Search
  • Follow NativePlanet
Share
» »500 ವರ್ಷಗಳ ನಿಜವಾದ ಮಮ್ಮಿ ನೋಡಬೇಕೇ?

500 ವರ್ಷಗಳ ನಿಜವಾದ ಮಮ್ಮಿ ನೋಡಬೇಕೇ?

ಮಮ್ಮಿ ಎಂದ ಕೂಡಲೇ ಕೂತುಹಲವನ್ನು ಹೆಚ್ಚಿಸುತ್ತದೆ. ಮಮ್ಮಿ ಎಂದ ಕೂಡಲೇ ತಾಯಿಯು ಅಲ್ಲ, ಈಜಿಫ್ಟ್‍ನಲ್ಲಿ ಬಿಳಿ ಬ್ಯಾಂಡೇಜ್‍ಗಳಿಂದ ಸುತ್ತುವರಿದಿರುವ ಮಮ್ಮಿ ದೆವ್ವವೂ ಅಲ್ಲ. ಯಾರಿಗೆ ಆಗಲಿ ಮಮ್ಮಿಯನ್ನು ಕಂಡರೇ ರೋಮಾಂಚನವಾಗದೇ ಇರದು. ಏನು ಮಮ್ಮಿ

ಮಮ್ಮಿ ಎಂದ ಕೂಡಲೇ ಕೂತುಹಲವನ್ನು ಹೆಚ್ಚಿಸುತ್ತದೆ. ಮಮ್ಮಿ ಎಂದ ಕೂಡಲೇ ತಾಯಿಯು ಅಲ್ಲ, ಈಜಿಫ್ಟ್‍ನಲ್ಲಿ ಬಿಳಿ ಬ್ಯಾಂಡೇಜ್‍ಗಳಿಂದ ಸುತ್ತುವರಿದಿರುವ ಮಮ್ಮಿ ದೆವ್ವವೂ ಅಲ್ಲ. ಯಾರಿಗೆ ಆಗಲಿ ಮಮ್ಮಿಯನ್ನು ಕಂಡರೇ ರೋಮಾಂಚನವಾಗದೇ ಇರದು. ಏನು ಮಮ್ಮಿ ನಮ್ಮ ದೇಶದಲ್ಲಿಯೂ ಕೂಡ ಇದೆಯೇ ಎಂದು ಉದ್ಗರ ತೆಗೆಯುವ ಅಗತ್ಯವಿಲ್ಲ.

ಮೃತ ದೇಹ ಎಷ್ಟೋ ವರ್ಷಗಳಿಂದ ಕೊಳೆಯದೇ ಇರುವುದುನ್ನು ಹಿಮಾಚಲ ಪ್ರದೇಶದ ಘುಯೇನ್ ಎಂಬ ಗ್ರಾಮದಲ್ಲಿ ಕಾಣಬಹುದಾಗಿದೆ. ಈ ಮಮ್ಮಿಯು ಸುಮಾರು 500 ವರ್ಷಗಳಿಗಿಂತಲೂ ಹಳೆಯದಾದುದು ಎಂದು ನಂಬಲಾಗಿದೆ.

ಪ್ರಸ್ತುತ ಲೇಖನದಲ್ಲಿ ಈ ಮಮ್ಮಿಯ ಬಗ್ಗೆ ತಿಳಿಯೋಣ.

ಮಮ್ಮಿ

ಮಮ್ಮಿ

ಮಮ್ಮಿಯ ಸ್ಥಿತಿಯು ಸಂಪೂರ್ಣವಾಗಿ ಒಣಗಿದ ಕಣ್ಣುಗಳು, ಹಲ್ಲುಗಳು ಮತ್ತು ಕೂದಲನ್ನು ಕೂಡ ಕಾಣಬಹುದಾಗಿದೆ. ಕುಳಿತಿರುವ ಭಂಗಿಯಲ್ಲಿರುವ ಈ ಮಮ್ಮಿಯನ್ನು ಕಂಡರೆ ಧ್ಯಾನಸಕ್ತನಾಗಿರುವಂತೆ ಕಾಣುತ್ತದೆ.


PC:YOUTUBE

ಎಲ್ಲಿದೆ?

