Search
  • Follow NativePlanet
Share
» »ವನವಾಸದ ಸಂದರ್ಭದಲ್ಲಿ ಶ್ರೀ ರಾಮ ಹೋಗಿದ್ದು ಎಲ್ಲಿಗೆ ? ಆ ಜಾಗಕ್ಕೆ ಹೋಗುವುದು ಹೇಗೆ?

ವನವಾಸದ ಸಂದರ್ಭದಲ್ಲಿ ಶ್ರೀ ರಾಮ ಹೋಗಿದ್ದು ಎಲ್ಲಿಗೆ ? ಆ ಜಾಗಕ್ಕೆ ಹೋಗುವುದು ಹೇಗೆ?

By Manjula Balaraj

ನೀವು ಜೈಪುರ್ ನಿಂದ ಈ ವಾರಾಂತ್ಯದಲ್ಲಿ ಯಾವುದಾದರೂ ಹೆಚ್ಚಾಗಿ ಭೇಟಿಕೊಡದೇ ಇರುವ ಸ್ಥಳಕ್ಕೆ ಭೇಟಿ ಕೊಡುವ ಬಗ್ಗೆ ಯೋಚಿಸುತ್ತಿರುವಿರಿ ಎಂದಾದಲ್ಲಿ ನೀವು ಪಿಲಾನಿಗೆ ಪ್ರವಾಸ ಹೂಡುವುದು ಒಳಿತು. ಪ್ರತಿಷ್ಠಿತ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ಈ ಸ್ಥಳದಲ್ಲಿ ಇರುವುದರಿಂದ ಈ ನಗರವು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಪ್ರಸಿದ್ದಿಯನ್ನು ಹೊಂದಿದೆ.

ಈ ಸ್ಥಳದಲ್ಲಿ ಅನೇಕ ಸ್ಥಳಗಳು ಇನ್ನೂ ಅನ್ವೇಷಣೆಗೆ ಒಳಗಾಗಬೇಕಾಗಿದ್ದರೂ ಕೂಡಾ ಇಲ್ಲಿಯ ದೇವಾಲಯಗಳು ಮತ್ತು ಉದ್ಯಾನವನಗಳ ಕಾರಣದಿಂದಾಗಿ ಇದು ವಾರಾಂತ್ಯದಲ್ಲಿ ಭೇಟಿ ನೀಡಲು ಸೂಕ್ತವಾದ ಸ್ಥಳವೆನಿಸಿದೆ. ಪಿಲಾನಿ ರಾಜಸ್ಥಾನದ ಜುನ್ಜುನು ಜಿಲ್ಲೆಯಲ್ಲಿ ಇದೆ ಮತ್ತು ಈ ಸ್ಥಳದ ಇತಿಹಾಸವು ಮಹಾಕಾವ್ಯ ರಾಮಾಯಣದ ಕಾಲಕ್ಕೆ ಸಂಬಂಧಿಸಿದ್ದಾಗಿದೆ.

ಪ್ರಾಚೀನ ಗ್ರಂಥಗಳ ಪ್ರಕಾರ ರಾಮದೇವರು ತಾವು ಗಡೀಪಾರಾದ ಸಮಯದಲ್ಲಿ ತಮ್ಮ ಪತ್ನಿ ಸೀತಾದೇವಿ ಮತ್ತು ತಮ್ಮ ಲಕ್ಷ್ಮಣರ ಜೊತೆಗೆ ಈ ಸ್ಥಳದಲ್ಲಿ ಉಳಿದಿದ್ದರು ಎಂದು ಹೇಳಲಾಗುತ್ತದೆ. ಆದುದರಿಂದ ಈ ಸ್ಥಳವು ಅನೇಕ ದೇವಾಲಯಗಳು ಮತ್ತು ಧಾರ್ಮಿಕ ತಾಣಗಳಿಗೆ ನೆಲೆಯಾಗಿದೆ.

