Search
  • Follow NativePlanet
Share
» »ಮಹೀಷನನ್ನು ವಧಿಸಿ ದುರ್ಗೆ ನೆಲೆಸಿದಳಿಲ್ಲಿ ಸಪ್ತಶೃಂಗಿಯಾಗಿ

ಮಹೀಷನನ್ನು ವಧಿಸಿ ದುರ್ಗೆ ನೆಲೆಸಿದಳಿಲ್ಲಿ ಸಪ್ತಶೃಂಗಿಯಾಗಿ

By Vijay

ಭಾರತದಲ್ಲಿ ಅನೇಕ ಪುರಾಣ ಪುಣ್ಯಕಥೆಗಳಲ್ಲಿ ಉಲ್ಲೇಖಿಸಲಾಗಿರುವ ಘಟನೆ ಹಾಗೂ ಪ್ರಸಂಗಗಳಿಗೆ ಕುರಿತಂತೆ ಸಾಕಷ್ಟು ಸ್ಥಳಗಳಿವೆ. ಇಂದು ಆ ಸ್ಥಳಗಳು ಧಾರ್ಮಿಕ ಮಹತ್ವ ಪಡೆದು ದಿನವೂ ಭಕ್ತ ಜನರಿಂದ ಭೇಟಿ ನೀಡಲ್ಪಡುವ ಪವಿತ್ರ ತಾಣಗಳಾಗಿ ಸಾಕಷ್ಟು ಹೆಸರುವಾಸಿಯಾಗಿವೆ. ಈ ಒಂದೊಂದು ಸ್ಥಳಗಳು ಒಂದೊಂದು ವಿಶೇಷತೆಯನ್ನಿ ಕಥೆಯನ್ನೊ ಹೇಳುತ್ತವೆ.

ಪ್ರಸ್ತುತ ಲೇಖನದಲ್ಲಿ ಅಂತಹುದೆ ಒಂದು ಸ್ಥಳದ ಕುರಿತು ತಿಳಿಸಲಾಗಿದೆ. ಹೇಗೆ ಆಂಧ್ರದಲ್ಲಿ ಏಳು ಬೆಟ್ಟಗಳೊಡೆಯ ತಿಮ್ಮಪ್ಪನೆಂದು ಸಂಭೋದಿಸಲಾಗುತ್ತದೊ ಅದೇ ರೀತಿಯಾಗಿ ಇಲ್ಲಿ ನೆಲೆಸಿರುವ ಶಕ್ತಿ ದೇವಿಯನ್ನು ಏಳು ಬೆಟ್ಟಗಳ ಅಧಿದೇವಿ ಎಂದೆ ಪ್ರೀತಿಯಿಂದ ಕರೆಯಲಾಗುತ್ತದೆ. 18 ಕೈಗಳುಳ್ಳ ಈ ದೇವಿಯು ಮಹಿಷನನ್ನು ವಧಿಸಿ ಇಲ್ಲಿ ನೆಲೆಸಿದ್ದಾಳೆ.

ತಿರುಪತಿ-ತಿರುಮಲದ ಹಿಂದಿರುವ ದಂತಕಥೆ

ಏಳು ಬೆಟ್ಟಗಳ ದೇವಿ:

ಏಳು ಬೆಟ್ಟಗಳ ದೇವಿ:

ಈ ಕ್ಷೇತ್ರಕ್ಕೆ ಸಂಬಂಧಿಸಿದ ಕಥೆಯಂತೆ, ಹಿಂದೆ ರಂಭ ಎಂಬ ಹೆಸರಿನ ಅಸುರ ರಾಕ್ಷಸನೊಬ್ಬನು ಭೂಮಿಯನ್ನು ಆಳುತ್ತಿದ್ದನು. ಒಂದೊಮ್ಮೆ ಅವನು ವಿಹರಿಸುತ್ತಿರುವಾಗ ಎಮ್ಮೆಯೊಂದನ್ನು ನೋಡಿ ಕಾಮ ಮೋಹಕ್ಕೊಳಗಾದನು.

