Search
  • Follow NativePlanet
Share
» »ಹೈದರಾಬಾದ್‌ನ ಈ ಸ್ಥಳಗಳಲ್ಲೆಲ್ಲಾ ಇರಾನಿ ಚಾಯ್ ಕುಡಿಲೇ ಬೇಕು

ಹೈದರಾಬಾದ್‌ನ ಈ ಸ್ಥಳಗಳಲ್ಲೆಲ್ಲಾ ಇರಾನಿ ಚಾಯ್ ಕುಡಿಲೇ ಬೇಕು

ಒಂದು ಸಮಯದಲ್ಲಿ, ಇರಾನಿ ಚಾಯ್ ಹೈದರಾಬಾದ್‌ನಲ್ಲಿ ಬಹಳ ಫೇಮಸ್ ಆಗಿತ್ತು. ಈಗಲೂ ಹೈದರಾಬಾದ್‌ನಲ್ಲಿ ಇರಾನಿ ಚಾಯ್‌ ಎಂದರೆ ಸಖತ್ ಫೇಮಸ್. ವಿಶೇಷವಾಗಿ ಹೈದರಾಬಾದ್‌ನ ಓಲ್ಡ್‌ ಸಿಟಿಯಲ್ಲಿ ಇರಾನಿ ಚಾಯ್ ಸಿಗುತ್ತದೆ. ಪರ್ಷಿಯಾದಿಂದ ಬಂದ ನಿವಾಸಿಗಳು ಈ ಚಾಯ್‌ನ್ನು ಪರಿಚಯಿಸಿದರು. ಪಾನೀಯ ಮತ್ತು ಸೇವೆ ಸಲ್ಲಿಸಿದ ಸ್ಥಳಗಳು ಕಾಲಾನಂತರದಲ್ಲಿ ಇದು ಒಂದು ಸಂಸ್ಥೆಯಾಗಿ ವಿಕಸನಗೊಂಡಿತು.

ಇರಾನಿ ಚಾಯ್

ಇರಾನಿ ಚಾಯ್

PC:manojkumar chidambaram

ಬಹುತೇಕರು ಈ ಇರಾನಿ ಚಾಯ್ ಕುಡಿಯೋದಕ್ಕೋಸ್ಕರ ಎಷ್ಟೋ ದೂರದಿಂದ ಆಗಮಿಸುತ್ತಾರೆ. ಈ ಚಾಯ್‌ ಜೊತೆ ಒಂದು ಬಿಸ್ಕೆಟ್‌ ಇದ್ರೆ ಅದರ ರುಚಿ ದುಪ್ಪಟ್ಟು ಆಗುತ್ತೆ. ಹೈದರಾಬಾದ್‌ಗೆ ಯಾವತ್ತಾದ್ರೂ ಹೋಗೋದಾದ್ರೆ ಇರಾನಿ ಚಾಯ್‌ನ್ನು ಕುಡಿಯೋದನ್ನು ಮಾತ್ರ ಮರೆಯಬೇಡಿ.

ಎಲ್ಲೆಲ್ಲಾ ದೊರೆಯುತ್ತದೆ

ಎಲ್ಲೆಲ್ಲಾ ದೊರೆಯುತ್ತದೆ

ಇರಾನಿ ಚಾಯ್‌ ಸಂಪ್ರದಾಯ ಓಲ್ಡ್‌ ಸಿಟಿಯಲ್ಲಿ ಪ್ರಾರಂಭವಾಗಿದ್ದು, ಇದೀಗ ಹೈದರಾಬಾದ್‌ನ ಸಣ್ಣ ಬೇಕರಿಗಳಲ್ಲಿ ಮತ್ತು ಗಾರ್ಡನ್ ಕೆಫೆ ಮತ್ತು ಸಿಕಂದರಾಬಾದ್‌ನ ಪ್ಯಾರಡೈಸ್ ನಂತಹ ರೆಸ್ಟೋರೆಂಟ್‌ಗಳಲ್ಲಿಯೂ ದೊರೆಯುತ್ತದೆ. ಈ ಇರಾನಿ ಚಾಯ್‌ಗೆ ಸಾಕಷ್ಟು ಫ್ಯಾನ್ಸ್‌ಗಳಿದ್ದಾರೆ. ತಮ್ಮ ದಿನವನ್ನು ಈ ಚಾಯ್‌ ಕುಡಿಯುವುದರ ಮೂಲಕವೇ ಪ್ರಾರಂಭಿಸುವವರು ಬಹಳಷ್ಟು ಮಂದಿ ಇದ್ದಾರೆ.