ಆದುದರಿಂದ ನಿಮ್ಮ ವಾರಾಂತ್ಯವನ್ನು ಹಲವಾರು ವರ್ಷಗಳಿಂದಲೂ ಶೈಕ್ಷಣಿಕ ನಗರವೆಂಬ ಖ್ಯಾತಿಯನ್ನು ಹೊಂದಿರುವ ಈ ಐತಿಹಾಸಿಕ ಸ್ಥಳದಲ್ಲಿ ಕಳೆಯ ಬಯಸುವಿರಾ? ನೀವು ಇಂತಹ ಸ್ಥಳಗಳನ್ನು ಮೆಚ್ಚುವಿರಾದಲ್ಲಿ ಜೈಪುರ್ ನಿಂದ ಪಿಲಾನಿಗೆ ಒಂದು ಪ್ರವಾಸದ ಯೋಜನೆಯನ್ನು ಹಾಕಿ. ಅಲ್ಲದೆ ಪಿಲಾನಿ ಮತ್ತು ಇಲ್ಲಿಯ ಪ್ರವಾಸೀ ತಾಣಗಳಿಗೆ ತಲುಪುವುದು ಹೇಗೆ ಎಂಬುದರ ಕುರಿತಾದ ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ.

ಪಿಲಾನಿಗೆ ಭೇಟಿ ಕೊಡಲು ಸೂಕ್ತ ಸಮಯ

ಪಿಲಾನಿಗೆ ಭೇಟಿ ಕೊಡಲು ಸೂಕ್ತ ಸಮಯ

ಪಿಲಾನಿಯಲ್ಲಿ ವಿಪರೀತವಾದ ತಾಪಮಾನವು ಇದುವುದರಿಂದ ಬೇಸಿಗೆಯಲ್ಲಿ ಈ ಸ್ಥಳದಲ್ಲಿ ತಾಪಮಾನವು ಹೆಚ್ಚಾಗಿದ್ದು ಬಿಸಿಯಾಗಿರುತ್ತದೆ. ಪಿಲಾನಿಗೆ ಭೇಟಿ ಕೊಡಲು ಸೂಕ್ತವಾದ ಸಮಯವೆಂದರೆ ಅದು ಅಕ್ಟೋಬರ್ ತಿಂಗಳಿನಿಂದ ಫ಼ೆಬ್ರವರಿ ತಿಂಗಳ ಕೊನೆಯವರೆಗೆ. ಈ ಸಮಯದಲ್ಲಿ ಇಲ್ಲಿಯ ಹವಾಮಾನವು ತಂಪಾಗಿ ಮತ್ತು ಆಹ್ಲಾದಕರವಾಗಿರುವುದರಿಂದ ನೀವು ಇಲ್ಲಿಯ ಪ್ರವಾಸಿ ತಾಣಗಳಲ್ಲಿ ಆರಾಮವಾಗಿ ತಿರುಗಾಡಬಹುದು ಮತ್ತು ಸ್ಥಳಗಳ ಅನ್ವೇಷಣೆ ಮಾಡಲು ಅನುಕೂಲಕರವಾಗಿರುತ್ತದೆ.

ಪಿಲಾನಿಗೆ ಜೈಪುರ್ ನಿಂದ ತಲುಪುವುದು ಹೇಗೆ?

ಪಿಲಾನಿಗೆ ಜೈಪುರ್ ನಿಂದ ತಲುಪುವುದು ಹೇಗೆ?

A.Savin

ವಾಯುಮಾರ್ಗ: ಪಿಲಾನಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಅದು ಜೈಪುರ್ ವಿಮಾನ ನಿಲ್ದಾಣವಾಗಿದ್ದು ನಿಮ್ಮ ಪ್ರಯಾಣವನ್ನು ಜೈಪುರ್ ನಿಂದ ಪ್ರಾರಂಭಿಸುವಿರಿ ಎಂದಾದಲ್ಲಿ ಈ ನಿಲ್ದಾಣದ ಹೊರತಾಗಿ ಬೇರೆ ಯಾವುದೇ ರೀತಿಯಲ್ಲಿಯೂ ವಾಯುಮಾರ್ಗದ ಮೂಲಕ ಪಿಲಾನಿಗೆ ತಲುಪಲು ಆಯ್ಕೆಗಳಿಲ್ಲ.

