Search
  • Follow NativePlanet
Share
» »ಕೋರಿಕೆಗಳನ್ನು ಶೀಘ್ರವಾಗಿ ಪೂರೈಸುವ ದೇವಿಯ ದೇವಾಲಯ...

ಕೋರಿಕೆಗಳನ್ನು ಶೀಘ್ರವಾಗಿ ಪೂರೈಸುವ ದೇವಿಯ ದೇವಾಲಯ...

ಹಿಂದೂ ದೇವಾಲಯಕ್ಕೆ ಒಂದು ಪ್ರತ್ಯೇಕತೆ ಇದೆ. ಹಿಂದೂ ದೇವಾಲಯಗಳೆಂದರೆ ಪಾಜ್ಟಿವ್ ಎನರ್ಜಿಯ ಕೇಂದ್ರ ಬಿಂದು. ಹಿಂದು ದೇವಾಲಯದಲ್ಲಿ ಇರುವ ಗಂಟೆಗಳು, ಬೆಳ್ಳಿ ವಿಗ್ರಹಗಳು, ಬಂಗಾರ ಮತ್ತು ಪಂಚಲೋಹ ವಿಗ್ರಹಗಳು ಇವೆಲ್ಲಾ ಪಾಸ್ಟಿವ್ ಎನರ್ಜಿ ಎಂದೇ ಹೇಳ

ಹಿಂದೂ ದೇವಾಲಯಕ್ಕೆ ಒಂದು ಪ್ರತ್ಯೇಕತೆ ಇದೆ. ಹಿಂದೂ ದೇವಾಲಯಗಳೆಂದರೆ ಪಾಜ್ಟಿವ್ ಎನರ್ಜಿಯ ಕೇಂದ್ರ ಬಿಂದು. ಹಿಂದು ದೇವಾಲಯದಲ್ಲಿ ಇರುವ ಗಂಟೆಗಳು, ಬೆಳ್ಳಿ ವಿಗ್ರಹಗಳು, ಬಂಗಾರ ಮತ್ತು ಪಂಚಲೋಹ ವಿಗ್ರಹಗಳು ಇವೆಲ್ಲಾ ಪಾಸ್ಟಿವ್ ಎನರ್ಜಿ ಎಂದೇ ಹೇಳಬಹುದು. ಹಾಗಾಗಿಯೇ ನಾವು ದೇವಾಲಯಕ್ಕೆ ಭೇಟಿ ನೀಡಿದ ಪ್ರತಿ ಬಾರಿಯು ಮನಸ್ಸು ಪ್ರಶಾಂತವಾಗಿರುತ್ತದೆ.

ಹೈದ್ರಾಬಾದ್ ಕರ್ನಾಟಕಕ್ಕೆ ಸಮೀಪದ ಪ್ರವಾಸಿ ತಾಣವಾಗಿದೆ. ಇಲ್ಲಿಗೆ ಅನೇಕ ಮಂದಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಹೈದ್ರಾಬಾದ್‍ನಲ್ಲಿ ಅನೇಕ ಮಹಿಮಾನ್ವಿತವಾದ ದೇವಾಲಯಗಳಿವೆ. ಒಂದೊಂದು ದೇವಾಲಯವು ತನ್ನದೇ ಆದ ಮಹತ್ವವನ್ನು ಹೊಂದಿದೆ. ಹಾಗಾದರೆ ಬನ್ನಿ ಆ ದೇವಾಲಯಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆಯೋಣ.

ಹೈದ್ರಾಬಾದ್‍ನಲ್ಲಿರುವ ಅತ್ಯಂತ ಶಕ್ತಿವಂತವಾದ ದೇವಾಲಯಗಳು

ಹೈದ್ರಾಬಾದ್‍ನಲ್ಲಿರುವ ಅತ್ಯಂತ ಶಕ್ತಿವಂತವಾದ ದೇವಾಲಯಗಳು

ಪೆದ್ದಮ್ಮ ದೇವಾಲಯ
ಸುಮಾರು 300 ವರ್ಷಗಳ ಚರಿತ್ರೆಯನ್ನು ಹೊಂದಿರುವ ಅತ್ಯಂತ ಶಕ್ತಿವಂತವಾದ ದೇವಾಲಯ ಎಂದರೆ ಅದು ಪೆದ್ದಮ್ಮ ಗುಡಿ. ಜೂಬ್ಲಿಹಿಲ್ಸ್ ಗ್ರಾಮಕ್ಕೆ ಗ್ರಾಮದೇವತೆಯಾಗಿ ಪೆದ್ದಮ್ಮತಲ್ಲಿಯನ್ನು ಪೂಜಿಸುತ್ತಾರೆ. ನಿಮಗೆ ಯಾವುದೇ ಸಮಸ್ಯೆ ಇದ್ದರು ಕೂಡ ಒಮ್ಮೆ ಈ ದೇವಾಲಯಕ್ಕೆ ಭೇಟಿ ನೀಡಿ ಬಂದರೆ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ನಂಬಲಾಗಿದೆ. ಈ ದೇವಾಲಯಕ್ಕೆ ಇರುವ ವಿಶೇಷದ ಬಗ್ಗೆ ತಿಳಿಯೋಣ.

