Search
  • Follow NativePlanet
Share
» »ದೆವ್ವಗಳನ್ನು ದೇವರೆ ಸ್ವತಃ ಓಡಿಸುವ ಭಾರತದ ಏಕೈಕ ದೇವಾಲಯ

ದೆವ್ವಗಳನ್ನು ದೇವರೆ ಸ್ವತಃ ಓಡಿಸುವ ಭಾರತದ ಏಕೈಕ ದೇವಾಲಯ

ಸಾಮಾನ್ಯವಾಗಿ ದೆವ್ವ ಹಿಡಿದಿದೆ ಎಂದರೆ ಅಂತಹವರನ್ನು ವೈದ್ಯರು ಮಾನಸಿಕ ಅಸ್ವಸ್ಥರು ಎಂದು ಕರೆಯುವುದುಂಟು. ಆದರೆ ಕೆಲವರು ಮಾತ್ರ ಇದಕ್ಕೆಲ್ಲಾ ವೈದ್ಯ ಮೊರೆ ಹೋಗುವುದು ಅಷ್ಟು ಒಳ್ಳೆಯದಲ್ಲಾ ಇದಕ್ಕೆಲ್ಲಾ ಮದ್ದು ತಂತ್ರ ಹಾಗು ಮಂತ್ರಗಳು ಎಂದು ಭಾವಿಸುತ್ತಾರೆ. ನಮ್ಮ ಹಿಂದೂ ಧರ್ಮದವರೇ ಅಲ್ಲದೇ ಇಸ್ಲಾಂ ಧರ್ಮದವರು ಕೂಡ ಭೋತ್ಛಾಟನೆ ಮಾಡುವಲ್ಲಿ ಅತ್ಯಂತ ಶಕ್ತಿವಂತರಿದ್ದಾರೆ.

ನಮ್ಮ ದೇಶದಲ್ಲಿ ದೇವತಾ ಮೂರ್ತಿಗಳಿಗೆ ಎಷ್ಟು ಮಾನ್ಯತೆ ನೀಡುತ್ತೇವೆಯೋ, ಅಷ್ಟೇ ಮಾನ್ಯತೆ ದೆವ್ವಗಳಿಗೂ ನೀಡುತ್ತೇವೆ. ಹೀಗಿರುವಾಗ ಒಂದು ವಿಚಿತ್ರವಾದ ದೇವಾಲಯವಿದೆ ಆ ದೇವಾಲಯದಲ್ಲಿ ಸ್ವತಃ ದೇವತೆಯೇ ಭೋತ್ಚಾಚನೆ ಮಾಡುತ್ತಾನಂತೆ.

ಹಾಗಾದರೆ ಆ ದೇವಾಲಯ ಯಾವುದು ಎಂದು ತಿಳಿದುಕೊಳ್ಳಲು ಕಾತುರರಾಗಿದ್ದೀರಾ? ಹಾಗಾದರೆ ಕೇಳಿ ಆ ಮಾಹಿಮಾನ್ವಿತವಾದ ದೇವಾಲಯವಿರುವುದು ರಾಜಸ್ಥಾನದ ದ್ವಾಸ ಜಿಲ್ಲೆಯಲ್ಲಿ. ಹಾಗಿದ್ದಲ್ಲಿ ಆ ಭೋತ್ಚಾಟನೆ ಮಾಡುವ ಆ ಮಾಹಿಮಾನ್ವಿತ ದೇವತ ಮೂರ್ತಿ ಯಾರು? ಹೇಗೆ ಉಚ್ಛಾಟನೆ ಮಾಡುತ್ತಾನೆ ಎಂಬ ಹಲವಾರು ಪ್ರಶ್ನೆಗಳಿಗೆ ಉತ್ತರ ಲೇಖನದ ಮೂಲಕ ಪಡೆಯಿರಿ...

ಮೆಹಂದಿಪುರ್ ಬಾಲಾಜಿ ದೇವಾಲಯ

ಮೆಹಂದಿಪುರ್ ಬಾಲಾಜಿ ದೇವಾಲಯ

ಈ ಶಕ್ತಿಯುತವಾದ ದೇವಾಲಯ ಇರುವುದು ರಾಜಸ್ಥಾನ ರಾಜ್ಯದ ದ್ವಾಸ ಜಿಲ್ಲೆಯಲ್ಲಿ. ಇದೊಂದು ಪವಿತ್ರವಾದ ಹಿಂದೂ ದೇವಾಲಯವಾಗಿದೆ. ಇಲ್ಲಿ ಮೆಹೆಂದಿ ಪುರ ಬಾಲಾಜಿ ದೇವಾಲಯವಿದೆ. ಆ ದೇವಾಲಯದಲ್ಲಿ ಆಂಜನೇಯ ಸ್ವಾಮಿಯು ನೆಲೆಸಿದ್ದಾನೆ.

