಅದ್ದೂರಿಯಾಗಿ ತೀರ್ಥಹಳ್ಳಿಯಲ್ಲಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರಕೃತಿ ಸಹಜವಾಗಿಯೆ ಸುಂದರವಾಗಿರುವ ತೀರ್ಥ ಹಳ್ಳಿಯು ಮತ್ತಷ್ಟು ಸಿಂಗರಿಸಿಕೊಂಡು ನವ ವಧುವಿನಂತೆ ಕಂಗೊಳಿಸುತ್ತದೆ.

ಚಿತ್ರಕೃಪೆ: Manjeshpv

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ಉತ್ಸವದ ಮೊದಲನೆಯ ದಿನದಂದು ರಾಮೇಶ್ವರ ದೇವಸ್ಥಾನದಲ್ಲಿರುವ ಉತ್ಸವ ಮೂರ್ತಿಯನ್ನು ಸಡಗರದಿಂದ ತುಂಗಾ ನದಿಯಲ್ಲಿರುವ ಪರಶುರಾಮ ತೀರ್ಥಕ್ಕೆ ತಂದು ಪುಣ್ಯಾಭಿಷೇಕವನ್ನು ನೆರವೇರಿಸಲಾಗುತ್ತದೆ. ನಂತರ ನೆರೆದಿರುವ ಭಕ್ತಾದಿಗಳು ತುಂಗೆಯ ಪವಿತ್ರ ನೀರಿನಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ.

ಚಿತ್ರಕೃಪೆ: Manjeshpv

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ಎರಡನೆಯ ದಿನ ತೇರೋತ್ಸವ ಜರುಗುತ್ತದೆ. ನಗರದಲ್ಲಿರುವ ರಥ ಬಿದಿಯಲ್ಲಿ ರಾಮೇಶ್ವರ ದೇವಸ್ಥಾನದ ತೇರನ್ನು ಸುಂದರವಾಗಿ ಸಿಂಗರಿಸಿ ಎಳೆಯಲಾಗುತ್ತದೆ. ನೆರೆದಿರುವ ಸಮಸ್ತ ಭಕ್ತ ಜನರು ಬಲು ಹುರುಪಿನಿಂದ ತೇರನ್ನು ಎಳೆದು ಸಂತೃಪ್ತಿಯ ಭಾವವನ್ನು ಬೀರುತ್ತಾರೆ.

ಚಿತ್ರಕೃಪೆ: Manjeshpv

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ಮೂರನೆಯ ಹಾಗೂ ಕೊನೆಯ ದಿನದಂದು ಉತ್ಸವ ಮೂರ್ತಿಯನ್ನು ತುಂಗಾ ನದಿಯಲ್ಲಿ ತೆಪ್ಪದ ಮೂಲಕ ಕುರುವಳ್ಳಿ ಎಂಬಲ್ಲಿಗೆ ತೆಗೆದುಕೊಂಡು ಹೋಗಿ ಮತ್ತೆ ಮರಳಿ ಬರಲಾಗುತ್ತದೆ. ಇದನ್ನು ತೆಪ್ಪೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ.

ಚಿತ್ರಕೃಪೆ: Manjeshpv

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ಜಾತ್ರೆಯಲ್ಲಿ ಕಣ್ಮನ ಸೆಳೆಯುವ ವಿವಿಧ ಮನರಂಜನಾ ಚಟುವಟಿಕೆಗಳ ರಚನೆಗಳು.

ಚಿತ್ರಕೃಪೆ: Manjeshpv

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ದೇವರ ಅಭಿಷೇಕ, ನೈವೇದ್ಯಕ್ಕೆಂದು ಪೂಜಾ ಸಾಮಗ್ರಿಗಳನ್ನು ಭಕ್ತರಿಗೆ ಮಾರಲು ಕುಳಿತಿರುವ ವ್ಯಾಪಾರಿಗಳು.

ಚಿತ್ರಕೃಪೆ: Manjeshpv

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ತೀರ್ಥಹಳ್ಳಿಯ ರಾಮೇಶ್ವರ ದೇವಸ್ಥಾನದಲ್ಲಿರುವ ಖಂಬದ ಗಣಪತಿ.

ಚಿತ್ರಕೃಪೆ: Manjeshpv

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ತುಂಗಾ ನದಿ ತಟದಲ್ಲಿ ವಿಹಾರಾರ್ಥ ಬರುವ ಪ್ರವಾಸಿಗರ ರುಚಿ ತಣಿಸಲು ಸಿದ್ಧವಾಗುತ್ತಿರುವ ಪುಟ್ಟ ಚಾಟ್ ಅಂಗಡಿ.

ಚಿತ್ರಕೃಪೆ: Manjeshpv

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ:

ಎಳ್ಳಮವಾಸ್ಯೆಯ ಸಂದರ್ಭದಲ್ಲಿ ಸಂಜೆಯ ಸಮಯದಲ್ಲಿ ಬಾನಲ್ಲಿ ಮೂಡಿ ಬರುವ ಪಟಾಕಿ ಸಿಡಿ ಮದ್ದುಗಳ ಚಿತ್ತಾರ.

ಚಿತ್ರಕೃಪೆ: Manjeshpv

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X