• Follow NativePlanet
Share
Menu
» » ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಈ 6 ಸ್ಥಳಗಳ ಬಗ್ಗೆ ನಿಮಗೆ ಗೊತ್ತ?

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಈ 6 ಸ್ಥಳಗಳ ಬಗ್ಗೆ ನಿಮಗೆ ಗೊತ್ತ?

Written By:

ಬ್ರಿಟೀಷರು ನಮ್ಮ ದೇಶವನ್ನು ಹೇಗೆಲ್ಲಾ ತಾಂತ್ರಿಕತೆಯಿಂದ, ಕ್ರೂರತೆಯಿಂದ ಆಳ್ವಿಕೆ ನಡೆಸಿದರು ಎಂಬುದರ ಬಗ್ಗೆ ಹೆಚ್ಚಿಗೆ ಹೇಳುವ ಅವಶ್ಯಕತೆ ಇಲ್ಲ. ಆದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬೇಕು ಎಂದು ಹೋರಾಡಿದ ದಿಟ್ಟ ಸ್ವಾತಂತ್ಯ್ರ ಹೋರಾಟಗಾರರನ್ನು ನಾವು ನೆನೆಪಿಸಿಕೊಳ್ಳುತ್ತೇವೆ. ಆದರೆ ಅವರು ನಿರ್ಧಿಷ್ಟವಾಗಿ ಎಲ್ಲೆಲ್ಲಿ ಹೋರಾಟ ಮಾಡಿದರು ಎಂಬುದು ಸಾಕಷ್ಟು ಜನರಿಗೆ ತಿಳಿದಿಲ್ಲ.

ಯಾವುದೇ ಜಾತಿ, ಧರ್ಮ, ಭೇದ, ಭಾವವಿಲ್ಲದೇ ದೇಶದ ಸ್ವಾತಂತ್ರ್ಯವನ್ನು ಪಡೆಯುವ ಸಲುವಾಗಿ ಹಲವಾರು ಯೋಧರು, ಹೋರಾಟಗಾರರು ಬ್ರಿಟೀಷರ ವಿರುದ್ಧ
ಹೋರಾಡುತ್ತಲ್ಲೇ ತಮ್ಮ ಪ್ರಾಣವನ್ನು ಬಿಟ್ಟರು.

ಪಸ್ತುತ ಲೇಖನದ ಮೂಲಕ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮುಖ್ಯವಾದ ಭಾರತದ ಹಳ್ಳಿಗಳ ಬಗ್ಗೆ ತಿಳಿಯೋಣ.

ಕಕ್ಕೋರಿ

ಕಕ್ಕೋರಿ

ಕಕ್ಕೋರಿ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೆಚ್ಚಾಗಿ ಹೋರಾಡಿದ ಹಾಗು ಪ್ರಮುಖವಾದ ಸ್ಥಳವೆಂದರೆ ಕಕ್ಕೋರಿ. ಇದು ಉತ್ತರ ಪ್ರದೇಶ ರಾಜ್ಯದಲ್ಲಿ ಇದೆ. ಈ ಕಕ್ಕೋರಿಯ ಇತಿಹಾಸ ಅಡಗಿರುವುದೇ ರೈಲ್ವೆ ನಿಲ್ದಾಣದಲ್ಲಿ.

