» »12 ಕ್ರೂರವಾದ ಸಿಂಹಗಳ ಮಧ್ಯೆ ಜನಿಸಿದ ಮಗು...ಅತ್ಯಂತ ಭಯಂಕರವಾದ ತಲಾಲಾ ಗಿರ್ ಅರಣ್ಯದಲ್ಲಿ

12 ಕ್ರೂರವಾದ ಸಿಂಹಗಳ ಮಧ್ಯೆ ಜನಿಸಿದ ಮಗು...ಅತ್ಯಂತ ಭಯಂಕರವಾದ ತಲಾಲಾ ಗಿರ್ ಅರಣ್ಯದಲ್ಲಿ

Written By:

ಅರಣ್ಯ ಎಂದರೆನೇ ಅದೆನೊ ಕುತೂಹಲ, ಆನಂದ. ಅಲ್ಲಿನ ಪ್ರಾಣಿಗಳನ್ನು ನೋಡುವುದೇ ಒಂದು ಸಂಭ್ರಮ. ಮಕ್ಕಳೊಂದಿಗೆ ಪ್ರಾಣಿ ಸಂಕುಲವನ್ನು ಒಮ್ಮೆ ತೋರಿಸಿದರೆ ಅವರಿಗೆ ಆಗುವ ಸಂತೋಷ, ಭಯ ಅಷ್ಟು ಇಷ್ಟು ಅಲ್ಲ. ಆಗ ಆ ಮಕ್ಕಳನ್ನು ನೋಡುವುದೇ ಒಂದು ಸಂತಸ.

ಅದೇ ಮಕ್ಕಳು ಕಾಡಿನ 12 ಕ್ರೂರವಾದ ಸಿಂಹಗಳ ಮಧ್ಯೆ ಮಗು ಜನನವಾದರೆ ಹೇಗೆ ಇರುತ್ತದೆ?. ನೆನೆಸಿಕೊಂಡರೆಯೇ ಭಯ ಅವರಿಸುತ್ತದೆ ಅಲ್ಲವೇ. ಪ್ರಸವ ವೇಧನೆಯಿಂದ ಬಳುತ್ತಿರುವ ತಾಯಿಯು 12 ಕ್ರೂರ ಸಿಂಹಗಳ ನಡುವೆ ಒಂದು ಸುಂದರವಾದ ಮಗುವಿಗೆ ಜನನ ನೀಡಿದ್ದಾಳೆ. ಅದು ಎಲ್ಲೂ ಅಲ್ಲ ಗುಜರಾತ್‍ನ ತಲಾಲಾ ಗಿರ್ ಅರಣ್ಯ ಪ್ರದೇಶದಲ್ಲಿ.

ಪ್ರಸ್ತುತ ಲೇಖನದಲ್ಲಿ ಆ ಕ್ರೂರವಾದ ಮೃಗದ ನಡುವೆ ಜನಿಸಿದ ಮಗು ಹಾಗೂ ಗಿರ್ ಅರಣ್ಯ ಪ್ರಾಂತ್ಯದ ಬಗ್ಗೆ ತಿಳಿಯೋಣ.

ಸಿಂಹಗಳಿಗೆಂದೇ ಪ್ರಸಿದ್ಧಿಯನ್ನು ಪಡೆದಿದೆ

ಸಿಂಹಗಳಿಗೆಂದೇ ಪ್ರಸಿದ್ಧಿಯನ್ನು ಪಡೆದಿದೆ

ಗುಜರಾತ್ ಪ್ರಪಂಚದಲ್ಲಿನ ಆಸಿಯಾ ಸಿಂಹಗಳಲ್ಲಿಯೇ ಅತ್ಯಂತ ಪ್ರಸಿದ್ಧಿಯನ್ನು ಪಡೆದ ಪ್ರದೇಶ. ಆಸಿಯಾದಲ್ಲಿನ ಆಸಿಯಾ ಗಿರ್ ನ್ಯಾಷನಲ್ ಪಾರ್ಕ್ ಅತ್ಯಂತ ವಿಶಿಷ್ಟತೆಯಿಂದ ಕೂಡಿದೆ. ಈ ನ್ಯಾಷನಲ್ ಪಾರ್ಕ್ ಸಿಂಹಗಳಿಗೆಂದೇ ಪ್ರಸಿದ್ಧಿಯನ್ನು ಪಡೆದಿದೆ.


