ಭಾರತದ ಪೂರ್ವ ಕರಾವಳಿಯಲ್ಲಿರುವ ಸುಂದರವಾದ ನಗರ ವಿಶಾಖಪಟ್ಟಣಂ. ತನ್ನ ಸುಂದರವಾದ ಕಡಲತೀರಗಳು, ಒಳ್ಳೆಯ ಸಂಸ್ಕೃತಿ ಮತ್ತು ಆರ್ಥಿಕ ದೃಷ್ಟಿಯಿಂದಾಗಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರವಾಗಿದೆ. ವಿಶಾಖಪಟ್ಟಣಂ ಆಂಧ್ರಪ್ರದೇಶದಲ್ಲಿ ಮಾತ್ರವಲ್ಲದೆ ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ಕಾರಣದಿಂದಾಗಿ ದೇಶ ಮತ್ತು ಪ್ರಪಂಚದಾದ್ಯಂತದ ಪ್ರವಾಸಿಗರು ಈ ಸ್ಥಳಕ್ಕೆ ಬರುತ್ತಾರೆ.
ಈ ಸ್ಥಳದ ಹವಾಮಾನ ಮತ್ತು ಪ್ರವಾಸಿ ಸ್ಥಳಗಳನ್ನು ಅನ್ವೇಷಿಸಲು ಕುಟುಂಬ ಮತ್ತು ಸ್ನೇಹಿತರೊಂದಿಗೆ ತೆರಳಬಹುದು. ಇದು ರಾಜ್ಯದ ರಾಜಧಾನಿಯೂ ಆಗಿದ್ದು, ಈ ಸ್ಥಳದಲ್ಲಿ ಅನೇಕ ಆಡಳಿತಾತ್ಮಕ ಚಟುವಟಿಕೆಗಳೂ ನಡೆಯುತ್ತವೆ. ಆದರೆ ಎಲ್ಲೆಡೆಯಂತೆ ದುಬಾರಿ ಬಜೆಟ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ವಿಶಾಖಪಟ್ಟಣಂನ ಕೆಲವು ಸ್ಥಳಗಳಿಗೆ ಭೇಟಿ ನೀಡದಿದ್ದರೇನೇ ಒಳಿತು. ಏಕೆಂದರೆ ಇಲ್ಲಿಯೂ ಅಂತಹ ಕೆಲವು ಪ್ರದೇಶಗಳಿವೆ. ಇಂದು ಈ ಲೇಖನದಲ್ಲಿ ನಿಮ್ಮ ವಿಶಾಖಪಟ್ಟಣಂ ಪ್ರವಾಸದಲ್ಲಿ ನೀವು ಯಾವ ಸ್ಥಳಗಳಿಗೆ ಭೇಟಿ ನೀಡಬಾರದು ಎಂಬುದರ ಕುರಿತು ನಾವು ಹೇಳಲಿದ್ದೇವೆ.
ಹಳೆಯ ನಗರ
ವಿಶಾಖಪಟ್ಟಣಂನ ಹಳೆಯ ನಗರ ಪ್ರದೇಶವು ಪ್ರವಾಸಿಗರಿಗೆ ಸವಾಲೇ ಸರಿ. ಕಿರಿದಾದ ರಸ್ತೆಗಳು, ಜನನಿಬಿಡ ರಸ್ತೆಗಳು ಮತ್ತು ಸೌಲಭ್ಯಗಳ ಕೊರತೆಯು ಅನೇಕ ಜನರಿಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಳೆಯ ನಗರ ಪ್ರದೇಶದ ಹಲವು ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಅಸ್ವಚ್ಛತೆಯ ಸಮಸ್ಯೆಗಳಿಗೆ ಕಾರಣವಾಗಿದೆ. ಈ ಪ್ರದೇಶವು ಐತಿಹಾಸಿಕ ಸ್ಥಳವೂ ಆಗಿರುವುದರಿಂದ ಪ್ರವಾಸಿಗರು ಎಚ್ಚರಿಕೆಯಿಂದ ಮುಂದುವರಿಯಬೇಕು.