ರೈಲ್ವೆ ದರೊಡೆ

ರೈಲ್ವೆ ದರೊಡೆ

ಈ ರೈಲ್ವೆ ನಿಲ್ದಾಣದ ಇತಿಹಾಸವೆನೆಂದರೆ ರೈಲ್ವೆ ದರೋಡೆಯಾಗಿದೆ. ಭಾರತೀಯ ಕ್ರಾಂತಿಕಾರಿಗಳು ತಮ್ಮ ಹೋರಾಟಗಳಿಗೆ ಅಗತ್ಯ ಸಂಪನ್ಮೂಲಗಳನ್ನು ಭಧ್ರ ಪಡಿಸಿಕೊಳ್ಳಲು ನಿರ್ಧರಿಸಿದರು. ಆ ವೇಳೆ ಬ್ರಿಟಿಷ್ ಆಡಳಿತಗಾರರು ಮತ್ತು ಅಧಿಕಾರಿಗಳು ಭಾರತೀಯರ ಆಸ್ತಿಗಳನ್ನು ಲೂಟಿ ಮಾಡಿದರು. ಇಂದಿಗೂ ಈ ಘಟನೆಗೆ ಸಂಬಂಧಿಸಿದಂತೆ ಸ್ಮಾರಕವನ್ನು ಇಲ್ಲಿ ಕಾಣಬಹುದಾಗಿದೆ.

ಸಮೀಪದ ಪ್ರವಾಸಿ ತಾಣಗಳು

ಸಮೀಪದ ಪ್ರವಾಸಿ ತಾಣಗಳು

ಉತ್ತರ ಪ್ರದೇಶದ ಪ್ರಸಿದ್ಧವಾದ ಪ್ರವಾಸಿ ತಾಣಗಳು ಹಲವಾರು ಇವೆ. ಅವುಗಳಲ್ಲಿ ಮುಖ್ಯವಾಗಿ ಲಕ್ನೋ ನೋಡಲು ಹಾಗು ಆನಂದಿಸಲು ಹಲವಾರು ತಾಣಗಳು ಇವೆ. ಇಲ್ಲಿ ವಿವಿಧ ಸ್ಮಾರಕಗಳು ಮತ್ತು ಪ್ರಾಚೀನ ಕಟ್ಟಡಗಳನ್ನು ಕಾಣಬುದಾಗಿದೆ. ಇಲ್ಲಿನ ವಾಸ್ತುಶಿಲ್ಪವೇ ನೋಡುಗರಿಗೆ ಹಬ್ಬ.

ಇವುಗಳಲ್ಲಿ ಮುಖ್ಯವಾದುದು ಎಂದರೆ ಕೈಸಬಾರ್ಕ್ ಅರಮನೆ, ಷಾ ನಜಫ್ ಇಮಾಂಬರಾ, ಬೆಕಾಮ್ ಹಜರತ್ ಮಹಲ್ ಪಾರ್ಕ್ ಮತ್ತು ರುಮಿ ದರ್ವಾಜ ಇನ್ನೂ ಹಲವಾರು.

PC:WIKI

ದಾಂಡಿ

ದಾಂಡಿ

ದಾಂಡಿ ಇರುವುದು ಮಹಾತ್ಮ ಗಾಂಧಿಯವರು ಇದ್ದ ಗುಜರಾತ್‍ನಲ್ಲಿ. ಈ ದಾಂಡಿ ಎಂಬ ಗ್ರಾಮವು ಗುಜಾರಾತ್‍ನ ಜೋಲಾಪುರ್ ಜಿಲ್ಲೆಯಲ್ಲಿದೆ. ಈ ಸ್ಥಳದಲ್ಲಿಯೇ ಮಹಾತ್ಮ ಗಾಂಧಿಯವರು ತಮ್ಮ ಉಪ್ಪಿನ ಸತ್ಯಾಗ್ರಹವನ್ನು ಪ್ರಾರಂಭಮಾಡಲು ದೇಶದಾದ್ಯಂತ ಕರೆ ನೀಡಿದರು. ಈ ಸತ್ಯಾಗ್ರಹವನ್ನು ಗಾಂಧಿಜೀಯವರ ಮನೆಯಲ್ಲಿಯೇ ಆರಂಭ ಮಾಡಿದರು.

