• Follow NativePlanet
Share
Menu
» »ಟೈಮ್ಲೆಸ್ - ಹವೇಲಿಗಳು- ರಾಜಸ್ಥಾನ

ಟೈಮ್ಲೆಸ್ - ಹವೇಲಿಗಳು- ರಾಜಸ್ಥಾನ

Posted By: Manjula Balaraj Tantry

ಸೂಕ್ಷ್ಮ ಕಲಾಕೃತಿಗಳಿಂದ ಸುಂದರವಾಗಿ ರಚಿಸಲಾದ ಮತ್ತು ವಿನ್ಯಾಸಗೊಳಿಸಿದ ಮಹಲುಗಳಿಂದ, ರಾಜಸ್ಥಾನವು ನಿಜವಾಗಿಯೂ ಭವ್ಯವಾದ ಹವೇಲಿಗಳ ತಾಣವಾಗಿದೆ ರಾಜಸ್ಥಾನದ ಹವೇಲಿಗಳು ರಜಪೂತ ವಂಶದ ಪ್ರಾಚೀನ ಯುಗದ ಮೋಡಿ ಮತ್ತು ಭವ್ಯತೆಯನ್ನು ಹೊರಹೊಮ್ಮಿಸುತ್ತವೆ.

ರಾಜ್ಯದ ಉದ್ದಗಲಕ್ಕೂ ಹರಡಿಕೊಂಡಿರುವ ಈ ರಚನೆಗಳು ಒಂದು ಕಾಲದಲ್ಲಿ ಹಿಂದಿನ ಆಡಳಿತಗಾರರಿಗೆ ಸೇರಿದ್ದವು, ಹಳೆಯ ಕಾಲದ ರಾಜವೈಭವ ಮತ್ತು ಸಾಂಸ್ಕೃತಿಕ ಪರಂಪರೆಗಳನ್ನು ಶ್ರೀಮಂತ ವರ್ತಕರ ಹವೇಲಿಗಳ ಗೋಡೆಗಳಲ್ಲಿ ರಾರಾಜಿಸುತ್ತದೆ.

ಜೈಪುರದಿಂದ ಜೈಸಲ್ಮೇರ್ ವರೆಗೆ ಮತ್ತು ಬಿಕನೀರ್ ನಿಂದ ಜೋಧ್ಪುರ್ ವರೆಗೆ, ಈ ವರ್ಣರಂಜಿತ ರಚನೆಗಳು ಹಳೆಯದಾದ ವೈಭವ ಮತ್ತು ಸಂಸ್ಕೃತಿಯನ್ನು ನಮಗೆ ನೆನಪಿಸುತ್ತವೆ. ಮೊಘಲರಿಂದ ಹಿಂದೂಗಳವರೆಗೆ ಮತ್ತು ಶೇಖಾವತ್ ಗಳಿಂದ ಶ್ರೀಮಂತ ಗೋಯೆಂಕಾಸ್ ವರೆಗೂ ಪ್ರತೀ ಹವೇಲಿಯು ಅವುಗಳ ಮಾಲೀಕರ ವರ್ಗ ಮತ್ತು ವೈಭವನ್ನು ಪ್ರತಿಬಿಂಬಿಸುತ್ತದೆ. ರಾಜಸ್ಥಾನಕ್ಕೆ ಭೇಟಿ ನೀಡುವವರಿಗೆ ಈ ಮನೆಗಳು ಒಂದು ಆಸಕ್ತಿದಾಯಕ ಮತ್ತುಕುತೂಹಲಕಾರಿಯಾದ ತಾಣಗಳಾಗಿವೆ.

ಬಾಗೋರ್ ಕಿ ಹವೇಲಿ
                                                                PC: Manoj Vasanth

ಮೇವಾರ್

ಮೇವಾರ್ ಸಾಮ್ರಾಜ್ಯದ ಐತಿಹಾಸಿಕ ರಾಜಧಾನಿಯಲ್ಲಿ ಭವ್ಯವಾದ ಬಾಗೋರ್ ಕಿ ಹವೇಲಿಯಿದೆ. 18 ನೇ ಶತಮಾನದಲ್ಲಿ ಅಮೀರ್ ಚಂದ್ ಬದ್ವಾ ನಿರ್ಮಿಸಿದ ಈ ಕಟ್ಟಡವು ಪಿಚೋಲಾ ಸರೋವರದ ದಡದಲ್ಲಿದೆ ಮತ್ತು 100ಕ್ಕೂ ಹೆಚ್ಚಿನ ಕೊಠಡಿಗಳನ್ನು ಹೊಂದಿದ್ದು ಇಲ್ಲಿ ಸಂಕೀರ್ಣವಾಗಿ ವಿನ್ಯಾಸಗೊಳಿಸಿದ ಬಾಲ್ಕನಿಗಳು ಮತ್ತು ಗೋಡೆಗಳು ಭಿತ್ತಿಚಿತ್ರಗಳಿಂದ ತುಂಬಿವೆ, ಇದು ಹಿಂದಿನ ಕಾಲದ ರೀತಿ ನೀತಿಗಳತ್ತ ಬೆಳಕು ಚೆಲ್ಲುತ್ತದೆ.

