Search
  • Follow NativePlanet
Share
» »ಉತ್ತರ ಪ್ರದೇಶದ ಇನ್ನೊಂದು "ಗೋಕರ್ಣ"!

ಉತ್ತರ ಪ್ರದೇಶದ ಇನ್ನೊಂದು "ಗೋಕರ್ಣ"!

By Vijay

ನಮ್ಮಲ್ಲಿ ಹಲವಾರು ದಂತಕಥೆಗಳು, ಪುರಾಣ ಕಥೆಗಳು, ಘಟನೆಗಳು ಸಾಕಷ್ಟು ದೇವಾಲಯಗಳನಿರ್ಮಾಣಕ್ಕೆ ಹಿನ್ನಿಲೆಯನ್ನು ಒದಗಿಸಿಕೊಟ್ಟಿರುವುದನ್ನು ಕಾಣಬಹುದು. ಅದೆಷ್ಟೊ ದೇವಾಲಯಗಳು ವಿವಿಧ ಸ್ಥಳಗಳಲ್ಲಿದ್ದರೂ ಸಹ ಒಂದೆ ರೀತಿಯ ಹಿನ್ನಿಲೆಯನ್ನು ಹೊಂದಿರುವುದನ್ನೂ ಸಹ ಗಮನಿಸಬಹುದು.

ವಿಶ್ವದಲ್ಲೆ ಅತಿ ಎತ್ತರದಲ್ಲಿ ನೆಲೆಸಿರುವ ವಿಶ್ವನಾಥ

ಇದೊಂದು ರೀತಿಯಲ್ಲಿ ಗೊಂದಲ ಮೂಡಿಸಿದರೂ ಸಹ ಆಯಾ ಪ್ರದೇಶಗಳ ನಿವಾಸಿಗಳಿಗೆ ಅದು ಮಹತ್ವ ಪಡೆದ ಸ್ಥಳವಾಗಿದ್ದು ಅವರವರ ಭಕ್ತಿ ಹಾಗೂ ನಂಬಿಕೆಗಳಿಗೆ ಬಿಟ್ಟಿರುವ ವಿಚಾರವಾಗಿ ಬಿಡುತ್ತದೆ. ನಿಮಗೆಲ್ಲ ಗೊತ್ತಿರುವ ಹಾಗೆ ಕರ್ನಾಟಕದಲ್ಲಿರುವ ಗೋಕರ್ಣದ ಕುರಿತು ನಿಮ್ಮಲ್ಲಿ ಬಹುತೇಕರೆಲ್ಲರಿಗೂ ತಿಳಿದೆ ಇರುತ್ತದೆ.

ಉತ್ತರ ಪ್ರದೇಶದ ಇನ್ನೊಂದು

ಚಿತ್ರಕೃಪೆ: Shambhu.389

ಇಲ್ಲಿ ಶಿವನು ಮಹಾಬಲೇಶ್ವರನಾಗಿ ನೆಲೆಸಿದ್ದು ಆ ಮಹಾಬಲ ಶಿವಲಿಂಗವು ರಾವಣನೊಂದಿಗೆ ಕಥೆಯ ಹಿನ್ನಿಲೆ ಹೊಂದಿದೆ. ರಾವಣನು ಒಂದೊಮ್ಮ್ರ್ ಶಿವನ ಆತ್ಮಲಿಂಗವನ್ನು ಪಡೆದು ಲಂಕೆಗೆ ಒಯ್ಯುವಾಗ ಅದನ್ನು ಹೇಗಾದರೂ ಮಾಡಿ ತಪ್ಪಿಸಬೇಕೆಂದು ದೇವತೆಗಳೆಲ್ಲರೂ ಸೇರಿ ಗಣೇಶನ ಸಹಾಯ ಪಡೆದು ತಂತ್ರ ರೂಪಿಸಿ ರಾವಣನು ಆ ಆತ್ಮಲಿಂಗವನ್ನು ಲಂಕೆಗೆ ಕರೆದೊಯ್ಯದ ಹಾಗೆ ಮಾಡುತ್ತಾರೆ.

ಈ ಒಂದು ಕಥೆಯು ಇನ್ನೊಂದು ಪವಿತ್ರ ಕ್ಷೇತ್ರದ ಹಿನ್ನಿಲೆಯ ಕಥೆಯಾಗಿಯೂ ನಂಟನ್ನು ಹೊಂದಿರುವುದು ಆಸಕ್ತಿಕರ. ಅದೆ ಉತ್ತರ ಪ್ರದೇಶ ರಾಜ್ಯದಲ್ಲಿರುವ ಲಖಿಂಪುರ್ ಖೇರಿ ಜಿಲ್ಲೆಯ ಗೋಲಾ ಗೋಕರ್ಣನಾಥ ನಗರ ಕಾಹೇತ್ರ. ಈ ನಗರವು ತನ್ನಲ್ಲಿರುವ ಶಿವ ಮಂದಿರಕ್ಕೆ ಅತ್ಯಂತ ಪ್ರಸಿದ್ಧಿ ಪಡೆದಿದೆ.

