Search
  • Follow NativePlanet
Share
» »ಚಿಕ್ಕಬಳ್ಳಾಪುರದಲ್ಲಿದೆ ದೆವ್ವಗಳೇ ನಿರ್ಮಿಸಿರುವ ದೇವಾಲಯ...ಪ್ರತಿಹುಣ್ಣಿಮೆಗೆ ನಡೆಯುತ್ತಂತೆ ಪೂಜೆ!

ಚಿಕ್ಕಬಳ್ಳಾಪುರದಲ್ಲಿದೆ ದೆವ್ವಗಳೇ ನಿರ್ಮಿಸಿರುವ ದೇವಾಲಯ...ಪ್ರತಿಹುಣ್ಣಿಮೆಗೆ ನಡೆಯುತ್ತಂತೆ ಪೂಜೆ!

By Rajatha

ಹಿಂದೂ ಸಂಸ್ಕೃತಿಯಲ್ಲಿ ದೇವಾಲಯಗಳು ಬಹಳ ಹೆಚ್ಚು. ದೇವರನ್ನು ಆರಾಧಿಸುವುದರಲ್ಲೂ ಮೊದಲ ಸ್ಥಾನದಲ್ಲಿದೆ. ಅನೇಕ ದೇವರ ದೇವಾಲಯಗಳನ್ನು ನೀವು ಕಂಡಿರಬಹುದು. ಆದರೆ ದೆವ್ವಗಳ ದೇವಾಲಯವನ್ನು ಯಾವತ್ತಾದರೂ ಕಂಡಿದ್ದೀರಾ? ದೆವ್ವಗಳ ದೇವಾಲಯ ಎಂದರೆ ಆಶ್ಚರ್ಯವಾಗದೇ ಇರಲಾರದು. ಹೌದು,ಕರ್ನಾಟಕದ ದೊಡ್ಡಬಳ್ಳಾಪುರ ದಿಂದ 20 ಕಿ.ಮೀ ದೂರದಲ್ಲಿ ಬೊಮ್ಮಾವರ ಎನ್ನುವ ಗ್ರಾಮ ಇದೆ. ದೆವ್ವಗಳ ದೇವಾಲಯ. ಅಲ್ಲಿ ದೆವ್ವಗಳ ದೇವಾಲಯವಿದೆ.

ಕಥೆಗೆ ಯಾವುದೇ ಆಧಾರ ಇಲ್ಲ.
ಹಿಂದೂ ಧರ್ಮಗಳಲ್ಲಿ ಕೆಲವು ಕಥೆಗಳಿಗೆ ಆಧಾರ ದೊರೆಯುವುದು ಬಹಳ ಕಷ್ಟ. ಹೀಗಿರುವಾಗ ಕೆಲವನ್ನು ಹಿಂದಿನಿಂದಲೂ ಹೇಳುತ್ತಾ ವಂದಿರುವ ಕಥೆಯನ್ನು,. ಅಲ್ಲಿನ ಸ್ಥಿತಿಯನ್ನು ಕಂಡವರಿಂದ ತಿಳಿದದ್ದನ್ನೇ ನಿಜ ಎಂದು ನಂಬುವುದು ಅನಿವಾರ್ಯವಾಗುತ್ತದೆ.

Ghost Temple

ಭೂತಗಳು ನಿರ್ಮಿಸಿದವಂತೆ
ಸಾಮಾನ್ಯವಾಗಿ ಈ ಪುರಾತನ ಹಿಂದೂ ಧರ್ಮದ ದೇವಾಲಯಗಳನ್ನು ರಾಜರು, ರಾಜರ ಪ್ರತಿನಿಧಿಗಳು ನಿರ್ಮಿಸಿದರು ಎಂದು ಹೇಳುತ್ತಾರೆ. ಆದರೆ ಈ ಸುಂದರೇಶ್ವರ ದೇವಾಲಯವನ್ನು ಮಾತ್ರ ಭೂತಗಳು ನಿರ್ಮಿಸಿದವಂತೆ.

600 ವರ್ಷಗಳ ಹಿಂದಿನ ಕಥೆ
600 ವರ್ಷಗಳ ಹಿಂದೆ ಬುಚ್ಚಯ್ಯ ಎನ್ನುವ ಹಿರಿಯ ನಾಟಿವೈದ್ಯರೊಬ್ಬರಿದ್ದರಂತೆ. ಅವರಿಗೆ ಮಂತ್ರ ತಂತ್ರವೂ ತಿಳಿದಿತ್ತು. ಬಚ್ಚಯ್ಯ ಹಾಗೂ ಊರಿನ ನಾಗರಿಕರೆಲ್ಲಾ ಸೇರಿ ತಮ್ಮ ಊರಿಗೆ ಒಂದು ದೇವಸ್ಥಾನ ನಿರ್ಮಿಸಬೇಕೆಂದು ನಿರ್ಧರಿಸಿ ದೇವಸ್ಥಾನ ನಿರ್ಮಿಸಿದರಂತೆ. ಆದರೆ ದೇವಸ್ಥಾನ ನಿರ್ಮಾಣವಾದ ಮರುದಿನವೇ ದೆವ್ವಗಳು ಆ ದೇವಾಲಯವನ್ನು ಕೆಡವಿ ಹಾಕಿದ್ದವಂತೆ. ಮನುಷ್ಯ ದತ್ತ ನಂತರ ಆತನ ಆಸೆಯೇನಾದರೂ ನೆರವೇರಲಿದ್ದರೆ ಆತ್ಮಗಳು ದೆವ್ವಗಳಾಗಿ ಹಾಗೆಯೇ ಭೂಲೋಕದಲ್ಲೇ ಸುತ್ತುತ್ತಾ ಇರುತ್ತವೆ ಎನ್ನುವುದು ನಂಬಿಕೆ.

