Search
  • Follow NativePlanet
Share
» »ಈ ಗ್ರಾಮದ 75 ಮನೆಗಳಲ್ಲಿ 45 ಮಂದಿ I,A,S

ಈ ಗ್ರಾಮದ 75 ಮನೆಗಳಲ್ಲಿ 45 ಮಂದಿ I,A,S

ವಿದ್ಯಾ ದೇವತೆ ಸರಸ್ವತಿಯ ಕೃಪೆ ಇದ್ದರೆ ಮಾತ್ರ ಓದುವುದು, ಬರೆಯುವುದು ಸಾಧ್ಯ. ಆ ಮಾತೆಯ ಕರುಣೆಯಿದ್ದರೆ ಅನಕ್ಷರಸ್ಥನೂ ಕೂಡ ಅಕ್ಷರಸ್ಥನಾಗಿ ದೇಶಕ್ಕೆ ಹೆಮ್ಮೆಯ ಪುತ್ರನೆನಿಸಿಕೊಳ್ಳಬಹುದು. ಅತ್ಯಂತ ಕಷ್ಟದ ವಿದ್ಯಾಭ್ಯಾಸಗಳಲ್ಲಿ ಐ, ಎ,ಎಸ್ ಕೂಡ ಒ

ವಿದ್ಯಾ ದೇವತೆ ಸರಸ್ವತಿಯ ಕೃಪೆ ಇದ್ದರೆ ಮಾತ್ರ ಓದುವುದು, ಬರೆಯುವುದು ಸಾಧ್ಯ. ಆ ಮಾತೆಯ ಕರುಣೆಯಿದ್ದರೆ ಅನಕ್ಷರಸ್ಥನೂ ಕೂಡ ಅಕ್ಷರಸ್ಥನಾಗಿ ದೇಶಕ್ಕೆ ಹೆಮ್ಮೆಯ ಪುತ್ರನೆನಿಸಿಕೊಳ್ಳಬಹುದು. ಅತ್ಯಂತ ಕಷ್ಟದ ವಿದ್ಯಾಭ್ಯಾಸಗಳಲ್ಲಿ ಐ, ಎ,ಎಸ್ ಕೂಡ ಒಂದು. ಈ ಪದವಿಯನ್ನು ಪಡೆಯಬೇಕಾದರೆ ವಿದ್ಯಾಭ್ಯಾಸದಲ್ಲಿ ಅತ್ಯಂತ ಶ್ರಮ, ಏಕಾಗ್ರತೆ, ಛಲವಿರಬೇಕು.

ಉತ್ತರ ಪ್ರದೇಶ ರಾಜ್ಯದ ಜಾನ್ ಪೂರ್ ಜಿಲ್ಲೆಯ ಮಧುಪಟ್ಟಿ ಗ್ರಾಮದಲ್ಲಿ 75 ಮನೆಗಳಿವೆ. ಅವುಗಳಲ್ಲಿ 47 ಮಂದಿ ಐ.ಎ,ಎಸ್ ಅಧಿಕಾರಿಗಳು. ಆ ಗ್ರಾಮದ ಬಗ್ಗೆ ಹೇಳಬೆಕೆಂದರೆ ಆ ಗ್ರಾಮ ಸರಸ್ವತಿ ಪುತ್ರರ ನಿಲಯ. ದೇಶ ಸೇವೆ ಬಗ್ಗೆ ಹೆಚ್ಚು ಒಲವನ್ನು ಹೊಂದಿರುವ ಆ ಗ್ರಾಮದ ಯುವಕರು ಸದಾ ಓದುವುದರಲ್ಲಿಯೇ ತಲ್ಲೀನರಾಗಿರುತ್ತಾರೆ.

