Search
  • Follow NativePlanet
Share
» »ಬೆಂಗಳೂರಿನ ಎಲ್ಲರ ಅಚ್ಚು ಮೆಚ್ಚಿನ ತಾಣ: ನಂದಿ ಬೆಟ್ಟ

ಬೆಂಗಳೂರಿನ ಎಲ್ಲರ ಅಚ್ಚು ಮೆಚ್ಚಿನ ತಾಣ: ನಂದಿ ಬೆಟ್ಟ

By Manjula

ನಂದಿದುರ್ಗ ಅಥವಾ ನಂದಿ ಬೆಟ್ಟ ಎಂದೂ ಕರೆಯಲ್ಪಡುವ ನಂದಿ ಬೆಟ್ಟವು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಒಂದು ಪುರಾತನ ಪರ್ವತ ಕೋಟೆಯಾಗಿದೆ.ಈ ಗುಡ್ಡವು ನಂದಿ ಪಟ್ಟಣಕ್ಕೆ ಸಮೀಪದಲ್ಲಿದೆ ಮತ್ತು ಇದು ಅರ್ಕಾವತಿ ನದಿಯ ಮೂಲದ ಸ್ಥಳವೆಂದು ನಂಬಲಾಗಿದೆ.

ನಂದಿಬೆಟ್ಟವು ಸಮುದ್ರ ಮಟ್ಟದಿಂದ 4851 ಮೀಟರ್ ಎತ್ತರದಲ್ಲಿದ್ದು, ಈ ಬೆಟ್ಟವು ಪ್ರಕೃತಿ ಪ್ರೇಮಿಗಳ ನೆಚ್ಚಿನ ತಾಣವಾಗಿದೆ ಮತ್ತು ಇದು ಅತ್ಯಂತ ಜನಪ್ರಿಯವಾದ ಪಿಕ್ನಿಕ್ ತಾಣವಾಗಿದೆ. ಈ ಬೆಟ್ಟದಲ್ಲಿ ನಮ್ಮ ಉಸಿರು ಬಿಗಿ ಹಿಡಿದು ನೋಡುವಂತಹ ಅನೇಕ ದೃಶ್ಯಾವಳಿಗವೆ. ಇದು ರಜಾದಿನಕ್ಕೆ ಸೂಕ್ತ ಸ್ಥಳವಾಗಿದೆ.

Nandi Hills Route from Bangalore

ಪ್ರಾರಂಭದ ಪಾಯಿಂಟ್ ಮಾರ್ಗ ನಕ್ಷೆ

ಬೆಂಗಳೂರು ಗಮ್ಯಸ್ಥಾನ: ನಂದಿ ಬೆಟ್ಟಕ್ಕೆ ಭೇಟಿ ನೀಡಲು ಸೂಕ್ತ ಸಮಯ: ಅಕ್ಟೋಬರ್ ನಿಂದ ಜೂನ್, ನಂದಿ ಬೆಟ್ಟ ತಲುಪಲು ಹೇಗೆ

Nandi Hills Route from Bangalore

PC: Harsha K R

ವಿಮಾನದಿಂದ: ಇಲ್ಲಿಂದ 39 ಕಿ.ಮೀ ದೂರದಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣವು ದೇಶದಾದ್ಯಂತದ ಪ್ರಮುಖ ನಗರಗಳಿಗೆ ಮತ್ತು ವಿದೇಶಗಳಿಗೂ ಹಲವಾರು ಸಂಖ್ಯೆಯ ಸಂಪರ್ಕವನ್ನು ಹೊಂದಿದೆ.

ರೈಲು ಮೂಲಕ: ಇಲ್ಲಿಂದ 10 ಕಿ.ಮೀ ದೂರದಲ್ಲಿರುವ ಚಿಕ್ಕಬಳ್ಳಾಪುರ ರೈಲು ನಿಲ್ದಾಣವು ಹತ್ತಿರದ ರೈಲು ನಿಲ್ದಾಣವಾಗಿದೆ. ಈ ನಿಲ್ದಾಣವು ರಾಜ್ಯದ ವಿವಿಧ ಭಾಗಗಳಿಂದ ವಿವಿಧ ರೈಲುಗಳ ಸಂಚಾರವನ್ನು ಹೊಂದಿದೆ ಮತ್ತು ಬೆಂಗಳೂರಿನಿಂದ ನಿರಂತರವಾದ ರೈಲುಗಳನ್ನು ಹೊಂದಿದೆ.