ಪಿರಾಮಾಲ್ ಹವೇಲಿ
                                                              PC: Official Site

ಮೇವಾರ್

1924ರಲ್ಲಿ ಸೇಠ್ ಪಿರಮಾಲ್ ಚತುರ್ಭುಜ್ ಮಖಂಜರಿಂದ ನಿಈ ಹವೇಲಿಯನ್ನು ರ್ಮಿಸಲಾಯಿತು. ಇನ್ನಿತರ ಹವೇಲಿಗಳಂತೆ ಈ ಹವೇಲಿಯು ಹಳೆಯ ಸಾಂಪ್ರದಾಯಿಕ ವಾಸ್ತುಶಿಲ್ಪಕ್ಕೆ ಆಧುನಿಕ ಮೆರುಗನ್ನು ಕೊಡುವಂತಿದೆ. ಸೇಠ್ ಪಿರಮಾಲ್ ಒಬ್ಬ ವ್ಯಾಪಾರಿಯಾಗಿದ್ದು ಅವರು ಬೆಳ್ಳಿ, ಹತ್ತಿ ಮತ್ತು ಅಫೀಮುಗಳ ವ್ಯಾಪಾರ ಮಾಡುತ್ತಿದ್ದರು.

ಬಾಗರದಲ್ಲಿರುವ ಹವೇಲಿಯು ರಾಜಸ್ಥಾನಿ ಮತ್ತು ಇಟಲಿ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದು ಯುರೋಪಿಯನ್-ಶೈಲಿಯ ಸ್ಥಂಭಗಳನ್ನೊಳಗೊಂಡಿದ್ದು ಇದು ಅಂಗಳದಲ್ಲಿರುವ ಎಂಟು ಕೊಠಡಿಗಳನ್ನು ಸಂಪರ್ಕಿಸುತ್ತದೆ. ಈ ರಚನೆಯು ಈಗ ಹೋಟೆಲ್ ಆಗಿ ಮಾರ್ಪಟ್ಟಿದ್ದು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಸಮೋದೆ ಹವೇಲಿ
                                                  PC: Official Site

ಮೇವಾರ್

ಈ ಹವೇಲಿಯನ್ನು ಜೈಪುರದ ಹಿಂದಿನ ಪ್ರಧಾನಿ ರಾವಲ್ ಶಿಯೋ ಸಿಂಗ್ ರಿಂದ 175 ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟಿತು. ಈ ಮಹಲು 1988ರಲ್ಲಿ ಒಂದು ಹೆರಿಟೇಜ್ ಹೋಟೆಲ್ ಆಗಿ ನಿರ್ಮಿಸಲಾಯಿತು ಈ ಮಹಲಿನ ಮೂಲೆ ಮೂಲೆಯಲ್ಲೂ ಐಷಾರಾಮಿ ಕಲಾಕೃತಿಗಳು ಮತ್ತು ರಚನೆಗಳು ಇಲ್ಲಿಗೆ ಭೇಟಿ ಕೊಡುವ ಅತಿಥಿಗಳನ್ನು ಆಕರ್ಷಿಸುತ್ತದೆ.

ವಿಶಾಲವಾಗಿ ಚಿತ್ರಿಸಿದ ಊಟದ ಕೊಠಡಿಗಳು, ಗಾಳಿಮನೆ ಅಂಗಳಗಳು ಮತ್ತು ಪ್ರವೇಶದ್ವಾರದಲ್ಲಿ ಆನೆ ಸವಾರಿ ಇವೆಲ್ಲ ಈ ಅಂಗಳಗಳಲ್ಲಿ ನಡೆಯುತ್ತಿದ್ದ ರಾಜರ ಮಹಾ ಜೀವನಶೈಲಿಯ ಸಂಕೇತಗಳಾಗಿವೆ.

ಅಲ್ಸಿಸರ್ ಮಹಲ್
                                                      PC: Official Site

ಮೇವಾರ್

ಜೈಪುರದಲ್ಲಿರುವ ಈ ಮಹಲ್ ಹಿಂದಿನ ವೈಭವವನ್ನು ಸಂರಕ್ಷಿಸಿದ ಇನ್ನೊಂದು ಸುಂದರವಾದ ಪರಂಪರೆಯ ಆಸ್ತಿಯಾಗಿದೆ. 1862ರಲ್ಲಿ ನಿರ್ಮಿಸಲಾದ ಇದು ಹೆರಿಟೇಜ್ ಹೋಟೆಲ್ ಆಗಿ ಪರಿವರ್ತನೆಯಾಗುವ ಮೊದಲು, ರಜಪೂತದ ಕಚಾವಾ ಕುಲದವರು ಇದರ ಮಾಲೀಕತ್ವವನ್ನು ಹೊಂದಿದ್ದರು.