PC: YANN

ಸಬರಮತಿ ಆಶ್ರಮ

ಸಬರಮತಿ ಆಶ್ರಮ

ಸಬರಮತಿ ಆಶ್ರಮದಿಂದ ದಾಂಡಿಗೆ ಕಾಲು ನಡಿಗೆಯಿಂದ ತನ್ನ ಬೆಂಬಲಿಗರೊಂದಿಗೆ ತೆರಳಿದರು. ಅಂತಿಮವಾಗಿ ದಾಂಡಿ ಬೀಚ್‍ಗೆ ತಲುಪಿ ಅಲ್ಲಿನ ಉಪ್ಪು ತೆಗೆದುಕೊಂಡು ಜೈಲಿಗೆ ಹೋದರಂತೆ. ಇಂಥಹ ದಿಟ್ಟ ಹೋರಾಟಗಾರನ ಜೊತೆ ಆತನ ಬೆಂಗಲಿಗರು ಕೂಡ ಸಾಥ್ ನೀಡಿದರಂತೆ. ಇದು ಒಂದು ಇತಿಹಾಸವನ್ನು ಹೊಂದಿರುವ ಸುಂದರವಾದ ಗ್ರಾಮವಾಗಿದೆ.

PC:WIKI

ಸಮೀಪದ ಪ್ರವಾಸಿ ತಾಣಗಳು

ಸಮೀಪದ ಪ್ರವಾಸಿ ತಾಣಗಳು

ಸೂರತ್, ವಿ.ಬಿ ಮತ್ತು ಪೂರ್ಣ ವನ್ಯಜೀವಿ ಅಭಯಾರಣ್ಯವನ್ನು ಇವೆಲ್ಲಾ ದಾಂಡಿಗೆ ಸಮೀಪದಲ್ಲಿನ ಸುಂದರವಾದ ಪ್ರವಾಸಿ ತಾಣಗಳಾಗಿದೆ.

PC: Rahul Bhadane

ಚೌರಿ ಚೌರ

ಚೌರಿ ಚೌರ

ಚೌರಿ ಚೌರ ಇದೊಂದು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೋಂಡ ಮಹತ್ವದ ಸ್ಥಳಗಳಲ್ಲಿ ಒಂದಾಗಿದೆ. ಇದು ಉತ್ತರ ಪ್ರದೇಶದಲ್ಲಿನ ಗೋರಖ್ ಪುರ ಜಿಲ್ಲಿಯಲ್ಲಿರುವ ಒಂದು ಸುಂದರವಾದ ನಗರವಾಗಿದೆ.


PC:Nitishkumarojha

ಅಸಹಕಾರ ಚಳುವಳಿ

ಅಸಹಕಾರ ಚಳುವಳಿ

ಮೊದಲ ಅಸಹಕಾರ ಚಳುವಳಿ ನಡೆದ ಘಟನೆ ಉತ್ತರ ಪ್ರದೇಶದಲ್ಲಿ. ಈ ಹಂತದಲ್ಲಿ ಮೊದಲ ಅಸಹಕಾರ ಚಳುವಳಿ ಪ್ರಾರಂಭವಾಯಿತು. ಫೆಬ್ರವರಿ 5, 1922 ರಂದು ಆರಂಭವಾದ ಈ ಘಟನೆಯಿಂದಾಗಿ ಆನೇಕ ಹೋರಾಟಗಾರರನ್ನು ಬಂಧಿಸಲಾಯಿತು. ಇದಕ್ಕೆ ಕಾರಣವೆಂದರೆ ಬ್ರಿಟಿಷ್ ಸರ್ಕಾರಕ್ಕೆ ಸಹಕಾರ ನೀಡಲು ಭಾರತೀಯರು ನಿರಾಕರಿಸಿದ ಕಾರಣವಾಗಿ ತೀವ್ರವಾದ ಶಿಕ್ಷೆಯನ್ನು ಹಾಗು ದಂಡವನ್ನು ವಿಧಿಸಲಾಯಿತು.