PC: Bernard Gagnon

ಗರ್ಭಿಣಿ ಸ್ತ್ರೀ

ಗರ್ಭಿಣಿ ಸ್ತ್ರೀ

ಗಿರ್ ನ್ಯಾಷನಲ್ ಪಾರ್ಕ್ ಸಿಂಹಗಳ ಅಭಯಾರಣ್ಯ. ಈ ಅರಣ್ಯದ ಸಮೀಪದಲ್ಲಿ ಹಲವಾರು ಅರಣ್ಯ ಗ್ರಾಮಗಳಿವೆ. ಒಂದು ಚಿಕ್ಕ ಗ್ರಾಮದಲ್ಲಿನ ಒಂದು 32 ವರ್ಷದ ಗರ್ಭಿಣಿ ಸ್ತ್ರೀ ಸಿಂಹಗಳ ಮಧ್ಯೆ ಒಂದು ಮಗುವಿಗೆ ಜನ್ಮವನ್ನು ನೀಡಿದ್ದಾಳೆ.

ತೀವ್ರವಾದ ಪ್ರಸವ ವೇದನೆ

ತೀವ್ರವಾದ ಪ್ರಸವ ವೇದನೆ

32 ವರ್ಷದ ಗರ್ಭಿಣಿ ಅತ್ಯಂತ ತೀವ್ರವಾದ ಪ್ರಸವ ವೇದನೆಯಿಂದ ಬಳಲುತ್ತಿರುವಾಗ ಅಲ್ಲಿನ ಸ್ಥಳೀಯರು ಅಂಬುಲೆನ್ಸ್‍ಗೆ ಕಾಲ್ ಮಾಡಿದರು.

ಅಂಬುಲೆನ್ಸ್

ಅಂಬುಲೆನ್ಸ್

ಆಕೆಯನ್ನು ಅಂಬುಲೇನ್ಸ್‍ನಲ್ಲಿ ಕರೆದುಕೊಂಡು ಹೋದರು. ತೀವ್ರವಾದ ವೇದನೆಯು ಆ ಮಹಿಳೆಗೆ ಪ್ರಾರಂಭವಾದ್ದರಿಂದ ಡ್ರೈವರ್ ತಲಾಲಾ ಗಿರ್ ಅರಣ್ಯ ಪ್ರದೇಶದಲ್ಲಿ ಅಂಬುಲೆನ್ಸ್ ಅನ್ನು ನಿಲ್ಲಿಸಿದನು.

ಕ್ರೂರ ಸಿಂಹಗಳು

ಕ್ರೂರ ಸಿಂಹಗಳು

ಮಾನವರ ವಾಸನೆಯನ್ನು ಕಂಡುಹಿಡಿದ ಕ್ರೂರ ಸಿಂಹಗಳು ಅರಣ್ಯ ಪ್ರದೇಶದ ಮಧ್ಯೆದಲ್ಲಿ ನಿಲ್ಲಿಸಿದ್ದ ಅಂಬುಲೆನ್ಸ್‍ಗೆ ಸುತ್ತುವರೆದರು.

PC Kailash kumbhkar


12 ಸಿಂಹಗಳು

12 ಸಿಂಹಗಳು

ಸುಮಾರು 12 ಸಿಂಹಗಳ ನಡುವೆ ಆ ಗರ್ಭಿಣಿ ಸ್ತ್ರೀ ನೋವಿನಿಂದ ವೇದನೆ ಅನುಭವಿಸುತ್ತಿದ್ದಳು. ಈ ಸಮಯದಲ್ಲಿ ಸಿಂಹಗಳ ಅರಣ್ಯವು ಕೂಡ ಅಷ್ಟೇ ನಿಶ್ಯಬ್ದವಾಗಿದೆ.

