Search
  • Follow NativePlanet
Share
» »ಅಗಾಧ ಸೌಂದರ್ಯದಿಂದ ಕಣ್ಮನ ಸೆಳೆವ ತೆನ್ಮಲ!

ಅಗಾಧ ಸೌಂದರ್ಯದಿಂದ ಕಣ್ಮನ ಸೆಳೆವ ತೆನ್ಮಲ!

By Vijay

ಇದು ಭಾರತದ ಮೊದಲ ಯೋಜನಾಬದ್ಧ ಪರಿಸರ ಪ್ರವಾಸೋದ್ಯಮದ ತಾಣ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇಲ್ಲಿನ ಪ್ರಕೃತಿ ಸೌಂದರ್ಯ ಎಂಥವರನ್ನೂ ಬೆಕ್ಕಸ ಬೆರಗಾಗುವಂತೆ ಮಾಡುತ್ತದೆ. ಇಲ್ಲಿಗೆ ಭೇಟಿ ನೀಡಿದಾಗ ನಿಮ್ಮೆಲ್ಲ ಚಿಂತೆಗಳು, ಒತ್ತಡಗಳು ಕೆಲ ಕಾಲವಾದರೂ ಸರಿ ಮಂಗ ಮಾಯವಾಗುತ್ತವೆ. ಲವಲವಿಕೆ-ಉತ್ಸಾಹಗಳು ಪುಟಿದೇಳುತ್ತವೆ.

ಅಷ್ಟೆ ಏಕೆ, ಚಿತ್ರೀಕರಣಕ್ಕೆಂದು ಹೇಳಿ ಮಾಡಿಸಿದಂತಹ ಸ್ಥಳ ಇದಾಗಿದೆ. ಹಾಗಾಗಿ ಇಲ್ಲಿ ಆವಾಗಾವಾಗ ಚಿತ್ರೀಕರಣಗಳು ನಡೆಯುತ್ತಲೆ ಇರುತ್ತವೆ. ಅಷ್ಟಕ್ಕೂ ಇಲ್ಲಿನ ಕಾಡುಗಳಲ್ಲಿ ಕಂಡು ಬರುವ ಜೇನು ಔಷಧಿಯುಕ್ತ ಗುಣಗಳನ್ನು ಹೊಂದಿದ್ದು ಅತ್ಯುತ್ತಮ ಗುಣಮಟ್ಟದ್ದಾಗಿರುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಇದಕ್ಕೆ ತೆನ್ಮಮಲ ಎಂಬ ಹೆಸರು ಬಂದಿದೆ.

ಮತ್ತೆ ಮತ್ತೆ ಹೋಗಲು ಮನ ಚಡಪಡಿಸುವ ಇಡುಕ್ಕಿ ನೋಡಿರಣ್ಣ!

ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ತೇನು ಎಂದರೆ ಜೇನು ಎಂತಲೂ ಮಲೈ ಎಂದರೆ ಬೆಟ್ಟ-ಗುಡ್ಡಗಳು ಎಂಬರ್ಥವಿದೆ. ಹಾಗಾಗಿ ಇದಕ್ಕೆ ಜೇನಿನ ಗುಡ್ಡ ಅಥವಾ ತೇನ್ಮಲ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಆದರೂ ಇನ್ನೂ ಕೆಲವರ ಪ್ರಕಾರ ತೆನ್ ಎಂದರೆ ತಮಿಳು ಹಾಗೂ ಮಲಯಾಳಂಗಳಲ್ಲಿ ದಕ್ಷಿಣ ಎಂದಾಗುತ್ತದೆ. ಹಾಗಾಗಿ ದಕ್ಷಿಣದ ಗುಡ್ಡಗಳು ಎಂದು ಸೂಚಿಸುವುದಕ್ಕೆ ಇದಕ್ಕೆ ತೆನ್ಮಲ ಎಂಬ ಹೆಸರು ಬಂದಿದೆ.