ಉತ್ತರ ಪ್ರದೇಶದ ಇನ್ನೊಂದು

ಚಿತ್ರಕೃಪೆ: Shambhu.389

ರಾಜ್ಯದ ಮೂಲೆ ಮೂಲೆಗಳಿಂದ ಈ ಶಿವ ಮಂದಿರಕ್ಕೆ ಅಪಾರ ಪ್ರಮಾಣದಲ್ಲಿ ಭಕ್ತಾದಿಗಳು ಬಂದು ದರ್ಶನ ಪಡೆಯುತ್ತಾರೆ. ಶಾರ್ವಣ ಮಾಸದ ಸಂದರ್ಭದಲ್ಲಂತೂ ದೇವಾಲಯದಲ್ಲಿ ನಿಲ್ಲಲೂ ಸಹ ಸ್ಥಳ ಸಿಗದಷ್ಟು ಜನಸಂದಣಿ ಇಲ್ಲಿರುತ್ತದೆ. ಮೇಲೆ ಹೇಳಿದ ರಾವಣನ ಕಥೆಯನ್ನೆ ಈ ದೇವಾಲಯವೂ ಸಹ ತನ್ನ ಹಿನ್ನಿಲೆಯಾಗಿ ಪಡೆದಿದೆ.

ಆದರೆ ಇಲ್ಲಿ ಸ್ವಲ್ಪ ತೆರನಾದ ವಿವಿಧತೆಯಿದೆ. ರಾವಣನು ಎಷ್ಟು ವಿಧ ವಿಧವಾಗಿ ತನ್ನೆಲ್ಲ ಬಲವನ್ನು ಪ್ರಯೋಗಿಸಿ ಭೂಮಿಯಿಂದ ಶಿವಲಿಂಗವನ್ನು ಮೇಲೆತ್ತಲು ಹರಸಾಹಸ ಪಟ್ಟರೂ ಅದು ಅವನಿಂದ ಸಾಧ್ಯವಾಗದಿದ್ದಾಗ ಅವನಿಗೆ ಸಿಟ್ಟು ಉಕ್ಕೇರಿ ಮುಷ್ಟಿಯಿಂದ ಶಿವಲಿಂಗವನ್ನು ಅತಿ ಬಲವಾಗಿ ಗುದ್ದಿದನು.

ಉತ್ತರ ಪ್ರದೇಶದ ಇನ್ನೊಂದು

ಚಿತ್ರಕೃಪೆ: Disputedbug

ರಾವಣನ ಅತಿ ಬಲ ಪ್ರಯೋಗದ ಪರಿಣಾಮವಾಗಿ ಆ ಶಿವಲಿಂಗವು ಭೂಮಿಯಿಂದ ಕೆಲವು ಅಡಿಗಳಷ್ಟು ಕೆಳಗೆ ಹೋಗಿ ಗೋವಿನ ಅಂದರೆ ಆಕಳದ ಕಿವಿಯನ್ನು ಹೋಲುವ ಆಕಾರವನ್ನು ಪಡೆದುಕೊಂಡಿತಂತೆ. ಹೀಗೆ ಆ ಗೋಲಾಕಾರದ ಶಿವಲಿಂಗವು ಭೂಮಿಯ ಕೊಂಚ ಕೆಳಗೆ ಹೋಗಿ ನೆಲೆಸಿ ಪ್ರಸಿದ್ಧ ಆ ಕ್ಷೇತ್ರವು ಗೋಲಾ ಗೋಕರ್ಣನಾಥ ಎಂಬ ಹೆಸರು ಪಡೆಯಿತಂತೆ.

ಯಾಣದಿಂದ ಗೋಕರ್ಣದವರೆಗೆ ರೋಮಾಂಚಕ ಪ್ರವಾಸ

ಅಂದರೆ ಈ ನಗರವು ಹೆಚ್ಚು ಕಡಿಮೆ ಕರ್ನಾಟಕದ ಗೋಕರ್ಣದಂತೆಯೆ ಕಥೆ ಹೊಂದಿರುವ ಶಿವ ದೇವಾಲಯದಿಂದಾಗಿ ಪ್ರಸಿದ್ಧವಾಗಿರುವ ಕ್ಷೇತ್ರವಾಗಿದ್ದು ಪ್ರೀತಿಯಿಂದ ಉತ್ತರ ಪ್ರದೇಶದ ಗೋಕರ್ಣ ಎಂದರೆ ತಪ್ಪಾಗಲಿಕ್ಕಿಲ್ಲ . ಆದರೆ ಒಂದು ವಿಶೇಷ ವ್ಯತ್ಯಾಸವಿದೆ, ಅದೆಂದರೆ ಕರ್ನಾಟಕದ ಗೋಕರ್ಣದಲ್ಲಿರುವ ಹಾಗೆ ಇಲ್ಲಿ ಕಡಲ ತೀರವಿಲ್ಲ ಅಷ್ಟೆ! ಇನ್ನುಳಿದಂತೆ ಇಲ್ಲಿ ನೆಲೆಸಿರುವವನು ಶಿವನೆ ಅಲ್ಲಿ ನೆಲೆಸಿರುವವನು ಶಿವನೆ ಅಲ್ಲವೆ? ಅಂದಹಾಗೆ, ಇದನ್ನು ಚೋಟಾ ಕಾಶಿ ಅಂದರೆ ಚಿಕ್ಕ ಕಾಶಿ ಎಂಬ ಹೆಸರಿನಿಂದಲೂ ಸಹ ಕರೆಯುತ್ತಾರೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more