ಚಿತ್ರಕೃಪೆ: Benjamín Preciado

ಏಳು ಬೆಟ್ಟಗಳ ದೇವಿ:

ಏಳು ಬೆಟ್ಟಗಳ ದೇವಿ:

ಹೀಗೆ ಕಾಮಾಂಧನಾದ ಆ ರಂಭ ಆ ಎಮ್ಮೆಯೊಂದಿಗೆ ಸೇರಿ ಮಗನೊಬ್ಬನನ್ನು ಪಡೆದ. ಆ ಮಗನೆ ಮಹಿಷಾಸುರ. ಅರ್ಧ ಕೋಣವಾಗಿಯೂ ಅರ್ಧ ಮನುಷ್ಯ ದೇಹಿಯಾಗಿಯೂ ಇದ್ದ ಮಹಿಷಾಸುರ ತಂದೆ ರಂಭನ ನಂತರ ರಾಜನಾದ ಹಾಗೂ ಅಸುರ ಕುಲದ ಶತ್ರುಗಳಾದ ದೇವತೆಗಳನ್ನು ನಿರ್ನಾಮ ಮಾಡಲು ಹವಣಿಸತೊಡಗಿದ.

ಚಿತ್ರಕೃಪೆ: AmitUdeshi

ಏಳು ಬೆಟ್ಟಗಳ ದೇವಿ:

ಏಳು ಬೆಟ್ಟಗಳ ದೇವಿ:

ಈ ಸಾಹಸಕ್ಕೆ ಅಪಾರವಾದ ಶಕ್ತಿ ಬೇಕಾಗಿರುವುದನ್ನು ಮನಗಂಡ ಮಹಿಷಾಸುರ ಬ್ರಹ್ಮನ ಕುರಿತು ಅತಿ ಕಠಿಣವಾದ ತಪಸ್ಸು ಆಚರಿಸಿ ಆತನನ್ನು ಪ್ರಸನ್ನಗೊಳಿಸಿದ. ಬ್ರಹ್ಮನು ಪ್ರತ್ಯಕ್ಷನಾಗಿ ಯಾವ ವರದಾನ ಬೇಕೆಂದು ಕೇಳಲು ತನಗೆ ಅಮರತ್ವ ನೀಡಬೇಕೆಂದು ವಿನಂತಿಸಿದ. ಇದು ಸೃಷ್ಟಿಯ ನಿಯಮದ ವಿರುದ್ಧವಿದ್ದುದರಿಂದ ಸಾಧ್ಯವಿಲ್ಲ ಎಂದು ಬ್ರಹ್ಮನು ಹೇಳಿದಾಗ,

ಚಿತ್ರಕೃಪೆ: Dharmadhyaksha

ಏಳು ಬೆಟ್ಟಗಳ ದೇವಿ:

ಏಳು ಬೆಟ್ಟಗಳ ದೇವಿ:

ಮಹಿಷನು ತನಗೆ ಯಾವ ಪ್ರಾಣಿ-ಪಕ್ಷಿಗಳಿಂದಾಗಲಿ, ಪುರುಷನಿಂದಾಗಲಿ, ದೇವರಿಂದಾಗಲಿ ಮರಣ ಬರಕೂಡದೆಂದು ಕೇಳಿಕೊಂಡ. ಇದರ ಪ್ರಕಾರವಾಗಿ ತಾನು ಸ್ತ್ರೀ ಗಿಂತಲೂ ಅತ್ಯಂತ ಬಲಶಾಲಿಯಾಗಿರುವುದರಿಂದ ಇನ್ನೂ ತಾನು ಅಮರನೆ ಸರಿ ಎಂದು ಸಂತಸಗೊಂಡು ದೇವತೆಗಳ ಮೇಲೆ ಯುದ್ಧ ಸಾರಿ ಇಂದ್ರ ಲೋಕಾದಿಗಳನ್ನು ವಶಪಡಿಸಿಕೊಂಡ.