ಇದು ಸಾಂಪ್ರದಾಯಿಕ ನೃತ್ಯಗಳು, ಕೈಗೊಂಬೆ ಪ್ರದರ್ಶನಗಳು, ಮುಂತಾದ ಅನೇಕ ರಾಜಸ್ಥಾನಿ ಸಾಂಸ್ಕೃತಿಕ ಪ್ರದರ್ಶನಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ ಇದರಿಂದ ಇಲ್ಲಿಗೆ ಭೇಟಿಕೊಡುವ ಅತಿಥಿಗಳಿಗೆ ಇಲ್ಲಿಯ ಸಂಪ್ರದಾಯದ ಬಗ್ಗೆ ಇನ್ನಷ್ಟು ತಿಳಿಯಲು ಅವಕಾಶ ಸಿಗುತ್ತದೆ.

ನತ್ಮಾಲ್ ಜಿ ಕಿ ಹವೇಲಿ
                                                            PC: Daniel Villafruela.

ಮೇವಾರ್

ಇಲ್ಲಿಯ ಹೂವಿನ ಸಂಕೀರ್ಣಗಳಲ್ಲಿ ಕೆತ್ತನೆಯ ಮಾದರಿಗಳು ಮತ್ತು ಲ್ಯಾಟೀಸ್ ಗಳು 18 ನೇ ಶತಮಾನದ ಜೈಸ್ಮಲೇರ್ ನ ವೈಭವೋಪೆತ ಜೀವನ ಮತ್ತು ಸಮಯವನ್ನು ಪ್ರತಿನಿಧಿಸುತ್ತವೆ. ಈ ಹವೇಲಿಯು ಜೈಸಲ್ಮೇರ್ ನ ಮಾಜಿ ಪ್ರಧಾನ ಮಂತ್ರಿಯಾಗಿದ್ದ ದಿವಾನ್ ಮೊಹಾಟಾ ನಥಮಲ್ ಅವರ ಮನೆಯಾಗಿತ್ತು ಮತ್ತು 1885 ರಲ್ಲಿ ಅವರು ನೇಮಕಗೊಂಡರು.

ಎರಡು ವಾಸ್ತುಶಿಲ್ಪಿಗಳ ನಡುವಿನ ವ್ಯತ್ಯಾಸಗಳನ್ನು ಹವೇಲಿಯ ಎರಡು ಬದಿಗಳಲ್ಲಿ ಗಮನಿಸಬಹುದು.ಇವು ಎರಡು ವಾಸ್ತುಶಿಲ್ಪಿಗಳ ನಡುವಿನ ಘರ್ಷಣೆಯ ಕಾರಣ ವಿಭಿನ್ನವಾಗಿ ನಿರ್ಮಿಸಲ್ಪಟ್ಟಿವೆ.

ಪ್ಯಾಟ್ವಾನ್ ಕಿ ಹವೇಲಿ
                                                 PC: Manoj Vasanth

 PC: Manoj Vasanth

18ನೇ ಶತಮಾನದಲ್ಲಿ ನಿರ್ಮಾಣಗೊಂಡ ಪಟ್ವಾನ್ ಕಿ ಹವೇಲಿ ಐದು ಹವೇಲಿಗಳ ಸಂಕೀರ್ಣವಾಗಿದ್ದು, ಪರಸ್ಪರ ಅಕ್ಕ ಪಕ್ಕದಲ್ಲಿದೆ. ಜವಳಿ ಸಂಕೀರ್ಣ ಮತ್ತು ಅಮೂಲ್ಯವಾದ ಲೋಹಗಳ ವ್ಯಾಪಾರಿಯಾಗಿದ್ದ ಗುಮಾನ್ ಚಂದ್ ಪಟ್ವಾ ಅವರು ಈ ಸಂಕೀರ್ಣವನ್ನು ನಿರ್ಮಿಸಿದರು.

ಹವೇಲಿಗಳು ದೊಡ್ಡ ಮರದ ಛಾವಣಿಗಳನ್ನು ಮತ್ತು ಮಣ್ಣಿನ ನೆಲವನ್ನು ಪ್ರದರ್ಶಿಸುತ್ತವೆ, ಇದು ರಚನೆಯ ಒಳಗೆ ತಾಪಮಾನವನ್ನು ನಿಯಂತ್ರಿಸುವ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಹಳದಿ ಮರಳುಗಲ್ಲಿನ ವಿಸ್ತಾರವಾದ ವರ್ಣಚಿತ್ರಗಳು ಹವೇಲಿಗಳ ಕ್ಲಸ್ಟರ್ ಗಳು ಭವ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