ರಸ್ತೆ ಮೂಲಕ: ನಂದಿ ಬೆಟ್ಟವನ್ನು ತಲುಪಲು ಅತ್ಯುತ್ತಮ ಮತ್ತು ಹೆಚ್ಚು ಅನುಕೂಲಕರವಾದ ಒಂದು ರಸ್ತೆಯಿದೆ. ಬೆಂಗಳೂರಿನಿಂದ ತಮ್ಮ ಸ್ವಂತ ವಾಹನದಲ್ಲೂ ಪ್ರಯಾಣ ಮಾಡ ಬಹುದು ಅಥವಾ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಪ್ರಾರಂಭವಾಗುವ ಬಸ್ ಅನ್ನು ಬಳಸಿಕೊಳ್ಳಬಹುದು ಆದರೆ ಇಲ್ಲಿಗೆ ಕಡಿಮೆ ಪ್ರಮಾಣದಲ್ಲಿ ಬಸ್ಸುಗಳ ಓಡಾಟವಿರುವುದ್ದು ಗಮನಿಸತಕ್ಕದ್ದು ಮತ್ತು ಎಲ್ಲಾ ಮಾರ್ಗಗಳು ಬೆಟ್ಟದ ಪ್ರವೇಶದ್ವಾರಕ್ಕೆ ಕೊಂಡೊಯ್ಯುತ್ತವೆ.

Nandi Hills Route from Bangalore

PC: Nikhil Verma

ವಿವಿಧ ಮಾರ್ಗಗಳು

ಬೆಂಗಳೂರಿನಿಂದ ನಂದಿ ಬೆಟ್ಟ ಒಟ್ಟು 60 ಕಿ.ಮೀ. ದೂರದಲ್ಲಿದೆ ಮತ್ತು ಬೆಂಗಳೂರಿನಿಂದ ಬೆಟ್ಟದ ನಿಲ್ದಾಣವನ್ನು ತಲುಪಲು ಸುಮಾರು ಒಂದು ಗಂಟೆ ತೆಗೆದುಕೊಳ್ಳುತ್ತದೆ. ನಂದಿ ಬೆಟ್ಟದ ಮಾರ್ಗವು ಕೆಳಕಂಡಂತಿವೆ:

ಬೆಂಗಳೂರಿನಿಂದ ಯಲಹಂಕ, ಚಿಕ್ಕಜಾಲ, ದೇವನಹಳ್ಳಿ, ನಂದಿ ಕ್ರಾಸ್, ಕರಹಳ್ಳಿ ಕ್ರಾಸ್, ನಂದಿ ಬೆಟ್ಟದಿಂದ ಬಳ್ಳಾರಿ ರಸ್ತೆ ಮತ್ತು ರಾ.ಹೆ 44 ಮೂಲಕ ಸುಮಾರು ಒಂದು ಗಂಟೆಯಲ್ಲಿ ಬೆಂಗಳೂರನ್ನು ತಲುಪಬಹುದು.

ಬೂದಿಗೆರೆ ಕ್ರಾಸ್ ಮೂಲಕ. ನಂದಿ ಬೆಟ್ಟವನ್ನು ತಲುಪಲು ಮತ್ತೊಂದು ಪರ್ಯಾಯ ಮಾರ್ಗವಿದೆ ಆದರೆ ಈ ರಸ್ತೆಯು ಬಹುತೇಕ ಜನರಿಗೆ ಗೊತ್ತಿಲ್ಲ ಮತ್ತು ಈ ಮಾರ್ಗದಲ್ಲಿ ಯಾವುದೇ ರೀತಿಯ ಸೌಕರ್ಯಗಳಿಲ್ಲ.

ಇಲ್ಲಿಯ ಮುಖ್ಯ ರಸ್ತೆಯು ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿರುವುದರಿಂದ ರಸ್ತೆಗಳು ಚೆನ್ನಾಗಿ ಅಭಿವೃದ್ಧಿಗೊಂಡಿವೆ ಮತ್ತು ಅದೇ ರಸ್ತೆಯು ನಿಮ್ಮನ್ನು ಆಂಧ್ರಪ್ರದೇಶಕ್ಕೆ ಸಂಪರ್ಕಿಸುತ್ತದೆ.

ನೀವು ಹೆದ್ದಾರಿಯಿಂದ ನಂದಿ ಬೆಟ್ಟದ ಕಡೆಗೆ ಒಮ್ಮೆ ತಿರುಗಿದರೆ, ಈ ರಸ್ತೆಯು ನಿಮ್ಮನ್ನು ಹಳ್ಳಿಗಳ ಮೂಲಕ ಕರೆದೊಯ್ಯುತ್ತದೆ ಮತ್ತು ರಸ್ತೆಯ ಎರಡೂ ಕಡೆಗಳಲ್ಲಿ ದ್ರಾಕ್ಷಿ ತೋಟಗಳನ್ನು ಕಾಣಬಹುದು.