ಹೆಸರು ಯಾವರೀತಿಯಿಂದಾದರೂ ಬಂದಿರಲಿ. ಆದರೆ ಇಲ್ಲಿನ ಹಸಿರು ನಿಮ್ಮ ಉಸಿರಲ್ಲಿ ಬೆರೆತು ಹೋಗುವ ಹಾಗೆ ಮೋಡಿ ಮಾಡುತ್ತದೆ. ಸಾಕಷ್ಟು ಇತರೆ ಪ್ರವಾಸಿ ಆಕರ್ಷಣೆಗಳನ್ನೂ ಸಹ ಇಲ್ಲಿ ಕಾಣಬಹುದು. ಹಾಗಾದರೆ ಬನ್ನಿ ಪ್ರಸ್ತುತ ಲೇಖನದ ಮೂಲಕ ತೆನ್ಮಲದ ಒಂದು ಸುತ್ತು ಹೊಡೆಯೋಣ.

ಕಣ್ಮನ ಸೆಳೆವ ತೆನ್ಮಲ:

ಕಣ್ಮನ ಸೆಳೆವ ತೆನ್ಮಲ:

ತೆನ್ಮಲ ಮೂಲತಃ ಒಂದು ಪ್ರವಾಸಿ ಆಕರ್ಷಣೆಯುಳ್ಳ ತಾಣವಾಗಿದೆ. ಇಕೊ-ಟೂರಿಸಂ ಅಂದರೆ ಪರಿಸರ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಭಿವೃದ್ಧಿಗೊಳಿಸಲಾದ ಪರಿಸರ ಪ್ರವಾಸೋದ್ಯಮ ತಾಣಗಳಲ್ಲಿ ತೆನ್ಮಲ ದೇಶದಲ್ಲೆ ಮೊದಲ ಯೋಜನಾಬದ್ಧವಾಗಿ ರೂಪಿಸಲಾದ ಯೋಜನೆ ಹೊಂದಿದೆ.

ಚಿತ್ರಕೃಪೆ: Thejas Panarkandy

ಕಣ್ಮನ ಸೆಳೆವ ತೆನ್ಮಲ:

ಕಣ್ಮನ ಸೆಳೆವ ತೆನ್ಮಲ:

ತೆನ್ಮಲ ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯಲ್ಲಿರುವ ಪ್ರಖ್ಯಾತ ಪ್ರವಾಸಿ ತಾಣವಾಗಿದೆ. ರಾಜ್ಯದ ರಾಜಧಾನಿ ನಗರ ತಿರುವನಂತಪುರಂನಿಂದ ಸುಮಾರು 72 ಕಿ.ಮೀ ಗಳಷ್ಟು ದೂರದಲ್ಲಿ ತೆನ್ಮಲವಿದ್ದು ತೆರಳಲು ಸಾಕಷ್ಟು ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: Akhil S Unnithan

ಕಣ್ಮನ ಸೆಳೆವ ತೆನ್ಮಲ:

ಕಣ್ಮನ ಸೆಳೆವ ತೆನ್ಮಲ:

ಪಶ್ಚಿಮ ಘಟ್ಟಗಳ ದಟ್ಟವಾದ ಹಸಿರಿನ ಪರಿಸರದಲ್ಲಿ ನೆಲೆಸಿರುವ ತೆನ್ಮಲ ತನ್ನ ಹಸಿರಿನ ವೈಯ್ಯಾರದಿಂದ ಪ್ರವಾಸಿಗರ ಮನ ಕದಿಯುವಲ್ಲಿ ಸಫಲವಾಗುತ್ತದೆ. ಇಲ್ಲಿ ನಿರ್ಮಿಸಲಾದ ತೂಗು ಸೇತುವೆಗಳು, ಜಲಾಶಯ, ಎತ್ತರದ ಬೆಟ್ಟ-ಗುಡ್ಡಗಳು, ಗಿಡ ಮರಗಳು, ಸುಶ್ರಾವ್ಯವಾಗಿ ಹರಿಯುವ ನೀರು ಮನಸ್ಸಿಗೆ ಮುದ ನೀಡುತ್ತವೆ.