ಚಿತ್ರಕೃಪೆ: AmitUdeshi

ಏಳು ಬೆಟ್ಟಗಳ ದೇವಿ:

ಏಳು ಬೆಟ್ಟಗಳ ದೇವಿ:

ಇದರಿಂದ ಭಯಭೀತರಾದ ಎಲ್ಲ ದೇವತೆಗಳು ಸಾಕಷ್ಟು ಕಷ್ಟಗಳನ್ನು, ಅವಮಾನಗಳನ್ನು ಅನುಭವಿಸಿ ಕೊನೆಗೆ ತ್ರಿಮೂರ್ತಿಗಳ ಮೊರೆ ಹೋದಾಗ ತ್ರಿಮೂರ್ತಿಗಳು ಒಟ್ಟಿಗೆ ಸೇರಿ ತಮ್ಮ ತೆಜಸ್ಸುಗಳಿಂದ ಒಬ್ಬ ಸ್ತ್ರೀ ಯನ್ನು ರೂಪೈಸಿದರು. ಇವಳೆ ದುರ್ಗೆ. ಸ್ತ್ರೀಯಾಗಿರುವುದಲ್ಲದೆ ತ್ರಿಮೂರ್ತಿಗಳ ಅಪರಿಮಿತವಾದ ಶಕ್ತಿಯುಳ್ಳವಳಾಗಿದ್ದಳು. ಅಂತೆಯೆ ಮಹಿಷಾಸುರನೊಡನೆ ಭಯಂಕರ ಯುದ್ಧ ಮಾಡಿ ಆತನನ್ನು ವಧಿಸಿದಳು. ಸಪ್ತಶೃಂಗಿಯಿಂದ ಕಂಡುಬರುವ ಮಾರ್ಖಂಡೇಯ ಬೆಟ್ಟ.

ಚಿತ್ರಕೃಪೆ: Dharmadhyaksha

ಏಳು ಬೆಟ್ಟಗಳ ದೇವಿ:

ಏಳು ಬೆಟ್ಟಗಳ ದೇವಿ:

ನಂತರ ಅವಳು ಏಳು ಬೆಟ್ಟಗಳ ಒಂದು ಪ್ರದೇಶದಲ್ಲಿ ಬಂದು ನೆಲೆಸಿದಳು. ಆ ಏಳು ಬೆಟ್ಟಗಳ ಅಧಿದೇವತೆಯಾಗಿ ಮೆರೆದಳು. ಅವಳೆ ಸಪ್ತಶೃಂಗಿ. ಸಪ್ತ ಶೃಂಗಗಳ ದೇವಿಯಾಗಿ ನೆಲೆಸಿರುವ ಶಕ್ತಿ ದೇವಿಯ ಅವತಾರ. ದುರ್ಗೆಯ ಪ್ರತಿರೂಪ. ಈ ತಾಣವಿರುವುದು ಮಹಾರಾಷ್ಟ್ರದಲ್ಲಿ. ದೇವಾಲಯದಲ್ಲಿರುವ ಕಲ್ಯಾಣಿ.

ಚಿತ್ರಕೃಪೆ: Dharmadhyaksha

ಏಳು ಬೆಟ್ಟಗಳ ದೇವಿ:

ಏಳು ಬೆಟ್ಟಗಳ ದೇವಿ:

ದೇವಾಲಯ ಮಂಡಳಿಯ ಪ್ರಕಾರ, ಇದೊಂದು ಶಕ್ತಿಪೀಠವೂ ಹೌದು. ಬಹುತೇಕರು ಹೇಳುವಂತೆ ಮಹಾರಾಷ್ಟ್ರದ ಮೂರುವರೆ ಶಕ್ತಿಪೀಠಗಳ ಪೈಕಿ ಇದೂ ಸಹ ಒಂದಾಗಿದೆ. ನಂಬಿಕೆಯ ಪ್ರಕಾರ ಸತಿ ದೇವಿಯ ಬಲಗೈ ಇಲ್ಲಿ ಬಿದ್ದಿತ್ತೆನ್ನಲಾಗಿದೆ.