ಎಲ್ಲಿದೆ?

ಹಿಮಾಚಲ ಪ್ರದೇಶದ ಘುಯೇನ್ ಎಂಬ ಹಳ್ಳಿಯಲ್ಲಿದೆ. ಸುಮಾರು 50 ರಿಂದ 75 ಮನೆಗಳನ್ನು ಹೊಂದಿರುವ ಸಣ್ಣ ಹಳ್ಳಿ ಇದಾಗಿದೆ. ಈ ಗ್ರಾಮವು ಸಮುದ್ರ ಮಟ್ಟಕ್ಕಿಂತ ಸುಮಾರು 10,000 ಅಡಿಗಳಷ್ಟು ಎತ್ತರದಲ್ಲಿ ನೆಲೆಗೊಂಡಿದೆ. ಈ ಪ್ರದೇಶವು ಪ್ರವಾಸೋದ್ಯದಲ್ಲಿ ಅಷ್ಟಾಗಿ ಪ್ರಸಿದ್ಧಿ ಹೊಂದಿಲ್ಲ.

PC:YOUTUBE

 ಪ್ರಖ್ಯಾತ

ಪ್ರಖ್ಯಾತ

ಅಷ್ಟೋಂದು ಪ್ರವಾಸೋದ್ಯಮವಾಗಿ ಇಲ್ಲದಿದ್ದ ಈ ಗ್ರಾಮವನ್ನು ಇಲ್ಲಿನ ಮಮ್ಮಿಯು ಪ್ರಖ್ಯಾತಗೊಳಿಸಿದೆ. ಈ ಮಮ್ಮಿ ಹೇಗೆ ಬಂತು? ಎಂಬ ಪ್ರಶ್ನೆ ಕಾಡದೇ ಇರದು. 45 ವರ್ಷಗಳ ವಯಸ್ಸಿನಲ್ಲಿ ಸುಮಾರು ಅರ್ಧ ಮಿಲಿಯನ್ ವರ್ಷಗಳ ಹಿಂದೆ ಮರಣಹೊಂದಿದ ಮಮ್ಮಿ ಇದಾಗಿದೆ.

PC:YOUTUBE

ಪತ್ತೆ

ಪತ್ತೆ

70 ರ ಭೂಕಂಪನದ ನಂತರ ಸ್ಪಿತಿ ಕಣಿವೆಯ ವಿವಿಧ ಭಾಗಗಳಲ್ಲಿ ವ್ಯಾಪಕ ಹಾನಿಯನ್ನುಂಟು ಮಾಡಿತು. ಹಾಗಾಗಿ ಹಲವಾರು ಸಮಾಧಿಗಳು ನಾಶ ಹೊಂದಿದವು. ಉತ್ಖನನದ ಸಮಯದಲ್ಲಿ (ಐಟಿಬಿಪಿ) ಈ ಮಮ್ಮಿ ಅಧಿಕೃತವಾಗಿ ಕಂಡುಹಿಡಿಯಲ್ಪಟ್ಟಿತು.

PC:YOUTUBE

ಟಿಬೆಟಿಯನ್ನ್ ಬಾರ್ಡರ್ ಪೋಲಿಸ್

ಟಿಬೆಟಿಯನ್ನ್ ಬಾರ್ಡರ್ ಪೋಲಿಸ್

ರಸ್ತೆ ಕೆಲಸ ಮಾಡುವಾಗ ಇಂಡೋ ಟಿಬೆಟಿಯನ್ನ್ ಬಾರ್ಡರ್ ಪೋಲಿಸ್(ಐಟಿಬಿಪಿ)ರಿಗೆ ಆಕಸ್ಮಿಕವಾಗಿ ಈ ಮಮ್ಮಿ ಪತ್ತೆಯಾಯಿತು. ಮಮ್ಮಿಯನ್ನು ಹುಡುಕುವ ಕ್ರಿಡಿಟ್ ಟಿಬೆಟಿಯನ್ನ್ ಬಾರ್ಡರ್ ಪೋಲಿಸ್‍ರಿಗೆ ಸಲ್ಲಬೇಕು.