ಸ್ಲಂ ಏರಿಯಾ
ಅನೇಕ ದೊಡ್ಡ ನಗರಗಳಲ್ಲಿರುವಂತೆ, ವಿಶಾಖಪಟ್ಟಣಂ ಕೂಡ ಕೊಳೆಗೇರಿ ಪ್ರದೇಶಗಳನ್ನು ಹೊಂದಿದೆ. ಈ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಜೀವನ ಕಳಪೆಯಾಗಿರುತ್ತದೆ. ನೈರ್ಮಲ್ಯ ಮತ್ತು ಸುರಕ್ಷತೆ ಸಮಸ್ಯೆಗಳು ಎದುರಾಗುತ್ತವೆ. ವಸತಿ ಸೌಕರ್ಯಗಳನ್ನು ಸುಧಾರಿಸಲು ಯೋಜನೆಗಳು ಜಾರಿಯಲ್ಲಿದ್ದರೂ, ಇಲ್ಲಿ ಪ್ರವಾಸಿಗರು ಯಾವುದೇ ಮಾರ್ಗದರ್ಶನವಿಲ್ಲದೆ ಏಕಾಂಗಿಯಾಗಿ ಅಲೆದಾಡುವುದು ಸುರಕ್ಷಿತವಲ್ಲ.

ರೆಡ್ ಲೈಟ್ ಏರಿಯಾ
ಕೆಲವು ನಗರಗಳಲ್ಲಿರುವಂತೆ ವಿಶಾಖಪಟ್ಟಣಂ ಕೂಡ ರೆಡ್ ಲೈಟ್ ಏರಿಯಾಗಳನ್ನು ಹೊಂದಿದೆ. ಈ ಪ್ರದೇಶಗಳು ಹೆಚ್ಚಾಗಿ ವಯಸ್ಕರ ಮನರಂಜನಾ ಸ್ಥಳಗಳಾಗಿವೆ. ಆದರೆ ವಂಚನೆ, ಅಸುರಕ್ಷತೆಯಿಂದ ಕೂಡಿರುವ ಪ್ರದೇಶಗಳಿವು. ನೀವು ಯಾವುದೇ ತೊಂದರೆಯಿಲ್ಲದೆ ಪ್ರಯಾಣಿಸಲು ಬಯಸಿದರೆ ಇಂತಹ ಪ್ರದೇಶಗಳಿಂದ ದೂರವಿರುವುದು ಸೂಕ್ತ.
ರಾತ್ರಿ ವೇಳೆ ಕೆಲವು ಕಡಲತೀರಗಳು
ವಿಶಾಖಪಟ್ಟಣಂನ ಕಡಲತೀರಗಳು ಪ್ರವಾಸಿಗರು ಹೆಚ್ಚು ಭೇಟಿ ನೀಡುವ ತಾಣಗಳಾಗಿವೆ. ಆದರೆ ಇತರ ಕೆಲವು ಕಡಲತೀರಗಳು ರಾತ್ರಿ ಸುರಕ್ಷಿತವಾಗಿರುವುದಿಲ್ಲ. ತಡರಾತ್ರಿ ಕೆಲವು ಬೀಚ್‌ಗಳ ಏಕಾಂತ ಭಾಗಗಳಲ್ಲಿ ಕಳ್ಳತನ ಮತ್ತು ಇತರ ಸಮಾಜ ವಿರೋಧಿ ಚಟುವಟಿಕೆಗಳು ನಡೆದಿವೆ. ಆದ್ದರಿಂದ ಸೂರ್ಯ ಮುಳುಗಿದ ನಂತರ ಕಡಲತೀರವನ್ನು ಆನಂದಿಸುವವರು ಚೆನ್ನಾಗಿ ಬೆಳಕಿರುವ ಮತ್ತು ಕಡಿಮೆ ಜನನಿಬಿಡ ಪ್ರದೇಶಗಳಲ್ಲಿ ಉಳಿಯಲು ಶಿಫಾರಸು ಮಾಡಲಾಗುತ್ತದೆ.