ಮೆಹಂದಿಪುರ್ ಬಾಲಾಜಿ ದೇವಾಲಯ

ಮೆಹಂದಿಪುರ್ ಬಾಲಾಜಿ ದೇವಾಲಯ

ಈತನೇ ಈ ದೇವಾಲಯದಲ್ಲಿ ಬೋತ್ಛಾಟನೆ ಮಾಡುವ ಶಕ್ತಿಯಾಗಿದ್ದಾನೆ. ಹನುಮಂತನ ದೇವಾಲಯಗಳು ನಮ್ಮ ಭಾರತ ದೇಶದಲ್ಲಿ ಸಾಕಷ್ಟಿದೆ. ಆದರೆ ಭೋತ್ಛಾಟನೆ ಮಾಡುವ ಏಕೈಕ ದೇವಾಲಯ ಎಂದರೆ ಅದು ಶ್ರೀ ಮೆಹಂದಿಪುರ್ ಬಾಲಾಜಿಯಾಗಿದೆ.

ಮೆಹಂದಿಪುರ್ ಬಾಲಾಜಿ ದೇವಾಲಯ

ಮೆಹಂದಿಪುರ್ ಬಾಲಾಜಿ ದೇವಾಲಯ

ಈ ದೇವಾಲಯಕ್ಕೆ ಹಲವಾರು ದೇಶ, ವಿದೇಶಗಳಿಂದ ಬಂದು ಸಂಶೋಧನೆ ಮಾಡಿದ್ದಾರೆ. ಆದರೆ ಇಲ್ಲಿನ ಆಶ್ಚರ್ಯಕರವಾದ ಘಟನೆ ಬಗ್ಗೆ ಮಾತ್ರ ಅವರಿಗೂ ಉತ್ತರ ದೊರೆತ್ತಿಲ್ಲ.

ಮೆಹಂದಿಪುರ್ ಬಾಲಾಜಿ ದೇವಾಲಯ

ಮೆಹಂದಿಪುರ್ ಬಾಲಾಜಿ ದೇವಾಲಯ

ಇಲ್ಲಿ ಆ ಆಂಜನೇಯ ಸ್ವಾಮಿಯೇ ಸ್ವತಃ ಭೋತ್ಛಾಟನೆ ಮಾಡುವ ಭಯಾನಕವಾದ ದೃಶ್ಯವನ್ನು ಕಾಣಬಹದಾಗಿದೆ. ಹಾಗಾಗಿಯೇ ಈ ದೇವಾಲಯಕ್ಕೆ ನೂರಾರು ಭಕ್ತರು ದಿನನಿತ್ಯವೂ ಭೇಟಿ ನೀಡುತ್ತಿರುತ್ತಾರೆ. ಹಾಗೆಯೇ ಸ್ವಾಮಿಯ ದರ್ಶನ ಪಡೆಯಲು ಕೂಡ ಬರುತ್ತಿರುತ್ತಾರೆ.

ಮೆಹಂದಿಪುರ್ ಬಾಲಾಜಿ ದೇವಾಲಯ

ಮೆಹಂದಿಪುರ್ ಬಾಲಾಜಿ ದೇವಾಲಯ

ಇಲ್ಲಿಗೆ ಭೇಟಿ ನೀಡುವ ಹಲವಾರು ಭಕ್ತರು ಮಾಟ ಮಂತ್ರ ವಿದ್ಯೆಗಳಿಂದ ಹಾಗು ದುಷ್ಟ ಶಕ್ತಿಯಿಂದ ತೊಂದರೆಗೆ ಒಳಗಾದವರೆ. ಈ ಸ್ವಾಮಿಯನ್ನು ಒಮ್ಮೆ ದರ್ಶನ ಮಾಡಿದರೆ ಎಲ್ಲಾ ತೊಂದರೆಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಜನರದ್ದು.