ರೈಲು ಮಾರ್ಗದ ಮೂಲಕ: ಪಿಲಾನಿಗೆ ಹೋಗಬೇಕಾದರೆ ಇಲ್ಲಿಗೆ ಹತ್ತಿರವಿರುವ ರೈಲ್ವೇ ನಿಲ್ದಾಣವೆಂದರೆ ಅದು 16 ಕಿ.ಮೀ ಅಂತರದ ಚಿರ್ವಾ ರೈಲ್ವೇ ನಿಲ್ದಾಣವಾಗಿದೆ. ಆದರೂ ಚಿರ್ವಾಗೆ ನೇರ ರೈಲ್ವೇ ಸಂಪರ್ಕಗಳಿಲ್ಲವಾದುದರಿಂದ ಜೈಪುರದಿಂದ ರೆವಾರಿಗೆ ಮತ್ತುಅಲ್ಲಿಂದ ಇನ್ನೊಂದು ರೈಲಿನ ಮೂಲಕ ಚಿರ್ವಾಗೆ ಪ್ರಯಾಣ ಮಾಡಬೇಕಾಗುತ್ತದೆ. ನೀವು ಒಮ್ಮೆ ಚಿರ್ವಾ ರೈಲ್ವೇ ನಿಲ್ದಾಣ ತಲುಪಿದಲ್ಲಿ ಅಲ್ಲಿಂದ ಬಾಡಿಗೆ ವಾಹನದ ಮೂಲಕ ಪಿಲಾನಿಗೆ ತಲುಪಬಹುದು.

ರಸ್ತೆ ಮೂಲಕ : ಪಿಲಾನಿಯು ರಸ್ತೆ ಮೂಲಕ ಉತ್ತಮ ರಸ್ತೆ ಸಂಪರ್ಕ ಜಾಲವನ್ನು ಹೊಂದಿರುವುದರಿಂದ ಇಲ್ಲಿಗೆ ರಸ್ತೆ ಮೂಲಕ ಸುಲಭವಾಗಿ ತಲುಪಬಹುದಾಗಿದೆ.

ಮಾರ್ಗ 1: ಜೈಪುರ- ಚೋಮು- ಪಿಲಾನಿ
ಮಾರ್ಗ 2 : ಜೈಪುರ್ - ನವಾಲ್ ಘರ್- ಪಿಲಾನಿ

ಬೇರೆ ಮಾರ್ಗಗಳಿಗಿಂತ ಮಾರ್ಗ ಒಂದರಲ್ಲಿ ಪ್ರಯಾಣಿಸುವುದರಿಂದ ಅರ್ಧ ತಾಸು ಸಮಯ ಕಡಿಮೆ ಸಮಯದಲ್ಲಿ ತಲುಪಬಹುದು ಈ ಮಾರ್ಗದಲ್ಲಿ ಪ್ರಯಾಣಿಸಿದರೆ ನಿಮ್ಮ ಗಮ್ಯ ಸ್ಥಾನ ತಲುಪಲು ಸುಮಾರು 4 ಗಂಟೆ 30 ನಿಮಿಷಗಳು ಬೇಕಾಗುವುದು. ಇದು ಜೈಪುರಿಂದ ಹೋಗಲು ಅನುಕೂಲಕರವಾದ ಮಾರ್ಗವಾಗಿದೆ. ನೀವು ಹೋಗುವ ಮಾರ್ಗದಲ್ಲಿ ಚೋಮುವಿನಲ್ಲಿ ವಿಶ್ರಾಂತಿ ಪಡೆಯಿರಿ ಮತ್ತು ಇಲ್ಲಿಯ ಸುಂದರವಾದ ಐತಿಹಾಸಿಕ ಸ್ಮಾರಕಗಳ ಅನ್ವೇಷಣೆ ಮಾಡಿ.