ಹೈದ್ರಾಬಾದ್‍ನಲ್ಲಿರುವ ಅತ್ಯಂತ ಶಕ್ತಿವಂತವಾದ ದೇವಾಲಯಗಳು

ಹೈದ್ರಾಬಾದ್‍ನಲ್ಲಿರುವ ಅತ್ಯಂತ ಶಕ್ತಿವಂತವಾದ ದೇವಾಲಯಗಳು

ಈ ದೇವಾಲಯಕ್ಕೆ ಒಂದು ವಿಶೇಷತೆ ಕೂಡ ಇದೆ. ಮನಸ್ಸಿನಲ್ಲಿ ದೃಢವಾಗಿ ಒಂದು ಕೋರಿಕೆಯನ್ನು ಅಲ್ಲಿ ಕೋರಿಕೊಂಡರೆ ಅಲ್ಲಿ ನೆಲದ ಮೇಲೆ 1 ರೂಪಾಯಿ ಕಾಯಿನ್ ನಿಂತುಕೊಂಡರೆ ಅವರು ಅಂದುಕೊಂಡಿರುವ ಕೋರಿಕೆ ನೇರವೇರುತ್ತದೆ ಎಂದು ದೃಢವಾಗಿ ನಂಬುತ್ತಾರೆ. ನೀವು ಈ ದೇವಾಲಯದಲ್ಲಿರುವ ನವಶಕ್ತಿ ದೇವಾಲಯವನ್ನು ತಪ್ಪದೇ ಭೇಟಿ ನೀಡಿ ಬನ್ನಿ. ಪ್ರತಿ ದಿನ ರಾತ್ರಿ 7 ಗಂಟೆಯ ನಂತರ ದೇವಿಗೆ ಆ ನವಶಕ್ತಿ ದೇವಾಲಯದ ಸಮೀಪದಲ್ಲಿ ಹಾರತಿ ನೀಡುವ ಘಟ್ಟ ಅತ್ಯಂತ ಅದ್ಭುತವಾಗಿರುತ್ತದೆ.

ಹೈದ್ರಾಬಾದ್‍ನಲ್ಲಿರುವ ಅತ್ಯಂತ ಶಕ್ತಿವಂತವಾದ ದೇವಾಲಯಗಳು

ಹೈದ್ರಾಬಾದ್‍ನಲ್ಲಿರುವ ಅತ್ಯಂತ ಶಕ್ತಿವಂತವಾದ ದೇವಾಲಯಗಳು

ಈ ದೇವಾಲಯಕ್ಕೆ ತೆರಳಿದಾಗ ಅಲ್ಲಿನ ಪ್ರಸಾದವನ್ನು ಮಾತ್ರ ಮರೆಯದೇ ಸೇವಿಸಿ. ನಿಮ್ಮ ಕೈಯಲ್ಲಿ ದೇವಿ ಕೆಂಪು ಕಂಕಣವನ್ನು ಕಟ್ಟಿಕೊಂಡರೆ ಅದನ್ನು ನೋಡಿದವರು ಪೆದ್ದಮ್ಮ ದೇವಾಲಯಕ್ಕೆ ಭೇಟಿ ನೀಡಿ ಬಂದಿದ್ದೀರಾ? ಎಂದು ಕೇಳದೇ ಇರಲಾರರು. ಹೈದ್ರಾಬಾದ್‍ನಲ್ಲಿ ಅಷ್ಟು ಪ್ರಸಿದ್ಧವಾದ ಹಾಗು ಶಕ್ತಿವಂತವಾದ ದೇವಾಲಯವೇ ಆಗಿದೆ.

ಹೈದ್ರಾಬಾದ್‍ನಲ್ಲಿರುವ ಅತ್ಯಂತ ಶಕ್ತಿವಂತವಾದ ದೇವಾಲಯಗಳು

ಹೈದ್ರಾಬಾದ್‍ನಲ್ಲಿರುವ ಅತ್ಯಂತ ಶಕ್ತಿವಂತವಾದ ದೇವಾಲಯಗಳು

ಪ್ರತಿ ಭಾನುವಾರದಂದು, ಹೊಸ ವರ್ಷದ ದಿನ, ಯುಗಾದಿಯ ದಿನದಂದು, ಶ್ರಾವಣ ಶುಕ್ರವಾರ ದಿನದಂದು ಭಕ್ತರು ಈ ದೇವಾಲಯಕ್ಕೆ ಭಾರೀ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ವೈ.ಯಸ್ ಜಗನ್ ಸಮೀಪದಿಂದ ನಾರಾ ಚಂದ್ರಬಾಬು ನಾಯಡು, ಪವನ್ ಕಲ್ಯಾಣ ಇನ್ನು ಹಲವಾರು ತೆಲುಗು ಸಿನಿಮಾ ತಾರೆಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಹೈದ್ರಾಬಾದ್‍ನಲ್ಲಿರುವ ಅತ್ಯಂತ ಶಕ್ತಿವಂತವಾದ ದೇವಾಲಯಗಳು

