
ಜನರು ತಮ್ಮ ಮನಸ್ಸಿನ ಯಾವುದೇ ಕೋರಿಕೆ ಈಡೇರಬೇಕಾದರೆ ದೇವರಲ್ಲಿ ಪ್ರಾರ್ಥಿಸುತ್ತಾರೆ. ದೇವಸ್ಥಾನಕ್ಕೆ ಹೋಗಿ ಹೂವು, ಹಣ್ಣು ಅರ್ಪಿಸಿ ಪೂಜಿಸುತ್ತಾರೆ. ಹರಕೆ ಕಟ್ಟಿಕೊಳ್ಳುತ್ತಾರೆ. ಆದರೆ ಇಲ್ಲಿನ ಜನರು ತಮ್ಮ ಬೇಡಿಕೆ ಈಡೇರಬೇಕಾದರೆ ದೇವಸ್ಥಾನಕ್ಕೆ ಹೋಗಲ್ಲ, ಬದಲಾಗಿ ಇಲ್ಲಿರುವ ಪುರಾತನ ಕೋಟೆಗೆ ಹೋಗುತ್ತಾರಂತೆ. ಅಲ್ಲಿ ಹಾಲು, ಹಣ್ಣು, ಬೇಳೆಗಳನ್ನು ಅರ್ಪಿಸಿ ಪೂಜಿಸುತ್ತಾರಂತೆ. ಹಾಗಾದರೆ ಈ ಕೋಟೆಯಲ್ಲಿ ಯಾವುದೋ ದೇವರು ನೆಲೆಸಿದ್ದಾರೆ ಎಂದು ನೀವು ಭಾವಿಸಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ. ಈ ಕೋಟೆಯಲ್ಲಿ ಜಿನ್ ನೆಲೆಸಿದ್ದಾರಂತೆ.

ಜಿನ್ ರಹಸ್ಯ
ಈ ಜಿನ್ ಎಂದರೇನು ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. ಜಿನ್ ಎಂದರೆ ಒಂದು ಅದೃಶ್ಯ ಶಕ್ತಿ. ಇದು ಒಂದು ಜಾದೂಗಾರನಂತೆ, ನಿಮ್ಮ ಆಸೆಗಳನ್ನು ಈಡೇರಿಸುತ್ತದಂತೆ. ಹಾಗಾದ್ರೆ ಬನ್ನಿ ಜಿನ್ ನೆಲೆಸಿದ್ದಾನೆಂದು ಜನರು ನಂಬುತ್ತಿರುವ ಆ ಕೋಟೆ ಯಾವುದು? ಅದರ ರಹಸ್ಯ ಏನು ಅನ್ನೋದನ್ನು ನಾವಿಂದು ತಿಳಿಯೋಣ.

100 ವರ್ಷ ಆಳಿದ ತುಘಲಕ್ ವಂಶ
1206ರಲ್ಲಿ ಕುತ್ಬುದೀನ್ ಐಬಕ್ ದೆಹಲಿಯ ಸುಲ್ತಾನ್ ಆಗುವ ಮೂಲಕ ಇತಿಹಾಸಕ್ಕೆ ಒಂದು ಹೊಸ ಅಧ್ಯಾಯವೇ ಸೇರಿಕೊಂಡಿತು. ಇದಕ್ಕೂ ಮೊದಲು ದೆಹಲಿ ರಜಪೂತ ರಾಜರ ಆಳ್ವಿಕೆಯಲ್ಲಿತ್ತು. ಮೊಘಲರು ಬರುವುದಕ್ಕಿಂತಲೂ ಮೊದಲು ದೆಹಲಿ 320 ವರ್ಷಗಳ ವರೆಗೆ 5 ವಂಶಜರು ದೆಹಲಿಯನ್ನು ಆಳಿದ್ದಾರೆ. ತುಘಲಕ್ ವಂಶಜರು ಸುಮಾರು 100 ವರ್ಷಗಳ ವರೆಗೆ ಆಳ್ವಿಕೆ ನಡೆಸಿದ್ದಾರೆ. ತುಘಲಕ್ ವಂಶದ ರಾಜ ಫೀರೋಜ್‌ಶಾಹ ತುಘಲಕ್ ದೆಹಲಿಯಲ್ಲಿ ಒಂದು ಹೊಸ ನಗರವನ್ನೇ ನಿರ್ಮಿಸಿದನು ಅದರನ್ನು ಫಿರೋಜಾಬಾದ್ ಎನ್ನಲಾಗುತ್ತದೆ. ಇತಿಹಾಸಕಾರರು ಫಿರೋಜಾಬಾದ್‌ನ್ನು ದೆಹಲಿಯ ೫ ನಗರ ಎಂದು ಕರೆಯುತ್ತಾರೆ.