ಮಾರುಕಟ್ಟೆ
ಖರೀದಿದಾರರ ಸ್ವರ್ಗ ಎಂದೇ ಕರೆಯಲ್ಪಡುವ ವಿಶಾಖಪಟ್ಟಣವು ಕಡಿಮೆ ಬೆಲೆಗೆ ಹೆಸರುವಾಸಿಯಾದ ಬಿಡುವಿಲ್ಲದ ಮಾರುಕಟ್ಟೆಗಳಿಗೆ ನೆಲೆಯಾಗಿದೆ. ಕೆಲವು ಮಾರುಕಟ್ಟೆಗಳು ಎಷ್ಟು ಅನಿಯಂತ್ರಿತವಾಗಿವೆ ಎಂದರೆ ಅಲ್ಲಿ ನಕಲಿ ವಸ್ತುಗಳನ್ನು ಸಹ ಮಾರಾಟ ಮಾಡಲಾಗುತ್ತದೆ. ಆದ್ದರಿಂದ ನೀವು ಚೌಕಾಶಿ ಮಾಡಿ ಕಡಿಮೆ ಬೆಲೆಗೆ ಖರೀದಿಸಬಹುದಾದರೂ ಸಹ ಸ್ವಲ್ಪ ಜಾಗರೂಕರಾಗಿರಿ. ಶಾಪಿಂಗ್ ಮಾಲ್‌ಗಳಲ್ಲಿ ಶಾಪಿಂಗ್ ಮಾಡುವುದು ಹೆಚ್ಚು ವಿಶ್ವಾಸಾರ್ಹವಾಗಿದೆ.
ಅರಣ್ಯ ಪ್ರದೇಶಗಳು
ವಿಶಾಖಪಟ್ಟಣಂ ಪ್ರದೇಶವು ಹಸಿರಿನಿಂದ ಕೂಡಿದ್ದು, ಪ್ರಶಾಂತವಾಗಿರುವ ದಟ್ಟವಾದ ಕಾಡುಗಳಿಂದ ಆವೃತವಾಗಿದೆ. ಪ್ರಕೃತಿ ಪ್ರಿಯರಿಗಂತೂ ಸ್ವರ್ಗವಾಗಿದೆ. ಅನೇಕ ಅರಣ್ಯ ಪ್ರದೇಶಗಳಿದ್ದರೂ, ಕೆಲವು ಮಾತ್ರ ಏಕಾಂಗಿಯಾಗಿ ಹೋಗುವುದಕ್ಕೆ ಸುರಕ್ಷಿತವಾಗಿಲ್ಲ. ಈ ಮಾರ್ಗವನ್ನು ಸಾಮಾನ್ಯವಾಗಿ ಶಿಫಾರಸು ಸಹ ಮಾಡುವುದಿಲ್ಲ. ಆದ್ದರಿಂದ ಇಂತಹ ಪ್ರದೇಶಗಳಿಗೆ ತೆರಳುವ ಮುನ್ನ ವಿಶ್ವಾಸಾರ್ಹ ಟೂರ್ ಆಪರೇಟರ್‌ನ ಸಹಾಯದಿಂದ ಎಚ್ಚರಿಕೆಯಿಂದ ಯೋಜಿಸಬೇಕು.