ಚೋಮು

ಚೋಮು

Rafatalam100

ಚೋಮು ಜೈಪುರದಿಂದ 40 ಕಿ.ಮೀ ಅಂತರ ಹಾಗು ಪಿಲಾನಿಯಿಂದ 170 ಕಿ.ಮೀ ಅಂತರದಲ್ಲಿದೆ. ಇಲ್ಲಿ ಸುಮಾರು 300 ವರ್ಷಗಳಷ್ಟು ಹಳೆಯದಾದ ಸಮೋದೆ ಅರಮನೆಯ ಇರುವಿಕೆಯಿಂದಾಗಿ ಪ್ರವಾಸಿಗರಲ್ಲಿ ಜನಪ್ರಿಯತೆಯನ್ನು ಗಳಿಸಿದೆ ಮಾತ್ರವಲ್ಲದೆ ಈ ಸ್ಥಳವು ಚಲನಚಿತ್ರ ನಿರ್ಮಾಪಕರಿಂದಲೂ ಹೆಚ್ಚಿನ ಪ್ರಾಮುಖ್ಯತೆಯನ್ನು ಗಳಿಸಿದೆ. ಇದರ ಗಡಿಯೊಳಗೆ ಅನೇಕ ಪ್ರಾಚೀನ ದೇವಾಲಯಗಳು ಮತ್ತು ಧಾರ್ಮಿಕ ತಾಣಗಳಿರುವುದರಿಂದ ಈ ಸ್ಥಳವು ಅನೇಕ ಹಿಂದು ಭಕ್ತರು ಮತ್ತು ಕಾಲೋಚಿತ ಪ್ರವಾಸಿಗರಿಂದ ಭೇಟಿ ಕೊಡಲ್ಪಡುತ್ತದೆ. ಇಲ್ಲಿಯ ದೇವಾಲಯಗಳಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿರುವ ದೇವಾಲಯವೆಂದರೆ ಅದು ಶ್ರೀ ಸಮೋದ್ ಬಾಲಾಜಿ ದೇವಾಲಯ. ಈ ದೇವಾಲಯವು ಹೆಚ್ಚಾಗಿ ಪೂಜ್ಯನೀಯವಾದ ಧಾರ್ಮಿಕ ಕೇಂದ್ರವಾಗಿದೆ ಮತ್ತು ಶಾಂತಿಯುತವಾದ ವಾತಾವರಣವನ್ನು ಅನುಭವಿಸಲು ಒಂದು ಸೂಕ್ತವಾದ ಸ್ಥಳವಾಗಿದೆ.

ಅಂತಿಮ ಗಮ್ಯಸ್ಥಾನ - ಪಿಲಾನಿ

ಅಂತಿಮ ಗಮ್ಯಸ್ಥಾನ - ಪಿಲಾನಿ

ಜೈಪುರದಿಂದ ಪಿಲಾನಿಯು ಸುಮಾರು 200 ಕಿ.ಮೀ ಅಂತರದಲ್ಲಿದೆ ಮತ್ತು ಯಾರು ತಮ್ಮನ್ನು ಹೆಚ್ಚಾಗಿ ಪ್ರಚಾರದಲ್ಲಿರದ ಮತ್ತು ಕಡಿಮೆ ಅನ್ವೇಷಿತ ಸ್ಥಳಗಳಲ್ಲಿ ಹೋಗಬೇಕೆಂದು ಬಯಸುವರೋ ಅಂತಹವರಿಗಾಗಿ ಈ ಸ್ಥಳವು ಅತ್ಯಂತ ಸೂಕ್ತವಾದುದಾಗಿದೆ. ಪಿಲಾನಿ ಹೆಚ್ಚು ಜನಪ್ರಿಯ ಪ್ರವಾಸಿ ತಾಣವಲ್ಲವಾದುದರಿಂದ ಇದು ಕೇವಲ ಸ್ಥಳೀಯ ಪ್ರವಾಸಿಗರಿಂದ ಭೇಟಿ ನೀಡಲ್ಪಡುತ್ತದೆ. ಆದುದರಿಂದ ಇದರ ಕಡಿಮೆ ಜನಸಂದಣಿಯ ಪರಿಸರದಲ್ಲಿ ನೀವು ಆನಂದಿಸಬಹುದಾಗಿದೆ. ಬಿಟ್ಸ್ ಗೆ(ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್) ಪಿಲಾನಿ ನಗರವು ಹೆಸರುವಾಸಿಯಾಗಿರುವುದು ಮಾತ್ರವಲ್ಲದೆ ಇದರ ಗಡಿಯೊಳಗೆ ಇನ್ನೂ ಕೂಡಾ ಕೆಲವು ಸ್ಥಳಗಳು ನಿಮ್ಮ ಆಸಕ್ತಿಯನ್ನು ಕೆರಳಿಸುತ್ತವೆ. ಈ ಕೆಳಗಿನ ಕೆಲವು ಸ್ಥಳಗಳು ಪಿಲಾನಿಯ ಪ್ರವಾಸದ ಸಮಯದಲ್ಲಿ ನೀವು ಭೇಟಿ ಕೊಡಲೇ ಬೇಕಾದುದಾಗಿದೆ.