ಗೋಳಾಕಾರದ ಬಾವಿ
ಈ ನಗರದಲ್ಲಿ ಉಳಿದಿರುವ ಸ್ಮಾರಕಗಳಲ್ಲಿ ಮಸೀದಿಯೂ ಒಂದು. ಅದರ ಜೊತೆ ಅಶೋಕ ಸ್ಥಂಭವೂ ಇದೆ. ಇದು ಪಿರಮಿಡ್‌ನಂತಹ ಒಂದು ಕಟ್ಟಡವ ಮೇಲೆ ಇದೆ. ಈ ಕೋಟೆಯಲ್ಲಿ ಒಂದು ಗೋಳಾಕಾರದ ಬಾವಿಯೂ ಇದೆ. ಇಲ್ಲಿ ಸಾಕಷ್ಟು ಮಹಲ್‌ಗಳು ಇದ್ದವೂ ಆದರೆ ಯಾವುದನ್ನೂ ಗುರುತಿಸಲು ಸಾಧ್ಯವಾಗುತ್ತಿಲ್ಲ. ಮೂರು ನಾಲ್ಕು ಕಟ್ಟಡಗಳನ್ನು ಬಿಟ್ಟರೆ ಉಳಿದವುಗಳೆಲ್ಲವೂ ಅವಶೇಷದ ಸ್ಥಿತಿಯಲ್ಲಿದೆ.

ಫಿರೋಜ್ ಷಾ ತುಘಲಕ್
ಫಿರೋಜ್ ಷಾ ತುಘಲಕ್ ಇತಿಹಾಸ, ಬೇಟೆ, ನೀರಾವರಿ ಮತ್ತು ವಾಸ್ತುಶೈಲಿಯಲ್ಲಿ ಆಸಕ್ತಿ ಹೊಂದಿದ್ದರು. ಅವರು ಮಲ್ಚಾನ ಅರಮನೆ, ಭಲಿ ಭತಿಯಾರಿಯ ಅರಮನೆ ಮತ್ತು ಪೈರ್ ಕಣ್ಮರೆಯಾಗುವಂತಹ ಅನೇಕ ಬೇಟೆಗಾರರನ್ನು ಮಾಡಿದರು. ಅನೇಕ ನಗರಗಳ ಅಡಿಪಾಯ ಹಾಕಿತು. ಕುತುಬ್ ಮಿನಾರ್ , ಸೂರಜ್ ಕುಂಡ್ ದುರಸ್ತಿ, ಹೌಜ್ ಖಾಸ್ ಕೊಳದ ದುರಸ್ತಿಯನ್ನೂ ಫಿರೋಜ್ ಷಾ ಮಾಡಿದ್ದರು. ಅಲ್ಲಿ ಅವರ ಸಮಾಧಿಯೂ ಇದೆ. ಫಿರೋಜ್ ಷಾ ಆಳ್ವಿಕೆಯಲ್ಲಿ ದೆಹಲಿಯಲ್ಲಿ ಹಲವು ಮಸೀದಿಗಳನ್ನು ನಿರ್ಮಿಸಲಾಯಿತು.

ಜಾಮಿ ಮಸೀದಿ
ಕೋಟ್ಲಾ ಫಿರೋಝೆಶಾದಲ್ಲಿರುವ ಮಸೀದಿಯೂ ಬಹಳ ಎತ್ತರದಲ್ಲಿತ್ತು. ಇದರ ಹೆಸರು ಜಾಮಿ ಮಸೀದಿ. ಈಗ ಮಸೀದಿಯ ಒಂದು ಗೋಡೆ ಮಾತ್ರ ಉಳಿದಿದೆ. ಇದು ತುಘಲಕ್ ಅವಧಿಯಲ್ಲಿ ಅತೀ ದೊಡ್ಡ ಮಸೀದಿಯಾಗಿದೆ. 1398 ರಲ್ಲಿ ತೈಮುರ್ ಈ ಮಸೀದಿಯಲ್ಲಿ ಪ್ರಾರ್ಥನೆ ಮಾಡಿದ್ದರು. ಇದೇ ರೀತಿಯ ಮಸೀದಿಯನ್ನು ಸಮರ್ಕಂಡ್‌ನಲ್ಲಿ ನಿರ್ಮಿಸಿದರು. ಅರಮನೆಯ ಮಹಿಳೆಯರಿಗಾಗಿ ಈ ಮಸೀದಿಯನ್ನು ಕಟ್ಟಲಾಗಿದೆ ಎಂದು ಇತಿಹಾಸಕಾರರು ನಂಬುತ್ತಾರೆ. ಈ ಕೋಟೆಯಲ್ಲಿ ಬಾವಿಯಲ್ಲಿ ಇನ್ನೂ ನೀರು ಇದೆ. ಬೇಸಿಗೆಯಲ್ಲಿ ಸ್ನಾನ ಮಾಡಲು ಇದನ್ನು ಬಳಸಲಾಗುತ್ತಿತ್ತು.