ಚಿತ್ರಕೃಪೆ: Kerala Tourism

ಕಣ್ಮನ ಸೆಳೆವ ತೆನ್ಮಲ:

ಕಣ್ಮನ ಸೆಳೆವ ತೆನ್ಮಲ:

ತೆನ್ಮಲ ಇಂದು ಸಾಕಷ್ಟು ಸಂಖ್ಯೆಯಲ್ಲಿ ದೇಶದ ಹಾಗೂ ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕಲ್ಲಡಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಆಣೆಕಟ್ಟು, ಹಿನ್ನೀರಿನಿಂದುಂಟಾದ ಸುಂದರವಾದ ಕೆರೆ, ದೋಣಿ ವಿಹಾರ, ಟ್ರೆಕ್ಕಿಂಗ್ ಮುಂತಾದ ಸುಂದರ ಅನುಭವಗಳನ್ನು ತೆನಮಲ ಒದಗಿಸುತ್ತದೆ.

ಚಿತ್ರಕೃಪೆ: Mohanraj Kolathapilly

ಕಣ್ಮನ ಸೆಳೆವ ತೆನ್ಮಲ:

ಕಣ್ಮನ ಸೆಳೆವ ತೆನ್ಮಲ:

ಕಲ್ಲಡಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ತೆನ್ಮಲ "ಚೆಕ್ ಡ್ಯಾಮ್".

ಚಿತ್ರಕೃಪೆ: Kumar Mullackal

ಕಣ್ಮನ ಸೆಳೆವ ತೆನ್ಮಲ:

ಕಣ್ಮನ ಸೆಳೆವ ತೆನ್ಮಲ:

ಪುನಲೂರು ತೆನ್ಮಲದ ಬಳಿ ಇರುವ ಇನ್ನೊಂದು ಸುಂದರ ಚಿಕ್ಕ ಪಟ್ಟಣ. ಕೊಲ್ಲಂ ಜಿಲ್ಲೆಯಲ್ಲೆ ಇರುವ ಪುನಲೂರು ತೆನ್ಮಲದಿಂದ ಕೇವಲ 22 ಕಿ.ಮೀ ಗಳಷ್ಟು ದೂರದಲ್ಲಿದೆ ಹಾಗೂ ತೆನ್ಮಲದ ಸುತ್ತಮುತ್ತಲಿರುವ ಆಕರ್ಷಕ ಸ್ಥಳಗಳಲ್ಲಿ ಭೇಟಿ ನೀಡಬಹುದಾದ ಸುಂದರ ಸ್ಥಳಗಳಲ್ಲೊಂದಾಗಿದೆ. ಇಲ್ಲಿ ಎರಡು ರೀತಿಯ ಸೇತುವೆಗಳು ಸಾಕಷ್ಟು ಪ್ರಸಿದ್ಧಿ ಪಡೆದಿವೆ.

ಚಿತ್ರಕೃಪೆ: Arunvrparavur

ಕಣ್ಮನ ಸೆಳೆವ ತೆನ್ಮಲ:

ಕಣ್ಮನ ಸೆಳೆವ ತೆನ್ಮಲ:

ಒಂದು, ಐತಿಹಾಸಿಕ ಹದಿಮೂರು ಕಮಾನುಗಳುಳ್ಳ ರೈಲು ಸೇತುವೆ. ಇದು ಇಂದು ಇತಿಹಾಸವಾಗಿದ್ದರೂ ಸಹ ಸಾಕಷ್ಟು ನೆನಪುಳಿಯುವಂತಹ ಕ್ಷಣಗಳನ್ನು ಪ್ರವಾಸಿಗರಿಗೆ/ಪ್ರಯಾಣಿಕರಿಗೆ ಒದಗಿಸಿದೆ.