PC:YOUTUBE

ಲಾಮ

ಲಾಮ

ಕೆಲವು ಘುಯೇನ್ ಗ್ರಾಮಸ್ಥರು ಈ ಮಮ್ಮಿಗೆ ನಾಮಕರಣ ಮಾಡಿದ್ದಾರೆ. ಅದೇನೆಂದರೆ ಲಾಮ ಎಂದು ಪ್ರೀತಿಯಿಂದ ಈ ಮಮ್ಮಿಯನ್ನು ಕರೆಯುತ್ತಾರೆ.


PC:YOUTUBE

ಮಮ್ಮಿ ಯಾರು?

ಮಮ್ಮಿ ಯಾರು?

ಈ ಮಮ್ಮಿಯು ಗೆಲುಗಾಪ್ಪ ಪ್ರದೇಶದ ಸನ್ಯಾಸಿಯಾದ ಸಂಘ ತೆನ್ಜಿನ್ ಎಂದು ನಂಬಲಾಗಿದೆ. ಈ ಮಮ್ಮಿಯ ಹೆಸರು ಸಂಘ ತೆನ್ಜಿನ್ ಎಂದು ಯಾರು ಕೂಡ ಅಧಿಕೃತವಾಗಿ ಹೇಳುತ್ತಿಲ್ಲ. ನೂರಾರು ವರ್ಷಗಳ ಹಿಂದಿನ ಈ ದೇಹವನ್ನು ಯಾರು ಎಂದು ಹೇಗೆ ತಾನೆ ಗುರುತಿಸಲು ಸಾಧ್ಯ.

PC:YOUTUBE

500 ವರ್ಷ

500 ವರ್ಷ

ಈ ಮಮ್ಮಿಯು 1475ರ ವರ್ಷದ ಪುರಾತನವಾದ ದೇಹ ಎಂದು ನಂಬಲಾಗಿದೆ. ಈ ಮಮ್ಮಿಯು ಕುಳಿತುಕೊಳ್ಳುವ ಭಂಗಿಯಲ್ಲಿ ಕಾಣಬಹುದಾಗಿದೆ. ಈ ಮಮ್ಮಿಯ ದೇಹವು ಅಸ್ಪಷ್ಟವಾಗಿದೆ.

PC:YOUTUBE

ಬೆಲ್ಟ್

ಬೆಲ್ಟ್

ಈ ಮಮ್ಮಿಯು ವಿಚಿತ್ರವಾದ ಬೆಲ್ಟ್ಗಳನ್ನು ಧರಿಸಿದೆ. ಈ ಬೆಲ್ಟ್ ಬೆನ್ನು ಮೂಳೆಯ ಕೆಳಗೆ ಇಳಿಯುತ್ತದೆ. ಮಮ್ಮಿ ಕುಳಿತಿರುವ ಭಂಗಿ ನೋಡಿದರೆ ಧ್ಯಾನದಲ್ಲಿ ಮಗ್ನಾನಾದ ಹಾಗೆ ಕಾಣುತ್ತದೆ.


PC:YOUTUBE

ಸನ್ಯಾಸಿ

ಸನ್ಯಾಸಿ

ಕೆಲವರ ಅಭಿಪ್ರಾಯದಂತೆ ಸಾಮಾನ್ಯವಾಗಿ ಸನ್ಯಾಸಿಗಳು ಧ್ಯಾನವನ್ನು ಮಾಡುವಾಗ ತಮ್ಮ ಮೊಣಕಾಲನ್ನು ಬಂಧಿಸಲು ಕೆಲವು ವಿಶಿಷ್ಟವಾದ ಬೆಲ್ಟ್ಗಳನ್ನು ಬಳಸುತ್ತಿದ್ದರು. ಹಾಗಾಗಿ ಈತ ಕೂಡ ಒಬ್ಬ ಸನ್ಯಾಸಿಯಾಗಿರನಹುದೆಂದು ಅನುಮಾನ ವ್ಯಕ್ತ ಪಡಿಸಲಾಗಿದೆ.