ಅಶೋಕನ ಪಿಲ್ಲರ್
ಫಿರೋಜ್ ಷಾ ಕೊಟ್ಲಾದಲ್ಲಿ ಇರುವ ಅಶೋಕನ ಪಿಲ್ಲರ್ ಸಂಪೂರ್ಣವಾಗಿ ಜಾಮಾ ಮಸೀದಿಯ ಉತ್ತರಕ್ಕೆ ಇದೆ. ಪಿಲ್ಲರ್ ಅನ್ನು ಮೊದಲ ಬಾರಿಗೆ 273 ಮತ್ತು 236 BC ಯಲ್ಲಿ ಹರಿಯಾಣದ ಯಮುನಾನಗರ್ ಜಿಲ್ಲೆಯ ತೋಪ್ರ ಕಲಾನ್‌ನಲ್ಲಿ ರಾಜ ಅಶೋಕ ಸ್ಥಾಪಿಸಿದರು.

ಜಿನ್ನ್ ವಾಸಿಸುತ್ತಿದೆಯಂತೆ
ಜನರ ಪ್ರಕಾರ ಫಿರೋಕ್ ಶಾಹ ಕೋಟ್ಲಾದಲ್ಲಿ ಜಿನ್ನ್ ವಾಸಿಸುತ್ತಿದೆಯಂತೆ. ಜಿನ್‌ನಲ್ಲಿ ನೀವು ಯಾವುದೇ ಬೇಡಿಕೆಯನ್ನು ಇಟ್ಟರೂ ಅದು ನೆರವೇರುವುದಂತೆ. ಪ್ರತಿ ಗುರುವಾರ ಈ ಕೋಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಅಗರಬತ್ತಿ, ದೀಪ, ಹಾಲು, ಬೇಳೆ ಕಾಳುಗಳನ್ನು ತರುತ್ತಾರೆ.

ಜನರ ಅಂಧವಿಶ್ವಾಸ
ಈ ಕೋಟೆಯನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊತ್ತಿರುವ ಭಾರತೀಯ ಪುರಾತತ್ವ ವಿಭಾಗದ ಪ್ರಕಾರ, ಆ ಕೋಟೆಯಲ್ಲಿ ಜಿನ್ ಇದೆ ಎನ್ನುವುದು ಜನರ ಅಂಧವಿಶ್ವಾಸ. ಈ ಮೂಲಕ ಈ ಪುರಾತನ ಸ್ವಾರಕಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಬೇಕಾಗಿ ಕೋರುತ್ತಿದ್ದಾರೆ. ಜನರು ಅಗರಬತ್ತಿ, ದೀಪ ಹಚ್ಚುವುದರಿಂದ ಕೋಟೆ ಕೊಳಕಾಗುತ್ತದೆ. ಹಾಲು, ಹೂವ, ಹಣ್ಣುಗಳನ್ನು ಅರ್ಪಿಸುವದರಿಂದ ಇಲಿಗಳು ಬರಲಾರಂಭಿಸಿವೆ. ಜನರ ಈ ಅಂಧವಿಶ್ವಾಸದಿಂದ ಸುಮಾರು ೪೦-೫೦ ವರ್ಷಗಳಿಂದ ಕೋಟೆಗೆ ನಷ್ಟವಾಗುತ್ತಿದೆ ಎನ್ನುತ್ತಾರೆ.

ಲಾಟ್ ವಾಲೆ ಬಾಬಾ
ಜಿನ್ನ ಇರುವಿಕೆಯ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಜಿನ್ನರ ಮುಖ್ಯಸ್ಥ ಲಾಟ್ ವಾಲೆ ಬಾಬಾ ಮಿನಾರ್-ಎ-ಝರಿನ್‌ನಲ್ಲಿ ಪಿರಾಮಿಡ್‌ನಂತಹ ರಚನೆಯ ಮೇಲೆ ವಾಸವಾಗಿದ್ದರು ಎನ್ನಲಾಗುತ್ತದೆ. ಇಲ್ಲಿ ಜನರ ಪೂರ್ಣಗೊಳ್ಳುತ್ತವಂತೆ ಅದಕ್ಕೆ ಜನರು ಈ ಕೋಟೆಯ ಕಂಬದ ಸುತ್ತಲೂ ಇರುವ ತಂತಿಗಳನ್ನು ಸ್ಪರ್ಶಿಸಲು ಪ್ರಯತ್ನಿಸುತ್ತಾರೆ.