ಚಿತ್ರಕೃಪೆ: Dharmadhyaksha

ಏಳು ಬೆಟ್ಟಗಳ ದೇವಿ:

ಏಳು ಬೆಟ್ಟಗಳ ದೇವಿ:

ಆದರೆ ದೇವಾಲಯ ಮಂಡಳಿಯು ಮಾತ್ರ ಇದೊಂದು ಪರಿಪೂರ್ಣ ಶಕ್ತಿಪೀಠ ಎಂದೆ ಹೇಳುತ್ತದೆ. ನಿಜ ಏನೆ ಇರಲಿ, ಆದರೆ ಇದು ಧಾರ್ಮಿಕವಾಗಿ ಮಹತ್ವ ಪಡೆದ ಸ್ಥಳವಾಗಿರುವುದಂತೂ ನಿಜ. ಪ್ರತಿನಿತ್ಯ ಸುತ್ತಮುತ್ತಲಿನ ಪ್ರದೇಶಗಳಿಂದ ನೂರಾರು ಸಂಖ್ಯೆಯಲ್ಲಿ ಜನರು ಈ ದೇವಿಯ ದರ್ಶನ ಕೋರಿ ಇಲ್ಲಿಗೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Dharmadhyaksha

ಏಳು ಬೆಟ್ಟಗಳ ದೇವಿ:

ಏಳು ಬೆಟ್ಟಗಳ ದೇವಿ:

ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ಕಲ್ವಾನ್ ತಾಲೂಕಿನ ನಂದೂರಿ ಗ್ರಾಮದ ಬಳಿಯಿರುವ ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಪರ್ವತ ಶ್ರೇಣಿಯ ಬೆಟ್ಟಗಳಲ್ಲಿ ಈ ದೇವಾಲಯ ಸ್ಥಿತವಿದೆ. ನಾಶಿಕ್ ಪಟ್ಟಣದ ಪಶ್ಚಿಮಕ್ಕೆ ಸುಮಾರು 60 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Dharmadhyaksha

ಏಳು ಬೆಟ್ಟಗಳ ದೇವಿ:

ಏಳು ಬೆಟ್ಟಗಳ ದೇವಿ:

ಶಿರಡಿ ಸಾಯಿ ಬಾಬಾರೊಂದಿಗೆ ಸಂಬಂಧಿಸಿದಂತೆ ಈ ದೇವಿಯ ಕುತೂಹಲಕರವಾದ ಕಥೆಯೊಂದಿದೆ. ಅದರ ಪ್ರಕಾರವಾಗಿ ಇಲ್ಲಿರುವ ವಾಣಿ ಎಂಬ ಗ್ರಾಮದಲ್ಲಿ ಕಾಕಾಜಿ ವೈದ್ಯ ಎಂಬ ಅರ್ಚಕರು ಸಪ್ತಶೃಂಗಿ ದೇವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಚಿತ್ರಕೃಪೆ: Dharmadhyaksha

ಏಳು ಬೆಟ್ಟಗಳ ದೇವಿ:

ಏಳು ಬೆಟ್ಟಗಳ ದೇವಿ:

ಸರಳ ಹಾಗೂ ನಿಷ್ಠಾವಂತರಾದ ಅವರು ದೇವಿಯ ಅಪ್ರತಿಮ ಭಕ್ತರಾಗಿದ್ದರು. ಹೀಗಿರುವಾಗ ಜೀವನದ ಕೆಲ ಸಮಸ್ಯೆಗಳು ಎದುರಾಗಿ ಅವರು ತಮ್ಮ ಮಾನಸಿಕ ನೆಮ್ಮದಿ ಕಳೆದುಕೊಂಡರು. ಇದರಿಂದ ಖಿನ್ನತೆಗೊಳಗಾದ ಅವರಿ ಸಪ್ತಶೃಂಗಿ ಮಾತೆಯನ್ನು ಪ್ರತಿದಿನ ಬೇಡತೊಡಗಿದರು.

