Search
  • Follow NativePlanet
Share
» »ಇಲ್ಲಿ ದೆವ್ವಕ್ಕೆ ಮಿನರಲ್ ವಾಟರ್ ಹಾಗೂ ಸಿಗರೇಟ್ ಕೊಡ್ತಾರಂತೆ...ಯಾಕೆ ಗೊತ್ತಾ?

ಇಲ್ಲಿ ದೆವ್ವಕ್ಕೆ ಮಿನರಲ್ ವಾಟರ್ ಹಾಗೂ ಸಿಗರೇಟ್ ಕೊಡ್ತಾರಂತೆ...ಯಾಕೆ ಗೊತ್ತಾ?

ಹಿಮಾಲಯದಿಂದ ಕೂಡಿರುವ ಹಿಮಾಚಲ ಪ್ರದೇಶವು ಎಷ್ಟು ಸುಂದರವಾಗಿದೆಯೋ ಅಷ್ಟೇ ರಹಸ್ಯಗಳಿಂದಲೂ ಕೂಡಿದೆ. ಪೌರಾಣಿಕತೆಗೆ ಸಂಬಂಧಿಸಿದ ಅನೇಕ ಸ್ಥಳಗಳು ಇಲ್ಲಿವೆ ಎನ್ನಲಾಗುತ್ತದೆ. ಇಂದು ನಿಮಗೆ ಹಿಮಾಚಲ ಪ್ರದೇಶದ ಒಂದು ವಿಚಿತ್ರ ರಸ್ತೆಯ ಬಗ್ಗೆ ಹೇಳಹೊರಟಿದ್ದೇವೆ. ಅದರ ಬಗ್ಗೆ ಅನೇಕ ಕಥೆಗಳು ಕೇಳ ಸಿಗುತ್ತವೆ. ಈ ರಸ್ತೆಯು ಯಾವುದೋ ಪ್ರೇತಾತ್ಮದ ಮುಷ್ಠಿಯಲ್ಲಿದೆ ಎನ್ನಲಾಗುತ್ತದೆ. ಈ ರಸ್ತೆಯಿಂದ ತೆರಳುವ ಪ್ರತಿಯೊಬ್ಬ ವ್ಯಕ್ತಿಯು ದೆವ್ವದ ಸ್ಥಳದಲ್ಲಿ ಏನಾದರೂ ಅರ್ಪಣೆ ಮಾಡಲೇ ಬೇಕು.

ಮಿನರಲ್ ವಾಟರ್ ಹಾಗೂ ಸಿಗರೇಟ್

ಮಿನರಲ್ ವಾಟರ್ ಹಾಗೂ ಸಿಗರೇಟ್

PC-ManoharD
ಈ ರಸ್ತೆಯು ಹಿಮಾಚಲದ ಮನಾಲಿ ಮಾರ್ಗದಲ್ಲಿ 17000ಫೀಟ್ ಎತ್ತರದಲ್ಲಿರುವ ಈ ರಸ್ತೆಯು ಬಹಳ ಅಪಾಯಕಾರಿಯಾದುದು. ಈ ಇಳಿಜಾರಾದ ರಸ್ತೆಯಲ್ಲೇ ದೆವ್ವಗಳ ಸ್ಥಾನವಿದೆ ಎನ್ನಲಾಗುತ್ತದೆ. ಇಲ್ಲಿಂದ ಹಾದುಹೋಗುವ ಪ್ರತಿಯೊಬ್ಬ ವ್ಯಕ್ತಿಯೂ ಈ ದೆವ್ವದ ಸ್ಥಾನದಲ್ಲಿ ಮಿನರಲ್ ವಾಟರ್ ಹಾಗೂ ಸಿಗರೇಟ್ ಅರ್ಪಿಸಬೇಕು. ಹೆಚ್ಚಾಗಿ ಈ ದೆವ್ವಗಳ ಭಯದಿಂದಾಗಿ ಈ ರಸ್ತೆಯಲ್ಲಿ ಹೆಚ್ಚಿನ ಜನರು ಓಡಾಡುವುದಿಲ್ಲ. ಇದು ಮನಾಲಿಯಲ್ಲಿರುವ ಅಪಾಯಕಾರಿ ರಸ್ತೆಗಳಲ್ಲಿ ಒಂದಾಗಿದೆ.

ಅಪಾಯಕಾರಿ ರಸ್ತೆ

ಅಪಾಯಕಾರಿ ರಸ್ತೆ

PC-Abhimanyu

ಮನಾಲಿ ಬಳಿ ಬರುವ ಈ ಘಾಟಾ ಲೂಪ್ಸ್ ಬೆಟ್ಟಗಳ ನಡುವಿನ ರಸ್ತೆಯು ಅತ್ಯಂತ ಅಪಾಯಕಾರಿ ರಸ್ತೆ ಎನ್ನಲಾಗುತ್ತದೆ. ಈ ರಸ್ತೆಯನ್ನು ದಾಟಬೇಕಾದರೆ 21 ಸುತ್ತು ಸುತ್ತಿ ದಾಟಬೇಕು. ಈ ರಸ್ತೆಯು ಒಂದು ರೀತಿಯ ಭಯದ ವಾತಾವರಣವನ್ನು ಉಂಟುಮಾಡುತ್ತದೆ. ಆ ಸ್ಥಳದಲ್ಲಿ ಒಬ್ಬ ಪುರುಷನ ಆತ್ಮ ತಿರುಗುತ್ತಿರುತ್ತದೆ. ಅದು ಆ ರಸ್ತೆಯಲ್ಲಿ ಓಡಾಡುವ ಜನರಿಗೆ ತೊಂದರೆ ನೀಡುತ್ತದೆ ಎನ್ನಲಾಗುತ್ತದೆ.