ತಲಾಲಾ ಗಿರ್ ಅರಣ್ಯ ಪ್ರದೇಶ

ತಲಾಲಾ ಗಿರ್ ಅರಣ್ಯ ಪ್ರದೇಶ

ಅಂಬುಲೆನ್ಸ್ ಡ್ರೈವರ್ ಹಾಗೂ ಇನ್ನೂ ಕೆಲವು ಮಂದಿ ಆ ಸಿಂಹಗಳಿಂದ ರಕ್ಷಿಸುತ್ತಾ ಪ್ರಸವವನ್ನು ಸುರಕ್ಷಿತವಾಗಿ ಒಬ್ಬ ಮಹಿಳೆಯು ನೆರವೇರಿಸಿದಳು.

ಡ್ರೈವರ್

ಡ್ರೈವರ್

ಆ ಮಹಿಳೆಯು ದಟ್ಟ ಅಡವಿಯಲ್ಲಿ ಒಂದು ಅಂದವಾದ ಮಗುವಿಗೆ ಜನ್ಮವನ್ನು ನೀಡಿದಳು. ಅಂಬುಲೆನ್ಸ್‍ನನ್ನು ಡ್ರೈವರ್ ನಿಧಾನವಾಗಿ ಸಿಂಹಗಳಿಗೆ ತಿಳಿಯದ ಹಾಗೆ ದೂರಕ್ಕೆ ತೆಗೆದುಕೊಂಡು ಹೋದನು.

ಮಗುವಿಗೆ ಜನ್ಮ

ಮಗುವಿಗೆ ಜನ್ಮ

ಆ ದಟ್ಟ ಅಡವಿಯಲ್ಲಿ ಗಂಡು ಮಗುವಿಗೆ ಜನ್ಮವನ್ನು ಆಕೆ ನೀಡಿದಳು. ಈ ಸಂಘಟನೆ ಗಿರ್ ಅರಣ್ಯದಲ್ಲಿ ಅಷ್ಟು ಸುಲಭವಾದುದಲ್ಲ. ನ್ಯಾಷನಲ್ ಪಾರ್ಕ್‍ನಲ್ಲಿನ ಸಿಂಹಗಳು ಅತ್ಯಂತ ಕ್ರೂರವಾದುದು.

ಸಮೀಕ್ಷೆ

ಸಮೀಕ್ಷೆ

1412 ಚದರ ಕಿ,ಮಿ ವಿಸ್ತಾರವಾಗಿರುವ ತಲಾಲಾ ಗಿರ್ ಅರಣ್ಯ ಪ್ರದೇಶವು ಸಿಂಹ, ಬೆಂಗಾಲ್ ಟೈಗರ್‍ಗಳಿವೆ. ತಲಾಲಾ ಗಿರ್ ನ್ಯಾಷನಲ್ ಪಾರ್ಕ್‍ನಲ್ಲಿ ಒಂದು ಸಮೀಕ್ಷೆಯ ಪ್ರಕಾರ 523 ಸಿಂಹಗಳು ಇವೆ. ಅವುಗಳಲ್ಲಿ 109 ಗಂಡು ಸಿಂಹಗಳು ಹಾಗೂ 201 ಹೆಣ್ಣು ಸಿಂಹಗಳು ಇವೆ.

ಪ್ರಾಣಿ ಸಂಕುಲಗಳು

ಪ್ರಾಣಿ ಸಂಕುಲಗಳು

ಈ ಅಡವಿಯಲ್ಲಿ ಖಡ್ಗ ಮೃಗಗಳು, ಜಿಂಕೆಗಳು, ಹಾವುಗಳು, ಮೊಸಳೆಗಳು ಇನ್ನೂ ಹಲವಾರು ರೀತಿಯ ಪ್ರಾಣಿ, ಸರಿಸೃಪಗಳನ್ನು ತಲಾಲಾ ಗಿರ್ ಅರಣ್ಯ ಪ್ರದೇಶದಲ್ಲಿ ಕಾಣಬಹುದಾಗಿದೆ.