ಬಿರ್ಲಾ ವಸ್ತುಸಂಗ್ರಹಾಲಯ (ಮ್ಯೂಸಿಯಂ)

ಬಿರ್ಲಾ ವಸ್ತುಸಂಗ್ರಹಾಲಯ (ಮ್ಯೂಸಿಯಂ)

ನೀವು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪ್ರೀತಿಸುವವರಾದಲ್ಲಿ, ಬಿರ್ಲಾ ವಸ್ತುಸಂಗ್ರಹಾಲಯವು ನೀವು ಮೆಚ್ಚುವ ಸ್ಥಳವಾಗಿದೆ. ಇದು ಬಿಟ್ಸ್ ನ ವಿದ್ಯಾವಿಹಾರ್ ಕ್ಯಾಂಪಸ್ ನಲ್ಲಿದೆ ಮತ್ತು ಈ ಸ್ಥಳಕ್ಕೆ ಪ್ರತಿವರ್ಷ ನೂರಾರು ಪ್ರವಾಸಿಗರು ಭೇಟಿ ಕೊಡುತಿರುತ್ತಾರೆ. ಇಲ್ಲಿ ಕೆಲವು ಆಸಕ್ತಿದಾಯಕ ಭೌತಶಾಸ್ತ್ರದ ಸಿದ್ದಾಂತಗಳಿಂದ ಹಿಡಿದು ವೈಜ್ಞಾನಿಕ ಸಲಕರಣೆಗಳನ್ನು ವೀಕ್ಷಿಸುವರೆಗೆ ಇನ್ನೂ ಅನೇಕ ವಿಷಯಗಳನ್ನು ಈ ಮ್ಯೂಸಿಯಂ ನಲ್ಲಿ ಕಾಣಬಹುದಾಗಿದೆ. ನೀವು ವಿಜ್ಞಾನದ ತತ್ವಗಳನ್ನು ಕಲಿಯಲು ಇಚ್ಚಿಸಿದಲ್ಲಿ ಮತ್ತು ಇಡೀ ಜಗತ್ತು ಅದರ ಮೇಲೆ ಹೇಗೆ ನಿಂತಿದೆ ಎಂಬುದನ್ನು ತಿಳಿಯಬೇಕಾದಲ್ಲಿ ಬಿರ್ಲಾ ಮ್ಯೂಸಿಯಂ ಗೆ ಭೇಟಿ ಕೊಡುವುದನ್ನು ನಿಮ್ಮ ಪಟ್ಟಿಯಲ್ಲಿ ಸೇರಿಸಲು ಮರೆಯದಿರಿ.

ಶಾರದ ದೇವಾಲಯ

ಶಾರದ ದೇವಾಲಯ

PC- Vinwe~commonswiki

ಪಿಲಾನಿಯಲ್ಲಿ ಅತ್ಯಂತ ಹೆಚ್ಚು ಪ್ರಸಿದ್ದವಾದ ಮತ್ತು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಭೇಟಿ ನೀಡಲ್ಪಡುವ ಸ್ಥಳವೆಂದರೆ ಅದು ಶಾರದಾ ದೇವಾಲಯ ಈ ದೇವಾಲಯವು 20 ನೇ ಶತಮಾನದ್ದಾಗಿದ್ದು ಜ್ಞಾನದ ದೇವತೆ ದೇವಿ ಸರಸ್ವತಿಯೆ ಸಮರ್ಪಿತವಾದುದಾಗಿದೆ. ಈ ದೇವಾಲಯವನ್ನು ಬಿಳಿಯ ಮಾರ್ಬಲ್ ನಿಂದ ನಿರ್ಮಿಸಲಾಗಿದೆ. ಇದೂ ಕೂಡಾ ಬಿಟ್ಸ್ ನ ವಿದ್ಯಾವಿಹಾರ್ ಕ್ಯಾಂಪಸ್ ನಲ್ಲಿಯೇ ನೆಲೆಸಿದೆ. ಇದನ್ನು ಭಾರತದ ಕೈಗಾರಿಕೋದ್ಯಮಿ ಮತ್ತು ಲೋಕೋಪಕಾರಿ ಜಿ. ಡಿ ಬಿರ್ಲಾ ಅವರಿಂದ ನಿರ್ಮಿಸಲಾಯಿತು. ಇಂದು ಈ ದೇವಾಲಯವು ನಗರದ ಅತ್ಯಂತ ಹೆಚ್ಚು ಪೂಜ್ಯನೀಯವಾದ ಸ್ಥಳವಾಗಿದೆ ಮತು ಪಿಲಾನಿಯಲ್ಲಿ ಭೇಟಿ ನೀಡಲೇ ಬೇಕಾದ ಸ್ಥಳವೆನಿಸಿದೆ.