Ghost Temple

ರಾತ್ರೋ ರಾತ್ರಿ ಮಂದಿರ ನಿರ್ಮಾಣ ಮಾಡಿದ ದೆವ್ವಗಳು
ದೆವ್ವಗಳ ಈ ಕಾಟದಿಂದ ಕೋಪಗೊಂಡ ಬುಚ್ಚಯ್ಯ, ತನ್ನ ಜಡೆಯನ್ನು ಕತ್ತರಿಸಿ, ಅದನ್ನು ಒನಕೆಗೆ ಸುತ್ತಿ ಆತ್ಮಗಳನ್ನೆಲ್ಲಾ ವಶಕ್ಕೆ ಪಡೆದುಕೊಂಡನಂತೆ. ಇದರಿಂದ ದೆವ್ವಗಳಿಗೆ ಅಲ್ಲಿಂದ ಬಿಡುಗಡೆ ಸಿಗದೆ ಬುಚ್ಚಯ್ಯನಿಗೆ ಬೇಡಿಕೊಂಡವಂತೆ. ಬುಚ್ಚಯ್ಯ ಆ ಮಂದಿರವನ್ನು ಮರಳಿ ನಿರ್ಮಾಣ ಮಾಡಬೇಕೆಂದು ಹೇಳಿದನಂತೆ. ಅದಕ್ಕೆ ಸಮ್ಮತಿಸಿದ ದೆವ್ವಗಳು ಒಂದೇ ದಿನದಲ್ಲಿ ಮಂದಿರವನ್ನು ನಿರ್ಮಾಣ ಮಾಡಿದ್ದಲ್ಲದೆ ಮಂದಿರದಲ್ಲಿ ತಮ್ಮ ಬೊಂಬೆಗಳನ್ನು ಇಡುವಂತೆ ಕೋರಿದವಂತೆ. ಹಾಗಾಗಿ ಆ ದೇವಸ್ಥಾನದ ಗೋಡೆಗಳಲ್ಲಿ ದೆವ್ವಗಳ ಮೂರ್ತಿಗಳಿವೆ.

ವಿಗ್ರಹ ಪ್ರತಿಷ್ಠೆ ನಡೆಯಲಿಲ್ಲ
ಈ ದೇವಾಲಯಕ್ಕೆ ವಿಗ್ರಹಪ್ರತಿಷ್ಠೆ ನಡೆಸಬೇಕೆನ್ನುವಷ್ಟರಲ್ಲಿ ಬುಚ್ಚಯ್ಯ ಸಾವನ್ನಪ್ಪುತ್ತಾರೆ. ಇದರಿಂದ ಊರಿನವರು ಈ ದೇವಾಲಯ ನಮಗೆ ಆಗಿ ಬರೋದಿಲ್ಲ ಎಂದು ಅದನ್ನು ಹಾಗೆಯೇ ಪಾಳು ಬೀಳಲು ಬಿಡುತ್ತಾರೆ. ಆ ನಂತರ ೫೦ ವರ್ಷಗಳ ಹಿಂದೆ ಆ ಊರಿನ ಕಾಲುವೆಯಲ್ಲಿ 8ಅಡಿ ಎತ್ತರದ ವಿಗ್ರಹವೊಂದು ಸಿಗುತ್ತದೆ. ಅದನ್ನು ಪ್ರಶ್ನೆ ಇಟ್ಟು ಕೇಳಿಸಿದಾಗ 600 ವರ್ಷಗಳ ಹಿಂದೆ ಪ್ರತಿಷ್ಠಾಪನೆಯಾಗ ಬೇಕಿದ್ದ ವಿಗ್ರಹ ಇಂದು ದೊರೆತಿದೆ ಎಂದರಂತೆ.

ಇದೀಗ ಇದನ್ನ ಸುಂದರೇಶ್ವರ ದೇವಾಲಯ ಎನ್ನುತ್ತಾರೆ. ಪ್ರತಿ ಹುಣ್ಣಿಮೆಯಂದು ಇಲ್ಲಿ ಪೂಜೆ ನಡೆಯುತ್ತದೆ. ದೆವ್ವ ಹಿಡಿದುಕೊಂಡವರನ್ನು ಇಲ್ಲಿ ಕರೆತಂದು ಗುಣಮುಖಪಡಿಸಲಾಗುತ್ತದಂತೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X