ಸಿಂಹದ ಏಕೈಕ ನೆಲೆ

ಸಿಂಹದ ಏಕೈಕ ನೆಲೆ

ಗಿರ್ ನ್ಯಾಷನಲ್ ಪಾರ್ಕ್ ಗುಜರಾತಿನ ತಲಾಲಾ ಗಿರ್ ಸಮೀಪದಲ್ಲಿವ ವನ್ಯಜೀವಿ ಅಭಯಾರಣ್ಯ. ಈ ಅರಣ್ಯವು ಏಶಿಯಾಟಿಕ್ ಸಿಂಹದ ಏಕೈಕ ನೆಲೆಯಾಗಿದ್ದು, ಪ್ರಮುಖ ರಕ್ಷಿತ ಪ್ರದೇಶಗಳಲ್ಲಿ ಒಂದಾಗಿದೆ. ಸರ್ಕಾರದ ಅರಣ್ಯ ಇಲಾಖೆವರು ವೈವಿಧ್ಯಮಯ ಪ್ರಾಣಿ ಹಾಗೂ ಸಸ್ಯಗಳ ಸಂರಕ್ಷಣೆ ಮಾಡುತ್ತಾ ಇದೆ.


PC:Nikunj vasoya

ವಿಶೇಷ

ವಿಶೇಷ

ಗಿರ್ ಪ್ರದೇಶದಲ್ಲಿ ಏಳು ಪ್ರಮುಖವಾದ ನದಿಗಳಿವೆ. ಅವುಗಳೆಂದರೆ ಹೀರಾನ್, ಶೆಟ್ರುಂಜಿ, ದತ್ತಾರ್ಡಿ, ಶಿಂಗೊಂಡಾ, ಮಂಚುಂಡ್ರಿ, ಗೋದಾವರಿ ಮತ್ತು ರಾವಲ್.

PC:Bernard Gagnon

ಸಮೀಪದಲ್ಲಿನ ಪ್ರವಾಸಿ ತಾಣಗಳು

ಸಮೀಪದಲ್ಲಿನ ಪ್ರವಾಸಿ ತಾಣಗಳು

ತಲಾಲಾ ಗಿರ್ ಅರಣ್ಯ ಪ್ರದೇಶದ ಸಮೀಪದಲ್ಲಿ ಸೋಮನಾಥ ದೇವಾಲಯ, ಸಾಸನ್ ಗಿರ್, ಶ್ರೀ ಪರುಶುರಾಮ ದೇವಾಲಯ, ವೆರ್‍ವಲ್ ಬೀಚ್, ವಿಜ್ಞಾನ ಮ್ಯೂಸಿಯಂ ಇನ್ನೂ ಹಲವಾರು.

ಭೇಟಿಗೆ ಉತ್ತಮ ಸಮಯ

ಭೇಟಿಗೆ ಉತ್ತಮ ಸಮಯ

ಈ ತಲಾಲಾ ಗಿರ್ ಅರಣ್ಯ ಪ್ರದೇಶಕ್ಕೆ ನಿಮ್ಮ ಸ್ನೇಹಿತರ ಜೊತೆ ಭೇಟಿ ನೀಡಲು ಉತ್ತಮವಾದ ಸಮಯವೆಂದರೆ ನವೆಂಬರ್ ತಿಂಗಳಿನಿಂದ ಜನವರಿ ತಿಂಗಳವರೆಗೆ.

ಸಮೀಪದ ನಗರಗಳು

ಸಮೀಪದ ನಗರಗಳು

ತಲಾಲಾ ಗಿರ್ ಅರಣ್ಯಕ್ಕೆ ಅಹಮದಾಬಾದ್‍ನಿಂದ ಸುಮಾರು 347 ಕಿ,ಮೀ, ವಢೋರದಿಂದ 399 ಕಿ,ಮೀ, ಮೌಂನ್ಟ್ ಅಬುಯಿಂದ 553 ಕಿ,ಮೀ, ಮುಂಬೈಯಿಂದ ಸುಮಾರು 825 ಕಿ,ಮೀ, ದೆಹಲಿಯಿಂದ ಸುಮಾರು 1279 ಕಿ,ಮೀ ದೂರದಲ್ಲಿದೆ.

ಸಮೀಪದ ವಿಮಾನಯಾನ

ಸಮೀಪದ ವಿಮಾನಯಾನ

ಈ ಸುಂದರವಾದ ಗಿರ್ ಅರಣ್ಯಕ್ಕೆ ಭೇಟಿ ನೀಡಲು ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಅಹಮದಾಬಾದ್.

Please Wait while comments are loading...