PC:YOUTUBE

ಸಂಪ್ರದಾಯ

ಸಂಪ್ರದಾಯ

ಪುರಾತನ ಈಜಿಫ್ಟಿನಲ್ಲಿ ಮಮ್ಮಿಗಳ ಬಗ್ಗೆ ಇತಿಹಾಸವು ತಿಳಿಸುತ್ತದೆ. ಹಳೆಯ ಕಾಲದಲ್ಲಿ ಟಿಬೆಟಿಯನ್ನ್ ತಮ್ಮ ಸಂಬಂಧಿಕರ ಮರಣದ ನಂತರ ದೇಹವನ್ನು ರಣ ಹದ್ದುಗಳಿಗೆ ಮತ್ತು ಮೀನುಗಳಿಗೆ ನೀಡುತ್ತಿದ್ದರು. ಇಲ್ಲದೇ ಹೋದರೆ ಸಮಾಧಿಗಳನ್ನು ಮಾಡುತ್ತಿದ್ದರು.

PC:YOUTUBE

ಸಂರಕ್ಷಿಸುವುದು

ಸಂರಕ್ಷಿಸುವುದು

ಇನ್ನೂ ಕೆಲವರು ದೇಹಗಳನ್ನು ಸಂರಕ್ಷಿಸಲ್ಪಟ್ಟು ದೇಹವನ್ನು ಭಕ್ತಿಯಿಂದ ಪೂಜಿಸುತ್ತಿದ್ದರು. ಶವಗಳು ಕೆಡದಂತೆ ಹಲವಾರು ನೈಸರ್ಗಿಕವಾದ ಹಾಗೂ ರಾಸಾಯನಿಕವಾದ ವಿಧಾನವನ್ನು ಬಳಸುತ್ತಿದ್ದರು.


PC:YOUTUBE

ಅನುಮಾನ

ಅನುಮಾನ

ಸಾಮಾನ್ಯವಾಗಿ ಟೆಬೆಟ್ಟಿಯನ್ ಸನ್ಯಾಸಿ ಕುಳಿತುಕೊಂಡ ಸ್ಥಿತಿಯಲ್ಲಿ ಇರುವುದರಿಂದ ಧ್ಯಾನದಲ್ಲಿದ್ದಾಗ ಹಸಿವಿನಿಂದ ಮೃತನಾಗಿರಬಹುದು ಎಂದು ನಂಬಲಾಗಿದೆ.


PC:YOUTUBE

ಹಲವು ಮಮ್ಮಿ

ಹಲವು ಮಮ್ಮಿ

ಕುತೂಹಲಕಾರಿ ವಿಷಯವೆನೆಂದರೆ ಈ ಮಮ್ಮಿಯೇ ಅಲ್ಲದೇ ಇನ್ನೂ ಹಲವಾರು ಮಮ್ಮಿಗಳು ಹಲವಾರು ಪ್ರದೇಶಗಳಲ್ಲಿ ಇವೆ. ಅಂದಿನ ಚೀನದ ಸಾಂಸ್ಕøತಿಕ ಕ್ರಾಂತಿಗಾಗಿ ಹಲವಾರು ಬೌದ್ಧ ಧರ್ಮದ ಸನ್ಯಾಸಿಗಳು ನಾಶವಾದರು.


PC:YOUTUBE

ವಿಮಾನ ನಿಲ್ದಾಣ

ವಿಮಾನ ನಿಲ್ದಾಣ

ಈ ಸಣ್ಣ ಗ್ರಾಮಕ್ಕೆ ಯಾವುದೇ ಆದ ವಿಮಾನ ನಿಲ್ದಾಣವಿಲ್ಲವಾದ್ದರಿಂದ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಕುಲು ಮಾನಾಲಿ ಏರ್ಪೋಟ್.


PC:YOUTUBE

ಸಂಘ ತೆನ್ಜಿನ್

ಸಂಘ ತೆನ್ಜಿನ್


ಸಂಘ ತೆನ್ಜಿನ್ ಒಬ್ಬ ಸನ್ಯಾಸಿ ದೇವಮಾನವನೆಂದು ಸ್ಥಳೀಯರು ಇಲ್ಲಿಗೆ ಬಂದು ಕಾಣಿಕೆ ನೀಡಿ ಹೋಗುತ್ತಾರೆ.

PC:YOUTUBE

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X