Nandi Hills Route from Bangalore

PC: Harsha K R

ದೇವನಹಳ್ಳಿಯಲ್ಲಿ ಕಿರು ನಿಲುಗಡೆ

ಈ ಪ್ರದೇಶವು ನಗರಕ್ಕೆ ಹತ್ತಿರವಿರುವುದರಿಂದ, ಸೂರ್ಯೋದಯವನ್ನು ಸೆರೆ ಹಿಡಿಯಲು ಹೆಚ್ಚಿನ ಜನರು ವಾರಾಂತ್ಯದಲ್ಲಿ ಬೆಳಿಗ್ಗೆ ಬೆಳಗ್ಗೆ ಹೊರಡುತ್ತಾರೆ, ಇದು ನಿಜಕ್ಕೂ ಮಂತ್ರಮುಗ್ದರನ್ನಾಗಿಸುತ್ತದೆ. ನಂದಿ ಬೆಟ್ಟದೊಳಗೆ, ದೇವನಹಳ್ಳಿ ಬಿಸಿ ಚಹಾ ಅಥವಾ ಕಾಫಿ ಹಾಗೂ ತ್ವರಿತ ಉಪಹಾರ ಬಯಸುವವರಿಗೆ ಸೂಕ್ತವಾದ ಸ್ಥಳ ಆಗಿರುತ್ತದೆ. ದೇವನಹಳ್ಳಿ ಟಿಪ್ಪು ಸುಲ್ತಾನನ ಹುಟ್ಟಿದ ಸ್ಥಳವಾಗಿದೆ.

Nandi Hills Route from Bangalore

PC: wikipedia.org

ದೇವನ ಹಳ್ಳಿಯ ಕೋಟೆ
ದೇವನ ಹಳ್ಳಿಯ ಕೋಟೆಯು ಟಿಪ್ಪುವಿನ ಜನ್ಮಸ್ಥಳವೆಂದು ಹೇಳಲಾಗುತ್ತದೆ ಮತ್ತು ಹೆದ್ದಾರಿಯಲ್ಲಿ ಕೋಟೆಯನ್ನು ಕಾಣಬಹುದು.ಈ ಕೋಟೆ ಉತ್ತಮವಾಗಿ ರಕ್ಷಿಸಲ್ಪಟ್ಟ ಸ್ಮಾರಕವಾಗಿದ್ದು 15 ನೇ ಶತಮಾನದಲ್ಲಿ ನಿರ್ಮಿಸಲಾದ ಕೋಟೆಯಾಗಿದೆ ಇದು ಭೇಟಿ ನೀಡಲು ಉತ್ತಮ ಆಯ್ಕೆಗಳಲ್ಲೊಂದು.

ಈ ಕೋಟೆಯು ಬ್ರಿಟಿಷರಿಗೆ ಶರಣಾಗುವುದಕ್ಕಿಂತ ಮುಂಚಿತವಾಗಿ ಅನೇಕರ ಆಳ್ವಿಕೆಯಿಂದ ಹಾದುಹೋಗಿದೆ. ಕೋಟೆಗೆ ಭೇಟಿ ನೀಡಿದ ನಂತರ ತ್ವರಿತ ಉಪಹಾರ ಹೊಂದಿದ ನಂತರ, ಇಲ್ಲಿಂದ 25 ಕಿ.ಮೀ ದೂರದಲ್ಲಿರುವ ನಂದಿ ಬೆಟ್ಟಕ್ಕೆ ಹೋಗಬಹುದು ಮತ್ತು ಬೆಟ್ಟಕ್ಕೆ ತಲುಪಲು ಸುಮಾರು ಅರ್ಧ ಗಂಟೆಯಿಂದ ಒಂದು ಗಂಟೆಯ ಕಾಲ ತೆಗೆದುಕೊಳ್ಳಬಹುದು.

Nandi Hills Route from Bangalore

PC: Tinucherian

ನಂದಿ ಬೆಟ್ಟ ಗಮ್ಯಸ್ಥಾನ

ನಂದಿ ಬೆಟ್ಟವು ತನ್ನ ಸುಂದರವಾದ ಸೌಂದರ್ಯ ಮತ್ತು ಅದರ ಶಾಂತಿಯುತ ಪರಿಸರಕ್ಕೆ ಹೆಸರುವಾಸಿಯಾಗಿದೆ. ಇದಲ್ಲದೆ ಈ ಗುಡ್ಡವು ಸಾಮಾನ್ಯವಾಗಿ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ, ಇಲ್ಲಿರುವ ಪಕ್ಷಿ ನೋಟವನ್ನು ನೋಡಲು ಮರೆಯಬೇಡಿ. ನಂದಿ ಬೆಟ್ಟದ ಗಮ್ಯಸ್ಥಾನದಲ್ಲಿ ಮೋಡಗಳು ನಿಮಗೆ ಹತ್ತಿರದಿಂದ ಚಲಿಸುವಂತೆ ಕಾಣುತ್ತದೆ.