ಮೆಹಂದಿಪುರ್ ಬಾಲಾಜಿ ದೇವಾಲಯ

ಮೆಹಂದಿಪುರ್ ಬಾಲಾಜಿ ದೇವಾಲಯ

ಈ ದೇವಾಲಯದ ಮತ್ತೊಂದು ವಿಶೇಷ ಏನೆಂದರೆ ಯಾವುದೇ ಜಾತಿ, ಧರ್ಮ, ಬೇಧ, ಭಾವವಿಲ್ಲದೇ ದೇವಾಲಯಕ್ಕೆ ಪ್ರವೇಶವನ್ನು ನೀಡುತ್ತಾರೆ. ಈ ದೇವಾಲಯಕ್ಕೆ ದೇಶದಿಂದಲೇ ಅಲ್ಲದೇ ವಿದೇಶಗಳಿಂದಲೂ ಭೇಟಿ ನೀಡುತ್ತಾರೆ ಎಂದರೆ ನಂಬುತ್ತೀರಾ?

ಮೆಹಂದಿಪುರ್ ಬಾಲಾಜಿ ದೇವಾಲಯ

ಮೆಹಂದಿಪುರ್ ಬಾಲಾಜಿ ದೇವಾಲಯ

ಇಲ್ಲಿನ ಭಕ್ತರು ಬಾಲಾಜಿಯ ದರ್ಶನಕ್ಕೆ ಸಾಲು ಸಾಲಾಗಿ ಆಗಮಿಸುತ್ತಾರೆ. ಈ ಸ್ವಾಮಿಯ ದೇವಾಲಯವು ಒಂದು ಬೆಟ್ಟದ ಮೇಲೆ ಇದ್ದು, ಅಷ್ಟೆನೂ ಪ್ರಮುಖ್ಯತೆಯನ್ನು ಪಡೆದಿಲ್ಲ. ಆದರೆ ಈ ಬಾಲಾಜಿಯಿಂದಾಗಿ ಈ ದ್ವಾಸ ಜಿಲ್ಲೆಯಲ್ಲಿನ ಈ ಗ್ರಾಮವು ಈಗ ಪ್ರಸಿದ್ಧಿಯನ್ನು ಪಡೆದಿದೆ.

ಮೆಹಂದಿಪುರ್ ಬಾಲಾಜಿ ದೇವಾಲಯ

ಮೆಹಂದಿಪುರ್ ಬಾಲಾಜಿ ದೇವಾಲಯ

ಈ ದೇವಾಲಯದಲ್ಲಿ ಭೋತ್ಛಾಟನೆಯ ಸಮಯದಲ್ಲಿ ಸಾಮಾನ್ಯವಾಗಿ ಚೀರಾಟ, ಅಳುವುದು, ಕಿರುಚುವುದು ಇನ್ನೂ ಹಲವಾರು ಚಟುವಟಿಕೆಯನ್ನು ಮಾಡುತ್ತಿರುತ್ತಾರೆ. ಹೀಗಾಗಿ ಕೆಲವು ಭಕ್ತರು ಹೆದರಿಕೊಳ್ಳುವುದುಂಟು. ಹಾಗಾಗಿಯೇ ಈ ದೇವಾಲಯಕ್ಕೆ ಧೈರ್ಯ ಇದ್ದವರು ಮಾತ್ರ ಈ ದೇವಾಲಯಕ್ಕೆ ಭೇಟಿ ನೀಡಬಹುದು.

ಮೆಹಂದಿಪುರ್ ಬಾಲಾಜಿ ದೇವಾಲಯ

ಮೆಹಂದಿಪುರ್ ಬಾಲಾಜಿ ದೇವಾಲಯ

ಈ ದೇವಾಲಯದಲ್ಲಿ ಶ್ರೀ ರಾಮನ ದೇವಾಲಯವಿದೆ. ಸಾಮಾನ್ಯವಾಗಿ ಹನುಮಂತ ಎಲ್ಲಿರುತ್ತಾನೆಯೋ ಅಲ್ಲಿ ರಾಮ ಇರಲೇ ಬೇಕು. ಹಾಗೆಯೇ ರಾಮ ಇದ್ದ ಸ್ಥಳದಲ್ಲಿ ಹನುಮಂತ ಇರಲೇಬೇಕು ಅಲ್ಲವೆ?