ಚಿತ್ರಕೃಪೆ: Sktm14

ಕಣ್ಮನ ಸೆಳೆವ ತೆನ್ಮಲ:

ಕಣ್ಮನ ಸೆಳೆವ ತೆನ್ಮಲ:

ಇನ್ನೊಂದು ಭಾರತದ ಅತಿ ಪುರಾತನ ಸೇತುವೆ. ಹೌದು ಇಲ್ಲಿರುವ ಅತಿ ಪುರಾತನ ಸೇತುವೆಯನ್ನು ಕ್ರಿ.ಶ. 1877 ರಲ್ಲಿ ನಿರ್ಮಿಸಲಾಗಿದೆ. ವಿಶೇಷವೆಂದರೆ ಇದು ತೂಗು ಸೇತುವೆ ಹಾಗೂ ಮೊದಲ ವಾಹನ ಚಲಾಯಿಸಬಹುದಾದ ಸೇತುವೆ ಕೂಡ ಹೌದು.

ಚಿತ್ರಕೃಪೆ: Jpaudit

ಕಣ್ಮನ ಸೆಳೆವ ತೆನ್ಮಲ:

ಕಣ್ಮನ ಸೆಳೆವ ತೆನ್ಮಲ:

ತೆನ್ಮಲದಿಂದ ಕೇವಲ ಹತ್ತು ಕಿ.ಮೀ ದೂರದಲ್ಲಿರುವ ಕುಲತುಪುಳ ಎಂಬ ಗ್ರಾಮವು ಒಂದು ಆಕರ್ಷಣೆಯಾಗಿದೆ. ಕುಲ್ತುಪುಳ ನಿರ್ಮಲ ಪರಿಸರ, ಶುದ್ಧ ನೀರಿನ ತೊರೆಗಳು ಹಾಗೂ ಅದರಲ್ಲಿರುವ ಮೀನುಗಳು, ಶಾಸ್ತ ದೇವಾಲಯ ಹಾಗೂ ಮಿಸ್ಟೇರಿಯಾ ಎಂಬ ಜೌಗು ಪ್ರದೇಶಗಳಿಗೆ ಹೆಸರುವಾಸಿಯಾಗಿದೆ. ಶಾಸ್ತ ದೇವಾಲಯ.

ಚಿತ್ರಕೃಪೆ: Binupotti

ಕಣ್ಮನ ಸೆಳೆವ ತೆನ್ಮಲ:

ಕಣ್ಮನ ಸೆಳೆವ ತೆನ್ಮಲ:

ತೆನ್ಮಲದಿಂದ 30 ಕಿ.ಮೀ ದೂರದಲ್ಲಿರುವ ಅಂಚಲ್ ಮತ್ತೊಂದು ತಾಣವಾಗಿದ್ದು ಇದರ ಬಳಿ ಇರುವ ಕಡಕ್ಕಲ್ ದೇವಿ ದೇವಾಲಯ ಸಾಕಷ್ಟು ಜನಪ್ರೀಯವಾದ ಧಾರ್ಮಿಕ ತಾಣವಾಗಿದೆ. ನಂಬಿಕೆಯಂತೆ ಈ ದೇವಿಯನ್ನು ಯಾರು ಆರಾಧಿಸುತ್ತಾರೊ ಅವರಿಗೆ ಜೀವನದಲ್ಲಿ ಯಾವುದೆ ರೀತಿಯ ಕೆಡುಕು ಉಂಟಾಗುವುದಿಲ್ಲವೆನ್ನಲಾಗುತ್ತದೆ. ಇವಳು ಕಡಕ್ಕಾಲಮ್ಮ ದೇವಿ ಎಂದೆ ಪ್ರಸಿದ್ಧಳಾಗಿದ್ದಾಳೆ.

ಚಿತ್ರಕೃಪೆ: Adithyan p lal

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X