ಇರಾನಿ ಚಾಯ್‌ನ ಮೂಲ

ಇರಾನಿ ಚಾಯ್‌ನ ಮೂಲ

PC:అహ్మద్ నిసార్

ಹೈದರಾಬಾದ್‌ನಲ್ಲಿ ಇರಾನಿ ಚಾಯ್ ಮೂಲದ ಹಿಂದೆ ಒಂದು ಕುತೂಹಲಕಾರಿ ಕಥೆ ಇದೆ. ಕಳೆದ ಶತಮಾನದಲ್ಲಿ ಪರ್ಷಿಯನ್ ವಲಸಿಗರು ಮುಂಬೈ ಬಂದರಿಗೆ ಬಂದಿದ್ದರು ಅಲ್ಲಿಂದ ಉತ್ತಮ ಜೀವನ ಹರಸಿಕೊಂಡು, ವ್ಯಾಪಾರ ಮಾಡುತ್ತಾ ಪುಣೆಗೆ ಬಂದರು, ಆ ನಂತರ ಹೈದರಾಬಾದ್‌ಗೆ ಬಂದರು ಅವರ ಜೊತೆ ಈ ಇರಾನಿ ಚಾಯ್ ಎನ್ನುವ ಪರಿಕಲ್ಪನೆ ಕೂಡಾ ಹೈದರಾಬಾದ್‌ಗೆ ಬಂದಿತು.

ಇಲ್ಲಿ ರಾತ್ರಿ ಉಳಿಯಲು ಹೆದರ್ತಾರಂತೆ ಜನ್ರು, ಒಂದು ವೇಳೆ ಉಳ್ಕೊಂಡ್ರೆ ನೀವೂ ಹೀಗಾಗ್ಬಿಡ್ತೀರಾ !

ಇರಾನಿ ಟೀ ಹಾಗೂ ಇತರ ಚಹಾಗಳು

ಇರಾನಿ ಟೀ ಹಾಗೂ ಇತರ ಚಹಾಗಳು

PC: Sanket Oswal

ಇರಾನಿ ಚಾಯ್ ಮತ್ತು ಉಳಿದ ಚಹಾ ಶೈಲಿಯಲ್ಲಿ ವ್ಯತ್ಯಾಸವು ಭಾರತದಲ್ಲಿ ತಯಾರಿಸಲ್ಪಟ್ಟಿದೆ. ಚಹಾ ಎಲೆಗಳನ್ನು ಪ್ರತ್ಯೇಕ ಪಾತ್ರೆಯಲ್ಲಿ ನೀರಿನಿಂದ ಬೇಯಿಸಲಾಗುತ್ತದೆ ಮತ್ತು ಹಾಲು ಪ್ರತ್ಯೇಕ ಪಾತ್ರೆಯಲ್ಲಿ ಕುದಿಸಲಾಗುತ್ತದೆ. ಗ್ರಾಹಕರಿಗೆ ಚಹಾ ನೀಡುವಾಗ ಅವರು ಮೊದಲ ಹಾಲಿನ್ನು ಸುರಿಯುತ್ತಾರೆ ಮತ್ತು ನಂತರ ಚಹಾ ಎಲೆಗಳಿಂದ ಮಾಡಲ್ಪಟ್ಟ ದ್ರಾವಣವನ್ನು ಸುರಿಯುತ್ತಾರೆ. ಇರಾನಿನ ಸ್ಪರ್ಶವನ್ನು ಉಳಿಸಿಕೊಳ್ಳುವ ಅನೇಕ ಸ್ಥಳಗಳಲ್ಲಿ ಈ ಪ್ರಕ್ರಿಯೆಯನ್ನು ಕಾಣಬಹುದು. ನೀವು ಬೆಳಿಗ್ಗೆ, ಮಧ್ಯಾಹ್ನ ಅಥವಾ ತಡರಾತ್ರಿಯ ಸಂಜೆಯೊಳಗೆ ಹೋದರೆ ಇರಾನಿ ಚಾಯ್ ರುಚಿ ಒಂದೇ ಆಗಿರುತ್ತದೆ.