ಇಂಟರ್ಮಿಡಿಯಟ್‍ನಿಂದ ಟಾರ್ಗೆಟ್ ಟು ಸಿವಿಲ್ಸ್ ಸ್ಟಾರ್ಟ್ ಮಾಡಿ ತಮ್ಮ ಗುರಿಯನ್ನು ನಿರಂತರ ಪ್ರಯತ್ನದಿಂದ ವಿಜಯ ಸಾಧಿಸುತ್ತೇವೆ ಎನ್ನುತ್ತಾರೆ ವಿದ್ಯಾರ್ಥಿಗಳು. ಆ ಗ್ರಾಮಸ್ಥರ ಪ್ರಕಾರ ಆ ಊರಿನಲ್ಲಿ ಮೊದಲ ಬಾರಿಗೆ ಮುಸ್ತಫಾಹುಸ್ಸೆನ್ ಐ,ಎ,ಎಸ್ ನಲ್ಲಿ ಉತ್ತೀರ್ಣಗೊಂಡವನು ಎಂದು ಹೇಳುತ್ತಾರೆ.

ಹುಸ್ಸೆನ್

ಹುಸ್ಸೆನ್

ಹುಸ್ಸೆನ್ 1914ರಲ್ಲಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆ ಬರೆದು ಅದರಲ್ಲಿ ಉತ್ತೀರ್ಣನಾಗಿ ಪಬ್ಲಿಕ್ ಕಮಿಷ್‍ನರ್ ಸರ್ವಿಸ್‍ಗೆ ಸೇರಿದನು.

ಪಬ್ಲಿಕ್ ಸರ್ವಿಸ್ ಕಮಿಷನ್

ಪಬ್ಲಿಕ್ ಸರ್ವಿಸ್ ಕಮಿಷನ್

ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ದ್ವಿತಿಯ ಸ್ಥಾನ ಸಾಧಿಸಿದ ಇಂದೂಪ್ರಕಾಶ ಹುಸ್ಸೆನ್‍ನ ಮಾರ್ಗದರ್ಶಿಯಾಗಿ ತೆಗೆದುಕೊಂಡು ಆತನು ಕೂಡ ಪಬ್ಲಿಕ್ ಸರ್ವಿಸ್ ಕಮಿಷನ್ ಸರ್ವಿಸ್‍ನಲ್ಲಿ ಸೇರಿದನು.

ದೇಶ ಪ್ರಗತಿ

ದೇಶ ಪ್ರಗತಿ

ಅಂದಿನಿಂದ ಮಧುಪಟ್ಟಿ ಗ್ರಾಮದಲ್ಲಿನ ಹಲವಾರು ಯುವಕರು ಸಿವಿಲ್ ಸರ್ವಿಸ್‍ನಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಲು ದೇಶ ಪ್ರಗತಿಗಾಗಿ ಐ,ಎ,ಎಸ್ ಆಗ ಬೇಕು ಎಂದು ಎಷ್ಟೋ ಶ್ರಮ ವಹಿಸುತ್ತಿದ್ದಾರೆ.

ಬಾಬಾ ಅಟಾಮಿಲ್ ರಿರ್ಸಚ್ ಸೆಂಟರ್

ಬಾಬಾ ಅಟಾಮಿಲ್ ರಿರ್ಸಚ್ ಸೆಂಟರ್

ಈ ಗ್ರಾಮದಲ್ಲಿ ಹಲವಾರು ಮಂದಿ ವಿದ್ಯಾವಂತ ಯುವಕರು ಇಂಡಿಯನ್ ಸ್ಪೆಸ್ ರೆಸೆರ್ಟ್ ಆರ್ಗನೈಜೆಷನ್, ಬಾಬಾ ಅಟಾಮಿಲ್ ರಿರ್ಸಚ್ ಸೆಂಟರ್ ಮತ್ತು ಪ್ರಪಂಚ ಬ್ಯಾಂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹೊಸ ದಾಖಲೆ

ಹೊಸ ದಾಖಲೆ

ಇತ್ತೀಚಿಗೆ ಈ ಗ್ರಾಮಕ್ಕೆ ಸೇರಿದ ಕೆಲವು ಯುವಕರು ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.