ಟಿಪ್ಪು ಡ್ರಾಪ್ ಇಲ್ಲಿಯ ಒಂದು ಮುಖ್ಯವಾಗಿ ಭೇಟಿ ನೀಡಬೇಕಾದ ಸ್ಥಳವಾಗಿದೆ. ಇಲ್ಲಿ ಕೈದಿಗಳನ್ನು ಅವರು ಮಾಡಿದ ಅಪರಾಧಕ್ಕೆ ಶಿಕ್ಷೆಯ ರೂಪದಲ್ಲಿ ಮೇಲಿನಿಂದ ಕೆಳಗೆ ತಳ್ಳಲಾಗುತ್ತಿತ್ತು. ಈಗ ಈ ಜಾಗವು ಪಟ್ಟಣದ ಒಂದು ಸುಂದರ ದೃಶ್ಯವನ್ನು ಒದಗಿಸಿಕೊಡುತ್ತದೆ.

Nandi Hills Route from Bangalore

PC: Viswasagar27

ನಂತರ ನೋಡಬೇಕಾದ ಸ್ಥಳ ನೆಹರು ನಿಲಯ ಇದು ಸುಮಾರು 150 ವರ್ಷಗಳಷ್ಟು ಹಳೆಯ ವಸಾಹತುಶಾಹಿ ಬಂಗಲೆಯಾಗಿದೆ ಮತ್ತು ಮೈಸೂರಿನ ಕಮೀಷನರ್ ಆಗಿದ್ದ ಸರ್ ಮಾರ್ಕ್ ಕಬ್ಬನ್ ಅವರ ಬೇಸಿಗೆಯ ವಿಶ್ರಾಂತಿ ಧಾಮವಾಗಿತ್ತು.ಪ್ರಸ್ತುತ ಈ ಬಂಗಲೆಯು ಅತಿಥಿ ಗೃಹವಾಗಿ ಪರಿವರ್ತನೆಗೊಂಡಿದೆ, ಇದು ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆಯಿಂದ ನಿರ್ವಹಿಸಲ್ಪಡುತ್ತದೆ.

Nandi Hills Route from Bangalore

PC: Koshy Koshy

ನಂದಿ ಬೆಟ್ಟದಲ್ಲಿ ಗಮ್ಯಸ್ಥಾನಗಳು

ಅಮೃತ ಸರೋವರ ಎಂಬ ಸುಂದರವಾದ ನೀರಿನಿಂದ ಆವೃತವಾದ ಪ್ರದೇಶವಾಗಿದ್ದು, ಇದು ದೀರ್ಘಕಾಲಿಕ ನೀರಿನ ಬುಗ್ಗೆಗಳಿಂದ ರೂಪುಗೊಂಡಿದೆ ಮತ್ತು ಈ ಪ್ರದೇಶಕ್ಕೆ ಇದು ನೀರಿನ ಮುಖ್ಯ ಮೂಲವಾಗಿದೆ. ಅಲ್ಲದೆ, ಟಿಪ್ಪು ಸುಲ್ತಾನ್ ಅವರು ಪ್ರಾರ್ಥನೆಗಳನ್ನು ನಡೆಸುತ್ತಿದ್ದ ಸ್ಥಳವೆಂದು ನಂಬಲಾಗಿದೆ.

Nandi Hills Route from Bangalore

PC: Hariharan Aruchalam

ಟಿಪ್ಪು ಸುಲ್ತಾನನ ಕೋಟೆ

ಟಿಪ್ಪು ಸುಲ್ತಾನನ ಕೋಟೆ ಬೆಟ್ಟದ ಮೇಲೆ ಒಂದು ಪ್ರಮುಖ ಆಕರ್ಷಣೆಯಾಗಿದೆ.ಕೋಟೆಯ ನಿರ್ಮಾಣವನ್ನು ಹೈದರ್ ಅಲಿ ಪ್ರಾರಂಭಿಸಿದನು, ಆದರೆ ಟಿಪ್ಪು ಸುಲ್ತಾನ್ ಇದನ್ನು ಪೂರ್ಣಗೊಳಿಸಿದ.ಈ ಕೋಟೆಯು ಮಿನರೇಟ್ ಹಾಗೂ ಉತ್ತಮವಾದ ಕಮಾನುಗಳನ್ನು ಹೊಂದಿದೆ.

ಇದು ಹಿಂದಿನ ಕಾಲದ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ. ಕೋಟೆಯ ಸುಂದರವಾಗಿ ವಿನ್ಯಾಸಗೊಳಿಸಲಾದ ಗೋಪುರಗಳು ಮತ್ತು ಕಮಾನುಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಈ ಕೋಟೆಯು ಟಿಪ್ಪು ಸುಲ್ತಾನನ ಬೇಸಿಗೆಯ ನಿವಾಸವಾಗಿತ್ತು.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more