ಚಿತ್ರಕೃಪೆ: Dharmadhyaksha

ಏಳು ಬೆಟ್ಟಗಳ ದೇವಿ:

ಏಳು ಬೆಟ್ಟಗಳ ದೇವಿ:

ಒಂದೊಮ್ಮೆ ಅವರ ಕನಸಿನಲ್ಲಿ ದೇವಿ ಪ್ರತ್ಯಕ್ಷಳಾಗಿ ಬಾಬಾರನ್ನು ಭೇಟಿಯಾಗುವಂತೆ ಹೇಳಿದಳು. ಅವರಿಗೆ ಬಾಬಾ ಯಾರೆಂದು ತಿಳಿಯದ ಕಾರಣ ತ್ರಿಯಂಬಕೇಶ್ವರದ ಶಿವನೆ ಆಗಿರಬೆಕೆಂದು ಅಲ್ಲಿಗೆ ತೆರಳಿ ಕೆಲ ಸಮಯ ಇದ್ದರೂ ಅವರಿಗೆ ಫಲ ಸಿಗಲಿಲ್ಲ. ಮತ್ತೊಮ್ಮೆ ಅವರಿಗೆ ದೇವಿಯು ಕನಸಿನಲ್ಲಿ ದರ್ಶನ ನೀಡಿ ಶಿರಡಿ ಸಾಯಿ ಬಾಬಾರ ಕುರಿತು ತಿಳಿಸಿದಳಂತೆ!

ಚಿತ್ರಕೃಪೆ: Dharmadhyaksha

ಏಳು ಬೆಟ್ಟಗಳ ದೇವಿ:

ಏಳು ಬೆಟ್ಟಗಳ ದೇವಿ:

ಇತ್ತ ಶಿರಡಿಯಲ್ಲಿರುವ ಸಾಯಿ ಬಾಬಾರಿಗೆ ತಮ್ಮ ದಿವ್ಯ ದೃಷ್ಟಿಯಿಂದ ಈ ವಿಚಾರ ತಿಳಿದು ತಮ್ಮ ಆಪ್ತರಾದ ಮಾಧವರಾಯರನ್ನು ಕಳುಹಿಸಿ ಕಾಕಾಜಿಯವರನ್ನು ಕರೆದು ತರುವಂತೆ ಹೇಳಿದರು. ಅದರಂತೆ ಮಾಧವರಾಯರು ಕಾಕಾಜಿಯವರನ್ನು ಭೇಟಿ ಮಾಡಿ ತಮ್ಮ ಬಂದ ಉದ್ದೇಶ ತಿಳಿಸಿದಾಗ ಕಾಕಾಜಿಯವರಿಗೆ ಎಲ್ಲಿಲ್ಲದ ಒಂದು ಸಂತಸ ಉಂಟಾಗಿ ಬಾಬಾರ ದರ್ಶನಕ್ಕೆ ಬಂದರು.

ಚಿತ್ರಕೃಪೆ: Dharmadhyaksha

ಏಳು ಬೆಟ್ಟಗಳ ದೇವಿ:

ಏಳು ಬೆಟ್ಟಗಳ ದೇವಿ:

ಕೆಲ ಸಮಯ ಬಾಬಾರೊಂದಿಗಿದ್ದು ಸಂತೃಪ್ತಿ ಪಡೆದು, ಮಾನಸಿಕ ನೆಮ್ಮದಿ ಪಡೆದು ಮತ್ತೆ ತಮ್ಮ ಸ್ವಗ್ರಾಮಕ್ಕೆ ತೆರಳಿ ಸುಖವಾಗಿದ್ದರಂತೆ. ಸಪ್ತಶೃಂಗಿ ದೇವಿಗೆ ಸಂಬಂಧಿಸಿದಂತೆ ಈ ಒಂದು ಕಥೆಯು ಬಾಬಾರ ಅನುಯಾಯಿಗಳಲ್ಲಿ ಸಾಕಷ್ಟು ಜನಪ್ರೀಯವಾಗಿದೆ.

ಚಿತ್ರಕೃಪೆ: Shreedhar Prasad Pant

ಏಳು ಬೆಟ್ಟಗಳ ದೇವಿ:

ಏಳು ಬೆಟ್ಟಗಳ ದೇವಿ:

ಇನ್ನುಳಿದಂತೆ ದೇವಾಲಯದಲ್ಲಿ ದತ್ತತ್ರೇಯ ಹಾಗೂ ಇತರೆ ದೇವ ದೇವತೆಯರ ಸನ್ನಿಸ್ಧಿಗಳಿವೆ.

ಚಿತ್ರಕೃಪೆ: Dharmadhyaksha

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more