ಐ,ಎ,ಎಸ್

ಐ,ಎ,ಎಸ್

ಸಿವಿಲ್ ಸರ್ವಿಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಐ,ಎ,ಎಸ್‍ಗೆ ಆಯ್ಕೆಯಾಗಿದ್ದಾರೆ.

ಐ,ಎ,ಎಸ್ ಪುಸ್ತಕಗಳು

ಐ,ಎ,ಎಸ್ ಪುಸ್ತಕಗಳು

ಈ ಗ್ರಾಮದ ಹಲವಾರು ವಿದ್ಯಾರ್ಥಿಗಳು ಇಂಟರ್ಮಿಡಿಯಟ್ ಪೂರ್ತಿಯಾದ ನಂತರ ಪಬ್ಲಿಕ್ ಸರ್ವಿಸ್ ಕಮಿಷನ್ ಮತ್ತು ಐ,ಎ,ಎಸ್ ಪುಸ್ತಕಗಳನ್ನು ಖರೀದಿಸಿ ಅವುಗಳನ್ನು ಓದುತ್ತಾ ಹೆಚ್ಚಾಗಿ ದೃಷ್ಟಿ ಕೇಂದ್ರೀಕರಿಸುತ್ತಾರಂತೆ.

ಪ್ರಿಪರೇಷನ್

ಪ್ರಿಪರೇಷನ್

ಇಲ್ಲಿ ಹೆಚ್ಚಾಗಿ ಇಂಗ್ಲೀಷ್‍ನಲ್ಲಿ ಹೆಚ್ಚು ಅಭ್ಯಾಸ ಮಾಡದೆ ಚಿಕ್ಕ ವಯಸ್ಸಿನಿಂದಲೇ ಹಿಂದಿ ಭಾಷೆಯಲ್ಲಿಯೇ ಹೆಚ್ಚಾಗಿ ವಿದ್ಯಾಭ್ಯಾಸ ಮಾಡುತ್ತಾ ಪ್ರಿಪೇರ್ ಆಗುತ್ತಿರುತ್ತಾರಂತೆ.

ಮಧುಪಟ್ಟಿ ಗ್ರಾಮ

ಮಧುಪಟ್ಟಿ ಗ್ರಾಮ

ಮಧುಪಟ್ಟಿ ಗ್ರಾಮವನ್ನು ಐ,ಎ,ಎಸ್ ಆಫಿಸರ್ ಗ್ರಾಮ ಎಂದು ಕರೆದರೆ ಫೂಜಿಪೂರ್ ಜಿಲ್ಲೆಯ ಗಾಮಾರ್ ಗ್ರಾಮವನ್ನು ಆರ್ಮಿ ಗ್ರಾಮ ಎಂದು ಕರೆಯುತ್ತಾರೆ.

ಪ್ರತಿ ಮನೆಯಲ್ಲಿ ಒಬ್ಬರು

ಪ್ರತಿ ಮನೆಯಲ್ಲಿ ಒಬ್ಬರು

ಏಕೆಂದರೆ ಇಲ್ಲಿ ಪ್ರತಿ ಮನೆಯಲ್ಲಿ ಒಬ್ಬರು ಇಂಡಿಯನ್ ಆರ್ಮಿಯಾಗಿ ಕಾರ್ಯ ನಿರ್ವಹಿಸುತ್ತಾರಂತೆ.

ಹ್ಯಾಟ್ಸ್‍ಫ್

ಹ್ಯಾಟ್ಸ್‍ಫ್

ದೇಶ ಸೇವೆ ಮಾಡಲು ಹಾಗೂ ದೇಶವನ್ನು ಅಭಿವೃದ್ಧಿ ಪತದಲ್ಲಿ ಸಾಗಿಸುತ್ತಿರುವುದಕ್ಕೆ ಇವರ ಶ್ರಮ ಹಾಗೂ ಪ್ರಯತ್ನಕ್ಕೆ ಒಮ್ಮೆ ಹ್ಯಾಟ್ಸ್‍ಫ್ ಹೇಳಲೇಬೇಕು ಅಲ್ಲವೇ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X