ಮೆಹಂದಿಪುರ್ ಬಾಲಾಜಿ ದೇವಾಲಯ

ಮೆಹಂದಿಪುರ್ ಬಾಲಾಜಿ ದೇವಾಲಯ

ಈ ದೇವಾಲಯದಲ್ಲಿ ಬಾಲಾಜಿಗೆ ಎಂದು ಕೆಲವು ಸ್ಥಳೀಯ ಕಾಣಿಕೆ ಮತ್ತು ನೈವೇದ್ಯವನ್ನು ಸಮರ್ಪಿಸುತ್ತಾರೆ. ಅದರಲ್ಲಿ ಆರ್ ಜೀ, ಧರಕಷ್ಟ್, ಬೂಂದಿ, ಸ್ವಾಮಣಿ ಇನ್ನೂ ಹಲವಾರು.

ಮೆಹಂದಿಪುರ್ ಬಾಲಾಜಿ ದೇವಾಲಯ

ಮೆಹಂದಿಪುರ್ ಬಾಲಾಜಿ ದೇವಾಲಯ

ಈ ದೇವಾಲಯದಲ್ಲಿ ಭೋತ್ಛಾಟನೆ ಮಾಡುಲು ಉತ್ತಮವಾದ ದಿನಗಳೆಂದರೆ ಅದು ಮಂಗಳವಾರ ಹಾಗು ಶನಿವಾರ. ಈ ದಿನಗಳಲ್ಲಿ ಹಲವಾರು ಭಕ್ತರು ಈ ದೇವಾಲಯಕ್ಕೆ ಹೆಚ್ಚಾಗಿ ಭೇಟಿ ನೀಡುತ್ತಾರೆ.

ಮೆಹಂದಿಪುರ್ ಬಾಲಾಜಿ ದೇವಾಲಯ

ಮೆಹಂದಿಪುರ್ ಬಾಲಾಜಿ ದೇವಾಲಯ

ಇನ್ನೊಂದು ಮುಖ್ಯವಾದ ವಿಚಾರ ಏನೆಂದರೆ ಈ ದೇವಾಲಯದಲ್ಲಿ ನೀಡಲಾಗುವ ಪ್ರಸಾದವನ್ನು ಮನೆಗೆ ತೆಗೆದುಕೊಂಡು ಹೋಗಬಾರದು ಬದಲಾಗಿ ಅಲ್ಲಿಯೇ ತಿನ್ನಬೇಕು. ಹಾಗೇನಾದರೂ ತೆಗದುಕೊಂಡು ಹೋದರೆ ಕೇಡು ಸಂಭವಿಸುತ್ತದೆ ಎಂಬುದು ಭಕ್ತರ ಗಾಢವಾದ ನಂಬಿಕೆಯಾಗಿದೆ.

ಮೆಹಂದಿಪುರ್ ಬಾಲಾಜಿ ದೇವಾಲಯ

ಮೆಹಂದಿಪುರ್ ಬಾಲಾಜಿ ದೇವಾಲಯ

ಈ ದೇವಾಲಯವು ವಾರದ ಎಲ್ಲಾ ದಿನಗಳಲ್ಲಿಯೂ ತೆರದಿರಲಾಗಿರುತ್ತದೆ. ಅಂದರೆ ಮುಖ್ಯವಾಗಿ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಈ ಮಾಹಿಮಾನ್ವಿತ ದೇವಾಲಯಕ್ಕೆ ಭೇಟಿ ನೀಡಬಹುದಾಗಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಬೆಂಗಳೂರಿನಿಂದ ರಾಜಸ್ಥಾನಕ್ಕೆ ನೇರವಾದ ರೈಲ್ವೆ ಸಂಪರ್ಕವಿದೆ. ಹಾಗೆಯೇ ವಿಮಾನ ನಿಲ್ದಾಣಗಳು ಕೂಡ ಇದೆ. ದೆಹಲಿಯಿಂದ ಸುಮಾರು 255 ಕಿ.ಮೀ, ಆಗ್ರಾದಿಂದ ಸುಮಾರು 140 ಕಿ.ಮೀ, ದ್ವಾಸ ದಿಂದ ಕೇವಲ 50 ಕಿ.ಮೀ ದೂರದಲ್ಲಿ ಈ ಮೆಹೆಂದಿ ಪುರ್ ಬಾಲಾಜಿ ದೇವಾಲಯ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X