ಹೈದ್ರಾಬಾದ್‍ನಲ್ಲಿರುವ ಅತ್ಯಂತ ಶಕ್ತಿವಂತವಾದ ದೇವಾಲಯಗಳು

ಚಿಲೂಕೂರು ಬಾಲಾಜಿ ದೇವಾಲಯ
ಪ್ರಸಿದ್ಧ ಪುಣ್ಯಕ್ಷೇತ್ರವಾದ ತಿರುಮಲದಲ್ಲಿಯೇ ಅಲ್ಲದೇ ವೆಂಕಟೇಶ್ವರನು ಎಲ್ಲಿಯೇ ಇದ್ದರು ಕೂಡ ಪ್ರಸಿದ್ಧವಾದ ಕ್ಷೇತ್ರವೇ ಆಗಿದೆ. ಹೈದ್ರಾಬಾದ್‍ನಲ್ಲಿ ವಿಸಾ ಬಾಲಾಜಿಯಾಗಿ ಕರೆಯುವ ಈ ವೆಂಕಟೇಶ್ವರನನ್ನು ಚಿಲುಕೂರಿ ಬಾಲಾಜಿ ಎಂದೇ ಪ್ರಸಿದ್ಧಿಯನ್ನು ಹೊಂದಿದೆ.

ಹೈದ್ರಾಬಾದ್‍ನಲ್ಲಿರುವ ಅತ್ಯಂತ ಶಕ್ತಿವಂತವಾದ ದೇವಾಲಯಗಳು

ಹೈದ್ರಾಬಾದ್‍ನಲ್ಲಿರುವ ಅತ್ಯಂತ ಶಕ್ತಿವಂತವಾದ ದೇವಾಲಯಗಳು

ಇಲ್ಲಿನ ಸ್ವಾಮಿಯು ವಿದೇಶ ಪ್ರವಾಸಕ್ಕೆ ತೆರಳಬೇಕು ಅಂದುಕೊಂಡಿರುವವರು ಈ ದೇವಾಲಯದಲ್ಲಿನ ಸ್ವಾಮಿಯನ್ನು ಆರಾಧಿಸಿದರೆ ಶೀಘ್ರವಾಗಿ ವಿಸಾ ದೊರೆಯುತ್ತದೆ ಎಂದು ನಂಬಲಾಗಿದೆ. ಇಲ್ಲಿ ಭಕ್ತರು 108 ಪ್ರದಕ್ಷಿಣೆ ಮಾಡುತ್ತಾರೆ. ಹಾಗಾಗಿಯೇ ಈ ಸ್ವಾಮಿಯನ್ನು ವಿಸಾ ಬಾಲಾಜಿ ಎಂದೇ ಕರೆಯುತ್ತಾರೆ. ಕೇವಲ ತೆಲಂಗಾಣದಿಂದ, ಹೈದ್ರಾಬಾದ್‍ನಿಂದಲೇ ಅಲ್ಲದೇ ವಿವಿಧ ರಾಜ್ಯಗಳಿಂದಲೂ ಈ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ.

ಹೈದ್ರಾಬಾದ್‍ನಲ್ಲಿರುವ ಅತ್ಯಂತ ಶಕ್ತಿವಂತವಾದ ದೇವಾಲಯಗಳು

ಹೈದ್ರಾಬಾದ್‍ನಲ್ಲಿರುವ ಅತ್ಯಂತ ಶಕ್ತಿವಂತವಾದ ದೇವಾಲಯಗಳು

ಈ ದೇವಾಲಯದಲ್ಲಿ ನೈವೇದ್ಯವಾಗಿ ಹೊತ್ತಿಕೊಂಡು ಹೋಗುವ ಅದೃಷ್ಟವು ಭಕ್ತರಿಗೆ ಅಪರೂಪವಾಗಿ ಲಭಿಸುತ್ತದೆ. ನಾವು 1 ಲಕ್ಷ ರೂಪಾಯಿ ನೀಡಿದರು ಕೂಡ ಆ ಅದೃಷ್ಟವು ದೊರೆಯುವುದಿಲ್ಲವಂತೆ. ನೀವು ಯಾವುದೇ ಸಮಯದಲ್ಲಿ ಹೋದರು ಕೂಡ ಈ ದೇವಾಲಯದಲ್ಲಿ ಭಕ್ತರು ಅಪಾರ ಸಂಖ್ಯೆಯಲ್ಲಿರುತ್ತಾರೆ. ಇನ್ನು ವಾರಾಂತ್ಯದಲ್ಲಿ ಮಾತ್ರ ಇನ್ನು ಅನೇಕ ಮಂದಿ ಭಕ್ತರು ಇರುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X