ಇದರ ಹಿಂದಿದೆ ದು:ಖಕರ ಕಥೆ

ಇದರ ಹಿಂದಿದೆ ದು:ಖಕರ ಕಥೆ

PC-ManoharD

ಅಲೆದಾಡುತ್ತಿರುವ ಹುಡುಗನ ಆತ್ಮದ ಹಿಂದೆ ಒಂದು ದು;ಖಕರ ಕಥೆ ಇದೆ. ಸುಮಾರು 15 ವರ್ಷಗಳ ಹಿಂದೆ ಈ ರಸ್ತೆಯಲ್ಲಿ ಒಂದು ಟ್ರಕ್ ಹಾಳಾಗಿತ್ತು. ಆಗ ಮಂಜು ಬೀಳುತ್ತಿತ್ತು. ಟ್ರಕ್‌ನ ಚಾಲಕ ತನ್ನ ಸಹಪಾಠಿಯನ್ನು ಟ್ರಕ್‌ನಲ್ಲೇ ಬಿಟ್ಟು ಸಹಾಯಕ್ಕೆಂದು ಪಕ್ಕದ ಊರಿಗೆ ಹೋಗಿದ್ದನು. ಆಗ ಆ ಊರಿನಲ್ಲಿ ವಿಪರೀತ ಗಾಳಿ ಮಳೆಯಾದ ಕಾರಣ ಟ್ರಕ್ ಡ್ರೈವರ್‌ಗೆ ಆ ಊರಿನಲ್ಲೇ 7 ದಿನಗಳ ಕಾಲ ನಿಲ್ಲಬೇಕಾಯಿತು. ಗಾಳಿ ಮಳೆ ನಿಂತ ನಂತರ ಟ್ರಕ್ ಡ್ರೈವರ್ ತನ್ನ ಟ್ರಕ್ ಬಳಿ ಬಂದಾಗ ಟ್ರಕ್‌ನಲ್ಲಿದ್ದ ತನ್ನ ಸ್ನೇಹಿತ ಹಸಿವಿನಿಂದ, ಚಳಿಯಿಂದ ಸಾವನ್ನಪ್ಪಿದ್ದ.

ವಿಚಿತ್ರ ಘಟನೆಗಳು ನಡೆಯಲಾರಂಭಿಸಿದವು

ವಿಚಿತ್ರ ಘಟನೆಗಳು ನಡೆಯಲಾರಂಭಿಸಿದವು

PC- debabrata

ತನ್ನ ಸ್ನೇಹಿತ ಸಾವನ್ನಪ್ಪಿದ ದು;ಖದಲ್ಲಿ ಆತನ ಅಂತಿಮ ಸಂಸ್ಕಾರವನ್ನು ಟ್ರಕ್ ಹಾಳಾಗಿದ್ದ ಜಾಗದಲ್ಲೇ ಮಾಡಿದ. ಆ ನಂತರದಿಂದ ಇಲ್ಲಿ ಚಿತ್ರವಿಚಿತ್ರ ಘಟನೆಗಳು ನಡೆಯಲು ಆರಂಭವಾದವು. ವಿಚಿತ್ರ ಶಬ್ಧ ಕೇಳಿಸಲಾರಂಭಿಸಿತು. ಕೆಲವೊಮ್ಮೆ ಆ ಹುಡುಗ ಜನರಿಗೆ ಕಾಣಿಸಲಾರಂಭಿಸಿದ. ಆತ ಆ ರಸ್ತೆಯಲ್ಲಿ ಬರುವ ಹೋಗುವ ಜನರಲ್ಲಿ ತಿನ್ನಲು ಕುಡಿಯಲು ಕೇಳುತಿದ್ದ.

ತಾಂತ್ರಿಕರನ್ನು ಕರೆಸಲಾಯಿತು

ತಾಂತ್ರಿಕರನ್ನು ಕರೆಸಲಾಯಿತು

PC-ManoharD

ಈ ಘಟನೆಯ ನಂತರ ಆ ರಸ್ತೆಯಲ್ಲಿ ಒಂದಲ್ಲ ಒಂದು ಅಪಘಾತಗಳು ನಡೆಯಲಾರಂಭಿಸಿದವು. ಹಾಗಾಗಿ ಜನರು ಆ ರಸ್ತೆಯಿಂದ ಹೋಗುವುದನ್ನೇ ನಿಲ್ಲಿಸಿದ್ದರು. ಈ ವಿಷ್ಯ ಇಡೀ ಹಿಮಾಚಲಕ್ಕೆ ಹಬ್ಬಿತು. ಈ ಆತ್ಮವನ್ನು ಹತ್ತಿಕ್ಕಲು ತಾಂತ್ರಿಕರನ್ನು ಕರೆಸಲಾಯಿತು. ಪೂಜೆಯನ್ನೆಲ್ಲಾ ಮಾಡಿ ಆ ಹುಡುಗನಿಗಾಗಿ ಒಂದು ಸ್ಥಾನವನ್ನು ನಿರ್ಮಿಸಲಾಯಿತು. ಅಲ್ಲಿ ಜನರು ಏನಾದರೂ ಅರ್ಪಿಸಿಯೇ ಮುಂದೆ ಹೋಗುತ್ತಾರೆ. ಹೆಚ್ಚಿನ ಜನರು ಮಿನರಲ್ ವಾಟರ್ ಹಾಗೂ ಸಿಗರೇಟ್ ಅರ್ಪಿಸುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X