ಪಂಚವಟಿ

ಪಂಚವಟಿ

Alan Perry

ಹೌದು , ಪಂಚವಟಿಯು ರಾಮದೇವರು ತಮ್ಮ ಪತ್ನಿ ಹಾಗೂ ಸಹೋದರ ಲಕ್ಷ್ಮಣನೊಂದಿಗೆ 14ವರ್ಷಗಳ ಕಾಲ ಗಡೀಪಾರಾದ ಸಮಯದಲ್ಲಿ ನೆಲೆಸಿದ ಸ್ಥಳವಾಗಿದೆ. ದೇವಿ ಸೀತೆಯು ರಾಕ್ಷಸ ರಾಜ ರಾವಣನಿಂದ ಅಪಹರಿಸಲ್ಪಟ್ಟ ಸ್ಥಳವೂ ಇದೇ ಆಗಿದೆ. ಇಂದು ಇದು ಸುಂದರವಾದ ಮರಗಳು ಮತ್ತು ದಟ್ಟವಾದ ಹಸಿರು ಹಾಸಿನಿಂದ ಆವರಿಸಲ್ಪಟ್ಟಿದೆ. ಇದರಿಂದಾಗಿ ಇಲ್ಲಿಯ ಪ್ರಶಾಂತತೆಯು ಸಂದರ್ಶಕರನ್ನು ಸೆಳೆಯುತ್ತದೆ.

ನೀವು ಒಂದು ಸ್ಥಳದ ಇತಿಹಾಸವನ್ನು ಅನ್ವೇಷಣೆ ಮಾಡಲು ಕಾತರರಾಗಿದ್ದಲ್ಲಿ ಈ ಪ್ರಾಚೀನ ಸ್ಥಳಕ್ಕೆ ಭೇಟಿ ನೀಡಲೇ ಬೇಕು. ನೀವು ಭಾರತೀಯ ಪುರಾಣ ಮತ್ತು ಆಸಕ್ತಿಕರ ಕಥೆಗಳಿಂದ ಆಕರ್ಷಿತರಾಗಿರುವಿರಾ? ಹೌದು ಎಂದಾದಲ್ಲಿ ನೀವು ಈ ಸುಂದರವಾದ ಸ್ಥಳಕ್ಕೆ ಭೇಟಿ ಕೋಡುವುದನ್ನು ತಪ್ಪಿಸಲೇಬಾರದು ಇಲ್ಲಿ ನೀವು ಅನ್ವೇಷಣೆ ಮಾಡುವಂತಹ ಅನೇಕ ವಿಷಯಗಳಿವೆ .

ಇನ್ನಿತರ ಪ್ರವಾಸಿ ಆಕರ್ಷಣೆಗಳು

ಇನ್ನಿತರ ಪ್ರವಾಸಿ ಆಕರ್ಷಣೆಗಳು

ನಿಮ್ಮ ಪ್ರವಾಸವು ಕೇವಲ ಮೇಲೆ ಹೇಳಲಾಗಿರುವ ಸ್ಥಳಗಳಿಗೆ ಮಾತ್ರ ಸೀಮಿತವಾದುದಲ್ಲ. ಈ ವಿದ್ಯಾನಗರಿಯಲ್ಲಿ ಇನ್ನೂ ಅನೇಕ ನಿಮ್ಮನ್ನು ಬೆರಗುಗೊಳಿಸುವಂತಹ ಮತ್ತು ಭೇಟಿ ಕೊಡಬಹುದಾದಂತಹ ಸ್ಥಳಗಳಿವೆ. ಅವುಗಳಲ್ಲಿ ಶಿವಗಂಗಾ ,ಇದೊಂದು ಸುಂದರವಾದ ಉದ್ಯಾನವನವಾಗಿದೆ ಮತ್ತು ಬಿಐಟಿಎಸ್ ನ ಸುಂದರವಾದ ಕ್ಯಾಂಪಸ್ ಕೂಡಾ ಸೇರಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X