ಕೈಗಾರಿಕಾ ವಲಯಗಳು
ವಿಶಾಖಪಟ್ಟಣಂನ ಕೈಗಾರಿಕಾ ಪ್ರದೇಶಗಳು ನಗರದ ಆರ್ಥಿಕತೆಯನ್ನು ಹೆಚ್ಚಿಸುತ್ತವೆಯಾದರೂ, ಸುರಕ್ಷತೆ ಮತ್ತು ಮಾಲಿನ್ಯ ಕಾರಣದಿಂದಾಗಿ ಪ್ರವಾಸೋದ್ಯಮ ಸ್ನೇಹಿಯಾಗಿಲ್ಲ. ಕೆಲವು ಕೈಗಾರಿಕಾ ವಲಯಗಳು ಹೆಚ್ಚಿನ ಮಾಲಿನ್ಯ ಮಟ್ಟವನ್ನು ಹೊಂದಿದ್ದು, ಇದು ಗಾಳಿ ಮತ್ತು ನೀರಿನ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು.
ಪರವಾನಗಿ ಪಡೆಯದ ಟೂರ್ ಆಪರೇಟರ್ಸ್
ವಿಶಾಖಪಟ್ಟಣಂ ನಗರದಲ್ಲಿ ಅಡ್ಡಾಡುವಾಗ, ಪ್ರವಾಸಿಗರು ನೋಂದಣಿಯಾಗದ ಟೂರ್ ಆಪರೇಟರ್ಸ್ ಅನ್ನು ಭೇಟಿಯಾಗಬಹುದು. ಪಟ್ಟಣದಲ್ಲಿ ಒಳ್ಳೊಳ್ಳೆ ಆಫರ್‌ಗಳಿದ್ದರೂ ಈ ಆಪರೇಟರ್ಸ್ ಜೊತೆ ಸಿಕ್ಕಿಹಾಕಿಕೊಂಡರೆ ಅಪಾಯಕಾರಿಯಾಗಬಹುದು. ಆದ್ದರಿಂದ ಸುರಕ್ಷಿತ ಮತ್ತು ಆಹ್ಲಾದಕರ ಪ್ರವಾಸದ ಅನುಭವಕ್ಕಾಗಿ ನೋಂದಾಯಿತ ಪ್ರವಾಸ ನಿರ್ವಾಹಕರೊಂದಿಗೆ ಬುಕ್ ಮಾಡಲು ಸಲಹೆ ನೀಡಲಾಗುತ್ತದೆ.
ಕಿಕ್ಕಿರಿದ ಉತ್ಸವಗಳು
ವಿಶಾಖಪಟ್ಟಣಂನಲ್ಲಿ ಪ್ರತಿ ವರ್ಷ ಹಲವಾರು ಉತ್ಸವಗಳು ಮತ್ತು ಕಾರ್ಯಕ್ರಮಗಳು ನಡೆಯುತ್ತವೆ. ಆಗ ಹೆಚ್ಚಿನ ಜನಸಂದಣಿ ಸೇರುತ್ತದೆ. ಆದರೆ ಜನಸಂದಣಿಯ ಸ್ಥಳಗಳು, ಮೇಳದಂತಹ ಸಾಂಸ್ಕೃತಿಕ ಆಚರಣೆಗಳ ಸಮಯದಲ್ಲಿ ಕೆಲವು ದುಷ್ಪರಿಣಾಮಗಳು ಎದುರಾಗಬಹುದು. ಏಕೆಂದರೆ ಜನಸಂದಣಿಯು ನೂಕುನುಗ್ಗಲು, ಕಳ್ಳತನದ ಇತ್ಯಾದಿಗಳಿಗೆ ಕಾರಣವಾಗುತ್ತದೆ. ಈ ಟಿಪ್ಸ್ ಹಬ್ಬಗಳ ಸಮಯದಲ್ಲಿ ಜನಸಂದಣಿಯ ಸ್ಥಳಗಳಲ್ಲಿ ಎಚ್ಚರಿಕೆಯಿಂದ ಮತ್ತು ಸುರಕ್ಷಿತವಾಗಿರಲು ನಿಮಗೆ ತಿಳಿಸುತ್ತದೆ.


Click it and Unblock the Notifications
