ಚೌರಿ ಚೌರ ಶಹೀದ್ ಸ್ಮಾರಕ ಸಮಿತಿ

ಚೌರಿ ಚೌರ ಶಹೀದ್ ಸ್ಮಾರಕ ಸಮಿತಿ

ಈ ಘಟನೆಯಿಂದಾಗಿ 1973 ರಲ್ಲಿ ಇಲ್ಲಿ ಹೋರಾಡಿದ ಸೈನಿಕರ ನೆನಪಿಗಾಗಿ ಚೌರಿ ಶೌರ ಶಹೀದ್ ಸ್ಮರಣಕ್ ಸಮೀತಿಯನ್ನು ನಿರ್ಮಾಣ ಮಾಡಲಾಯಿತು.

ಝಾನ್ಸಿ

ಝಾನ್ಸಿ

ಸ್ವಾತಂತ್ರ್ಯ ಹೋರಾಟಗಾರ್ತಿ ಝಾನ್ಸಿ ರಾಣಿ ಲಕ್ಷ್ಮೀ ಬಾಯಿಯ ಬಗ್ಗೆ ನಿಮಗೆ ಸಾಮಾನ್ಯವಾಗಿ ತಿಳಿದೇ ಇದೆ. ಈಕೆ ಝಾನ್ಸಿಯನ್ನು ಆಳುತ್ತಿದ್ದ ಮಹಾರಾಣಿ ಹಾಗು ಬ್ರಿಟಿಷರ ವಿರುದ್ಧ ಹೋರಾಡಿದ ದಿಟ್ಟವಾದ ಮಹಿಳೆಯಾಗಿದ್ದಾಳೆ.

PC: Ravi9889

ರೋಮಾಂಚಕಾರಿ

ರೋಮಾಂಚಕಾರಿ

ಐತಿಹಾಸಿಕ ಸೊಬಗನ್ನು ಹೊಂದಿರುವ ಈ ಸ್ಥಳಕ್ಕೆ ಭೇಟಿ ನೀಡುವುದು ಒಂದು ರೋಮಾಂಚನಕಾರಿ ಅನುಭವವೇ ಸರಿ. ಇಲ್ಲಿ ನೋಡಬೇಕಾದುದು ಬಹಳಷ್ಟಿದೆ.


PC: Ravi9889

ಚಂಪಾರಣ್

ಚಂಪಾರಣ್

ಇದು ಕೂಡ ಒಂದು ಗಾಂಧಿಯ ಹೋರಾಟ ಮಾಡಿದ ಪ್ರಸಿದ್ಧವಾದ ಸ್ಥಳವಾಗಿದೆ. ಚಂಪಾರಣ್‍ದಲ್ಲಿ ಮಹಾತ್ಮ ಗಾಂಧಿಜೀಯು ಭಾರತೀಯ ವಿಮೋಚನ ಚಳುವಳಿಯನ್ನು ಪ್ರಾರಂಭ ಮಾಡಿದ ಸ್ಥಳವಾಗಿದೆ.

ಬ್ರಿಟಿಷರನ್ನು ಕೊಂದ ಸ್ಥಳ

ಬ್ರಿಟಿಷರನ್ನು ಕೊಂದ ಸ್ಥಳ

ಈ ಚಂಪಾರಣ್ ಬ್ರಿಟಿಷರನ್ನು ಕೊಂದ ಸ್ಥಳವಾಗಿದೆ. 1857 ರಲ್ಲಿ ಒಂದು ಮಹತ್ವ ಪೂರ್ಣವಾದ ಕ್ರಾಂತಿ ಆರಂಭವಾಗುತ್ತದೆ. ಇಲ್ಲಿ ಸಾಹಿತ್ಯ ಪಾಂಡೆ ಉತ್ತಯನ್ ಮೆಮೋರಿಯಲ್‍ಯನ್ನು ಪ್ರಾರಂಭ ಮಾಡಿದರು.


PC:Biswarup Ganguly

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