ಬೆಲೆ

ಬೆಲೆ

ಸಾಮಾನ್ಯವಾಗಿ ಇರಾನಿ ಚಹಾದ ಬೆಲೆಯು ೧೦-೨೫ ರೂ ಇರುತ್ತದೆ. ಮುಖ್ಯವಾಗಿ ನೀವು ಯಾವ ಸ್ಥಳದಲ್ಲಿ ಚಹಾ ಕುಡಿಯುತ್ತಿದ್ದೀರಿ ಅದರ ಮೇಲೆ ಬೆಲೆ ನಿಗಧಿಸಲಾಗುತ್ತದೆ.

ಸರ್ವ್ ಮಾಡುವ ವಿಧಾನ

ಸರ್ವ್ ಮಾಡುವ ವಿಧಾನ

ಇರಾನಿ ಚಾಯ್‌ನ್ನು ಹೆಚ್ಚಾಗಿ ಬಿಳಿ ಸಿರಾಮಿಕ್ ಕಪ್ ಮತ್ತು ಸಾಸರ್‌ನಲ್ಲಿ ಸರ್ವ್ ಮಾಡಲಾಗುತ್ತದೆ . ಅದರ ಗುಣಮಟ್ಟದ ಪರಿಮಾಣದ ನಂತರ 90 ಮಿಲಿ ಚಾಯ್ ನೀಡಲಾಗುತ್ತದೆ. ಸಿಹಿಯಾದ ಈ ಇರಾನಿ ಚಾಯ್ ಅದರದೇ ಆದ ವಿಶಿಷ್ಟ ರುಚಿ ಮತ್ತು ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದನ್ನು ಸಾಂಪ್ರದಾಯಿಕ ಉಸ್ಮಾನಿಯಾ ಬಿಸ್ಕಟ್‌ಗಳು, ಲುಖ್ಮಿ, ಟೈ ಬಿಸ್ಕಟ್, ಫೈನ್ ಬಿಸ್ಕಟ್ ಮತ್ತು ಸಿಹಿ ಕೆನೆ ಮುಂತಾದವುಗಳ ಜೊತೆ ಸವಿಯಬಹುದು.

30 ಇರಾನಿ ಕೆಫೆಗಳು

30 ಇರಾನಿ ಕೆಫೆಗಳು

ಸಿಕಂದರಾಬಾದ್‌ನಿಂದ ಸರೋಜಿನಿ ದೇವಿ ರಸ್ತೆವರೆಗೆ ಓಲ್ಡ್ ಸಿಟಿಯಲ್ಲಿ ಸುಮಾರು 30 ಇರಾನಿ ಕೆಫೆಗಳು ಇವೆ. ಅವುಗಳಲ್ಲಿ ಪ್ಯಾರಡೈಸ್, ಗಾರ್ಡನ್ ಕೆಫೆ, ಫರಾಶಾ ಕೆಫೆ ಮತ್ತು ಶಾ ಘೌಸ್ ಕೆಫೆ ಪ್ರಸಿದ್ಧವಾಗಿವೆ. ತಾಜ್‌ ಬಂಜಾರದಲ್ಲಿ ಇರಾನಿ ಚಾಯ್‌ ಹಾಗೂ ಸ್ನಾಕ್ಸ್‌ಗೆ ಒಬ್ಬರಿಗೆ 3೦೦ರಿಂದ 5೦೦ ರೂ. ಆಗುತ್ತದೆ.

ಒಂದೇ ರೀತಿಯ ರುಚಿ

ಒಂದೇ ರೀತಿಯ ರುಚಿ

ಹೈದರಾಬಾದ್ ತನ್ನ ಬಿರಿಯಾನಿಗಾಗಿ ಪ್ರಸಿದ್ಧವಾಗಿದೆ. ಆದರೆ ಇರಾನಿ ಚಾಯ್ ಕೂಡಾ ಬಹಳ ಫೇಮಸ್‌ ಆಗಿದೆ. ಈ ಚಹಾವನ್ನು ನಗರದ ಯಾವುದೇ ಸ್ಥಳದಲ್ಲಿ ನೀವು ಕುಡಿಯಬಹುದು - ಐದು ಪಂಚತಾರಾ ಹೋಟೆಲ್‌ ಹಾಗೂ ರಸ್ತೆಬದಿಯ ಕೆಫೆಗಳಲ್ಲೂ ರುಚಿ ಒಂದೇ ಆಗಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more